Shrirastu Shubhamasthu: ಮಾಧವ್‌ಗೆ ಅವಿ ವಾರ್ನಿಂಗ್: ದತ್ತನ ಬೆದರಿಸಲು ಬಂದ ಜುಗ್ಗ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಒಂದೇ ದಿನದಲ್ಲಿ ಎಷ್ಟೆಲ್ಲಾ ಆಯ್ತು ಎಂದು ಬೇಸರ ಮಾಡಿಕೊಂಡು ಕುಳಿತಿರುತ್ತಾರೆ. ಆಗ ಪಾಪಮ್ಮ ಬಂದು ಸಮಾಧಾನ ಮಾಡುತ್ತಾರೆ. ಪಾಪಮ್ಮ ನೀವು ಮಾಡಿದ್ದು ಸರಿಯಾಗಿಯೇ ಇದೆ. ನಿಮಗೆ ಖುಷಿ ಕೊಡುತ್ತಿದ್ದವರನ್ನು ಮದುವೆಯಾಗಿ ಒಳ್ಳೆಯ ಕೆಲಸ ಮಾಡಿದ್ದೀರಾ. ಆದರೆ, ಇದೆಲ್ಲಾ ಬೇರೆಯವರಿಗೆ ಅರ್ಥ ಆಗುವವರೆಗೂ ಕಾಯಬೇಕು ಅಷ್ಟೇ ಎಂದು ಹೇಳುತ್ತಾರೆ.
ಪಾಪಮ್ಮನ ಮಾತುಗಳು ಮಾಧವ್‌ಗೂ ಸರಿ ಎಂದು ಅನಿಸುತ್ತದೆ. ಆದರೆ, ತನ್ನಿಂದಾಗಿ ಮಗ ಅಭಿಯ ಮದುವೆ ನಿಂತು ಹೋಯ್ತಲ್ಲ ಎಂದು ಬಹಳ ನೊಂದುಕೊಂಡಿರುತ್ತಾರೆ. ತುಳಸಿ ಒಬ್ಬಳೇ ಬೆಳಗ್ಗಿನಿಂದ ಕುಳಿತಿರುವುದನ್ನು ನೋಡಿದ ಪೂರ್ಣಿಮಾ, ಮಾಧವ್ ರೂಮಿಗೆ ಕರೆದುಕೊಂಡು ಬರುತ್ತಾಳೆ. ಇದೇ ನಿಮ್ಮ ರೂಮ್ ಎಂದು ಹೇಳಿ, ಅಲ್ಲಿ ಮಾಧವ್ ಜೋಡಿಸಿರುವ ಆಂಟಿಕ್ ಪೀಸ್ ಗಳ ಬಗ್ಗೆ ವಿವರಿಸುತ್ತಾಳೆ.

ತುಳಸಿ ಮನೆಗೆ ಮಾಧವ್ ಬರಲು ಕ್ಯಾಮರಾ ಕಾರಣ ಎಂಬುದನ್ನು ನೆನಪು ಮಾಡುತ್ತಾಳೆ. ತುಳಸಿ ಬೇಸರದಲ್ಲಿರುವುದನ್ನು ನೋಡಿ ಸಮಾಧಾನ ಮಾಡುತ್ತಾಳೆ. ಬಟ್ಟೆ ಹಾಗೂ ಒಡವೆಗಳನ್ನು ಕೊಟ್ಟು ಹಾಕಿಕೊಳ್ಳುವುದಕ್ಕೆ ಹೇಳುತ್ತಾಳೆ. ಬಳಿಕ ಈ ಮನೆಯಲ್ಲಿ ಏನೇ ಬೇಕಿದ್ದರೂ ತನ್ನನ್ನು ಕೇಳುವಂತೆ ಹೇಳುತ್ತಾಳೆ. ಅಲ್ಲದೇ, ಈ ಮನೆಯಲ್ಲಿ ಯಾರು ಏನೇ ಎಂದರೂ ತಲೆ ಕೆಡಿಸಿಕೊಳ್ಳಬೇಡಿ. ನೀವು ಈ ಮನೆಗೆ ಬಂದಿರುವುದು ನನಗೆ ಅಮ್ಮ ಸಿಕ್ಕಿದಷ್ಟೇ ಖುಷಿಯಾಗಿದೆ ಎಂದು ಹೇಳಿ ಹೊರಡುತ್ತಾಳೆ.
ಅಪ್ಪನಿಗೆ ಅವಿಯ ವಾರ್ನಿಂಗ್
ಇತ್ತ ಅಭಿ ಬಹಳ ಟೆನ್ಷನ್ ಮಾಡಿಕೊಂಡಿರುತ್ತಾನೆ. ದೀಪಿಕಾಳಿಗೆ ಎಷ್ಟೇ ಕಾಲ್ ಮಾಡಿದರೂ ರಿಸೀವ್ ಮಾಡುವುದಿಲ್ಲ. ಹೀಗಾಗಿ ಬಾಗಿಲು ಹಾಕಿಕೊಂಡು ಒಬ್ಬನೇ ಒದ್ದಾಡುತ್ತಿರುತ್ತಾನೆ. ಅವಿ, ಅಭಿಯನ್ನು ಮಾತನಾಡಿಸಲು ಹೋಗುತ್ತಾನೆ. ಆದರೆ, ಅಭಿ ಬಾಗಿಲು ತೆಗೆಯುವುದಿಲ್ಲ. ಅವಿ, ಊಟಕ್ಕೆ ಬಾ. ಎಲ್ಲಾ ಸರಿ ಹೋಗುತ್ತೆ ಯೋಚಿಸಬೇಡ ಎಂದು ಹೇಳುತ್ತಿರುತ್ತಾನೆ. ಇದೇ ವೇಳೆಗೆ, ಮಾಧವ್, ಅಭಿ ಹಾಗೂ ಅವಿ ಅನ್ನು ಮಾತನಾಡಿಸಲು ಬರುತ್ತಾನೆ. ಅವಿ ಕೋಪ ಮಾಡಿಕೊಂಡು ಇನ್ಯಾವತ್ತು ಅಭಿ ಅನ್ನು ಡಿಸ್ಟರ್ಬ್ ಮಾಡಲು ಬರಬೇಡಿ. ಅವನಿಗೆ ಮತ್ತೆ ತೊಂದರೆ ಏನಾದರೂ ಕೊಟ್ಟರೆ ನಾನಂತೂ ಸುಮ್ಮನೆ ಇರುವುದಿಲ್ಲ ಎಂದು ಅವಿ ಮಾಧವ್ ಗೆ ವಾರ್ನ್ ಮಾಡಿ ಕಳಿಸುತ್ತಾನೆ.

ತಾತನ ಬೇಸರ ಸರಿಪಡಿಸಿದ ಸಿರಿ
ಮನೆಯಲ್ಲಿ ದತ್ತ ತಾತನಿಗೆ ಬಹಳ ಬೇಸರವಾಗುತ್ತಿರುತ್ತದೆ. ತುಳಸಿ ಅಲ್ಲಿ ಒಬ್ಬಳೇ ಹೇಗಿದ್ದಾಳೋ ಎಂದು ಯೋಚಿಸುತ್ತಿರುತ್ತಾರೆ. ಸಿರಿ, ತಾತನಿಗೆ ಧೈರ್ಯ ತುಂಬಲು ಯತ್ನಿಸುತ್ತಾಳೆ. ಆದರೆ, ದತ್ತ ತಾತ ಅವಳಿಲ್ಲದೇ, ನನಗೆ ಇರುವುದಕ್ಕೆ ಆಗುತ್ತಿಲ್ಲ. ಬೆಳಗ್ಗೆವರೆಗೂ ಅವಳನ್ನು ನೋಡದೇ ಹೇಗೆ ಇರುವುದು ಎಂದು ಸಿರಿ ಬಳಿ ಹೇಳುತ್ತಾರೆ. ಹೀಗಾಗಿ ಸಿರಿ ತುಳಸಿಗೆ ವೀಡಿಯೋ ಕಾಲ್ ಮಾಡುತ್ತಾಳೆ. ತುಳಸಿ ಮನೆಯವರಿಗೆ ನೋವಾಗಬಾರದು ಎಂದು ನಗುನಗುತಾ ಮಾತನಾಡುತ್ತಾಳೆ. ನಾನಿಲ್ಲಿ ಅರಾಮಾಗಿದ್ದೀನಿ ಎಂದು ಹೇಳುತ್ತಾಳೆ.
ತಾತನ ಪರ ನಿಂದ ಸಮರ್ಥ್
ಆಗ ದತ್ತ ತಾತನಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಸಿರಿ ತಂದೆಯ ಜೊತೆಗೆ ದತ್ತ ತಾತ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆಗೆ ಸಂಧ್ಯಾ ಮಾವ ಬರುತ್ತಾರೆ. ರೌಡಿಗಳ ಜೊತೆಗೆ ಬಂದು ದತ್ತ ತಾತನಿಗೆ ಬೆದರಿಕೆ ಹಾಕುತ್ತಾರೆ. ನಾನು ಅಷ್ಟು ಹೇಳಿ ಹೋದರೂ ನೀನು ತುಳಸಿಗೆ ಮದುವೆ ಮಾಡಿಸಿದ್ದೀಯಾ. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸುತ್ತಾನೆ. ಆಗ ಸಮರ್ಥ್ ಬಂದು ಹೊಡೆದು ಬೈಯುತ್ತಾನೆ. ನನ್ನ ಮನೆಯವರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಬಳಿಕ ದತ್ತ ತಾತ ಹಾಗೂ ಸಿರಿಗೆ ಮನೆಯಲ್ಲಿರುವಾಗ ಹುಷಾರಾಗಿ ಇರಲು ಹೇಳುತ್ತಾನೆ.


Click it and Unblock the Notifications











