Shrirastu Shubhamasthu: ಮಾಧವ್‌ಗೆ ಅವಿ ವಾರ್ನಿಂಗ್ ಏನು..? ನಂದಿನಿ ಮನೆಗೆ ಬಂದಿದ್ದೇಕೆ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ವಿಚಾರ ಪೇಪರ್‌ನಲ್ಲಿ ಬಂದಿರುವುದು ಅವರಿಬ್ಬರಿಗಿಂತಲೂ ಬೇರೆಯವರಿಗೆ ದೊಡ್ಡ ವಿಚಾರವಾಗಿದೆ. ಮಾಧವ್‌ಗೆ ತುಳಸಿ ಬಗ್ಗೆ ಇರುವ ಭಾವನೆ ಸ್ನೇಹವನ್ನೂ ಮೀರಿದ್ದಾಗಿದೆ. ಇದರಿಂದ ಮಾಧವ್‌ಗೆ ಗಿಲ್ಟ್ ಫೀಲ್ ಆಗುತ್ತಿದೆ. ಹಾಗಾಗಿ ತುಳಸಿ ಬಳಿ ಏನನ್ನೂ ಹೇಳಿಕೊಳ್ಳುತ್ತಿಲ್ಲ.

ತುಳಸಿಗೆ ಹಾಗೂ ಅವರ ಮನೆಯವರಿಗೆ ಇವರಿಬ್ಬರ ಬಗ್ಗೆ ಯಾವುದೇ ತಪ್ಪು ಕಲ್ಪನೆ ಇಲ್ಲ. ಹಾಗಾಗಿ ಇವರೆಲ್ಲಾ ನಾರ್ಮಲ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ತುಳಸಿಗೆ ಈ ವಿಚಾರ ತಿಳಿದಾಗ ಗಾಬರಿಯಾಗುತ್ತದೆ. ತನ್ನಿಂದಾಗಿ ಮಾಧವ್ ಮಗನ ಮದುವೆ ನಿಲ್ಲುತ್ತಿದೆ ಎಂದು ನೊಂದುಕೊಳ್ಳುತ್ತಾಳೆ. ಈ ವಿಚಾರದ ಬಗ್ಗೆ ಮಾವನ ಬಳಿ ಮಾತನಾಡಿದಾಗ, ಮಾವ ಹಾಗೂ ಸಿರಿ ಎಲ್ಲರೂ ತುಳಸಿಗೆ ಸಮಾಧಾನ ಮಾಡುತ್ತಾರೆ.

Shrirastu Shubhamasthu serial 11th Juiy Episode Written Update

ಸತ್ಯ ಏನು ಎಂದು ನಮಗೆ ಗೊತ್ತು. ಅದಕ್ಕೆ ನಾವು ಯಾರೂ ಆ ಪೇಪರ್ ಸುದ್ದಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ತುಳಸಿ ಮನಸ್ಸಿಗೆ ಸಮಾಧಾನವಾಗುತ್ತದೆ. ಆದರೆ, ದೇವರ ಬಳಿ ಮಾಧವ್ ಮಗನ ಮದುವೆಗೆ ತಮ್ಮ ವಿಚಾರ ಅಡ್ಡಿಯಾಗದಿರಲಿ ಎಂದು ಬೇಡಿಕೊಳ್ಳುತ್ತಾಳೆ. ಅಲ್ಲದೇ, ಮಾಧವ್‌ಗೆ ತಾನೇ ಕರೆ ಮಾಡಿ, ಹೇಗಿದ್ದೀರಾ? ಆರಾಮಾಗಿರಿ ಎಂದು ಸಮಾಧಾನ ಮಾಡುತ್ತಾಳೆ. ಇದು ಮಾಧವ್‌ಗೆ ನೆಮ್ಮದಿ ತಂದು ಕೊಡುತ್ತದೆ.

ಅಪ್ಪನಿಗೆ ವಾರ್ನಿಂಗ್ ಕೊಟ್ಟ ಮಗ

ಮಾಧವ್ ಈ ವಿಚಾರವಾಗಿ ಮಹೇಶನ ಜೊತೆಗೆ ಮಾತನಾಡುತ್ತಾನೆ. ಯಾರೋ ಮಾಡಿದ ತಪ್ಪಿನಿಂದ ಈಗ ತನ್ನ ಮಗನ ಮದುವೆಗೆ ತೊಂದರೆಯಾಗಿದೆ ಎಂಬುದನ್ನು ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ. ಇದೇ ಸಂದರ್ಭಕ್ಕೆ ಬರುವ ಶಾರ್ವರಿ, ನೀವು ಈಗಲಾದರೂ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ಕೊಡಿ ಎಂದು ಹೇಳುತ್ತಾಳೆ. ಯಾಕೆಂದರೆ, ಶಾರ್ವರಿಗೆ ತುಳಸಿ ಹಾಗೂ ಮಾಧವ್ ಒಂದಾಗುವುದು ಇಷ್ಟವಿಲ್ಲ. ಇನ್ನು ಅವಿನಾಶ್, ಮಾಧವ್‌ಗೆ ವಾರ್ನಿಂಗ್ ಕೊಡುತ್ತಾನೆ. ಒಂದು ದಿನದಲ್ಲಿ ಈ ಸಮಸ್ಯೆ ಅನ್ನು ಬಗೆಹರಿಸಬೇಕು. ಇಲ್ಲದಿದ್ದರೆ, ಏನು ಮಾಡುತ್ತೀನಿ ಎಂಬುದು ಗೊತ್ತಿಲ್ಲ ಎಂದು ಹೇಳುತ್ತಾನೆ.

ಜನಾರ್ಧನ್ ಮನೆಗೆ ಬಂದ ಮಾಧವ್

ಮಾದವ್‌ ಇಷ್ಟವಿಲ್ಲದಿದ್ದರೂ ಮಗನ ಭವಿಷ್ಯಕ್ಕಾಗಿ ಈಗ ತನ್ನ ಹಿತಶತ್ರು ಜನಾರ್ಧನ್ ಮನೆಗೆ ಬರುತ್ತಾನೆ. ಮಾಧವ್ ಬಂದಿದ್ದನ್ನು ನೋಡಿದ ದೀಪಿಕಾ ತಾಯಿಗೆ ಬಹಳ ಖುಷಿಯಾಗುತ್ತದೆ. ಮಾಧವ್ ನಿನ್ನೆ ನಡೆದ ಘಟನೆ ಬಗ್ಗೆ ಮಾತನಾಡಬೇಕಿತ್ತು ಎಂದಾಗ ಜನಾರ್ಧನ್ ಅನ್ನು ಕರೆ ತರಲು ಬರುತ್ತಾಳೆ. ಆದರೆ, ಜನಾರ್ಧನ್ ನನಗೆ ಈ ವಿಚಾರದ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದು ಖಡಾಕಂಡಿತವಾಗಿ ಹೇಳುತ್ತಾನೆ. ಈಗ ಮಾಧವ್, ಅಭಿ ಹಾಗೂ ದೀಪಿಕಾ ಮದುವೆಯನ್ನು ಹೇಗೆ ಮಾಡಿಸುತ್ತಾನೋ ಗೊತ್ತಿಲ್ಲ.

Shrirastu Shubhamasthu serial 11th Juiy Episode Written Update

ಸಮಸ್ಯೆ ತಂದ ನಂದಿನಿ

ಇತ್ತ ತುಳಸಿ ಬೆಳಗೆದ್ದು ಮನೆಯ ಕೆಲಸ ಮುಗಿಸಿ ಎಂದಿನಂತೆ ಕೆಫೆಗೆ ಹೊರಟಿರುತ್ತಾಳೆ. ಇದೇ ಸಮಯಕ್ಕೆ ನಂದಿನಿ ಮನೆಗೆ ಬರುತ್ತಾಳೆ. ಸಿರಿ ಹಾಗೂ ದತ್ತ ತಾತ ಮನೆಯಲ್ಲಿ ಇಲ್ಲದ್ದನ್ನು ತಿಳಿದುಕೊಂಡು, ತಾನು ಹೊಸ ಬಿಸಿನೆಸ್ ಶುರು ಮಾಡಿದ್ದು, ಅದರಲ್ಲಿ ಉತ್ತಮ ಲಾಭ ಇರುವ ಬಗ್ಗೆ ಮಾತನಾಡುತ್ತಾಳೆ. ಆದರೆ, ತುಳಸಿ ತನಗೆ ಸಮಯವಿಲ್ಲ ಕೆಫೆಗೆ ಹೋಗಬೇಕು ಎನ್ನುತ್ತಾಳೆ.

ತುಳಸಿ- ನಂದಿನಿ ಮಾತನಾಡುವ ಸಮಯಕ್ಕೆ ಅಲ್ಲಿಗೆ ಸಮರ್ಥ್ ಬರುತ್ತಾನೆ. ಸಂದರ್ಭವನ್ನು ಬಳಸಿಕೊಳ್ಳುವ ನಂದಿನಿ, ಪೇಪರ್ ನಲ್ಲಿ ನಿಮ್ಮ ಸುದ್ದಿ ಬಂದರೂ ಕೆಫೆ ಹೋಗುತ್ತಿದ್ದೀರಾ..? ನೀವು ಕೆಲಸ ಬಿಟಿದ್ದೀರಿ ಎಂದುಕೊಂಡು ನಾನು ಬಿಸಿನೆಸ್ ಬಗ್ಗೆ ಮಾತನಾಡಲು ಬಂದೆ ಎನ್ನುತ್ತಾಳೆ. ಈ ಮಾತು ಸಮರ್ಥ್‌ಗೆ ಚುಚ್ಚಿದಂತಾಗುತ್ತದೆ. ಸಮರ್ತ್ ಈಗ ತುಳಸಿ ಜೊತೆಗೆ ಜಗಳ ಮಾಡುತ್ತಾನಾ ಎಂಬುದು ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial 11th Juiy Episode Written Update. here is detials about Madhav and Tulasi friendship continuous. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X