Shrirastu Shubhamasthu: ಸೊಸೆಯ ಮದುವೆ ಬಗ್ಗೆ ದತ್ತ ತಾತನಿಗೆ ಸುಳಿವು ಕೊಟ್ಟ ಜ್ಯೋತಿಷಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಮತ್ತು ತುಳಸಿ ತಮಗೇ ಗೊತ್ತಿಲ್ಲದೇ ಹತ್ತಿರವಾಗುತ್ತಿದ್ದಾರೆ. ಮಾಧವ್ ಮನದಲ್ಲಿ ಈಗಾಗಲೇ ತುಳಸಿ ಮೇಲೆ ಪ್ರೀತಿಯೂ ಹುಟ್ಟಿದೆ. ತುಳಸಿಗೆ ಮಾಧವ್ ಮನಸ್ಥಿತಿ ಅರ್ಥವಾಗುತ್ತಿಲ್ಲ. ಬದಲಿಗೆ ಅವರ ಒಳ್ಳೆಯತನವನ್ನು ಮೆಚ್ಚಿಕೊಂಡಿದ್ದಾಳೆ. ತುಳಸಿ ಬಗ್ಗೆ ತಿಳಿದಿರುವ ದತ್ತ ತಾತ ಕೂಡ ತುಳಸಿಯ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಇದರಿಂದ ಮುಂದೆ ಏನೆಲ್ಲಾ ಆಗುತ್ತೆ ಕಾದು ನೋಡಬೇಕು.
ಮಾಧವ್‌ನನ್ನು ತನ್ನ ಸ್ನೇಹಿತ ಎಂದು ಒಪ್ಪಿಕೊಂಡಿರುವ ದತ್ತ ತಾತ ತನ್ನ ಮನೆಯ ಸಣ್ಣ-ಪುಟ್ಟ ಸಮಾರಂಭದಲ್ಲೂ ಮಾಧವ್‌ನನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸುತ್ತಾರೆ. ಇನ್ನು ದತ್ತ ತಾತನ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಇರಿಸು ಮುರಿಸು ಶುರುವಾಗಿದೆ. ನಂದಿನಿ ಪದೇ ಪದೇ ಕಾಲು ಕೆರೆದುಕೊಂಡು ಜಗಳ ಮಾಡುತ್ತಿದ್ದಾಳೆ. ತುಳಸಿ ಮೇಲೆ ವಿಷ ಕಾರುತ್ತಿದ್ದಾಳೆ. ಇನ್ನು ಸಂಧ್ಯಾ ಬೇರೆ ತವರು ಮನೆ ಸೇರಿದ್ದು, ಸಿರಿ ಹಾಗೂ ತುಳಸಿಗೆ ಕಿರಿಕಿರಿ ಮಾಡುತ್ತಿದ್ದಾಳೆ. ಇದರಿಂದ ದತ್ತ ತಾತನಿಗೆ ಬೇಸರವಾಗಿದೆ.

ಮಾಧವ್ ಮನೆಗೆ ಬರುವುದಕ್ಕೆ ನಂದಿನಿ, ತುಳಸಿ ಹಾಗೂ ಮಾಧವ್‌ಗೆ ಈ ವಯಸ್ಸಲ್ಲಿ ಇದೆಲ್ಲಾ ಬೇಕಾ ಎಂದು ಹೇಳಿ ತುಳಸಿ ಮನಸಿಗೆ ಬೇಸರ ಉಂಟು ಮಾಡಿದ್ದಾಳೆ. ದತ್ತ ತಾತ, ತುಳಸಿಯ ಮನಸ್ಸನ್ನು ಅರಿತಿದ್ದು ಸಮಾಧಾನ ಮಾಡಿದ್ದಾರೆ. ಆದರೆ, ದತ್ತ ತಾತನಿಗೆ ಸಮಾಧಾನವಿಲ್ಲ. ಹೀಗಾಗಿ ನನ್ನ ಜಾತಕವನ್ನು ಯಾರಿಗಾದರೂ ತೋರಿಸಿ ನನ್ನ ಟೈಮ್ ಹೇಗಿದೆ ಎಂದು ನೋಡಬೇಕು ಎಂದು ದೇವಸ್ಥಾನಕ್ಕೆ ಸ್ನೇಹಿತ ಶೇಷು ಜೊತೆಗೆ ಹೊರಟಿದ್ದಾನೆ.
ಬೇಸರದಲ್ಲಿರುವ ಮಾಧವ್
ತುಳಸಿ ತನ್ನ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ್ದಕ್ಕೆ ಮಾಧವ್ ಫುಲ್ ಖುಷಿಯಲ್ಲಿದ್ದಾನೆ. ಮನೆಯಲ್ಲೂ ದೀಪಿಕಾ ಭಾವಿ ಮಾವನ ಹುಟ್ಟುಹಬ್ಬವನ್ನು ಆಚರಿಸಲು ವ್ಯವಸ್ಥೆ ಮಾಡಿದ್ದಾಳೆ. ಮನೆಯವರೆಲ್ಲರೂ ಖುಷಿಯಲ್ಲಿರುವಾಗಲೇ, ಅವಿ ಅಪ್ಪನನ್ನು ಬೈದಿದ್ದಾನೆ. ಅಮ್ಮನನ್ನು ಕೊಂದವರಿಗೆ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಳ್ಳುವ ಹಕ್ಕಿಲ್ಲ ಎಂದು ಹೇಳಿದ್ದಾನೆ. ಈ ಮಾತುಗಳನ್ನು ಕೇಳಿದ ಮಾಧವ್ ಬೇಸರದಲ್ಲಿ ಕೆಫೆಗೆ ಬಂದಿದ್ದಾನೆ.

ಮ್ಯಾಗಿ ಮತ್ತು ಸದಾ ಇಬ್ಬರೂ ಮಾಧವ್ ಹುಟ್ಟು ಹಬ್ಬಕ್ಕಾಗಿ ಗಿಫ್ಟ್ ಕೊಟ್ಟು ವಿಷ್ ಮಾಡಿದ್ದಾರೆ. ಆದರೆ ಮಾಧವ್ ಇದಕ್ಕೆ ಸ್ಪಂದಿಸದೇ, ಮೌನವಾಗಿ ಹೋಗಿ ಏಕಾಂತದಲ್ಲಿ ಕುಳಿತುಕೊಂಡಿದ್ದಾನೆ. ಇದರಿಂದ ಮ್ಯಾಗಿ ಹಾಗೂ ಸದಾ ಇಬ್ಬರಿಗೂ ಬೇಸರವಾಗಿದೆ. ಇನ್ನು ತುಳಸಿ, ಮಾಧವ್‌ಗೆ ತಿಂಡಿ ತಂದು ಕೊಟ್ಟಿದ್ದಾಳೆ. ಮಾಧವ್ ಬೇಸರದಲ್ಲಿರುವುದನ್ನು ನೋಡಿ, ಏನಾಯ್ತು ಎಂದು ಕೇಳದೇ ಸುಮ್ಮನಿದ್ದಾಳೆ. ಮಾಧವ್ ಸರ್‌ಗೆ ಮತ್ತಷ್ಟು ಬೇಸರ ಮಾಡುವುದು ಬೇಡ ಎಂಬುದೇ ತುಳಸಿಯ ಉದ್ದೇಶ.
ಮಾಧವ್ ಮೊಗದಲ್ಲಿ ನಗು ತಂದ ತುಳಸಿ
ತಿಂಡಿ ತಿನ್ನಲು ಕೊಟ್ಟು ಮಾಧವ್‌ನನ್ನು ಮಾತನಾಡಿದ್ದಾಳೆ. ತುಳಸಿ ಜೊತೆಗೆ ಮಾತನಾಡುತ್ತಾ ಮಾಧವ್ ತನ್ನ ನೋವನ್ನು ಮರೆತು ನಗುತ್ತಿದ್ದಾನೆ. ಇನ್ನು ಇದೇ ವೇಳೆಗೆ ಅಂದು ಕೆಫೆಗೆ ಬಂದು ತುಳಸಿ ಮಾಡಿದ್ದ ರಾಗಿ ಪಿಜ್ಜಾ ತಿಂದು ಹೋಗಿದ್ದ ಪತ್ರಕರ್ತ ಲೇಖನವನ್ನು ಪ್ರಕಟಿಸಿದ್ದಾರೆ. ಮಾಧವ್ ಕೆಫೆ, ತುಳಸಿ ಅಡುಗೆ ಬಗ್ಗೆ ಹೊಗಳಿದ್ದಾರೆ. ಇದನ್ನು ನೋಡಿ ಮಾಧವ್, ಸದಾ, ಮ್ಯಾಗಿ ಹಾಗೂ ತುಳಸಿ ಸಂತಸ ಪಟ್ಟಿದ್ದಾರೆ.

ಸೊಸೆಯ ಮದುವೆ ಬಗ್ಗೆ ಸುಳಿವು ಕೊಟ್ಟ ಜಾತಕ
ಇತ್ತ ದತ್ತ ತಾತನ ಭವಿಷ್ಯ ಹೇಳುವ ಜ್ಯೋತಿಷಿ ಸಮಸ್ಯೆ ಏನೂ ಇಲ್ಲ. ಯಾರ ಮಾತಿಗೂ ಒಳಗಾಗದೇ, ನಿಮ್ಮ ನಿರ್ಧಾರವನ್ನು ನೀವು ಮಾಡಿ ಎಲ್ಲವೂ ಸರಿ ಹೋಗುತ್ತದೆ. ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಎಂದು ಸಮಾಧಾನದ ಮಾತುಗಳನ್ನು ಆಡಿದ್ದಾರೆ. ಇದನ್ನು ಕೇಳಿ ದತ್ತ ತಾತನಿಗೆ ಖುಷಿ ಆಗಿದೆ. ಆದರೆ, ಜ್ಯೋತಿಷಿಗಳು ನಿಮಗೆ ಕನ್ಯಾದಾನ ಮಾಡುವ ಭಾಗ್ಯವಿದೆ. ಕನ್ಯಾದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸೊಸೆಯ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಶಾಕ್ ಆಗಿದೆ.


Click it and Unblock the Notifications











