Shrirastu Shubhamasthu: ಅಭಿ ಮೇಲೆ ಕೋಪ ಮಾಡಿಕೊಂಡು ಕೂಗಾಡಿದ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ತನ್ನ ಸಹೋದರಿ ಸಂಧ್ಯಾ ರಾಖಿ ಕಟ್ಟಲು ಬರುತ್ತಾಳೆ ಎಂದು ಬಟ್ಟೆಯನ್ನು ತಂದಿರುತ್ತಾನೆ. ಆದರೆ, ಸಿರಿ ತಮ್ಮಿಬ್ಬರ ನಡುವಿನ ಜಗಳವನ್ನು ಪ್ಯಾಚ್ ಅಪ್ ಮಾಡಿಕೊಳ್ಳಲು ಗಿಫ್ಟ್ ತಂದಿದ್ದಾನೆ ಎಂದು ತಿಳಿದುಕೊಳ್ಳುತ್ತಾಳೆ. ಇದನ್ನು ತಿಳಿದುಕೊಂಡ ಸಮರ್ಥ್ ನಿನಗಲ್ಲ ನನ್ನ ತಂಗಿಗೆ ಎಂದು ಹೇಳುತ್ತಾನೆ.
ಬಳಿಕ ಸಿರಿಗೆ ನೀನು ಬೇಸರ ಮಾಡಿಕೊಳ್ಳಬೇಡ ಎಂದು ಹೇಳಿ ಸಮರ್ಥ್ ಮಲ್ಲಿಗೆ ಹೂವನ್ನು ಕೊಟ್ಟು ಹೋಗುತ್ತಾನೆ. ಇಬ್ಬರೂ ಕೂಡ ಒಟ್ಟಿಗೆ ಇದ್ದರೂ ಈಗೋ ಮಾತ್ರ ಹಾಗೇ ಇದೆ.

ಇತ್ತ ಅಭಿ ತುಳಸಿ ಮೇಲಿನ ಕೋಪದಿಂದ ಅಭಿ ಕಾಫಿ ಚೆಲ್ಲುತ್ತಾನೆ. ಇದನ್ನು ನೋಡಿ ಮಾಧವ್ ಕೋಪದಿಂದ ಬರುತ್ತಾನೆ. ಅಭಿ ನೀನು ಹೀಗೆಲ್ಲಾ ಮಾಡಿದ್ದು ತಪ್ಪು. ನಿನಗೆ ತೊಂದರೆ ಆಗಿದೆ ಇಲ್ಲ ಅಂತ ನಾನು ಹೇಳುವುದೇ ಇಲ್ಲ. ಹಾಗಂತ ಹೀಗೆಲ್ಲಾ ಮಾಡುವುದು ಸರಿಯಲ್ಲ. ನಾನು ನಿನ್ನ ಸಮಸ್ಯೆ ಅನ್ನು ಬಗೆಹರಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ತುಳಸಿ ಅವರು ತಮ್ಮ ಮನೆಯವರನ್ನೆಲ್ಲಾ ಬಿಟ್ಟು ಬಂದಿದ್ದಾರೆ. ಇಲ್ಲಿ ನಿಮ್ಮೆಲ್ಲರ ಜೊತೆಗೆ ಹೊಂದಿಕೊಂಡು ಹೋಗಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ನಿನ್ನ ಕೋಪ ಏನಿದ್ದರೂ ನನ್ನ ಮೇಲೆ ಇರಲಿ. ಅವರ ಮೇಲೆ ತೋರಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಬೈಯುತ್ತಾನೆ. ಅಭಿಗೆ ವಾಪಸ್ ಮಾತನಾಡಲು ಕೂಡ ಅವಕಾಶ ಕೊಡುವುದಿಲ್ಲ.
ಶಾರ್ವರಿಗೆ ಶಾಕ್ ಮೇಲೆ ಶಾಕ್
ಮಾಧವ್ ಇಷ್ಟೆಲ್ಲಾ ಆದರೂ ಕೂಡ ತುಳಸಿಯನ್ನು ವಹಿಸಿಕೊಂಡು ಎಲ್ಲರ ಮುಂದೆ ಮಾತನಾಡಿದ್ದು ಶಾರ್ವರಿಗೆ ಶಾಕ್ ಆಗಿದೆ. ತುಳಸಿಗೋಸ್ಕರ ಭಾವ ಇಷ್ಟೆಲ್ಲಾ ಜೋರಾಗಿ ಮಾತನಾಡಿದರು. ಇಷ್ಟು ವರ್ಷದಲ್ಲಿ ಒಂದು ದಿನವೂ ಕೂಗಾಡದವರು ಇಂದು ಅಭಿ ಅನ್ನು ಬೈಯುವಷ್ಟು ಕೋಪ ಮಾಡಿಕೊಂಡಿದ್ದರಲ್ಲ ಎಂದು ಆಲೋಚಿಸುತ್ತಾಳೆ. ಭಾವ ಹಾಗೂ ತುಳಸಿ ಅನ್ನು ಹೇಗಾದರೂ ದೂರ ಮಾಡಬೇಕು. ಇಲ್ಲದೇ ಹೋದರೆ ತನಗೆ ಉಳಿಗಾಲವಿಲ್ಲ ಎಂದು ಅಂದುಕೊಳ್ಳುತ್ತಾಳೆ.

ಕೆಲಸ ಕೆಟ್ಟಿದ್ದಕ್ಕೆ ಬೇಸರಗೊಂಡ ಸಂಧ್ಯಾ
ಇನ್ನು ಸಂಧ್ಯಾ ಅಭಿ ಹಾಗೂ ಅವಿಗೆ ರಾಖಿ ಕಟ್ಟಿದ ಮೇಲೆ ಅವರು ಏನನ್ನೂ ಕೊಡಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ತನ್ನ ಮಾವನ ಬಳಿ ಏನೇನೋ ಆಗುತ್ತೆ ಎಂದು ಹೇಳಿ ನೀವು ನನ್ನನ್ನು ಅಲ್ಲಿಗೆ ಯಾಕೆ ಕರೆದುಕೊಂಡು ಹೋದಿರಿ ಎಂದು ಪ್ರಶ್ನೆ ಮಾಡುತ್ತಾಳೆ. ಜುಗ್ಗ ಮಾವ ಕೂಡ ಇವತ್ತಲ್ಲ ನಾಳೆ ನಿನಗೆ ಇದರಿಂದ ಲಾಭ ಇರುತ್ತೆ ಎನ್ನುತ್ತಾನೆ. ನನ್ನ ಅಣ್ಣನಿಗೆ ರಾಖಿ ಕಟ್ಟಿದ್ದರೆ, ಬಟ್ಟೆ, ದುಡ್ಡು ಸಿಗುತ್ತಿತ್ತು. ಇವರಿಬ್ಬರಿಗೆ ರಾಖಿ ಕಟ್ಟಿದ್ದಕ್ಕೆ ಏನೂ ಸಿಗಲಿಲ್ಲ ಎನ್ನುತ್ತಾಳೆ. ಅದಕ್ಕೆ ಜುಗ್ಗ ಮಾವ, ಇಲ್ಲಮ್ಮ ಮಿಕ್ಸ್ಚರ್ ತಂದಿದ್ದೀನಿ. ಅದನ್ನು ಚಿಕ್ಕ ಚಿಕ್ಕ ಪ್ಯಾಕೆಟ್‌ನಲ್ಲಿ ಹಾಕಿ ಮಾರಾಟ ಮಾಡಿದರೆ, ದುಡ್ಡು ಬರುತ್ತೆ ಎನ್ನುತ್ತಾನೆ.
ಪರಿಸ್ಥಿತಿ ಅರ್ಥ ಮಾಡಿಸಿದ ತುಳಸಿ
ಇನ್ನು ತುಳಸಿಯನ್ನು ರೂಮಿಗೆ ಕರೆದುಕೊಂಡು ಬಂದ ಮಾಧವ್ ಕೈಗೆ ಆಯಿಂಟ್‌ಮೆಂಟ್ ಅನ್ನು ಹಚ್ಚುತ್ತಾನೆ. ಬೇಸರದಿಂದ ಮಾತನಾಡುತ್ತಿರುತ್ತಾನೆ. ಆಗ ತುಳಸಿ ಮಾಧವ್‌ಗೆ ಪರಿಸ್ಥಿತಿ ಅರ್ಥ ಮಾಡಿಸಲು ಯತ್ನಿಸುತ್ತಾಳೆ. ಅವನ ಪರಿಸ್ಥಿತಿಯೂ ಹಾಗೇ ಇದೆ. ಅಲ್ಲದೇ, ನಾನು ಹೊಸಬಳು, ನನ್ನನ್ನು ಒಪ್ಪಿಕೊಳ್ಳಲು ಮನೆಯವರಿಗೂ ಸಮಯ ತಗಲುತ್ತದೆ. ನಾವೂ ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮದಲ್ಲದ್ದನ್ನು ಬೇಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಲ್ವಾ ಎಂದು ತಿಳಿಸಿ ಹೇಳುತ್ತಿರುತ್ತಾಳೆ.


Click it and Unblock the Notifications











