Shrirastu Shubhamasthu: ಮಗಳ ಮಾತಿನಿಂದ ಬೇಸರಗೊಂಡು ಮಾಧವ್‌ನಿಂದ ದೂರ ಉಳಿದ ತುಳಸಿ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ್, ಪೂರ್ಣಿ, ಸಿರಿ, ತಾತ ಸೇರಿ ಎಲ್ಲರೂ ಒಂದು ದಿನದ ಔಟಿಂಗ್ ಹೋಗಿದ್ದಾರೆ. ರೆಸಾರ್ಟ್‌ನಲ್ಲಿ ಆಟವಾಡುತ್ತಾ ಮಜಾ ಮಾಡುತ್ತಿದ್ದಾರೆ. ಸಿರಿ ಎಲ್ಲರಿಗೂ ಮ್ಯೂಸಿಕಲ್ ಚೇರ್ ಆಟವನ್ನು ಕೂಡ ಆಡಿಸಿದ್ದಾಳೆ. ಇದರಲ್ಲಿ ಮಾಧವ್ ಹಾಗೂ ತುಳಸಿ ಕೊನೆಯಲ್ಲಿ ಉಳಿದುಕೊಂಡಿದ್ದಾರೆ. ಕೊನೆಗೆ ಮಾಧವ್ ತನಗೆ ಅವಕಾಶವಿದ್ದರೂ ಗೆಲುವನ್ನು ತುಳಸಿಗೆ ಬಿಟ್ಟು ಕೊಡುತ್ತಾರೆ.

ಇದನ್ನು ನೋಡಿ ದತ್ತ ತಾತ, ಸಿರಿ, ಪೂರ್ಣಿಮಾ ಎಲ್ಲರೂ ಖುಷಿ ಪಡುತ್ತಾರೆ. ಆದರೆ, ಸಂಧ್ಯಾ, ಮಾಧವ್ ಹಾಗೂ ತುಳಸಿಯ ಪ್ರತಿ ಹೆಜ್ಜೆಯಲ್ಲೂ ತಪ್ಪುಗಳನ್ನು ಹುಡುಕುತ್ತಿರುತ್ತಾಳೆ. ಊಟಕ್ಕೆ ಹೋಗುವ ಸಂದರ್ಭದಲ್ಲೇ ಸಂಧ್ಯಾ, ತುಳಸಿ ಬಳಿ ಬಾಯಿಗೆ ಬಂದಂತೆ ಬೈಯುತ್ತಾಳೆ. ನಿನ್ನ ವಯಸ್ಸಿಗೆ ಇದೆಲ್ಲಾ ಬೇಕಾ ಎನ್ನುತ್ತಾಳೆ. ಇಬ್ಬರ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. ನಿನ್ನ ತಾಳಕ್ಕೆ ತಕ್ಕ ಹಾಗೆ ತಾತ ಕೂಡ ಬದಲಾಗಿದ್ದಾರೆ ಎನ್ನುತ್ತಾಳೆ. ಅದಕ್ಕೆ ತುಳಸಿ ವಾಪಸ್ ಮಗಳಿಗೆ ಬೈಯುತ್ತಾಳೆ.

Shrirastu Shubhamasthu serial 23rd May Episode Written Update

ನನ್ನ ತಪ್ಪಿದ್ದರೆ ಹೇಳು ತಿದ್ದಿಕೊಳ್ಳುತ್ತೇನೆ. ಅದು ಬಿಟ್ಟು ಹದ್ದು ಮೀರಿ ಮಾತನಾಡಬೇಡ. ಇಷ್ಟು ದಿನ ಮಗಳು ಎಂದು ಸುಮ್ಮನಿದ್ದೆ. ಮಾತನಾಡುವಾಗ ಯೋಚಿಸಿ ಮಾತನಾಡು ಎನ್ನುತ್ತಾಳೆ. ಆದರೆ, ತುಳಸಿ ಮಾತಿಗೆ ಸುಮ್ಮನಿರದ ಸಂಧ್ಯಾ ನೀನು ಮಾಡುತ್ತಿರುವುದು ಎಷ್ಟು ಸರಿ ಎಂಬುದನ್ನು ತಾತನ ಬಳಿಯೇ ಕೇಳು ಎಂದು ಎದುರುತ್ತರ ಕೊಡುತ್ತಾಳೆ. ಇದರಿಂದ ತುಳಸಿಗೆ ಬಹಳ ಬೇಸರವಾಗುತ್ತದೆ.

ಅವಿಗೆ ಚುಚ್ಚಿ ಕೊಟ್ಟ ಶಾರ್ವರಿ

ಇತ್ತ ಅಭಿ ಸ್ಟಾರ್ಟಪ್ ಕಂಪನಿ ಶುರು ಮಾಡಲು ಮುಂದಾಗಿದ್ದಾನೆ. ಇದಕ್ಕೆ ಅವಿ ಇನ್ವೆಸ್ಟ್ ಮಾಡುತ್ತೀನಿ ಎಂದು ಹೇಳಿರುತ್ತಾನೆ. ಆದರೆ, ಬಿಸಿನೆಸ್ ಐಡಿಯಾ ಕೊಡಲು ಬಂದವರು ತಾವೇ ಹಣ ಹೂಡುವವರನ್ನೂ ಆರಿಸುವುದಾಗಿ ಹೇಳುತ್ತಾರೆ. ಇದನ್ನು ಕೂಡ ಶಾರ್ವರಿಯೇ ಪ್ಲ್ಯಾನ್ ಮಾಡಿ ಹೇಳಿಸಿರುತ್ತಾಳೆ. ಈ ವಿಚಾರ ಹೇಗೋ ಅವಿ ಗಮನಕ್ಕೆ ಬರುವಂತೆ ಮಾಡುತ್ತಾಳೆ. ಇದರಿಂದ ಅವಿಗೆ ಬೇಸರವಾಗುತ್ತದೆ. ಶಾರ್ವರಿ ಬಂದು ಈ ವಿಚಾರವಾಗಿ ಬೇಕಂತಲೇ ಅವಿ ಕಿವಿ ಊದುತ್ತಾಳೆ. ಅಭಿ ಅನ್ನು ಪ್ರಶ್ನೆ ಮಾಡು. ಹೀಗೆ ಸುಮ್ಮನೆ ಬಿಟ್ಟರೆ ಸಮಸ್ಯೆ ಆಗುತ್ತದೆ. ಅವನಿಗೆ ಏನೂ ಗೊತ್ತಿಲ್ಲ. ನೀನು ಬುದ್ಧಿ ಹೇಳು ಎಂದು ಹೇಳಿಕೊಡುತ್ತಾಳೆ.

Shrirastu Shubhamasthu serial 23rd May Episode Written Update


ಮತ್ತೆ ಅಭಿ - ಅವಿ ಮನದಲ್ಲಿ ಬಿರುಕು

ಚಿಕ್ಕಮ್ಮನ ಮಾತು ಕೇಳಿದ ಅವಿ ಅದು ಸರಿಯೇ ಎಂದು ಅಭಿಯನ್ನು ಕರೆದು ಮಾತನಾಡಿಸುತ್ತಾನೆ. ನಾನೇ ಹಣ ಹೂಡುತ್ತೇನೆ ಎಂದರೂ ಯಾಕೆ ಹೀಗೆ ಮಾಡುತ್ತೀಯ. ನೀನು ಮಾಡಿದ್ದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡುತ್ತಾನೆ. ಅಭಿ ಏನು ಹೇಳಿದರೂ ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಅಭಿಗೆ ಅವಿ ಪ್ರಶ್ನೆ ಮಾಡಿದ್ದು ಬೇಸರವನ್ನು ತರುತ್ತದೆ. ಇದರಿಂದ ಈಗ ಶಾರ್ವರಿ ಮತ್ತೆ ಅಣ್ಣ-ತಮ್ಮನ ಮನದಲ್ಲಿ ಬಿರುಕು ಮೂಡುವಂತೆ ಮಾಡಿದ್ದಾಳೆ. ಒಂದಾಗುತ್ತಿದ್ದ ಅವಿ ಹಾಗೂ ಅಭಿ ಮತ್ತೆ ದೂರಾಗುವ ಸೂಚನೆಗಳು ಕಾಣಿಸುತ್ತಿವೆ.

ಮಾಧವ್‌ನಿಂದ ದೂರ ಉಳಿದ ತುಳಸಿ

ತುಳಸಿಗೆ ಸಂಧ್ಯಾ ಹೇಳಿದ್ದು ಬೇಸರ ಜೊತೆಗೆ ಸಣ್ಣ ಆತಂಕವನ್ನೂ ಸೃಷ್ಟಿಸಿರುತ್ತದೆ. ಈ ಬೇಸರದಿಂದ ತುಳಸಿ ಊಟ ಮಾಡುವುದಿಲ್ಲ. ತಲೆ ನೋವು ಎಂದು ಒಬ್ಬಳೇ ಇರುತ್ತಾಳೆ. ಮಾಧವ್ ಎಷ್ಟು ಮಾತನಾಡಿಸಿದರೂ ಸರಿಯಾಗಿ ರೆಸ್ಪಾನ್ಸ್ ಮಾಡುವುದಿಲ್ಲ. ಜೊತೆಗೆ ವಾಪಸ್ ಮನೆಗೆ ಹೋಗುವಾಗಲೂ ಕೂಡ ಮಾಧವ್ ನನ್ನು ತುಳಸಿ ಮಾತನಾಡಿಸದೇ ಹೋಗುತ್ತಾಳೆ. ಇದರಿಂದ ಮಾಧವ್ ಗೆ ಬೇಸರವಾಗುತ್ತದೆ.

More from Filmibeat

English summary
Shrirastu Shubhamasthu serial 23rd May Episode Written Update. here is detials about Sharvari plan towards separating Abi and Avi gets success. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X