Shrirastu Shubhamasthu: ತುಳಸಿ-ಮಾಧವ್ ಮದುವೆ: ದೇವಸ್ಥಾನಕ್ಕೆ ಬಂದ ಸಮರ್ಥ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಎಲ್ಲವೂ ದತ್ತ ತಾತ ಅಂದುಕೊಂಡಂತೆ ನಡೆಯುತ್ತಿದೆ. ಮಾಧವ್ ಹಾಗೂ ತುಳಸಿ ಒಂದಾಗುವ ಕಾಲ ಹತ್ತಿರ ಬಂದಿದೆ.
ಮಾಧವ್ ಬದುಕು ಈಗ ಸಂಪೂರ್ಣವಾಗಿ ಶಾರ್ವರಿ ಕೈಯಿಂದ ತಪ್ಪಿ ಹೋಗಿದೆ. ಆದರೆ ಶಾರ್ವರಿಗೆ ಇನ್ನೂ ಈ ಸತ್ಯ ಅರ್ಥವಾಗಿಲ್ಲ. ಬದಲಿಗೆ ತನ್ನ ಕಂಟ್ರೋಲ್‌ನಲ್ಲೇ ಎಲ್ಲವೂ ಇದೆ ಎಂದುಕೊಂಡಿದ್ದಾಳೆ.
ಆದರೆ, ಪೂರ್ಣಿಮಾ ಹಾಗೂ ಅವಿಗೆ ಮಾಧವ್ ಇಲ್ಲದಿರುವುದು, ಹಾಗೂ ದತ್ತ ತಾತನ ನಿರ್ಧಾರದ ಬಗ್ಗೆ ಸ್ವಲ್ಪವೂ ಸುಳಿವು ಇಲ್ಲ. ಶಾರ್ವರಿ ಮನೆಯಲ್ಲಿ ಎಲ್ಲರೂ ಮದುವೆ ಸಡಗರದಲ್ಲಿದ್ದಾರೆ.

ದತ್ತ ಮಾವನಿಗೆ ಎದುರಾಡದ ತುಳಸಿ
ಮಾಧವ್ ತನ್ನ ಮನದಲ್ಲಿ ಇರುವ ಭಾವನೆಗಳನ್ನು ತುಳಸಿ ಬಳಿ ಹೇಳಿಕೊಳ್ಳಲು ದತ್ತ ತಾತನೇ ಸಹಾಯ ಮಾಡುತ್ತಾನೆ. ಮಾಧವ್ ಕೂಡ ಪ್ರೀತಿಗಿಂತಲೂ ತುಳಸಿ ಅವರ ಸಾಂಗತ್ಯ ಮತ್ತು ಸ್ನೇಹದ ಬಗ್ಗೆ ಹೇಳುತ್ತಾ, ಮುಂದಿನ ಬದುಕನ್ನು ಅವರ ಜೊತೆಯೇ ಕಳೆಯುವ ಆಸೆಯನ್ನು ಹೇಳಿಕೊಳ್ಳುತ್ತಾರೆ. ಮಾಧವ್ ಮಾತುಗಳನ್ನು ಕೇಳಿದ ತುಳಸಿಗೆ ಶಾಕ್ ಆಗುತ್ತದೆ. ಒಂದು ಹೆಣ್ಣು-ಗಂಡಿನ ನಡುವೆ ಉತ್ತಮವಾದ ಸ್ನೇಹ ಇರುವುದಕ್ಕೆ ಸಾಧ್ಯವೇ ಇಲ್ಲವಾ ಎಂದು ಪ್ರಶ್ನಿಸುವ ತುಳಸಿಗೆ ಸರಿಯಾದ ಉತ್ತರವೇ ಸಿಗುವುದಿಲ್ಲ. ದತ್ತ ತಾತ ಆದಷ್ಟು ಬೇಗ ಇಬ್ಬರಿಗೂ ಮದುವೆ ಆಗುವಂತೆ ಹೇಳುತ್ತಾರೆ. ಆದರೆ, ಇದಕ್ಕೆ ತುಳಸಿ ಸುತಾರಾಂ ಒಪ್ಪಿಗೆ ಕೊಡುವುದಿಲ್ಲ.
ಹಸೆ ಮಣೆಯಲ್ಲಿ ತುಳಸಿ-ಮಾಧವ್
ಆದರೆ ದತ್ತ ತಾತ ಈ ಮದುವೆ ಆಗದಿದ್ದರೆ, ನನ್ನ ಕಾಲ ಮುಗಿದ ಮೇಲೆ ನಿನಗೂ ಹಾಗೂ ಮಾಧವ್‌ಗೂ ಯಾರೂ ಇಲ್ಲ. ನೀವಿಬ್ಬರೂ ಮದುವೆಯಾದರೆ ನಾನು ನೆಮ್ಮದಿಯಾಗಿ ಕಣ್ಣು ಮುಚ್ಚುತ್ತೀನಿ. ನನಗೆ ಹಾರ್ಟ್ ಪ್ರಾಬ್ಲಮ್ ಇದೆ ಎಂದು ದತ್ತ ತಾತ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ತುಳಸಿಗೂ ಮಾಧವ್‌ಗೂ ಹೇಳುತ್ತಾರೆ. ಇಬ್ಬರೂ ಗಾಬರಿಯಾಗುತ್ತಾರೆ. ಇನ್ನು ತುಳಸಿಗೆ ಹಾಗೂ ಮಾಧವ್‌ಗೆ ಇಬ್ಬರ ಸಾಂಗತ್ಯ ಈ ವಯಸ್ಸಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಸುತ್ತಾನೆ. ಮಾಧವ್ ಮದುವೆಗೆ ಒಪ್ಪಿಕೊಳ್ಳುತ್ತಾನೆ. ಆದರೆ, ತುಳಸಿ ಮಾವನ ಮಾತಿಗೆ ಎದುರಾಡಲಾಗದೇ ಮದುವೆಯಾಗಲು ಒಪ್ಪುತ್ತಾರೆ.

ಅಮ್ಮನನ್ನು ಹುಡುಕುತ್ತಿರುವ ಸಮರ್ಥ್
ತುಳಸಿಯನ್ನು ಸೊಸೆ ಸಿರಿಯೇ ಸಿದ್ಧ ಮಾಡುತ್ತಾಳೆ. ಮದುವೆಗೆ ರೆಡಿ ಮಾಡುವಾಗಲು ತುಳಸಿ ಹಾಗೂ ಮಾಧವ್ ಬಗ್ಗೆ ದತ್ತ ತಾತ ತೆಗೆದುಕೊಂಡಿರುವ ನಿರ್ಧಾರ ಸರಿಯಾಗೇ ಇದೆ ಎಂದು ಹೇಳುತ್ತಾಳೆ. ಇತ್ತ ಸಮರ್ಥ್, ಸಿರಿ ಹಾಗೂ ತುಳಸಿಯನ್ನು ಹುಡುಕುತ್ತಿರುತ್ತಾನೆ. ಇಬ್ಬರೂ ಎಲ್ಲೂ ಕಾಣಿಸುವುದಿಲ್ಲ. ದತ್ತ ತಾತ ಮತ್ತು ಸಿರಿ ಸೇರಿಕೊಂಡು ತುಳಸಿಗೂ ಮಾಧವ್‌ಗೂ ಮದುವೆ ಮಾಡಿಸಿ ಬಿಡುತ್ತಾರೆ. ಅದು ಆಗಬಾರದು ಎಂದು ಎಲ್ಲಾ ದೇವಸ್ಥಾನಗಳಲ್ಲೂ ಹುಡುಕಾಡುತ್ತಾನೆ. ಕೊನೆಗೆ ತುಳಸಿ ಇರುವ ದೇವಸ್ಥಾನಕ್ಕೆ ಬರುತ್ತಾನೆ. ಆದರೆ, ಮದುವೆಗೆ ಅಡ್ಡಿ ಮಾಡುತ್ತಾನಾ? ಎಂಬುದನ್ನು ಕಾದು ನೋಡಬೇಕಿದೆ.
ತುಳಸಿ-ಮಾಧವ್ ಹಿಂದೆ ಬಿದ್ದ ಜನಾರ್ಧನ್
ಇನ್ನು ತುಳಸಿ ಹಾಗೂ ಮಾಧವ್‌ನನ್ನು ಸಂಧ್ಯಾ ಮಾವ ಕೂಡ ರೌಡಿಗಳೊಂದಿಗೆ ಊರೆಲ್ಲಾ ಹುಡುಕಾಡುತ್ತಿರುತ್ತಾನೆ. ಜನಾರ್ಧನ್ ಕೂಡ ಹುಡುಗರನ್ನು ಬಿಟ್ಟು ತುಳಸಿ, ಮಾಧವ್‌ನನ್ನು ಹುಡುಕಾಡಿಸುತ್ತಿರುತ್ತಾನೆ. ಅವರಿಗೂ ಸಿಕ್ಕಿರುವುದಿಲ್ಲ. ಇದು ಶಾರ್ವರಿಗೆ ಆತಂಕವನ್ನು ಹುಟ್ಟಿಸಿದೆ. ಮನೆಯಲ್ಲಿ ಮಗ ಅಭಿ ಮದುವೆ ಇರುವಾಗ ಮಾಧವ್ ಇಲ್ಲದಿರುವುದು ಆತಂಕ ಸೃಷ್ಟಿಸಿದೆ. ಅದರಲ್ಲೂ ಮಾಧವ್ ತುಳಸಿ ಜೊತೆಗೆ ಹೋಗಿದ್ದಾನೆ ಎಂದು ಮನೆ ಕೆಲಸದವಳು ಹೇಳಿರುವುದು ಮತ್ತಷ್ಟು ಸಂಕಷ್ಟವನ್ನು ಉಂಟು ಮಾಡಿದೆ. ಅವರಿಬ್ಬರು ಈಗ ಎಲ್ಲಿಗೆ ಹೋದರು ಎಂದು ಆತಂಕದಲ್ಲಿದ್ದಾಳೆ. ಆದರೆ, ಇಬ್ಬರೂ ಮದುವೆಯಾಗುತ್ತಿರುವುದು ಗೊತ್ತಾದರೆ ಏನಾಗುತ್ತದೋ ಗೊತ್ತಿಲ್ಲ.


Click it and Unblock the Notifications











