Shrirastu Shubhamasthu: ಅಭಿ- ಅವಿ ನಡುವೆ ಬಂದ ದೀಪಿಕಾ ಮಾತಿಗೆ ಬೆಲೆಯಿಲ್ಲ

By ಪ್ರಿಯಾ ದೊರೆ

Article desc: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಹುಟ್ಟುಹಬ್ಬದ ಅಂಗವಾಗಿ ಮ್ಯಾಗಿ ಮತ್ತು ಸದಾ ಇಬ್ಬರೂ ಪಿಕ್‌ನಿಕ್ ಹೋಗೋಣ ಎಂದು ಕೇಳುತ್ತಾರೆ. ಇದಕ್ಕೆ ಮಾಧವ್ ಓಕೆ ಎನ್ನುತ್ತಾನೆ. ಆದರೆ, ತುಳಸಿ ಪಿಕ್‌ನಿಕ್ ಗೆ ಬರಲು ಮಾವನ ಒಪ್ಪಿಗೆ ಪಡೆಯಬೇಕು ಎಂದು ಹೇಳುತ್ತಾಳೆ. ಮಾಧವ್ ಮನೆಗೆ ಬಂದು ದತ್ತನ ಬಳಿ ಒಪ್ಪಿಗೆಯನ್ನು ಕೇಳುತ್ತಾನೆ. ದತ್ತ ತಾತ ಒಪ್ಪಿಕೊಳ್ಳುತ್ತಾರೆ.

ಆದರೆ, ದತ್ತ ತಾತ ತಮ್ಮ ಮನೆಯವರೆಲ್ಲರೂ ಪಿಕ್‌ನಿಕ್‌ಗೆ ಬರಲು ಮಾಧವ್ ಕೇಳುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ. ಮಾಧವ್ ಇದಕ್ಕೆ ಏನೂ ಹೇಳದೇ, ಎಲ್ಲರೂ ಹೋಗೋಣ ಎಂದು ಹೇಳುತ್ತಾನೆ. ಟ್ರಿಪ್ ಹೊರಟ ದತ್ತ ತಾತ ತಿನ್ನಲು ಚಕ್ಕುಲಿ, ಕೋಡುಬಳೆ, ಹಣ್ಣು, ಜ್ಯೂಸ್, ಕಾಫಿ ಎಲ್ಲವನ್ನೂ ಪ್ಯಾಕ್ ಮಾಡಿಸಿದ್ದಾರೆ. ರೆಸಾರ್ಟ್‌ಗೆ ಬರುವ ದಾರಿಯಲ್ಲಿ ಅಂತ್ಯಾಕ್ಷರಿ ಹಾಡಿಕೊಂಡು ಮಜಾ ಮಾಡುತ್ತಾ ಬರುತ್ತಾರೆ. ಇನ್ನು ರೆಸಾರ್ಟ್‌ಗೆ ಬಂದ ಮೇಲೆ ದತ್ತ ತಾತ ಕ್ರಿಕೆಟ್ ಆಡಲು ಜೀನ್ಸ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಬರುತ್ತಾರೆ.

Shrirastu Shubhamasthu serial 19th May Episode Written Update

ತಾತ ಎಂಗ್ ಆಂಡ್ ಎನರ್ಜಿಟಿಕ್ ಆಗಿ ಬರುವುದನ್ನು ನೋಡಿದವರೆಲ್ಲಾ ಗಪ್ ಚುಪ್ ಆಗಿದ್ದಾರೆ. ಪ್ರೇಕ್ಷಕರು ಕೂಡ ದತ್ತ ತಾತನ ಲುಕ್ ನೋಡಿ ಫಿದಾ ಆಗಿದ್ದಾರೆ. ದತ್ತ ತಾತ ಕ್ರಿಕೆಟ್ ಆಡಲು ಬ್ಯಾಟಿಂಗ್ ಮಾಡುತ್ತಾರೆ. ಆದರೆ, ಮೊದಲ ಬಾಲ್ ಗೆ ಔಟ್ ಆಗಿ ಬಿಡುತ್ತಾರೆ. ದತ್ತ ತಾತ ಸೋತರೂ ಕೂಡ ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಇಲ್ಲೂ ಇದು ನೋ ಬಾಲ್ ಎಂದು ಹೇಳಿ ತಮ್ಮ ಸೋಲನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಪಿಕ್ ನಿಕ್ ನಲ್ಲಿ ಮಾಧವ್ ಹಾಗೂ ತುಳಸಿ ಇಬ್ಬರು ನಡೆದುಕೊಳ್ಳುವುದನ್ನು ಪೂರ್ಣಿಮಾ ಹಾಗೂ ಸಿರಿ ಗಮನಿಸುತ್ತಿರುತ್ತಾರೆ.

ಅಣ್ಣ-ತಮ್ಮ ಒಂದಾಗಿರುವುದಕ್ಕೆ ಬೈದ ಶಾರ್ವರಿ

ಇತ್ತ ಅಭಿ ಹಾಗೂ ಅವಿ ಅನ್ನು ಬೇರೆ ಮಾಡಬೇಕು ಎಂದೇ ದೀಪಿಕಾ ಮನೆಗೆ ಬಂದು ಸೇರಿಕೊಂಡಿದ್ದಾಳೆ. ಬೇಕಂತಲೇ ಸಣ್ಣ ಪುಟ್ಟ ಕಿರಿ ಕಿರಿ ಮಾಡುತ್ತಿರುತ್ತಾಳೆ. ಅಭಿಗೆ ಈಗಾಗಲೇ ಅವಿ ಮೇಲೆ ಬೇಸರವೂ ಇದೆ. ಇದನ್ನೇ ಬಳಸಿಕೊಂಡು ಬೇರೆ ಮಾಡಲು ಹೊಸ ಬಿಸಿನೆಸ್ ಮಾಡುವ ಐಡಿಯಾ ದೀಪಿಕಾ ಕೊಡುತ್ತಾಳೆ. ಅಭಿ ಕೂಡ ಯಾವುದಾದರೂ ಸ್ಟಾರ್ಟಪ್ ಮಾಡಬೇಕು ಎಂದಾಗ ಅವಿ ಬಂದು ಸಪೋರ್ಟ್ ಮಾಡುತ್ತಾನೆ.

Shrirastu Shubhamasthu serial 19th May Episode Written Update

ನಿನ್ನ ಸ್ಟಾರ್ಟ್ ಅಪ್‌ಗೆ ನಾನೇ ಇನ್ವೆಸ್ಟ್ ಮಾಡುತ್ತೇನೆ ಎಂದು ಹೇಳುತ್ತಾನೆ. ಇದರಿಂದ ಅಭಿ ಮತ್ತು ಅವಿ ಇನ್ನಷ್ಟು ಹತ್ತಿರವಾಗುತ್ತಾರೆ. ಇದನ್ನು ನೋಡಿದ ಶಾರ್ವರಿ ದೀಪಿಕಾಳಿಗೆ ಬೈಯುತ್ತಾಳೆ. ಅಣ್ಣ-ತಮ್ಮನನ್ನು ದೂರ ಮಾಡು ಎಂದು ಮನೆಗೆ ಕರೆಸಿದರೆ, ಇಬ್ಬರನ್ನು ಒಂದು ಮಾಡುತ್ತಿದ್ದೀಯಾ ಎಂದು ಬೈಯುತ್ತಾಳೆ.

ದೀಪಿಕಾ ಮಾತಿಗೆ ಬೆಲೆ ಇಲ್ಲ

ಇನ್ನು ಮನೆಯಲ್ಲಿ ದೀಪಿಕಾ ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಾಳೆ. ತಾನು ಹೇಳಿದ ಅಡುಗೆಯೇ ಆಗಬೇಕು ಎಂದು ಹೇಳುತ್ತಿರುತ್ತಾಳೆ. ಪಾಪಮ್ಮ ಅಕಸ್ಮಾತ್ ಆಗಿ ಮಿಕ್ಸ್ಚರ್ ಬಟ್ಟಲನ್ನು ಬೀಳಿಸಿ ಬಿಡುತ್ತಾಳೆ. ಇದನ್ನು ನೋಡಿದ ದೀಪಿಕಾ ಬೈಯುತ್ತಾಳೆ. ಆಗ ಅವಿ ಬಂದು ದೀಪಿಕಾಳಿಗೆ ಬೈಯುತ್ತಾನೆ. ಆದರೂ ದೀಪಿಕಾ ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ, ಕೆಲಸಕ್ಕೆ ಏಕೆ ಬರಬೇಕು ಎಂದು ಕೇಳುತ್ತಾಳೆ. ಅದಕ್ಕೆ ಅವಿ, ಈ ಮನೆಯಲ್ಲಿ ಯಾವ ಕೆಲಸದವರಿಗೂ ಯಾರೂ ಬೈಯ್ಯುವ ಹಕ್ಕಿಲ್ಲ ಎಂದು ಬೈಯುತ್ತಾನೆ.

ದೀಪಿಕಾ ಮೇಲೆ ರೇಗಿದ ಅಭಿ

ಇದೇ ವಿಚಾರಕ್ಕೆ ದೀಪಿಕಾ, ಅಭಿ ಬಳಿಯೂ ಬರುತ್ತಾಳೆ. ಭಾವ ನನಗೆ ಬೈದರು. ಸೊಸೆಗಿಂತಲೂ ಕೆಲಸದವರೇ ಹೆಚ್ಚಾಯ್ತಾ ಎಂದು ಕೇಳುತ್ತಾಳೆ. ಅಭಿ, ದೀಪಿಕಾಳಿಗೆ ಬೈಯುತ್ತಾನೆ. ಈ ಮನೆಗೆ ಸೊಸೆಯಾಗಿ ಬರುತ್ತಿದ್ದೀಯಾ ಎಂದರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ದೀಪಿಕಾ. ಅಣ್ಣ ಯಾರಿಗೂ ಸುಮ್ಮನೆ ಹೇಳಲ್ಲ ಎಂದು ಅಣ್ಣನನ್ನೇ ವಹಿಸಿಕೊಂಡು ಮಾತನಾಡುತ್ತಾನೆ. ಇದರಿಂದ ದೀಪಿಕಾಳಿಗೆ ಬೇಸರವಾಗುತ್ತದೆ.

More from Filmibeat

English summary
Shrirastu Shubhamasthu serial 19th May Episode Written Update. here is detials about Deepika comes home to saparate Abhi and Avi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X