Shrirastu Shubhamasthu: ಮಾಧವ್‌ಗಾಗಿ ಮಿಡಿದ ತುಳಸಿ: ಅವಿಯನ್ನು ಯಾಮಾರಿಸಿದ ಶಾರ್ವರಿ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಮರ್ಥ್ ಈಗ ಮತ್ತೆ ಮೊದಲಿನಂತಾಗಿದ್ದಾನೆ. ಹೆಂಡತಿಯನ್ನು, ಮನೆಯವರನ್ನು ಅರ್ಥ ಮಾಡಿಕೊಳ್ಳುತ್ತಿದ್ದಾನೆ. ಸಮರ್ಥ್ ಪ್ರಪೋಸಲ್ ಅನ್ನು ಸಿರಿ ಒಪ್ಪಿಕೊಂಡ ದಿನವನ್ನು ನೆನಪು ಮಾಡಿಕೊಂಡ ಸಮರ್ಥ್, ಆಕೆಗೆ ಮಲ್ಲಿಗೆ ಹೂವು ತಂದು ಕೊಟ್ಟಿದ್ದಾನೆ. ಸಮರ್ಥ್ ಬದಲಾವಣೆ ಸಿರಿಗೆ ಖುಷಿ ಕೊಟ್ಟಿದೆ. ಆದರೆ ಅದೊಂದು ವಿಚಾರಕ್ಕೆ ಈಗ ತನ್ನನ್ನು ತಾನು ಶಪಿಸಿಕೊಂಡಿದ್ದಾಳೆ.

ಎಲ್ಲಾ ಘಟನೆಗಳನ್ನು ನೆನಪಿಟ್ಟುಕೊಳ್ಳುವ ಸಿರಿ ಈಗ ಸಮರ್ಥ್‌ ಪ್ರಪೋಸಲ್ ಒಪ್ಪಿಕೊಂಡಿದ್ದ ದಿನವನ್ನೇ ಮರೆತುಬಿಟ್ಟಿದ್ದಾಳೆ. ತಮ್ಮಿಬ್ಬರ ವಿಶೇಷ ದಿನವನ್ನು ಮರೆತಿದ್ದಕ್ಕೆ ಬೇಸರವನ್ನೂ ಮಾಡಿಕೊಂಡಿದ್ದಾಳೆ. ಆದರೆ, ಸಮರ್ಥ್ ಸಿರಿಗೆ ಸಮಾಧಾನ ಮಾಡಿದ್ದಾನೆ. ಸಂಧ್ಯಾ ಮಾವನ ಮನೆಯಲ್ಲಿ ಇರಬಾರದು, ಸಪರೇಟ್ ಆಗಿ ಬೇರೆ ಮನೆ ಮಾಡಬೇಕು ಎಂಬ ಕಾರಣಕ್ಕೆ ತುಳಸಿ ಬಳಿ ಸುಳ್ಳು ಹೇಳಿ, ಹೆದರಿಸಿ 3 ಲಕ್ಷ ಹಣವನ್ನು ಪಡೆದಿದ್ದಳು. ಸಂಧ್ಯಾ ಪಡೆದ ಆ ಹಣವನ್ನೂ ಕೂಡ ಆಕೆಯ ಜುಗ್ಗ ಮಾವ ತನ್ನ ವಶ ಮಾಡಿಕೊಂಡಿದ್ದ.

Shrirastu Shubhamasthu serial 12th June Episode Written Update

ಸಂಧ್ಯಾಗೆ ಶಾಕ್ ಕೊಟ್ಟ ಪ್ರಸಾದ್

ಹಣದ ವಿಚಾರಕ್ಕೆ ಜಗಳ ಮಾಡಿಕೊಂಡು ಸಂಧ್ಯಾ ತವರು ಮನೆಗೆ ಬಂದಿದ್ದಾಳೆ. ಆದರೆ, ಈಗ ಕದ್ದುಮುಚ್ಚಿ ಸಂಧ್ಯಾ ತನ್ನ ಪತಿ ಪ್ರಸಾದ್‌ನನ್ನು ಭೇಟಿ ಮಾಡುತ್ತಿರುತ್ತಾಳೆ. ಈ ವಿಚಾರವನ್ನು ತಿಳಿದ ದತ್ತ ತಾತ, ಈ ಸಲ ಸಂಧ್ಯಾಳನ್ನು ಹೋಗಲು ಬಿಡುವುದಿಲ್ಲ. ಸದಾ ಸಂಧ್ಯಾಳನ್ನು ಬೈಯುತ್ತಿರುತ್ತಾರೆ. ಇದೀಗ ಆಚೆ ಹೊರಟ ಸಂಧ್ಯಾಗೆ ಶಾಕ್ ಆಗಿದೆ. ಪ್ರಸಾದ್ ಮನೆಗೆ ಬಂದಿದ್ದು, ಸಂಧ್ಯಾ ಯಾಕೆ ಬಂದೆ ಎಂದು ಪ್ರಶ್ನೆ ಮಾಡುತ್ತಾಳೆ. ದತ್ತ ತಾತ ನಾನೇ ಕರೆಸಿದ್ದು, ಮನೆಯಲ್ಲೇ ಕುಳಿತು ಇಬ್ಬರು ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ. ಇವತ್ತು ಸಂಜೆಯ ಒಳಗೆ ನಿಮ್ಮ ನಿರ್ಧಾರವನ್ನು ತಿಳಿಸಿ ಎಂದು ಹೇಳುತ್ತಾರೆ.

ಸ್ನೇಹಿತನ ಹುಡುಕಿ ಹೊರಟ ತುಳಸಿ

ಇನ್ನು ತುಳಸಿ ಆಕ್ಸಿಡೆಂಟ್ ಆದ ಮೇಲೆ ಕೆಫೆಗೆ ಬಂದಿದ್ದಾಳೆ. ಬೆಳಗ್ಗಿನಿಂದ ತುಳಸಿಯ ಮೆಸೇಜ್‌ಗಳಿಗೆ ಮಾಧವ್ ರಿಪ್ಲೈ ಮಾಡಿಲ್ಲ. ಹೀಗಿರುವಾಗ ಆತಂಕಗೊಂಡಿದ್ದು, ಕೆಫೆಯಲ್ಲೂ ಮಾಧವ್ ಇಲ್ಲ. ಈ ಬಗ್ಗೆ ಮ್ಯಾಗಿ ಅನ್ನು ಪ್ರಶ್ನೆ ಮಾಡಿದ್ದಕ್ಕೆ. ಮಾಧವ್ ಸರ್ ಬೇಸರದಲ್ಲಿದ್ದರು. ಎಲ್ಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ತುಳಸಿ ಮಾಧವ್‌ನನ್ನು ಹುಡುಕಿಕೊಂಡು ಹೊರಟು ಬಿಡುತ್ತಾಳೆ.

ಮಾತಿನಲ್ಲಿ ಮುಳುಗಿದ ತುಳಸಿ-ಮಾಧವ್

ಇತ್ತ ಮಾಧವ್ ಕೂಡ ಗುಡ್ಡದ ಮೇಲೆ ಕುಳಿತುಕೊಂಡು ತುಳಸಿಯ ಬಗ್ಗೆಯೇ ಯೋಚಿಸುತ್ತಿದ್ದಾನೆ. ತುಳಸಿ ಅವರಿಂದ ದೂರ ಇರಬೇಕು. ಅವರನ್ನು ನೋಡಬಾರದು. ಅವರ ಜೊತೆಗೆ ಮಾತನಾಡಬಾರದು ಎಂದು ಇಷ್ಟು ದೂರ ಬಂದಿದ್ದೇನೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ತುಳಸಿ ಅವರನ್ನು ನೆನಪು ಮಾಡಿಕೊಳ್ಳದೇ ಇರಲು ಆಗುತ್ತಿಲ್ಲ ಎಂದು ಯೋಚಿಸುತ್ತಿರುತ್ತಾನೆ.

Shrirastu Shubhamasthu serial 12th June Episode Written Update

ಇದೇ ಸಂದರ್ಭದಲ್ಲಿ ತುಳಸಿ ಅಲ್ಲಿಗೆ ಬರುತ್ತಾಳೆ.

ತುಳಸಿಯನ್ನು ನೋಡಿದ ಮಾಧವ್ ಶಾಕ್ ಆಗುತ್ತಾನೆ. ನೀವೇನಿಲ್ಲಿ..? ನಾನಿರುವುದು ನಿಮಗೆ ಹೇಗೆ ತಿಳಿಯಿತು ಎಂದು ಪ್ರಶ್ನೆ ಮಾಡುತ್ತಾನೆ. ಆಗ ತುಳಸಿ ಪ್ರೀತಿಯಿಂದ ತನ್ನ ಸ್ನೇಹಿತನನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಮಾಧವ್ ಮನಸ್ಸಿಗೆ ಖುಷಿಯಾಗುತ್ತದೆ.

ಚಿಕ್ಕಮ್ಮನನ್ನು ಪ್ರಶ್ನಿಸಿದ ಅವಿನಾಶ್

ಇನ್ನು ಅವಿನಾಶ್‌ಗೆ ಅಭಿಜಿತ್ ಕೆಲಸಕ್ಕೆ ಶಾರ್ವರಿ ಹೂಡಿಕೆ ಮಾಡಿರುವುದು ಎಂಬುದು ಗೊತ್ತಾಗುತ್ತದೆ. ಹೀಗಾಗಿ ಅವಿ ಮನೆಗೆ ಬಂದು ಶಾರ್ವರಿಯನ್ನು ಪ್ರಶ್ನಿಸುತ್ತಾನೆ. ನೀವು ಹೀಗೆ ಮಾಡುತ್ತೀರಾ ಎಂದು ನಂಬಿರಲಿಲ್ಲ ಎಂದು ಕೋಪ ತೋರಿಸುತ್ತಾನೆ. ಅದೇ ವೇಳೆಗೆ ಅಭಿ ಕೆಲಸಕ್ಕೆ ಐಡಿಯಾ ಕೊಟ್ಟ ಕಂಪನಿಯ ವ್ಯಕ್ತಿ ಬಂದು ಅಭಿಗೆ ಮನೆಯವರ ಹಣದಿಂದ ಬೆಳೆಯುವುದು ಇಷ್ಟವಿರಲಿಲ್ಲ. ಹೀಗಾಗಿ ಅಭಿ ಭವಿಷ್ಯ ಚೆನ್ನಾಗಿರಲಿ ಎಂದು ಶಾರ್ವರಿ ಹಣ ಕೊಟ್ಟರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಅವಿ ಚಿಕ್ಕಮ್ಮನನ್ನು ಕ್ಷಮೆ ಕೇಳುತ್ತಾನೆ.

More from Filmibeat

English summary
Shrirastu Shubhamasthu serial 12th June Episode Written Update. here is details about Tulasi comes searching Madhav to hill. This makes Madhav feel happy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X