Shrirastu Shubhamasthu: ತುಳಸಿ ವಿರುದ್ಧ ಶಾರ್ವರಿ ಮಾಡಿದ ಶಪಥ ಏನು..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅವಿಗೆ ತುಳಸಿಯನ್ನು ಮಾಧವ್ ಜೊತೆಗೆ ನೋಡಿ ಶಾಕ್ ಆಗಿದೆ. ತುಳಸಿಗೂ, ಅವಿಗೂ ಈ ಹಿಂದೆ ಪರಿಚಯವಿತ್ತು. ಒಮ್ಮೆ ತುಳಸಿ ಸಮರ್ಥ್‌ಗಾಗಿ ಊಟ ತೆಗೆದುಕೊಂಡು ಆಫಿಸಿಗೆ ಹೋಗಿರುತ್ತಾಳೆ. ಅವಿ ತನಗರಿಯದೇ ತುಳಸಿ ತಂದ ಊಟ ತಿಂದಿರುತ್ತಾನೆ.
ಆಗ ಅವಿ ಮತ್ತು ತುಳಸಿ ಇಬ್ಬರ ಪರಿಚಯವಾಗಿರುತ್ತದೆ. ಇಬ್ಬರೂ ಆಗಾಗ ದಾರಿಯಲ್ಲಿ ಭೇಟಿಯಾಗುತ್ತಿರುತ್ತಾರೆ. ಆದರೆ, ತುಳಸಿಗೆ ಅವಿ ಹಾಗೂ ಅವಿಗೆ ತುಳಸಿ ಯಾರು ಎಂಬುದು ಗೊತ್ತಿರುವುದಿಲ್ಲ. ಹಾಗಿದ್ದರೂ ಅವಿಗೆ ತುಳಸಿ ಎಂದರೆ ಬಹಳ ಪ್ರೀತಿ. ತುಳಸಿ ಮಾಡಿದ ಅಡುಗೆ, ಅವಳು ಮಾತನಾಡುವ ಮಾತುಗಳೆಲ್ಲವೂ ಅವಿಗೆ ತನ್ನ ತಾಯಿಯನ್ನು ನೆನಪು ಆಗುತ್ತಿತ್ತು. ಅವಿಗೆ ತುಳಸಿ ಮೇಲೆ ವಿಶೇಷವಾದ ಗೌರವವಿತ್ತು. ಆದರೆ, ಈಗ ತನ್ನ ತಂದೆಯನ್ನು ತುಳಸಿ ಮದುವೆಯಾಗಿರುವುದರಿಂದ ಅಪಾರ್ಥ ಮಾಡಿಕೊಂಡಿದ್ದಾನೆ.

ಮನೆಗೆ ಹತ್ತಿರವಾಗುವ ಸಲುವಾಗಿ ತುಳಸಿ ತನ್ನ ಪರಿಚಯ ಮಾಡಿಕೊಂಡಿದ್ದು ಎಂದುತಿಳಿದುಕೊಂಡಿದ್ದಾನೆ. ಹೀಗಾಗಿ ತುಳಸಿಗೆ ಎಂದಿಗೂ ನಿಮ್ಮ ಅವಶ್ಯಕತೆ ನಮಗೆ ಬೀಳೋದಿಲ್ಲ. ಅದರಲ್ಲೂ ನನ್ನ ತಾಯಿ ಸ್ಥಾನ ತುಂಬುವ ಅಗತ್ಯವೂ ಇಲ್ಲ. ನಿಮಗೆ ನಮ್ಮ ಮನದಲ್ಲೇ ಸ್ಥಾನ ಸಿಗುವುದಿಲ್ಲ. ನೀವು ನಮ್ಮ ಮನೆಗೆ ಬಂದಾಗಲೇ ಈ ಮನೆ ಒಡೆದು ಹೋಗಿದೆ. ಇದಕ್ಕೆಲ್ಲಾ ನಿಮ್ಮ ಕಾಲು ಗುಣವೇ ಕಾರಣ ಎಂದು ಕೋಪದಲ್ಲಿ ಅವಿ ಮಾತನಾಡುತ್ತಾನೆ. ಅವಿ ಮಾತಿನಿಂದ ತುಳಸಿಗೂ ಬೇಸರವಾಗುತ್ತದೆ. ಇನ್ನು ಪೂರ್ಣಿಮಾ, ಅವಿಗೆ ಸಮಾಧಾನ ಮಾಡಲು ಹೋದಾಗಲೂ ಅವನಿಗೆ ಕೋಪ ಬರುತ್ತದೆ. ನೀನು ನಿಮ್ಮ ಮಾವನನ್ನು ಸಪೋರ್ಟ್ ಮಾಡಿದ್ದು ನನಗೆ ಸ್ವಲ್ಪವೂ ಇಷ್ವವಾಗಲಿಲ್ಲ ಎಂದು ಹೇಳುತ್ತಾನೆ. ಪೂರ್ಣಿಮಾ ಈಗ ಮನೆಯವರೆಲ್ಲರನ್ನೂ ತಾನೊಬ್ಬಳೇ ಸಂಬಾಳಿಸಬೇಕಿದೆ.
ಅಳಿಯನಿಗೆ ಸಮಾಧಾನ ಮಾಡಿದ ಗುರುಗಳು
ಇತ್ತ ಸಿರಿ, ಸಮರರ್ಥ್ ತನ್ನಿಂದ ಡಿವೋರ್ಸ್ ಕೇಳಿದ ಎಂದು ಬೇಸರ ಮಾಡಿಕೊಂಡಿರುತ್ತಾಳೆ. ಸಿರಿ ತಂದೆ, ಸಮರ್ಥ್‌ನನ್ನು ಮಾತನಾಡಿಸುತ್ತಾರೆ. ನೀನು ಮಾಡುತ್ತಿರುವುದು ತಪ್ಪು ಸಮರ್ಥ್. ನೀನು ಸಿರಿ ಪ್ರೀತಿ ಮಾಡಿ ಒಬ್ಬರನ್ನು ಒಬ್ಬರು ಬಿಟ್ಟಿರೋದಿಲ್ಲ ಎಂದು ಹೇಳಿದ್ದಕ್ಕೆ ನಿಮ್ಮ ತಾತ ಈ ಮದುವೆಗೆ ಒಪ್ಪದಿದ್ದರೂ ನಾನು ಮದುವೆ ಮಾಡಿಕೊಟ್ಟೆ ಎಂದು ಬುದ್ಧಿ ಹೇಳುತ್ತಾರೆ. ಸಮರ್ಥ್‌ಗೆ ಈ ಮಾತುಗಳಿಗೆ ಉತ್ತರ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಮರ್ಥ್ ಮೌನವಾಗಿರುತ್ತಾನೆ.
ದತ್ತ ತಾತನಿಗೆ ಸಮಾಧಾನ ಮಾಡಿದ ಸಿರಿ
ಇನ್ನು ದತ್ತ ತಾತ ಊಟ ಮಾಡುವಾಗಲೂ ತುಳಸಿ ಬಗ್ಗೆ ಯೋಚಿಸುತ್ತಿರುತ್ತಾರೆ. ತುಳಸಿ ಇದ್ದಾಗ ಅವಳ ಬೆಲೆ ಗೊತ್ತಾಗಲಿಲ್ಲ. ಸದಾ ಪ್ರತಿಯೊಂದು ವಿಚಾರಕ್ಕೂ ಬೈಯುತ್ತಿದ್ದೆ. ಎಲ್ಲದಕ್ಕೂ ಪ್ರಶ್ನೆ ಮಾಡುತ್ತಿದ್ದೆ. ಆದರೆ, ತುಳಸಿ ಒಂದು ದಿನವೂ ಬೇಸರ ಮಾಡಿಕೊಳ್ಳದೇ, ನಗು ನಗುತಾ ಉತ್ತರಿಸುತ್ತಿದ್ದಳು. ಆದರೆ, ಈಗ ಅವಳಿಲ್ಲದ ನೋವು ಕಾಡುತ್ತಿದೆ. ಆ ಮನೆಯಲ್ಲಿ ತುಳಸಿ ಹೇಗಿದ್ದಾಳೋ ಎಂದು ಹೇಳುತ್ತಾರೆ. ಆಗ ಸಿರಿ ಅವರ ತಂದೆ, ತವರು ಮನೆಗೆ ಕರೆಯುವ ಶಾಸ್ತ್ರ ಇದೆಯಲ್ಲ. ಹೋಗಿ ತುಳಸಿ ಅವರನ್ನು ಕರೆದುಕೊಂಡು ಬನ್ನಿ ಎಂದು ಐಡಿಯಾ ಕೊಡುತ್ತಾರೆ.

ತುಳಸಿ ವಿರುದ್ಧ ಸಿಡಿದ ಶಾರ್ವರಿ
ಶಾರ್ವರಿ ಅಂತೂ ಸಂಪೂರ್ಣವಾಗಿ ಬ್ಲ್ಯಾಂಕ್ ಆಗಿ ಬಿಟ್ಟಿದ್ದಾಳೆ. ರೂಮ್ ಒಳಗೆ ಮಗಳ ಎದುರು ಕಿರುಚಾಡಿದ್ದಾಳೆ. ಇಷ್ಟು ವರ್ಷದಿಂದ ಈ ಮನೆಯನ್ನು ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದೆ. ಭಾವ ನನ್ನ ಗೆರೆ ದಾಟುತ್ತಿರಲಿಲ್ಲ. ಆದರೆ, ತುಳಸಿ ಎಲ್ಲವನ್ನೂ ನಾಶ ಮಾಡಿ ಬಿಟ್ಟಲು. ನಾನು ಕಟ್ಟಿದ ಈ ಕೋಟೆಗೆ ಅವಳು ಬಂದಿದ್ದಾಳೆ. ಇನ್ಮುಂದೆ ತುಳಸಿ ಈ ಮನೆಯಲ್ಲಿ ಹೇಗೆ ನೆಮ್ಮದಿಯಾಗಿರುತ್ತಾಳೆ ಎಂದು ನಾನು ನೋಡುತ್ತೀನಿ. ಈ ಮನೆಯಲ್ಲಿ ತುಳಸಿ ಪ್ರತೀ ದಿನ, ಪ್ರತೀ ಕ್ಷಣವೂ ನರಕವೇ ಎಂದು ಶಪಥ ಮಾಡುತ್ತಾಳೆ.


Click it and Unblock the Notifications











