Shrirastu Shubhamasthu: ಸಂಧ್ಯಾಗೆ ಹಣ ಹೊಂದಿಸುವ ಯೋಚನೆಯಲ್ಲಿ ತುಳಸಿ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ದತ್ತ ತಾತನದ್ದೇ ದರ್ಬಾರ್ ಆಗಿದೆ. ದತ್ತ ತಾತನ ಮಾತು, ಆಕ್ಟಿಂಗ್ ಎಲ್ಲವನ್ನೂ ಜನ ಬಹಳ ಇಷ್ಟ ಪಟ್ಟಿದ್ದಾರೆ.

ಮಾಧವ್ ಹಾಗೂ ತುಳಸಿ ಇಬ್ಬರನ್ನೂ ಕೂಡ ಪ್ರೇಕ್ಷಕರು ಇಷ್ಟಪಟ್ಟಿದ್ದು, ಈ ಜೋಡಿಗಳನ್ನು ನೋಡಲು ಕಾಯುತ್ತಿರುತ್ತಾರೆ. ಇವರನ್ನು ಹೊರತುಪಡಿಸಿ ಎಲ್ಲಾ ಪಾತ್ರಗಳು ಅದ್ಭುತವಾಗಿ ಮೂಡಿ ಬರುತ್ತಿದೆ.

ತುಳಸಿ ಮಗಳು ಸಂಧ್ಯಾ ಅಮ್ಮನಿಂದ ಹಣ ಪೀಕಲು ಮುಂದಾಗಿದ್ದಾಳೆ. ಹಾಗಾಗಿ ಏನಾದರೂ ಒಂದು ನೆಪವನ್ನು ಹುಡುಕುತ್ತಾ ಆಗಾಗ ಅಮ್ಮನ ಬಳಿಗೆ ಹೋಗುತ್ತಿರುತ್ತಾಳೆ.

ಅಮ್ಮನ ಬಳಿ ಹಣ ಕೇಳಿದ ಸಂಧ್ಯಾ

ಅಮ್ಮನ ಬಳಿ ಹಣ ಕೇಳಿದ ಸಂಧ್ಯಾ

ಶಿವರಾತ್ರಿಯ ದಿನ ಅಮ್ಮನ ಮನೆಗೆ ಹೋದ ಸಂಧ್ಯಾ, ತನಗೆ ಸಮಸ್ಯೆ ಆಗಿ ತಕ್ಷಣವೇ ಮೂರು ಲಕ್ಷ ರೂಪಾಯಿ ಬೇಕು. ಇಲ್ಲದಿದ್ದರೆ ನನ್ನ ಗಂಡ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ತುಳಸಿಗೆ ಏನು ಮಾಡಬೇಕು ಎಂಬುದೇ ತಿಳಿಯದೆ ಯೋಚಿಸಲು ಶುರು ಮಾಡಿದ್ದಾಳೆ. ಈ ಬಗ್ಗೆ ಸೊಸೆ ಸಿರಿ ಅತ್ತೆಯ ಬಳಿ ಕೇಳಿದ್ದಾಳೆ. ಏನು ಯೋಚನೆ ಏನಾಯ್ತು ಎಂದು ವಿಚಾರಿಸಿದ್ದಾಳೆ. ಆಗ ತುಳಸಿ, ಸಿರಿ ಹತ್ತಿರವೂ ಹೇಳಿಕೊಂಡಿದ್ದಾಳೆ. ಸಿರಿ, ಸಮರ್ಥ್ ಬಳಿ ಮಾತನಾಡುವುದಾಗಿ ಹೇಳಿದ್ದಾಳೆ. ಆದರೆ,ತುಳಸಿಗೆ ಮಗಳು ಪದೇ ಪದೇ ಕಾಲ್ ಮಾಡುತ್ತಿದ್ದು, ದಾರಿ ಕಾಣದಂತಾಗಿದೆ. ಇದೇ ವೇಳೆಗೆ ಸಮರ್ಥ್ ಸ್ನೇಹಿತರು ಅವರ ತಾಯಿ ಬಳಿ ಡಬ್ಬಿ ಮಾಡಿಸಿಕೊಡು ಹಣ ಕೊಡುತ್ತೀವಿ ಎಂದು ಕೇಳಿದ್ದಾರೆ. ತುಳಸಿ ಈಗ ಈ ಬಿಸಿನೆಸ್ ಮಾಡುವುದರಿಂದ ಮಗಳಿಗೆ ಹಣ ಹೊಂದಿಸಬಹುದು ಎಂದು ಯೋಚಿಸುತ್ತಿದ್ದಾಳೆ.

ಜುಗ್ಗ ಮಾವನಿಗೆ ಸತ್ಯ ಗೊತ್ತಾಯ್ತಾ..?

ಜುಗ್ಗ ಮಾವನಿಗೆ ಸತ್ಯ ಗೊತ್ತಾಯ್ತಾ..?

ಸಂಧ್ಯಾ ತನ್ನ ಮಾವ ಹಣ ಕೊಡುವುದಿಲ್ಲ. ಅವನು ಜುಗ್ಗ ಎಂದು ತನ್ನ ಖರ್ಚಿಗೆ ಆಗಾಗ ಅಮ್ಮನ ಬಳಿ ಹಣ ಕೇಳುತ್ತಿದ್ದವಳು. ಈಗ ದೊಡ್ಡ ಮಟ್ಟದ ಹಣಕ್ಕೆ ಸ್ಕೆಚ್ ಹಾಕಿದ್ದಾಳೆ. ತಾತ ಅವರ ಹೆಸರಿನಲ್ಲಿ ಹತ್ತು ಲಕ್ಷ ಹಣ ಇಟ್ಟಿರುವುದನ್ನು ತಿಳಿದು, ಈಗ ಆ ಹಣವನ್ನು ಪೀಕಲು ಯತ್ನಿಸಿದ್ದಾಳೆ. ಆದರೆ, ತುಳಸಿಗೆ ಈ ಸತ್ಯ ಗೊತ್ತಿಲ್ಲ. ಸಂಧ್ಯಾ ಗಂಡನ ಬಳಿ ತಾನು ಮಾಡಿರುವ ಪ್ಲಾನ್ ಅನ್ನು ಹೇಳಿಕೊಂಡಿದ್ದಾಳೆ. ಇದೇ ವೇಳೆಗೆ ಅವರ ಮಾವ ಬಂದ ಕಾರಣ ಇಬ್ಬರೂ ಶಾಕ್ ಆಗಿದ್ದಾರೆ. ಆದರೆ, ಅವರ ಮಾವನಿಗೆ ಈ ಸತ್ಯ ಇನ್ನೂ ಗೊತ್ತಾಗಿಲ್ಲ. ಸಂಧ್ಯಾ ಪ್ಲ್ಯಾನ್ ಸಕ್ಸಸ್ ಆಗುತ್ತೋ ಇಲ್ವೋ ಗೊತ್ತಿಲ್ಲ.

ಊಟಕ್ಕೆ ವ್ಯವಸ್ಥೆ ಮಾಡಿರುವ ಮಾಧವ್

ಊಟಕ್ಕೆ ವ್ಯವಸ್ಥೆ ಮಾಡಿರುವ ಮಾಧವ್

ಇನ್ನು ತುಳಸಿ ಅಂದು ಅಡುಗೆ ಮಾಡಿದ ಕಾರ್ಯಕ್ರಮ ಸಕ್ಸಸ್ ಆಗಿರುತ್ತದೆ. ಟಿವಿಯಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿರುತ್ತದೆ. ಇದಕ್ಕಾಗಿ ಮಾಧವ್, ತುಳಸಿ ಮನೆಯವರಿಗೆ ಟ್ರೀಟ್ ಕೊಡಲು ಕೆಫೆಗೆ ಕರೆದಿದ್ದಾನೆ. ಮೊದಲು ದತ್ತ ತಾತ ಜಂಭ ಹೊಡೆದಿದ್ದು, ಬಳಿಕ ಬರುವುದಾಗಿ ಹೇಳಿದ್ದಾನೆ. ದತ್ತ ತಾತ ಸೇರಿದಂತೆ ಮನೆಯವರೆಲ್ಲರೂ ಕೆಫೆಗೆ ಊಟಕ್ಕೆಂದು ಬಂದಿದ್ದಾರೆ.

ಶಾರ್ವರಿ ಪ್ಲ್ಯಾನ್ ಏನಿರಬಹುದು..?

ಶಾರ್ವರಿ ಪ್ಲ್ಯಾನ್ ಏನಿರಬಹುದು..?

ಇನ್ನು ಇತ್ತ ಶಾರ್ವರಿ, ಅಭಿ ಪ್ರೀತಿಸುತ್ತಿರುವ ಹುಡುಗಿಯ ಮನೆಗೆ ಅವಿಯನ್ನು ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದ್ದಾಳೆ. ಯಾರಿಗೂ ಹೇಳಬೇಡ ಎಂದರೂ ಅವಿ ತನ್ನ ಪತ್ನಿ ಪೂರ್ಣಿಮಾಲೀಗೆ ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಶಾರ್ವರಿ ಬೇಸರ ಮಾಡಿಕೊಳ್ಳುತ್ತಾಳೆ. ಇಷ್ಟು ದಿನ ಎಲ್ಲವೂ ತನ್ನ ಕೈನಲ್ಲಿತ್ತು. ಆದರೆ ಈಗ ಅವಿ ಕೂಡ ತನ್ನ ಹೆಂಡತಿಯ ಬಳಿ ಹೇಳುತ್ತಾನೆ ಎಂದು ಕೋಪ ಬಂದರೂ ತೋರಿಸುವುದಿಲ್ಲ. ಎಲ್ಲರ ಮುಂದೆ ನಾಟಕ ಮಾಡುವ ಶಾರ್ವರಿ, ಅಭಿ ಈ ಮದುವೆ ಆಗುವುದರಿಂದ ತಪ್ಪಿಸುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial 23rd February Episode Written Update.Sanjdhya comes to home and asks money with tulasi. This makes thulasi worry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X