Shrirastu Shubhamasthu: ದತ್ತ ತಾತನ ಮನೆಯಲ್ಲಿಯೇ ಪಂಚಾಯ್ತಿ ಸೇರಲು ಕಾರಣವೇನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಂದಿನಿ ಬಂದು ತುಳಸಿಗೆ ಬೇಕಂತಲೇ ಬಾಯಿಗೆ ಬಂದ ಹಾಗೆ ಮಾತನಾಡಿ ಹೋಗುತ್ತಾಳೆ. ತುಳಸಿ ಕೂಡ ನಂದಿನಿ ಮಾತಿಗೆ ಎದುರುತ್ತರ ಕೊಟ್ಟು ಕಳಿಸುತ್ತಾಳೆ. ಇದೆಲ್ಲಾ ಮಾತುಗಳನ್ನು ಸಮರ್ಥ್ ಕೇಳಿಸಿಕೊಂಡು ಬೇಸರ ಮಾಡಿಕೊಂಡಿರುತ್ತಾನೆ. ತುಳಸಿ ಕೂಡ ಸಮರ್ಥ್ ಬಳಿ ನಂದಿನಿ ಹೀಗೆಲ್ಲಾ ಮಾತನಾಡಿ ಬೇಸರ ಮಾಡುತ್ತಾಳೆ ನೋಡು ಎಂದು ಹೇಳುತ್ತಾಳೆ.
ಮೊದಲೇ ಫ್ರಸ್ಟ್ರೇಟ್ ಆಗಿರುವ ಸಮರ್ಥ್ ಅಮ್ಮನಿಗೆ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂದು ಹೇಳಿಬಿಡುತ್ತಾನೆ. ಈ ಮಾತು ತುಳಸಿಗೆ ನೋವು ಕೊಡುತ್ತದೆ. ನೋವಿನಲ್ಲೇ ಕೆಫೆಗೆ ಹೊರಡುತ್ತಾಳೆ. ಇತ್ತ ಮಾಧವ್, ಜನಾರ್ಧನ್ ಮನೆಗೆ ಹೋಗಿ ಅಭಿ ಹಾಗೂ ದೀಪಿಕಾ ಮದುವೆ ನಿಲ್ಲಿಸದೇ ಮುಂದುವರೆಸುವಂತೆ ಕೇಳಿಕೊಳ್ಳಲು ಹೋಗಿರುತ್ತಾನೆ. ಅಲ್ಲಿ ಜನಾರ್ಧನ್ ಬೇಕಂತಲೇ ಬೇಡಿಕೊಂಡರೆ ಮಾತ್ರವೇ ಒಪ್ಪಿಗೆ ಕೊಡಲು ಸಾಧ್ಯ ಎಂಬಂತೆ ಮಾತನಾಡುತ್ತಾನೆ.

ತನ್ನ ವಿಚಾರ ಪೇಪರ್‌ನಲ್ಲಿ ಬಂದಿರುವುದರಿಂದ ಅವನ ಮಗ ಹಾಗೂ ದೀಪಿಕಾ ಮದುವೆ ನಿಂತಿರುವುದು ಬೇಸರ ತಂದಿದೆ. ಜನಾರ್ಧನ್ ಮೇಲೆ ಎಷ್ಟೇ ಬೇಸರವಿದ್ದರೂ ಈಗ ಮದುವೆಗೆ ಒಪ್ಪಿಸುವ ಸಲುವಾಗಿ ಅವರ ಮನೆಗೆ ಮಾಧವ್ ಹೋಗಿದ್ದಾನೆ. ಜನಾರ್ಧನ್ ಹೇಳಿದಂತೆ ಕೈ ಮುಗಿದು ಜನಾರ್ಧನ್ ಬಳಿ ಅವರ ಮದುವೆಗೆ ಒಪ್ಪಿಗೆಯನ್ನು ಕೇಳುತ್ತಾನೆ. ಜನಾರ್ಧನ್, ಮಾಧವ್ ಕೈ ಮುಗಿದು ಬೇಡಿಕೊಳ್ಳುವುದನ್ನು ವೀಡಿಯೋ ಮಾಡಿಕೊಂಡು ಶಾರ್ವರಿಗೆ ಕಳಿಸುತ್ತಾನೆ. ಇದನ್ನು ನೋಡಿದ ಶಾರ್ವರಿ ಕೂಡ ಖುಷಿಪಡುತ್ತಾಳೆ. ಬಳಿಕ ಜನಾರ್ಧನ್ ಮದುವೆಗೆ ಒಪ್ಪಿಕೊಳ್ಳುತ್ತಾನೆ.
ಸಂದರ್ಶನ ಕೊಟ್ಟ ಮಾಧವ್
ಇನ್ನು ಮಾಧವ್ ಅಲ್ಲಿಂದ ಸೀದಾ ಕೆಫೆಗೆ ಹೊರಡುತ್ತಾನೆ. ಕೆಫೆಯಲ್ಲಿ ಶಾರ್ವರಿ, ಸಮನ್ವಿತಾ ಜೊತೆಗೆ ಸಂದರ್ಶನವನ್ನು ಏರ್ಪಡಿಸಿರುತ್ತಾಳೆ. ಮಾಧವ್ ಪೇಪರ್‌ನಲ್ಲಿ ಬಂದ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಡಲು ಈ ಸಂದರ್ಶನ ಕೊಡುತ್ತಾನೆ. ಸಮನ್ವಿತಾ ಆ ಹೆಂಗಸು ಯಾರು..? ನಿಮಗೆ ಅವರ ಬಗ್ಗೆ ಇರುವ ಅಭಿಪ್ರಾಯವೇನು.? ಎಂದಾದರೂ ನಿಮಗೆ ಸಂಗಾತಿ ಬೇಕು ಎನಿಸಿದೆಯಾ ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಮಾಧವ್, ಸಮನ್ವಿತಾ ಕೇಳುವ ಪ್ರಶ್ನೆಗೆ ಉತ್ತರ ಕೊಡುವುದರ ಜೊತೆಗೆ ತುಳಸಿಯ ಹೆಸರನ್ನೂ ಹೇಳದೇ ಅವರ ಬಗ್ಗೆ ಬಹಳ ಕಾಳಜಿಯಿಂದ ಮಾತನಾಡುತ್ತಾನೆ. ಈ ಮಾತುಗಳನ್ನು ದತ್ತ ತಾತ ಕೂಡ ಕೇಳಿಸಿಕೊಳ್ಳುತ್ತಾರೆ.

ಮಾಧವ್ ಮೇಲೆ ಹೆಚ್ಚಾಯ್ತು ದತ್ತನ ಗೌರವ
ಶೇಷು ಜೊತೆಗೆ ಮಾತನಾಡಲು ಕೆಫೆಗೆ ಬಂದಿದ್ದ ದತ್ತ ತಾತ, ಅಲ್ಲಿ ನಡೆಯುತ್ತಿದ್ದ ಸಂದರ್ಶನವನ್ನು ಕೇಳಿಸಿಕೊಳ್ಳುತ್ತಾನೆ. ಮಾಧವ್ ಮಾತುಗಳನ್ನು ಕೇಳಿಸಿಕೊಂಡ ದತ್ತ ತಾತ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಎಲ್ಲೂ ಕೂಡ ತುಳಸಿಯ ಹೆಸರೇಳದೇ ಇದ್ದುದಕ್ಕೆ ದತ್ತ ತಾತನಿಗೆ ಮಾಧವ್ ಮೇಲಿನ ಪ್ರೀತಿ, ಗೌರವ ಹೆಚ್ಚಾಗುತ್ತದೆ. ಇನ್ನು ತುಳಸಿಗೆ ಮಾಧವ್ ಒಂದು ಲಕ್ಷದ ಹತ್ತು ಸಾವಿರ ರೂಪಾಯಿಯ ಚೆಕ್ ಅನ್ನು ಸಂಬಳ ಎಂದು ಕೊಟ್ಟಿರುತ್ತಾನೆ. ಇದನ್ನು ನೋಡಿ ಶಾಕ್ ಆಗಿದ್ದ ತುಳಸಿ ದತ್ತ ತಾತನ ಎದುರೇ ಮಾಧವ್‌ಗೆ ಚೆಕ್ ಅನ್ನು ವಾಪಸ್ ಮಾಡುತ್ತಾಳೆ. ಆದರೆ, ಮಾಧವ್ ಮತ್ತು ದತ್ತ ತಾತ ಇಬ್ಬರೂ ಇದೇ ನಿನ್ನ ಸಂಬಳ ಎಂದು ತುಳಸಿಗೆ ಅರ್ಥ ಮಾಡಿಸುತ್ತಾರೆ.
ದತ್ತ ಮನೆಯಲ್ಲಿ ಪಂಚಾಯ್ತಿ
ಇನ್ನು ದತ್ತ ತಾತ ಹಾಗೂ ತುಳಸಿ ಇಬ್ಬರೂ ಮನೆಗೆ ಬರುತ್ತಾರೆ. ಮನೆಗೆ ಬರುತ್ತಿದ್ದಂತೆಯೇ ದತ್ತ ತಾತನ ಕ್ಲಬ್ ಸ್ನೇಹಿತರು ಬಂದಿರುತ್ತಾರೆ. ಎಲ್ಲರನ್ನೂ ದತ್ತ ತಾತ ಮಾತನಾಡಿಸುತ್ತಾರೆ. ಆದರೆ, ಅವರೆಲ್ಲಾ ಮಾಧವ್ ಅವರ ಹೆಗಲ ಮೇಲೆ ನಿಮ್ಮ ಸೊಸೆ ತುಳಸಿ ಒರಗಿದ್ದ ಸುದ್ದಿ ಪೇಪರ್‌ನಲ್ಲಿ ಬಂದಿದೆ. ಆ ಹೆಂಗಸು ಯಾರೋ ಎಂದು ತಿಳಿದುಕೊಂಡಿದ್ದೆವು. ಆದರೆ, ಅದು ನಿಮ್ಮ ಸೊಸೆ ಎಂದು ನಂದಿನಿ ಊರೆಲ್ಲಾ ಡಂಗೂರ ಸಾರುತ್ತಿದ್ದಾಳೆ. ಅದಕ್ಕೆ ಪಂಚಾಯ್ತಿ ಮಾಡೋಣ ಎಂದು ಬಂದೆವು ಎನ್ನುತ್ತಾರೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಶಾಕ್ ಆಗುತ್ತದೆ.


Click it and Unblock the Notifications











