Shrirastu Shubhamasthu: ಚಾಲೆಂಜ್‌ನಲ್ಲಿ ಗೆದ್ದ ಮಾಧವ್ : ಅವಿ ಖುಷಿಗೆ ಪಾರವೇ ಇಲ್ಲ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವನ ಕೆಫೆಯಲ್ಲಿ ಜನಜಂಗುಳಿ ತುಂಬಿರುತ್ತದೆ. ಆಹಾರ ಮೇಳಕ್ಕೆ ಎಲ್ಲರೂ ಬಂದಿರುತ್ತಾರೆ. ತುಳಸಿ ತಂಡ ಅಡುಗೆ ಮನೆಯಲ್ಲಿ ಬ್ಯುಸಿಯಾಗಿರುತ್ತದೆ. ಜನರನ್ನು ನೋಡಿ, ಸಿರಿ, ಪೂರ್ಣಿ ಹಾಗೂ ಮಾಧವ್‌ಗೆ ಖುಷಿಯಾಗಿರುತ್ತದೆ. ಸಿರಿ ಬಂದವರೆಲ್ಲರೂ ಸೆಲ್ಫಿ ತೆಗೆದುಕೊಳ್ಳಲು ಸೆಲ್ಫಿ ಜೋನ್ ಅನ್ನು ಕೂಡ ಕ್ರಿಯೇಟ್ ಮಾಡುತ್ತಾಳೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ತುಳಸಿ ಖುಷಿ ತಂದಿದೆ.
ತುಳಸಿ ತನ್ನ ಜೊತೆಗೆ ಬಂದವರನ್ನು ಕೆಲಸ ಮಾಡಲು ಇನ್ನಷ್ಟು ಹುರಿದುಂಬಿಸಲು ಪ್ರಯತ್ನ ಪಡುತ್ತಾಳೆ. ಇತ್ತ ಅವಿ ಕೆಫೆ ಶೆಫ್ ನಂಬರ್ ಅನ್ನು ತೆಗೆದುಕೊಂಡು ಕಾಲ್ ಮಾಡುತ್ತಾನೆ. ಅವನು ಮಾಡಿದ ಕೆಲಸಕ್ಕೆ ಬೈಯುತ್ತಾನೆ. ಈಗಲೇ ಕೆಫೆಗೆ ಹೋಗಿ ಎಲ್ಲರಿಗೂ ಸಹಾಯ ಮಾಡಬೇಕು. ಅಷ್ಟೇ ಅಲ್ಲದೇ, ಉಳಿದ ಕೆಲಸಗಾರರನ್ನು ಕರೆದುಕೊಂಡು ಹೋಗಬೇಕು ಎಂದು ವಾರ್ನ್ ಮಾಡುತ್ತಾನೆ. ಅವಿ ಈಗ ಏನೇ ಆದರೂ ಪೂರ್ಣಿಮಾ ಟೀಂ ಗೆಲ್ಲಬೇಕು. ಜನಾರ್ಧನ್ ಸೋಲಬೇಕು ಎಂದು ಆಫೀಸಿಗೂ ಹೋಗದೇ ಮನೆಯಲ್ಲೇ ಉಳಿದಿದ್ದಾನೆ.

ಪೂರ್ಣಿಗೆ ಆಗಾಗ ಫೋನ್ ಮಾಡಿ ಕೆಫೆಯಲ್ಲಿ ಏನೇನು ಆಗುತ್ತಿದೆ ಎಂದು ಮಾಹಿತಿಯನ್ನು ಪಡೆಯುತ್ತಿರುತ್ತಾನೆ. ಪೂರ್ಣಿಗೆ ಸಲಹೆಯನ್ನು ಕೂಡ ಕೊಡುತ್ತಿರುತ್ತಾನೆ. ಕೆಫೆಯಲ್ಲಿ ತುಂಬಾ ಕೆಲಸ ಇರಬೇಕು ಎಂದು ತಿಳಿದ ದತ್ತ ತಾತ ಕೆಫೆಗೆ ಹೋಗುತ್ತಾರೆ. ಬಿಲ್ಲಿಂಗ್ ಕೌಂಟರ್‌ಗೆ ಹೋಗಿ ಲೆಕ್ಕ ಮಾಡಲು ಶುರು ಮಾಡುತ್ತಾರೆ. ದತ್ತ ತಾತ ಬಂದಿದ್ದನ್ನು ನೋಡಿದ ಸಿರಿ, ಮಾಧವ್, ತುಳಸಿ ಹಾಗೂ ಪೂರ್ಣಿಮಾ ಎಲ್ಲರೂ ಖುಷಿ ಪಡುತ್ತಾರೆ. ಈಗ ಕೆಫೆಗೆ ಒಂದು ಕಳೆ ಬಂತು ಎಂದು ಸಿರಿ ಹೇಳುತ್ತಾಳೆ.
ದತ್ತ ತಾತ ಲೆಕ್ಕಾ ಮಾಡುವಾಗ ದೀಪಿಕಾ ತಲೆ ತಿನ್ನುತ್ತಿರುತ್ತಾಳೆ. ದತ್ತ ತಾತ ಬೈಯುತ್ತಲೇ ಇರುತ್ತಾನೆ. ಆದರೂ ಕೂಡ ದೀಪಿಕಾ ಪದೇ ಪದೇ ಲೆಕ್ಕದ ಪುಸ್ತಕವನ್ನು ಕೇಳಿದರೂ ದತ್ತ ತಾತ ಕೊಡುವುದಿಲ್ಲ. ಇನ್ನು ಕೆಫೆಗೆ ಶೆಫ್ ಬರುತ್ತಾನೆ. ಮಾಧವ್ ಬಳಿ ಕ್ಷಮೆ ಕೇಳುತ್ತಾನೆ. ಹಣಕ್ಕೋಸ್ಕರ ಮೋಸ ಮಾಡಿದೆ. ಈಗ ನಾವೆಲ್ಲಾ ಕೆಲಸ ಮಾಡುತ್ತೇವೆ. ನಿಮ್ಮ ಪರ ನಿಲ್ಲುತ್ತೇವೆ ಎಂದು ಹೇಳುತ್ತಾನೆ. ಆದರೆ ಮಾಧವ್ ಇದಕ್ಕೆ ಒಪ್ಪುವುದಿಲ್ಲ. ನಾಳೆಯಿಂದ ಎಲ್ಲರೂ ಕೆಲಸಕ್ಕೆ ಮಾಮೂಲಿಯಂತೆ ಬರಲಿ. ಆದರೆ, ನೀನು ಇನ್ನು ಮುಂದೆ ನಮ್ಮ ಕೆಫೆಗೆ ಬರಬೇಡ. ಮನೆಯಲ್ಲಿ ಕಷ್ಟ ಇರುವುದರಿಂದ ನಿನಗೆ ಬೇರೆ ಕಡೆ ಕೆಲಸ ಸಿಗುವವರೆಗೂ ಸಹಾಯ ಮಾಡುತ್ತೇನೆ ಎಂದು ಮಾಧವ್ ಹೇಳುತ್ತಾನೆ.
ಬಳಿಕ ಪೂರ್ಣಿಮಾ ಬಂದು ನಿನಗೆ ಈಗ ಮನವರಿಕೆ ಆಗುವಂತೆ ಹೇಳಿದ್ದು ಯಾರು. ನಿನ್ನ ಮನಸ್ಸು ಯಾರು ಬದಲಿಸಿದ್ದು ಎಂದು ಕೇಳುತ್ತಾಳೆ. ಆಗ ಆತ ಅವಿ ಸರ್ ಕಾಲ್ ಮಾಡಿ ಬೈದರು. ಇವತ್ತು ಏನೇ ಆದರೂ ಮಾಧವ್ ಸರ್ ಗೆಲ್ಲಬೇಕು ಎಂದರು ಎಂದು ಹೇಳುತ್ತಾನೆ ಈ ಮಾತನ್ನು ಕೇಳಿ ಪೂರ್ಣಿಮಾಗೆ ಖುಷಿಯಾಗುತ್ತದೆ. ಇನ್ನು ಕೆಫೆಯಲ್ಲಿ ಏನು ಆಗುತ್ತಿದೆ ಎಂದು ನೋಡಲು ಜನಾರ್ಧನ್ ಹಾಗೂ ಅಭಿ ಬರುತ್ತಾರೆ. ಆಗ ದತ್ತ ತಾತ ಲೆಕ್ಕ ತೋರಿಸುತ್ತಾರೆ.

ಅಲ್ಲಿವರೆಗೂ 3,15,650 ರೂಪಾಯಿ ವ್ಯಾಪಾರ ಆಗಿರುತ್ತದೆ. ಇದನ್ನು ನೋಡಿ ಜನಾರ್ಧನ್, ದೀಪಿಕಾ ಹಾಗೂ ಅಭಿ ಬೇಸರದಿಂದ ಹೋಗುತ್ತಾರೆ. ಇನ್ನು ಮಾಧವ್ ಎಲ್ಲರೂ ಬಂದು ಸಹಾಯ ಮಾಡಿದ್ದಕ್ಕೆ ಧನ್ಯವಾದ ಎಂದು ಹೇಳುತ್ತಾನೆ. ಪೂರ್ಣಿಮಾ ಕೂಡ ಅವಿಗೆ ನಾವೇ ಗೆದ್ವಿ ಎಂದು ಹೇಳಿದ್ದಕ್ಕೆ ಖುಷಿಪಡುತ್ತಾನೆ. ನಾಳೆಯಿಂದ ಕೆಫೆಯಲ್ಲಿ ಕೆಲಸ ಮಾಡಲು ಶೆಫ್ ಇರುವುದಿಲ್ಲ. ಮಾಧವ್ ತುಳಸಿಯನ್ನೇ ತನ್ನ ಕೆಫೆಯ ಶೆಫ್ ಆಗಿ ಆಯ್ಕೆ ಮಾಡುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











