Shrirastu Shubhamasthu: ಹಣ ವಾಪಸ್ ಕೊಡುವುದಿಲ್ಲ ಎಂದ ಸಹನಾ: ಈಗ ತುಳಸಿ ಸಾಲ ತೀರಿಸುತ್ತಾಳಾ..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ್, ಜನಾರ್ಧನ್ ಹಾಕಿದ ಚಾಲೆಂಜ್‌ನಲ್ಲಿ ಗೆದ್ದಿದ್ದಾರೆ. ಇದರಿಂದ ಮಾಧವ್ ಪುತ್ರ ಅಭಿಗೆ ಮುಖಭಂಗವಾಗಿದೆ. ಜನಾರ್ಧನ್ ಏನೋ ಇನ್ನು ಯಾವತ್ತೂ ಕೂಡ ಈ ಕೆಫೆ ತಂಟೆಗೆ ಬರುವುದಿಲ್ಲ ಎಂದು ಹೇಳಿ ಹೋಗಿದ್ದಾನೆ. ಆಗ ಅಭಿ ಈಗ ಕೊತಕೊತನೆ ಕುದಿಯುತ್ತಿದ್ದಾನೆ. ಶಾರ್ವರಿ ಇದನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಮಾಧವ್ ಹಾಗೂ ಮಕ್ಕಳನ್ನು ಇನ್ನಷ್ಟು ದೂರ ಮಾಡಲು ಮುಂದಾಗಿದ್ದಾಳೆ.
ಮಾಧವ್ ಕೆಫೆಯಲ್ಲಿ ಸೆಲಬ್ರೇಷನ್ಸ್ ಜೋರಾಗಿ ನಡೆಯುತ್ತಿದೆ. ಕೇಕ್ ಕಟ್ ಮಾಡಿ ಕೆಲಸಗಾರರ ಜೊತೆಗೆ ಮಾಧವ್ ಅವರು ಕೂಡ ಖುಷಿಯಿಂದ ಕಾಲ ಕಳೆದಿದ್ದಾರೆ. ಇನ್ನು ಮಾಧವ್‌ನನ್ನು ಸಂದರ್ಶನ ಮಾಡಲು ಮಾಧ್ಯಮದವರು ಕೂಡ ಬಂದಿದ್ದಾರೆ. ಮಾಧವ್ ಗೆದ್ದಿರುವುದರಿಂದ ಮನೆಯಲ್ಲಿ ಇನ್ನಷ್ಟು ಇರಿಸು ಮುರಿಸು ಉಂಟಾಗುತ್ತದೆ ಎಂದು ಶಾರ್ವರಿ ಅಂದುಕೊಂಡಿದ್ದಳು. ಆದರೆ, ಅವಳಿಗೆ ತಿಳಿಯದೇ ಮಾಧವ್ ಹಾಗೂ ಅವಿ ಇಬ್ಬರೂ ಒಂದಾದಂತೆ ಆಗಿದೆ. ಅವಿ, ಮಾಧವ್‌ಗೆ ಸಪೋರ್ಟ್ ಮಾಡಿ ಮಾತನಾಡಿದ್ದಾನೆ.

ಪಾಪಮ್ಮ, ಮಾಧವ್ ಅವರು ಚಾಲೆಂಜ್‌ನಲ್ಲಿ ಗೆದ್ದರು ಎಂಬ ಕಾರಣಕ್ಕಾಗಿ ಸ್ವೀಟ್ ಮಾ ಡಿರುತ್ತಾಳೆ. ಇದರಿಂದ ಅಭಿಗೆ ನೋವಾಗುತ್ತದೆ. ನಾನು ಸೋತಿದ್ದೀನಿ ಎಂಬುದು ಗೊತ್ತಿದ್ದರೂ ಸೆಲಬ್ರೇಟ್ ಮಾಡುತ್ತಿದ್ದೀರಾ ಎಂದು ಕೂಗಾಡುತ್ತಾನೆ. ಆಗ ಅವಿ, ಅಭಿಗೆ ಬೈದು ಬುದ್ಧಿ ಹೇಳುತ್ತಾನೆ. ನೀನು ಮಾಡಿದ್ದು ತಪ್ಪು. ಹೊರಗಿನವರ ಬಳಿ ಮನೆಯವರನ್ನು ಬಿಟ್ಟು ಕೊಡಬಾರದಿತ್ತು. ಚಾಲೆಂಜ್ ಮಾಡಿ ತಪ್ಪು ಮಾಡಿದ ನೀನೇ ಸೋಲುವ ಅಂದಾಜನ್ನು ಮಾಡಿರಬೇಕಿತ್ತು. ಈಗ ಇಲ್ಲಿ ಸುಮ್ಮನೆ ಕೂಗಾಡಬೇಡ ಎಂದು ಅವಿ ಹೇಳುತ್ತಾನೆ. ಅಭಿ ಕೋಪ ಮಾಡಿಕೊಂಡು ಹೋಗುತ್ತಾನೆ. ಮಾಧವ್ ಅಭಿಯನ್ನು ಸಮಾಧಾನ ಮಾಡಲು ಯತ್ನಿಸಿದರೂ ಪ್ರಯೋಜನವಾಗುವುದಿಲ್ಲ.

ಸಹನಾ ಮನೆಯವರು ಕಷ್ಟದಲ್ಲಿದ್ದಾರೆ. 3 ರೂ. ಲಕ್ಷ ಕೊಡದೇ ಹೋದರೆ, ಜೈಲಿಗೆ ಹೋಗುತ್ತಾರೆ ಎಂದು ಅಮ್ಮನನ್ನು ನಂಬಿಸಿ ಹಣ ಕೇಳಿರುತ್ತಾಳೆ. ತುಳಸಿ ತನ್ನ ಕೈನಲ್ಲಿ ಕೊಡಲು ಸಾಧ್ಯವಾಗದಿದ್ದಾಗ ಮಾವನ ಬಳಿ ಕೇಳಿರುತ್ತಾಳೆ. ದತ್ತ ತಾತ ಬೇಡ ಸಹನಾ ಮೋಸ ಮಾಡುತ್ತಿದ್ದಾಳೆ. ನಿನಗೆ ಅವಳ ಬುದ್ದಿ ಗೊತ್ತಿಲ್ಲ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ತಾತ, ತುಳಸಿಯನ್ನು ಮುಂದೆ ಇಟ್ಟು ಕೊಂಡು 5 ದಿನದಲ್ಲಿ ಸಾಲ ವಾಪಸ್ ಮಾಡಬೇಕು ಎಂದು 3 ರೂ. ಲಕ್ಷ ಹಣವನ್ನು ಕೊಟ್ಟಿರುತ್ತಾರೆ. ಆದರೆ ಈಗ ಸಹನಾ ನಾನು ಹಣವನ್ನು ಕೊಡುವುದಿಲ್ಲ ಎಂದಿದ್ದಾಳೆ. ತುಳಸಿ ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದಾಳೆ.
ದತ್ತ ತಾತ ಕೂಡ ಸೊಸೆಗೆ ಮಗಳ ಬುದ್ಧಿ ಅರ್ಥವಾಗಲಿ ಎಂದು ಹಣ ವಾಪಸ್ ಬೇಕು ಎಂದು ಕೇಳಿದ್ದಾನೆ. ತುಳಸಿ ಅದಷ್ಟು ಬೇಗ ಸಾಲವನ್ನು ತೀರಿಸುವುದಾಗಿ ಹೇಳಿದ್ದು, ಸಮಯ ಕೇಳಿದ್ದಾಳೆ. ಇದಕ್ಕೆ ದತ್ತ ತಾತ ಕೂಡ ಸರಿ ಎಂದು ಒಪ್ಪಿಕೊಂಡಿದ್ದಾರೆ.
ಇತ್ತ ಸಹನಾಳ ಮಾವ ಮಗಳು ಪ್ರಿಯಾಂಕಳಿಗೆ ಮದುವೆ ಮಾಡಲು ಮುಂದಾಗಿದ್ದಾನೆ. ಸದಾ ಜುಗ್ಗತನದಿಂದ ನಡೆದುಕೊಳ್ಳುತ್ತಿದ್ದವನು. ಈಗ ಧಾರಾಳವಾಗಿ ಖರ್ಚು ಮಾಡುವುದನ್ನು ನೋಡಿ ಸಹನಾ ಶಾಕ್ ಆಗಿದ್ದಾಳೆ. ಆದರೆ, ಸಹನಾಗೆ ತವರು ಮನೆಯಿಂದ 3 ಲಕ್ಷ ರೂಪಾಯಿ ಬಂದಿರುವುದನ್ನು ತಿಳಿದು ಹೀಗೆ ಖರ್ಚು ಮಾಡುತ್ತಿರುವುದು ಇನ್ನೂ ಸಹನಾಳಿಗೆ ಅರ್ಥವಾಗಿಲ್ಲ. ಹಾಗೇನಾದರೂ ಗೊತ್ತಾದರೆ, ಸಹನಾ ಮನೆಯಲ್ಲಿ ದೊಡ್ಡ ರಂಪವನ್ನೇ ಮಾಡುತ್ತಾಳೆ. ಅಮ್ಮನ ಬಳಿ ಸುಳ್ಳು ಹೇಳಿ ಹಣ ತೆಗೆದುಕೊಂಡು ಬಂದ ಸಹನಾ ಈಗ ಮಾವನ ಕೈನಲ್ಲಿ ಸಿಲುಕಿದ್ದಾಳೆ.


Click it and Unblock the Notifications











