Shrirastu Shubhamasthu: ನಡೆದಾಡಿದ ಮಹೇಶ, ಸತ್ಯ ಹೇಳಿದ ಚಂದ್ರಕಾಂತ: ಶಾರ್ವರಿಗೆ ಹೆಚ್ಚಿದ ಆತಂಕ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ, ಮಾಧವ್ ಹಾಗೂ ಮನೆಯವರೆಲ್ಲರೂ ಮಹೇಶನಿಗೋಸ್ಕರ ತಮ್ಮ ಎಸ್ಟೇಟ್ ಇರುವ ನಂದಗಿರಿಗೆ ತೆರಳಿದ್ದಾರೆ.

ಎಸ್ಟೇಟ್‌ನಲ್ಲಿರುವ ತಮ್ಮ ಹೋಮ್‌ ಸ್ಟೇನಲ್ಲಿ ತಂಗಿದ್ದಾರೆ. ಮಹೇಶ ಅಲ್ಲಿಗೆ ಹೋಗುತ್ತಿದ್ದಂತೆ ಸರಾಗವಾಗಿ ಮಾತನಾಡಿದ್ದು, ತಮ್ಮ ಅತ್ತಿಗೆ ಹಾಗೂ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

Shrirastu Shubhamasthu serial 10th January episode written update

ಅವಿ ಅಂತೂ ತನ್ನ ತಾಯಿ ಜೊತೆಗೆ ಆ ಜಾಗದಲ್ಲಿ ಕಳೆದ ದಿನಗಳನ್ನು ನೆನಪು ಮಾಡಿಕೊಂಡು ಕೊಂಚ ದುಃಖದ ಜೊತೆಗೆ ಖುಷಿಯನ್ನೂ ಕೂಡ ಪೂರ್ಣಿಮಾ ಬಳಿ ಹಂಚಿಕೊಂಡಿದ್ದಾನೆ.

ಸತ್ಯ ಹೇಳಿದ ಚಂದ್ರಕಾಂತ

ಎಲ್ಲರೂ ಊಟಕ್ಕೆ ಕುಳಿತುಕೊಂಡಾಗ ಅಲ್ಲೇ ಇದ್ದ ಚಂದ್ರಕಾಂತ ಹಾಳೆಯೊಂದರಲ್ಲಿ ಕಲ್ಲು ಸುತ್ತಿ ಸುಮತಿ ಫೋಟೋಗೆ ಎಸೆದಿದ್ದಾನೆ. ಇದರಿಂದ ಮನೆಯವರು ಗಾಬರಿಯಾಗಿದ್ದಾರೆ. ತುಳಸಿ ಪೇಪರ್ ತೆಗೆದು ನೋಡಿದ್ದು ಅದರಲ್ಲಿ "ನನ್ನನ್ನು ಕೊಂದ್ ಹೋದವರು ಈಗ ಮತ್ತೆ ಬಂದಿದ್ದೀರಾ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತೇನೆ" ಎಂದು ಬರೆದಿರುವುದನ್ನು ಓದಿ ತುಳಸಿ ಹೆದರಿಕೊಳ್ಳುತ್ತಾಳೆ. ಮನೆಯವರಿಗೂ ಕೂಡ ಇದು ಗಾಬರಿ ಉಂಟು ಮಾಡುತ್ತದೆ. ಸುಮತಿಗೆ ಚಂದ್ರಕಾಂತ ಗೌರವ ನೀಡುತ್ತಿದ್ದ, ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ನೋಡಿದಾಗಿನಿಂದ ಹುಚ್ಚನಂತೆಯೇ ಅಲೆದಾಡುತ್ತಿದ್ದಾನೆ. ಅಷ್ಟೇ ಅಲ್ಲದೇ, ಚಂದ್ರಕಾಂತನಿಗೆ ಸುಮತಿ ಸಾವಿಗೆ ಕಾರಣ ಯಾರು ಎಂಬ ಸತ್ಯವೂ ಗೊತ್ತಿದೆ.

ಆತಂಕ ಹೆಚ್ಚಿಸಿಕೊಂಡ ಶಾರ್ವರಿ

ಈ ಪತ್ರ ನೋಡಿದ ಶಾರ್ವರಿಗೆ ಗಾಬರಿ ಹೆಚ್ಚಾಗಿದೆ. ಇಷ್ಟು ದಿನ ಮಹೇಶನಿಗೆ ಮಾತು ಬಂದರೆ, ತನ್ನ ಬಂಡವಾಳ ಬಯಲಾಗುತ್ತದೆ ಎಂದು ಹೆದರುತ್ತಿದ್ದಳು. ಆದರೆ ನಂದಗಿರಿಗೆ ಬಂದ ಕೂಡಲೇ ಮಹೇಶ ಚೇತರಿಸಿಕೊಂಡಿದ್ದು, ಇತ್ತ ಪತ್ರದಲ್ಲಿ ಬಲಿ ತೆಗೆದುಕೊಳ್ಳುವ ಬಗ್ಗೆ ಬರೆದಿರುವುದನ್ನು ನೋಡಿ ಇನ್ನಷ್ಟು ಟೆನ್ಷನ್ ಮಾಡಿಕೊಂಡಿದ್ದಾಳೆ. ಎಲ್ಲಿ ತನ್ನ ಬಗ್ಗೆ ಎಲ್ಲಾ ಸತ್ಯವೂ ಮನೆಯವರಿಗೆ ಗೊತ್ತಾಗುತ್ತದೆಯೋ ಎಂದು ಚಿಂತೆಯಲ್ಲಿ ಮುಳುಗಿ ಹೋಗಿದ್ದಾಳೆ. ಇದೇ ಸಂದರ್ಭದಲ್ಲಿ ಮಹೇಶ ಇದ್ದಕ್ಕಿದ್ದಂತೆ ಮನೆಯಿಂದ ಕಣ್ಮರೆಯಾಗಿದ್ದಾನೆ. ಕಳೆದ 25 ವರ್ಷಗಳಲ್ಲಿ ಒಂದು ದಿನವೂ ಎದ್ದೇಳದ ಮಹೇಶ ಇದ್ದಕ್ಕಿದ್ದಂತೆ ಕಾಣೆಯಾಗಿರುವುದಕ್ಕೆ ಮನೆಯವರಿಗೆಲ್ಲಾ ಗಾಬರಿಯಾಗಿದ್ದಾರೆ.

Shrirastu Shubhamasthu serial 10th January episode written update

ನಡೆದುಕೊಂಡು ಹೋದ ಮಹೇಶ

ಮನೆಯವರೆಲ್ಲರೂ ಮಹೇಶನನ್ನು ಹುಡುಕಾಡುತ್ತಿದ್ದಾರೆ. ಆದರೆ ಎಲ್ಲೂ ಕಾಣಿಸುತ್ತಿಲ್ಲ. ಅಪಘಾತವಾದ ಸ್ಥಳಕ್ಕೆ ಹೋಗಿರಬಹುದು ಎಂದು ಅದೇ ದಾರಿಯತ್ತ ಸಾಗಿದ್ದಾರೆ. ದಾರಿಯಲ್ಲಿ ಅಭಿ ಮತ್ತು ಅವಿಗೆ ಚಂದ್ರಕಾಂತ ಸಿಕ್ಕಿ ಮಹೇಶ ಅಪಘಾತವಾದ ಸ್ಥಳಕ್ಕೆ ಹೋಗಿರುವ ವಿಚಾರವನ್ನು ತಿಳಿಸಿದ್ದಾನೆ. ಅಲ್ಲದೇ, ಸುಮತಿಯ ಕೊಲೆ ಮಾಡಿದ್ದು ಮಾಧವ ಅಲ್ಲ, ನಿಮ್ಮ ಮನೆಯಲ್ಲೇ ಇರುವ ಮತ್ತೊಬ್ಬ ವ್ಯಕ್ತಿ ಎಂದು ಹೇಳಿದ್ದಾನೆ. ಚಂದ್ರಕಾಂತನ ಮಾತುಗಳು ಅವಿಗೆ ಅರ್ಥವಾಗಿದ್ದು, ಆದರೆ ಯಾರದು ಎಂಬ ವಿಚಾರ ತಿಳಿದಿಲ್ಲ.

ಅಪಘಾತವಾದ ಜಾಗದಲ್ಲಿ ಮಹೇಶ

ಮಹೇಶ ಅಪಘಾತವಾದ ಜಾಗದಲ್ಲಿ ಒಬ್ಬನೇ ನಿಂತುಕೊಂಡಿರುತ್ತಾನೆ. ಇದನ್ನು ನೋಡಿದ ತುಳಸಿ ಓಡಿ ಹೋಗುತ್ತಾಳೆ. ಮಾಧವನಿಗೆ ಮಹೇಶ ನಡೆದಿದ್ದು, ಆಶ್ಚರ್ಯ ಒಂದು ಕಡೆಯಾದರೆ, ಇಷ್ಟು ದೂರ ಒಬ್ಬನೇ ಹೇಗೆ ಬಂದ ಏಕೆ ಬಂದ ಎಂಬ ಯೋಚನೆ ಮತ್ತೊಂದು ಕಡೆ. ಸುಮಾರು 4-5 ಕಿಲೋಮೀಟರ್ ದೂರ ನಡೆದುಕೊಂಡು ಹೋದ ಎಂದು ಯೋಚಿಸುತ್ತಿರುವಾಗ ಚಕ್ಕಿ-ಮಕ್ಕಿ ದಾರಿಯಲ್ಲಿ ಎಂದು ಹೇಳುತ್ತಾನೆ. ಆಗ ಮಾಧವ್ ಅದು ತನ್ನ ಎಸ್ಟೇಟ್‌ನಿಂದ ಇರುವ ಶಾರ್ಟ್ ಕಟ್. ಅದನ್ನು ನೆನಪಿಟ್ಟುಕೊಂಡು ಹೋಗಿರುವುದು ಎಂದು ಆಶ್ಚರ್ಯವಾಗುತ್ತದೆ. ಇನ್ನು ಮಹೇಶ ಇದೇ ಎಸ್ಟೇಟ್‌ನಲ್ಲಿ ಕೆಲ ಸಮಯವಿದ್ದರೆ, ಎಲ್ಲಾ ಸತ್ಯ ಹೇಳಿ ಶಾರ್ವರಿ ಆಟಕ್ಕೆ ಬ್ರೇಕ್ ಹಾಕಬಹುದು ಎಂದು ವೀಕ್ಷಕರು ಗೆಸ್ ಮಾಡಿದ್ದಾರೆ.

More from Filmibeat

English summary
Shrirastu Shubhamasthu serial today episode. Mahesh walks out of estate. Chandrakantha says truth to avi and abhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X