Shrirastu Shubhamasthu: ಮತ್ತೆ ತುಳಸಿ ಮನಸ್ಸಿಗೆ ನೋವುಂಟು ಮಾಡಿದ ನಂದಿನಿ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ್ ಹುಟ್ಟುಹಬ್ಬವನ್ನು ಆಚರಿಸಬೇಕು ಎಂಬುದು ತುಳಸಿಯ ಆಸೆ. ಹೀಗಾಗಿ ಮನೆಗೆ ಬಂದು ಎಲ್ಲರಿಗೂ ವಿಚಾರ ತಿಳಿಸಿ, ಸರ್ಪ್ರೈಸ್ ಆಗಿ ಕೇಕ್ ತಯಾರಿಸಿ ಪಾರ್ಟಿಗೆ ಅರೇಂಜ್ ಮಾಡಿದ್ದಾಳೆ. ಸಿರಿ, ಪೂರ್ಣಿಮಾಳಿಗೆ ಫೋನ್ ಮಾಡಿ ತಾತ, ಮಾಧವ್ ಸರ್ ಬೇಕು ಎಂದು ಕೇಳುತ್ತಿದ್ದು ಕೂಡಲೇ ಕರೆದುಕೊಂಡು ಬರಬೇಕು ಎಂದು ಹೇಳುತ್ತಾಳೆ.

ಸಿರಿ ಮಾತನ್ನು ಕೇಳಿ ಪೂರ್ಣಿಮಾ ಹಾಗೂ ಮಾಧವ್ ಓಡಿ ಬರುತ್ತಾರೆ. ಆದರೆ, ಮನೆಗೆ ಬಂದ ಮೇಲೆ ಎಲ್ಲರೂ ಮಾಧವ್ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಇದರಿಂದ ಮಾಧವ್‌ಗೆ ಬೇಸರವಾಗುತ್ತದೆ. ತುಳಸಿ ಸಮಾಧಾನ ಮಾಡಿ ಕರೆದುಕೊಂಡು ಬರುತ್ತಾಳೆ. ನಂತರ ಕೇಕ್ ಕಟ್ ಮಾಡಿ ಎಂಜಾಯ್ ಮಾಡುತ್ತಾರೆ. ದತ್ತ ತಾತ, ಮಾಧವ್‌ಗೆ ಕ್ಯಾಮರಾವನ್ನು ಗಿಫ್ಟ್ ಆಗಿ ಕೊಡುತ್ತಾರೆ. ತುಳಸಿ ಶರ್ಟ್ ಕೊಡುತ್ತಾಳೆ. ಇದರಿಂದ ಎಮೋಷನಲ್ ಆದ ಮಾಧವ್, ತಾನು ಹುಟ್ಟುಹಬ್ಬವನ್ನು ಏಕೆ ಆಚರಿಸಿಕೊಳ್ಳುತ್ತಿರಲಿಲ್ಲ ಎಂಬುದನ್ನು ಹೇಳುತ್ತಾನೆ.

Shrirastu Shubhamasthu serial 13th May Episode Written Update

ಮಾಧವ್ ತನ್ನಿಂದಾಗಿ ಅಪಘಾತವಾಯಿತು ಎಂಬ ಗಿಲ್ಟ್ ಇಂದಾಗಿ ಇದನ್ನೆಲ್ಲಾ ಆಚರಿಸುತ್ತಿರಲಿಲ್ಲ. ಆದರೆ, ಈಗ ನನ್ನ ಹುಟ್ಟುಹಬ್ಬವನ್ನು ನೆನಪಿನಲ್ಲಿಟ್ಟುಕೊಂಡು ಅಚರಿಸುವವರಿದ್ದಾರೆ ಎಂದರೆ ಖುಷಿಯೇ ಎಂದು ಹೇಳುತ್ತಾನೆ. ತುಳಸಿ ಹಾಗೂ ಮಾಧವ್‌ ಮಾತನಾಡುವುದು ಒಟ್ಟಿಗೆ ಇರುವುದನ್ನು ನೋಡಿ ಸಂಧ್ಯಾ ಹಾಗೂ ನಂದಿನಿ ಇಬ್ಬರೂ ಸಿಕ್ಕಾಪಟ್ಟೆ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾರೆ.

ಮಾಧವ್ ಮನದಲ್ಲಿ ಹೆಚ್ಚಿದ ಆಸೆ

ಇನ್ನು ಕೇಕ್ ಕತ್ತರಿಸಿದ ಬಳಿ ಆಟವಾಡೋಣ ಎಂದು ಹೇಳುತ್ತಾರೆ. ಚೀಟಿಯಲ್ಲಿ ಚಿತ್ರದ ಹೆಸರುಗಳನ್ನು ಬರೆದಿರುತ್ತಾರೆ. ಮೊದಲು ತುಳಸಿ ಚೀಟಿ ತೆಗೆದು ಅಭಿನಯ ಮಾಡಿ ಹೇಳುತ್ತಾಳೆ. ಇದನ್ನು ಮಾಧವ್ ಗುರುತಿಸಿ ಸಿನಿಮಾದ ಹೆಸರನ್ನು ಹೇಳುತ್ತಾನೆ. ಇನ್ನು ಮಾಧವ್‌ಗೆ ನಿನ್ನನ್ನೇ ಪ್ರೀತಿಸುವೆ ಎಂದು ಬಂದಿರುತ್ತದೆ. ಇದನ್ನು ಹೇಗೆ ಹೇಳುವುದು ಎಂದು ಅಂಜಿಕೊಂಡ ಮಾಧವ್ ಸುಮ್ಮನೆ ಬಂದು ಬಿಡುತ್ತಾರೆ. ಇದೆಲ್ಲವನ್ನು ಸಂಧ್ಯಾ ಹಾಗೂ ನಂದಿನಿ ಅಪಾರ್ಥ ಮಾಡಿಕೊಳ್ಳುತ್ತಾರೆ. ಇನ್ನು ಮಾಧವ್ ಹಾಗೂ ಪೂರ್ಣಿಮಾ ಮನೆಗೆ ಹೊರಡುತ್ತಾರೆ.

ಗೋಳಾಡುತ್ತಿರುವ ಶಾರ್ವರಿ

ಮನೆಯಲ್ಲಿ ಅವಿ, ಪೂರ್ಣಿಮಾಳಿಗೆ ಕಾಯುತ್ತಾ ಸೋಫಾ ಮೇಲೆ ಮಲಗಿರುತ್ತಾನೆ. ಇದನ್ನು ನೋಡಿದ ಮಾಧವ್ ಬೆಡ್ ಶೀಟ್ ತಂದು ಪೂರ್ಣಿಮಾಳಿಗೆ ಹೊದಿಸು ಎಂದು ಕೊಡುತ್ತಾನೆ. ಆದರೆ, ಪೂರ್ಣಿಮಾ ನೀವೇ ಹೊದಿಸಿ ಎಂದು ಹೇಳಿದಾಗ ಮಾಧವ್ ಖುಷಿಯಿಂದ ಮಗನಿಗೆ ಬೆಡ್ ಶೀಟ್ ಅನ್ನು ಹೊದಿಸುತ್ತಾನೆ.

Shrirastu Shubhamasthu serial 13th May Episode Written Update

ಇನ್ನು ಶಾರ್ವರಿ ಮನೆ ಬಿಟ್ಟು ಹೊರಗಡೆ ಹೋಗದಂತೆ ಮಾಡಿದೀರಾ ಎಂದು ಮಹೇಶ್‌ಗೆ ಬೈಯುತ್ತಿರುತ್ತಾಳೆ. ಮಹೇಶ್‌ಗೆ ಈಗ ಸ್ವಲ್ಪ ಸ್ವಲ್ಪವೇ ಸ್ವಾಧೀನ ಬರುತ್ತಿದ್ದು, ಒಂದೊಂದೇ ಅಕ್ಷರಗಳನ್ನು ಮಾತನಾಡಲು ಯತ್ನಿಸುತ್ತಿದ್ದಾರೆ. ಇದರಿಂದ ಶಾರ್ವರಿಗೆ ಮಹೇಶ್ ಒಬ್ಬರನ್ನೇ ಬಿಟ್ಟು ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒದ್ದಾಡುತ್ತಿರುತ್ತಾಳೆ.

ಮತ್ತೆ ಬುಸ್ ಎಂದ ನಂದಿನಿ

ಇನ್ನು ನಂದಿನಿ, ಮಾಧವ್ ಹೋಗುತ್ತಿದ್ದಂತೆ ವ್ಯಂಗ್ಯವಾಗಿ ಮಾತನಾಡಲು ಶುರು ಮಾಡುತ್ತಾಳೆ. ತುಳಸಿ ಅವರಿಗೆ ಈ ವಯಸ್ಸಲ್ಲಿ ಫ್ರೆಂಡ್ ಬೇಕಿತ್ತಾ.? ರಾತ್ರಿ ಹೊತ್ತಲ್ಲಿ ಡ್ರಾಪ್ ತೆಗೆದುಕೊಳ್ಳುವುದು, ಕೆಲಸಕ್ಕೆ ಹೋಗುವುದು ಇದೆಲ್ಲಾ ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ದತ್ತ ತಾತ ಮಾಧವ್ ನಮ್ಮ ಮನೆಯ ಹಿತೈಷಿ. ಆತ ನಾನು ಕರೆದಾಗ ಬರುತ್ತಾನೆ. ನಾನು ಇರುವವರೆಗೂ ಅವನು ಬರುತ್ತಲೇ ಇರುತ್ತಾನೆ ಎಂದು ಸ್ಪಷ್ಟಪಡಿಸುತ್ತಾನೆ.

ಇದಕ್ಕೆ ನಂದಿನಿ ಬೀದಿಯವರ ಬಾಯಿ ಹೇಗೆ ಮುಚ್ಚಿಸುತ್ತೀರಾ ಎಂದು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ದತ್ತ ತಾತ ಬೀದಿಯವರು ಏನಾದರೂ ಅಂದುಕೊಳ್ಳಲಿ ಎಂದು ಹೇಳುತ್ತಾನೆ. ತುಳಸಿ ನಂದಿನಿಯ ಮಾತಿಗೆ ನೊಂದುಕೊಳ್ಳುತ್ತಾಳೆ.

More from Filmibeat

English summary
Shrirastu Shubhamasthu serial 13th May Episode Written Update. here is details about Nandini again blames tulasi. But datha thatha supports her. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X