Shrirastu Shubhamasthu : ಅಪ್ಪನ ಕೊರಳಪಟ್ಟಿ ಹಿಡಿದ ಅಭಿ: ಮನೆ ಮಂದಿಗೆಲ್ಲಾ ಶಾಕ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪರಿಸ್ಥಿತಿಯ ಕೈ ಮೀರಿ ಹೋಗಿದೆ. ತುಳಸಿ ಏನೂ ಹೇಳದೇ, ಎಲ್ಲರ ಅಭಿಪ್ರಾಯಕ್ಕೆ ತಲೆದೂಗಿ ಮಾಧವ್ ಕೈ ಹಿಡಿದಿದ್ದಾಳೆ. ಅಭಿಮಾನಿಯಾಗಿ ಬಂದ ಜೀವನದಲ್ಲಿ ಬಂದ ತುಳಸಿಯನ್ನು ಸ್ನೇಹಿತೆಯಾಗಿಯೂ ಈಗ ಪತ್ನಿಯನ್ನಾಗಿಯೂ ಮಾಧವ್ ಸ್ವೀಕರಿಸಿದ್ದಾನೆ. ಇನ್ನು ಮುಂದಿನ ಬದುಕು ಇವರದ್ದು ಹೇಗಿರುತ್ತದೆ ಎಂಬ ಕುತೂಹಲವಿದೆ.
ಶಾರ್ವರಿಗೆ ಇಷ್ಟೊತ್ತಾದರೂ ಮಾಧವ್ ಭಾವ ಮನೆಗೆ ಬಂದಿಲ್ಲ. ಎಲ್ಲಿಗೆ ಹೋದರೋ. ಆ ಹೆಂಗಸು ಜೊತೆಗೆ ಸೇರಿಕೊಂಡು ಏನು ಮಾಡಲು ಹೊರಟಿದ್ದಾರೋ ಎಂದು ಯೋಚಿಸುತ್ತಿದ್ದಾಳೆ. ಶಾರ್ವರಿಗೆ ತನಗೆ ಅರಿಯದೇ ಮಾಧವ್ ಅವರು ಏನಾದರೂ ಅವಾಂತರ ಮಾಡಿದರೆ, ಈ ಮನೆಯಲ್ಲಿರುವ ತನ್ನ ಅಧಿಕಾರಕ್ಕೆ ಕುತ್ತು ಬರುತ್ತದೆಯೋ ಏನೋ ಎಂದು ಟೆನ್ಷನ್ ಮಾಡಿಕೊಂಡಿದ್ದಾಳೆ.

ಪದೇ ಪದೇ ಜನಾರ್ಧನ್ ಅವರಿಗೆ ಕಾಲ್ ಮಾಡಿ ತುಳಸಿ ಮತ್ತು ಮಾಧವ್ ಸಿಕ್ಕಿದರಾ? ಎಂದು ವಿಚಾರಿಸುತ್ತಲೇ ಇದ್ದಾಳೆ. ಆದರೆ, ಜನಾರ್ಧನ್‌ಗೆ ಎಷ್ಟೇ ಹುಡುಕಿದರೂ ಮಾಧವ್ ಹಾಗೂ ತುಳಸಿ ಇಬ್ಬರೂ ಎಲ್ಲೂ ಸಿಕ್ಕಿಲ್ಲ. ಜನಾರ್ಧನ್‌ಗೆ ಈಗ ಮಾಧವ್‌ಗಿಂತಲೂ ತನ್ನ ಮಗಳ ಮದುವೆ ಯೋಚನೆ. ಆದರೆ, ಶಾರ್ವರಿಗೆ ಯಾರ ಬಳಿಯೂ ಏನೂ ಹೇಳಲಾಗದಂತೆ ಒದ್ದಾಡುತ್ತಿದ್ದಾಳೆ.
ಸೊಸೆಗೆ ಆಶೀರ್ವಾದ ಮಾಡಿದ ತಾತ
ದತ್ತ ತಾತ, ಸೊಸೆಯನ್ನು ಮಗಳನ್ನಾಗಿ ಸ್ವೀಕರಿಸಿದ್ದಲ್ಲದೇ, ಅವಳ ಭವಿಷ್ಯ ಚೆನ್ನಾಗಿರಬೇಕು ಎಂದು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ, ಹಲವು ವರ್ಷಗಳಿಂದ ಮನೆಯಲ್ಲಿದ್ದ ತುಳಸಿಯನ್ನು ಈಗ ಬೇರೆಯವರ ಮನೆಗೆ ಕಳಿಸಿಕೊಡುತ್ತಿರುವುದು ಕಷ್ಟವಾದರೂ ಕೂಡ ಮಗಳು ಖುಷಿಯಾಗಿರಲಿ. ತುಳಸಿಯ ಭವಿಷ್ಯ ಇನ್ನು ಮುಂದಾದರೂ ಸುಖವಾಗಿರಲಿ ಎಂದು ಮದುವೆ ಮಾಡಿದ್ದಾರೆ. ಮದುವೆ ಮುಗಿದ ಮೇಲೆ ತುಳಸಿ ಮತ್ತು ಮಾಧವ್ ಇಬ್ಬರೂ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಪುರೋಹಿತರು ಹಾಗೂ ದತ್ತ ತಾತನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ದತ್ತ ತಾತ ಮಾಧವ್ ಕೈಗೆ ತುಳಸಿಯನ್ನು ಒಪ್ಪಿಸಿದ್ದಾರೆ.

ತುಳಸಿಯನ್ನು ಕಳಿಸಿ ಕಣ್ಣೀರಿಟ್ಟ ತಾತ
ಬೆಳಗಾದರೆ ತುಳಸಿಯಿಂದ ನನ್ನ ದಿನಚರಿ ಶುರುವಾಗಿ ತುಳಸಿ ಅನ್ನೋ ಹೆಸರಿನಿಂದಲೇ ಮುಕ್ತಾಯವಾಗುತ್ತಿತ್ತು. ಆದರೆ ಇನ್ಮುಂದೆ ಇರುವುದಿಲ್ಲ. ಆದರೂ ಪರವಾಗಿಲ್ಲ. ನಿನ್ನ ಜೊತೆಗಿದ್ದರೆ ತುಳಸಿ ಸುಖವಾಗಿರುತ್ತಾಳೆ ಎಂದು ಹೇಳಿ ಕಳಿಸುತ್ತಾರೆ. ತುಳಸಿ ಹಾಗೂ ಮಾಧವ್ ದೇವಸ್ಥಾನದಿಂದ ಹೊರಟ ಮೇಲೆ ದತ್ತ ತಾತ ಬಿಕ್ಕಿ ಬಿಕ್ಕಿ ಅಳುತ್ತಾರೆ. ಸಿರಿಯನ್ನು ಮನೆಗೆ ಕಳುಹಿಸಿ ದತ್ತ ತಾತ ಒಬ್ಬರೇ ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಾರೆ.
ಎಲ್ಲರಿಗೂ ಶಾಕ್ ಕೊಟ್ಟ ಮಾಧವ್-ತುಳಸಿ
ಇತ್ತ ಶಾರ್ವರಿ ಮನೆಯಲ್ಲಿ ಎಲ್ಲರೂ ಇನ್ನು ಕಾದರೆ ಆಗುವುದಿಲ್ಲ. ಮದುವೆ ಮುಹೂರ್ತಕ್ಕೆ ತಡವಾಗುತ್ತೆ ಎಂದು ಹೊರಡುತ್ತಾರೆ. ಪೂರ್ಣಿಮಾ ಅಡ್ಡ ಹಾಕಿದರೂ, ಇಷ್ಟು ಹೊತ್ತು ಕಾದಿದ್ದು ಸಾಕು, ಇನ್ನು ಹೊರಡೋಣ ಎಂದು ಅವಿ ಹೊರಡಿಸುತ್ತಾನೆ. ಇದೇ ಸಂದರ್ಭಕ್ಕೆ ಸರಿಯಾಗಿ ತುಳಸಿ ಮತ್ತು ಮಾಧವ್ ಇಬ್ಬರೂ ಮನೆಗೆ ಎಂಟ್ರಿ ಕೊಡುತ್ತಾರೆ. ಮನೆಯಲ್ಲಿ ಎಲ್ಲರೂ ಖುಷಿಯಿಂದ ಮದುವೆಗೆ ಹೊರಟಿರುತ್ತಾರೆ. ಆದರೆ, ಮಾಧವ್ ಮತ್ತು ತುಳಸಿಯನ್ನು ಮನೆಯವರು ನೋಡಿ ಶಾಕ್ ಆಗುತ್ತಾರೆ. ಅವಿಗೆ ತುಳಸಿಯ ಪರಿಚಯ ಮೊದಲೇ ಇರುತ್ತದೆ. ಆದರೆ, ಆಕೆಯೇ ತುಳಸಿ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ, ತುಳಸಿ ಆಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾನೆ.
ತಂದೆ ಕೊರಳಪಟ್ಟ ಹಿಡಿದ ಅಭಿ
ಶಾರ್ವರಿಗೆ ಇದು ಸತ್ಯನಾ, ಸುಳ್ಳಾ? ಎಂದು ತನ್ನನ್ನು ತಾನು ಚಿವುಟಿಕೊಂಡು ನೋಡುತ್ತಾಳೆ. ಈಗ ಏನು ಮಾಡುವುದು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಮಾಧವ್ ನಿಮಗೆಲ್ಲಾ ನಮ್ಮನ್ನು ನೋಡಿ ಶಾಕ್ ಆಗಿರಬಹುದು. ಆದರೆ, ಒಂದೆರಡು ನಿಮಿಷ ಸಮಯ ಕೊಟ್ಟರೆ ನಡೆದಿದ್ದನ್ನು ವಿವರಿಸುತ್ತೇನೆ. ಇವರು ತುಳಸಿ ಎಂದು ಹೇಳುತ್ತಾನೆ. ಅಭಿಗೆ ಕೋಪ ಬಂದು, ನನ್ನ ಮದುವೆಯ ದಿನವೇ ಹೀಗೆಲ್ಲಾ ಮಾಡಿಕೊಂಡು ಬಂದಿದ್ದೀರಾ? ಎಂದು ಕೊರಳ ಪಟ್ಟಿ ಹಿಡಿಯುತ್ತಾನೆ. ಇದರಿಂದ ತುಳಸಿಗೆ ಗಾಬರಿಯಾಗುತ್ತದೆ.


Click it and Unblock the Notifications











