Shrirastu Shubhamasthu: ಕೇಶವನಿಗೆ ಸಹಾಯ ಮಾಡಿದ ಮಾಧವ್: ನಿಧಿಗೆ ಸಿಗದ ಸೀಟ್

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಕಥೆ ಈಗ ಹೊಸ ಮಗ್ಗುಲಿಗೆ ಹೊರಳಿದೆ. ನಂದಿನಿ ಬೇಕಂತಲೇ ಸಮರ್ಥ್‌ನನ್ನು ಪದೇ ಪದೇ ಮಾತನಾಡಿಸುವುದು, ಊಟ ಕೊಡುವುದು, ಡ್ರಾಪ್ ಕೇಳುವುದನ್ನು ಮಾಡುತ್ತಿರುತ್ತಾಳೆ. ಇದನ್ನೆಲ್ಲಾ ನೋಡುವ ಸಿರಿಗೆ ಕೊಂಚ ಬೇಸರವಾಗುತ್ತದೆ. ಈ ವಿಚಾರದ ಬಗ್ಗೆ ಸಮರ್ಥ್ ಬಳಿ ಮಾತನಾಡುವುದು ಹೇಗೆ ಎಂಬುದು ಕೂಡ ಸಿರಿಗೆ ಅರ್ಥವಾಗುತ್ತಿರುವುದಿಲ್ಲ.

ಅಮ್ಮನ ಜೊತೆಗೆ ಜಗಳವಾಡಿದ ನಂದಿನಿ ಜೊತೆಯಲ್ಲಿ ಸಮರ್ಥ್ ಯಾಕಿಷ್ಟು ಕ್ಲೋಸ್ ಆಗಿ ಮೂವ್ ಆಗುತ್ತಿದ್ದಾನೆ ಎಂಬ ಗೊಂದಲವೂ ಕೂಡ ಇರುತ್ತದೆ. ನಿತ್ಯ ಸಮರ್ಥ್ ಜೊತೆಗೆ ಮನೆಯಿಂದ ಹೊರಗಡೆ ಮಾತನಾಡುತ್ತಿದ್ದ ನಂದಿನಿ, ಇವತ್ತು ಸೀದಾ ಮನೆಯ ಒಳಗೆ ಬಂದು ಮಾತನಾಡಿಸುತ್ತಾಳೆ. ಸಮರ್ಥ್‌ಗೆ ವಾಂಗೀಬಾತ್ ಎಂದರೆ ಇಷ್ಟ ಅಲ್ವಾ ಹಾಗಾಗಿ ತಂದೇ ಎಂದು ಬಾಕ್ಸ್ ಕೊಟ್ಟು ಹೋಗುತ್ತಾಳೆ. ಈ ವಿಚಾರಕ್ಕೆ ಸಿರಿ ನಿನಗಿನ್ನು ಅವಳ ಬಗ್ಗೆ ಅರ್ಥವಾಗಿಲ್ವಾ. ಅಮ್ಮನ ಜೊತೆಗೆ ಅವತ್ತು ಬೀದಿಯಲ್ಲಿ ರಂಪ ಮಾಡಿ, ಇವತ್ತು ಒಂದು ಕ್ಷಮೆ ಕೂಡ ಕೇಳಲಿಲ್ಲ ಎಂದು ಹೇಳುತ್ತಾಳೆ.

Shrirastu Shubhamasthu serial 20th April Episode Written Update

ಸಮರ್ಥ್ ಅದರ ಬಗ್ಗೆ ನೆಗ್ಲೆಟ್‌ ಆಗಿ ಮಾತನಾಡಿ ಕೋಪ ಮಾಡಿಕೊಂಡು ಹೋಗುತ್ತಾನೆ. ಇದರಿಂದ ಸಿರಿಗೆ ಬೇಸರವಾಗಿರುತ್ತದೆ. ದತ್ತ ತಾತ ನಾನು ಸಂಜೆ ಸಮರ್ಥ್ ಬಳಿ ಮಾತನಾಡುತ್ತೀನಿ, ನೀನು ಬೇಜಾರು ಮಾಡಿಕೊಳ್ಳಬೇಡ ಎಂದು ಹೇಳುತ್ತಾನೆ. ತುಳಸಿ ಕೂಡ ಸಿರಿಗೆ ಸಮಾಧಾನ ಮಾಡುತ್ತಾಳೆ. ಸಿರಿ, ತನ್ನ ಬೇಸರ ತುಳಸಿ ಬಳಿ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾಳೆ.

ಇನ್ನು ಮಾಧವ್, ಕೇಶವನ ಓದಿಗೆ ಸಹಾಯ ಮಾಡುವ ಸಲುವಾಗಿ ಫೋನ್ ನಂಬರ್ ಅನ್ನು ತೆಗೆದುಕೊಂಡು ಕೇಶವ್‌ನನ್ನು ಭೇಟಿ ಮಾಡುತ್ತಾನೆ. ನಿನಗೆ ಕೋಚಿಂಗ್‌ಗೆ ನಾನೇ ಹಣ ಕಟ್ಟುತ್ತೀನಿ ಎಂದಾಗ ಬೇಡ ಎನ್ನುವ ಕೇಶವ, ಅಡ್ಮಿಶನ್ ಮಾಡಲು ಸ್ವಲ್ಪ ಕಾಲಾವಕಾಶ ಕೊಡಿಸಿದರೆ ಸಾಕು ಎಂದು ಕೇಳುತ್ತಾನೆ. ಇದಕ್ಕೆ ಒಪ್ಪುವ ಮಾಧವ್, ಕೇಶವನಿಗೆ ಅಡ್ಮಿಶನ್ ಮಾಡಲು ತನ್ನ ಇನ್‌ಫ್ಲುಯೆನ್ಸ್ ಮೇಲೆ ಕಾಲಾವಕಾಶವನ್ನು ಕೊಡಿಸಿ ಬರುತ್ತಾನೆ.

ಇತ್ತ ನಿಧಿ ಕೂಡ ಅದೇ ಕೋಚಿಂಗ್ ಸೆಂಟರ್‌ಗೆ ಸೇರಬೇಕಿರುತ್ತದೆ. ಅವಳು ನೆಗ್ಲೆಟ್ ಮಾಡಿದ ಕಾರಣ ಸೀಟ್‌ಗಳು ಖಾಲಿ ಆಗಿರುತ್ತದೆ. ಹಾಗಾಗಿ ಅವಿಗೆ ಕಾಲ್ ಮಾಡಿ ಸಹಾಯ ಕೇಳುತ್ತಾಳೆ. ಅವಿ ಬಂದ್ರು ಕೋಚಿಂಗ್ ಸೆಂಟರ್‌ನಲ್ಲಿ ಸೀಟ್ ಖಾಲಿಯಾಗಿದೆ, ಮುಂದಿನ ಬ್ಯಾಚ್ ಶುರುವಾದಾಗ ಹೇಳುತ್ತೀವಿ ಎಂದು ಹೇಳಿ ಕಳಿಸುತ್ತಾರೆ.

Shrirastu Shubhamasthu serial 20th April Episode Written Update

ನಿಧಿ ತನಗೆ ಅದೇ ಬ್ಯಾಚ್‌ನಲ್ಲೇ ಸೀಟ್ ಬೇಕು ಎಂದು ಹಠ ಹಿಡಿಯುತ್ತಾಳೆ. ಆಗ ಅವಿ ಲಾಸ್ಟ್ ಸೀಟ್ ಪಡೆದ ವ್ಯಕ್ತಿಯನ್ನು ಸಂಪರ್ಕಿಸಲು ಮುಂದಾಗುತ್ತಾನೆ. ಆದರೆ ಈ ಹುಡುಕಾಟದಲ್ಲಿ ಮಾಧವ್ ನಂಬರ್ ಸಿಕ್ಕಾಗ ಸುಮ್ಮನಾಗುತ್ತಾನೆ. ನಿಧಿಗೆ ಇಲ್ಲ. ಸೀಟ್ ಇಲ್ಲ ಬಿಡು ಎಂದು ಹೇಳಿದರೂ ನಿಧಿ ಕೇಳದೇ, ಬೇಸರ ಮಾಡಿಕೊಂಡಿದ್ದಾಳೆ.

ಇನ್ನು ತುಳಸಿ ಕೆಫೆಗೆ ಕೆಲಸಕ್ಕೆ ಹೋಗಲು ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಪದ್ಮ ಕೂಡ ತುಳಸಿಗೆ ಮಾಧವ್ ಜೊತೆಗೆ ಕೆಲಸ ಮಾಡುವುದು ಪುಣ್ಯ. ನೀವು ಅಲ್ಲಿಗೆ ಕೆಲಸಕ್ಕೆ ಹೋಗಿ ಎನ್ನುತ್ತಾಳೆ. ಈ ಬಗ್ಗೆ ತುಳಸಿ ಸಿರಿ ಹತ್ತಿರವೂ ಮಾತನಾಡುತ್ತಾಳೆ. ಸಿರಿ, ಆರಾಮಾಗಿ ಹೋಗಿ, ಮಾಧವ್ ಸರ್ ಜೊತೆಗೆ ಮಾತನಾಡಿ ಎಂದು ಹೇಳುತ್ತಾಳೆ.

ತುಳಸಿ, ಮಾಧವ್ ಬಳಿ ತಾನು ಕೆಲಸಕ್ಕೆ ಬರಲು ಒಪ್ಪಿರುವ ವಿಚಾರವನ್ನು ಹೇಳಲೆಂದು ಕೆಫೆಗೆ ಬರುತ್ತಾಳೆ. ಕೆಫೆಗೆ ಬರುವ ತುಳಸಿ ಕೆಲಸಕ್ಕೆ ಸೇರುತ್ತಾಳಾ..? ಇದಕ್ಕೆ ತುಳಸಿ ಅವರ ಮಾವನೂ ಒಪ್ಪುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial 20th April Episode Written Update. here is detials about Tulasi is now ready to accept madhav's offer. Tulasi becomes chef in café. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X