Shrirastu Shubhamasthu: ಹೆಂಡತಿಗಾಗಿ ಮತ್ತೆ ಸ್ಟೇರಿಂಗ್ ಹಿಡಿದ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಮಾಡಿದ ತಪ್ಪಿಗೆ ಮನೆಯವರೆಲ್ಲಾ ಚಿಂತೆಗೀಡಾಗುವಂತಾಗಿದೆ. ಸಮರ್ಥ್ ಕೆಲಸಕ್ಕೆ ಆಧಾರ ಎನ್ನುವಂತಿದ್ದ ಒಡವೆಗಳೂ ಈಗ ಕೈ ತಪ್ಪಿವೆ.
ಇದೇ ಚಿಂತೆಯಲ್ಲಿರುವ ಮನೆಯವರ ಪಾಲಿಗೆ ಸಂಧ್ಯಾ ಪತಿ ಪ್ರಸಾದ್ ದಾರಿ ತೋರಿದ್ದಾನೆ. ತನ್ನ ಬಳಿ ಇದ್ದ 60 ಸಾವಿರ ರೂಪಾಯಿ ಹಾಗೂ ಉಂಗುರ ಕೊಟ್ಟು ಸಮರ್ಥ್‌ಗೆ ಬಿಸಿನೆಸ್ ಆರಂಭಿಸಲು ಹೇಳಿದ್ದಾನೆ.

ಸಂಧ್ಯಾ ಅಡವಿಟ್ಟ ಒಡವೆಗಳನ್ನು ಮಾರಿ, ಪ್ರಸಾದ್ ಕೊಟ್ಟಿರುವ ಉಂಗುರವನ್ನು ಮಾರಾಟ ಮಾಡಿ, ಎಲ್ಲಾ ಹಣವನ್ನು ಒಟ್ಟುಗೂಡಿಸಿ ಕಾರ್‌ಗೆ ಡೌನ್ ಪೇಮೆಂಟ್ ಮಾಡಲು ಸಮರ್ಥ್ ಮುಂದಾಗಿದ್ದಾನೆ.
ಹೊಸ ಕಾರ್ಯಕ್ಕೆ ಕೈ ಹಾಕಿದ ಸಮರ್ಥ್
ಸಮರ್ಥ್ ಪ್ರಾರಂಭಿಸಬೇಕು ಎಂದಿರುವ ಹೊಸ ಕೆಲಸದಿಂದ ಲಾಭವಾಗಿ ಎಲ್ಲವೂ ಒಳ್ಳೆಯದಾಗಲಿ ಎಂದು ದತ್ತ ತಾತ ಶುಭ ಹಾರೈಸಿದ್ದಾರೆ. ಸಂಧ್ಯಾಳನ್ನು ಮಾತು ಮಾತಿಗೂ ಬೈಯುತ್ತಾ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶೇಷಾಚಲ ಸಹೋದರಿ ಭಾಗೀರತಿ ಎಂಬುವರು ತಮ್ಮ ಸೊಸೆಯ ಸೀಮಂತಕ್ಕೆ ಮುತ್ತೈದೆಯರನ್ನು ಕರೆಯಲು ಮನೆಗೆ ಬಂದಿದ್ದಾರೆ. ಸಂಧ್ಯಾ ಕೂಡ ಗರ್ಭಿಣಿ ಎಂಬುದನ್ನು ಕೇಳಿ, ಅವಳಿಗೆ ಇನ್ನೂ ಹೊಟ್ಟೆ ಬಂದಿಲ್ಲವೇಕೆ. ನಿನ್ನ ಹೊಟ್ಟೆಯನ್ನು ಒಮ್ಮೆ ಮುಟ್ಟಿ ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತಿನಿಂದ ಸಂಧ್ಯಾ ಗಾಬರಿಯಾಗಿದ್ದಾಳೆ. ಸಂಧ್ಯಾ ಆಟವನ್ನು ಭಾಗೀರತಿ ಅವರು ಕೊನೆ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಚಂದ್ರಕಾಂತನ ಮಾತು ಯಾರಿಗೂ ಅರ್ಥವಾಗುತ್ತಿಲ್ಲ
ಇತ್ತ ನಂದಿಗಿರಿಯಲ್ಲಿ ಮಾಧವ್ ಮನೆಯವರು ಕಾಲ ಕಳೆಯುತ್ತಿದ್ದಾರೆ. ಚಂದ್ರಕಾಂತ, ಸುಮತಿ ಸಾವಿನ ಹಿಂದೆ ಇರುವವರು ಯಾರು ಎಂಬುದನ್ನು ತಿಳಿಸಲು ಪ್ರಯತ್ನ ಪಡುತ್ತಿದ್ದಾನೆ. ಜೊತೆಗೆ ಮಹೇಶ ಸರಿ ಹೋಗುವುದಕ್ಕೆ ಸಹಾಯ ಮಾಡುತ್ತಿದ್ದಾನೆ. ಆದರೆ, ಯಾರಿಗೂ ಚಂದ್ರಕಾಂತನ ಮಾತು ಅರ್ಥವಾಗುತ್ತಿಲ್ಲ. ತೋಟದಲ್ಲಿ ತುಳಸಿ, ಮಾಧವ್ ಮತ್ತು ಮಹೇಶ ಸುತ್ತಾಡುವಾಗ ಬರುವ ಚಂದ್ರಕಾಂತ ಬೇಕಂತಲೇ ಮಹೇಶನನ್ನು ಹೆದರಿಸಲು ಯತ್ನಿಸುತ್ತಾನೆ. ಅಲ್ಲದೇ, ಸುಮತಿ ಅಮ್ಮನನ್ನು ಸಾಯಿಸಿದ್ದು, ನೀವಲ್ಲ ಅದರ ಹಿಂದೆ ಬೇರೆಯವರದ್ದೇ ಕೈವಾಡವಿದೆ ಎಂದು ಹೇಳುತ್ತಾನೆ. ಮಾಧವನಿಗೆ ಚಂದ್ರಕಾಂತನಿಗೆ ಹುಚ್ಚು ಹಿಡಿದಿದ್ದು ಏನೇನೋ ಮಾತನಾಡುತ್ತಾನೆ ಎಂದು ಭಾವಿಸಿದ್ದಾರೆ. ಆದರೆ, ಚಂದ್ರಕಾಂತನ ಮಾತುಗಳು ತುಳಸಿ ಮನದಲ್ಲಿ ಅನುಮಾನ ಮೂಡಿಸುತ್ತಿದೆ.
ಮತ್ತೆ ಸ್ಟೇರಿಂಗ್ ಹಿಡಿದ ಮಾಧವ್
ಇನ್ನು ತುಳಸಿ ತೋಟದ ಮರವೊಂದರಲ್ಲಿ ಬಿಟ್ಟಿದ್ದ ಹೂವನ್ನು ನೋಡಿ ಇಷ್ಟಪಡುತ್ತಾಳೆ. ಹೂವು ತುಂಬಾ ಚೆನ್ನಾಗಿದೆ ಎನ್ನುತ್ತಾಳೆ. ಆ ಹೂವನ್ನು ಮಾಧವ್ ಕೀಳಲು ಯತ್ನಿಸುತ್ತಾನೆ. ಆದರೆ, ಸ್ವಲ್ಪ ಎತ್ತರದ ಜಾಗದಲ್ಲಿದ್ದ ಕಾರಣ ಸಾಧ್ಯವಾಗುವುದಿಲ್ಲ. ಆದರೆ, ಮಾಧವ್‌ಗೆ ಆ ಹೂವನ್ನು ಹೇಗಾದರೂ ಮಾಡಿ ತುಳಸಿಗೆ ತಂದುಕೊಡಬೇಕು ಎಂದು ಅನಿಸುತ್ತದೆ. ಹೀಗಾಗಿ ಮಾಧವ್, ಪೂರ್ಣಿಮಾ ಬಳಿ ತನ್ನ ಮನದ ಆಸೆಯನ್ನು ಹೇಳಿಕೊಂಡಾಗ ಪೂರ್ಣಿಮಾ ಬನ್ನಿ ನಾವೇ ಹೋಗಿ ತರೋಣ ಎಂದು ಹೇಳುತ್ತಾಳೆ. ಕಾರನ್ನು ಬಳಸಲು ಸೂಚಿಸುತ್ತಾಳೆ. ಮಾಧವ್‌ಗೆ ಮತ್ತೆ ಸ್ಟೇರಿಂಗ್ ಹಿಡಿಯಲು ಭಯವಾದರೂ ಪೂರ್ಣಿಮಾ ಬಲವಂತ ಮಾಡಿ ಕರೆದುಕೊಂಡು ಹೋಗುತ್ತಾಳೆ.

ಶಾರ್ವರಿಯಿಂದಲೇ ಮಹೇಶನಿಗೆ ಅಪಾಯ
ಮಾಧವ್ ಮತ್ತೆ ಸ್ಟೇರಿಂಗ್ ಅನ್ನು ಹಿಡಿದಿದ್ದು, ಇದೇ ಸಂದರ್ಭದಲ್ಲಿ ಶಾರ್ವರಿ, ಮಹೇಶನನ್ನು ದೂಡುತ್ತಾಳೆ. ವೀಲ್ ಚೇರ್ ಮೇಲೆ ಕುಳಿತಿದ್ದ ಮಹೇಶ ಸೀದಾ ಹೋಗಿ ಮಾಧವನ ಗಾಡಿಗೆ ಗುದ್ದುತ್ತಾನೆ. ಇದರಿಂದ ಮಹೇಶನ ಹಳೆಯ ನೆನಪುಗಳು ಬರುತ್ತಾ..? ಇಲ್ಲ ಮಹೇಶ ಮತ್ತೊಂದು ಅಪಾಯವನ್ನು ಎದುರಿಸಬೇಕಾಗುತ್ತದಾ? ಎಂಬುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ ಶಾರ್ವರಿಯಿಂದಲೇ ಮಹೇಶನಿಗೆ ಪದೇ ಪದೇ ಅಪಾಯ ಎದುರಾಗುತ್ತಿದೆ.


Click it and Unblock the Notifications











