Shrirastu Shubhamasthu: ತುಳಸಿಗೆ ನರಕ ತೋರಿಸಲು ಮುಂದಾದ ಶಾರ್ವರಿ!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮನೆಯಲ್ಲಿ ಇಲ್ಲದ ಕಾರಣ ಈಗ ಸಿರಿ ಮನೆ ಕೆಲಸವನ್ನೆಲ್ಲಾ ಮಾಡಬೇಕಾಗಿದೆ. ಹಾಗಾಗಿ ಸಿರಿ ಬೆಳಗ್ಗೆ ಬೇಗ ಎದ್ದು, ಮನೆ ಗುಡಿಸಿ, ಒರೆಸಿ, ಮನೆಯ ಹೊರಗೂ ಗುಡಿಸಿ, ರಂಗೋಲಿ ಹಾಕಿ ಸ್ನಾನ ಮಾಡಿಕೊಂಡು ಬರುತ್ತಾಳೆ.

ಹಾಲು ಕಾಯಲು ಇಟ್ಟು, ತಾತನಿಗೆ ಬಿಸಿ ಕಾಫಿ ಕೊಟ್ಟು ಸ್ನಾನಕ್ಕೆ ನೀರು ಬಿಟ್ಟು ದೇವರ ಮನೆಯಲ್ಲಿ ಪೂಜೆಗೆ ಅಣಿ ಮಾಡುತ್ತಾಳೆ. ತುಳಸಿ ಮಾಡಿದಂತೆಯೇ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ.

Shrirastu Shubhamasthu serial 24th August episode Written update

ದತ್ತ ತಾತನಿಗೂ ಸಿರಿ ಮಾಡಿದ ಕೆಲಸಗಳು ಇಷ್ಟವಾಗುತ್ತವೆ. ಆದರೂ ತಾತನಿಗೆ ಆಗಾಗ ತುಳಸಿಯ ಹೆಸರು ಬಾಯಲ್ಲಿ ಬರುತ್ತಿರುತ್ತದೆ. ಸಿರಿ ತಾತನನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿಕೊಂಡಿದ್ದಾಳೆ.

ತುಳಸಿಗೆ ಮೊದಲ ದಿನ

ಇತ್ತ ತುಳಸಿ ಕೂಡ ನಿದ್ದೆಯಿಂದ ಎದ್ದು ಸ್ನಾನಕ್ಕೆ ಹೊರಡುತ್ತಾಳೆ. ಆದರೆ, ಮಾಧವ್ ಮನೆಯ ಬಾತ್ ರೂಮ್‌ನಲ್ಲಿ ಸ್ನಾನ ಮಾಡಲು ಬಕೆಟ್ ಇರುವುದಿಲ್ಲ. ಬದಲಿಗೆ ಹ್ಯಾಂಡ್ ಶವರ್ ಇರುತ್ತದೆ. ಇದರಿಂದ ತುಳಸಿಗೆ ನೀರು ಹೇಗೆ ಬಿಡುವುದು ಎಂಬುದು ತಿಳಿಯದೇ ಶವರ್ ಆನ್ ಮಾಡಿ ಬಿಡುತ್ತಾಳೆ. ಇದರಿಂದ ನೆನೆಯುತ್ತಾಳೆ. ನೀರು ಬಿದ್ದ ಕೂಡಲೇ ಗಾಬರಿಯಾಗುವ ತುಳಸಿಗೆ ಏನಾಯ್ತು ಎಂದು ನೋಡಲು ಮಾಧವ್ ಎದ್ದು ಬರುತ್ತಾನೆ. ಅವನು ಯಾವ ನಲ್ಲಿ ಬಳಸಬೇಕು ಎಂದು ಹೇಳಿಕೊಡಲು ಹೋಗಿ ಆತನು ನೆನೆಯಬೇಕಾಗುತ್ತದೆ. ಕೊನೆಗೆ ತುಳಸಿ ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಹಾಕಿ ತುಳಸಿಗೆ ಪೂಜೆ ಮಾಡುತ್ತಾಳೆ.

Shrirastu Shubhamasthu serial 24th August episode Written update

ದತ್ತ ತಾತನ ಸೂಪರ್ ಪ್ಲಾನ್

ಇತ್ತ ಸಿರಿ ಹಾಗೂ ಸಮರ್ಥ್ ಮಾತನಾಡುತ್ತಿಲ್ಲ. ಇವರಿಬ್ಬರನ್ನು ಒಂದು ಮಾಡಬೇಕು ಎಂದು ದತ್ತ ತಾತ ಹಾಗೂ ಸಿರಿ ಅವರ ತಂದೆ ಇಬ್ಬರೂ ಸೇರಿಕೊಂಡಿದ್ದಾರೆ. ಹೀಗಾಗಿ ದತ್ತ ತಾತ ಬೀಗರನ್ನು ಮನೆಯಲ್ಲೇ ಉಳಿಸಿಕೊಂಡಿರುತ್ತಾರೆ. ಇನ್ನು ಗುರುಗಳು ಸಮರ್ಥ್ ರೂಮಿಗೆ ಹೋಗಿ ಕಾಫಿ ಕೊಡುತ್ತಾರೆ. ತಾತನಿಗೆ ನೀನು ಸಪೋರ್ಟ್ ಮಾಡಿದ್ದು ನನಗೆ ಇಷ್ಟ ಆಯ್ತು ಎಂದು ಹೊಗಳುತ್ತಾರೆ. ಬಳಿಕ ತಾನು ಸಿನಿಮಾಗೆ ಹೋಗಲು ಎರಡು ಟಿಕೆಟ್ ತೆಗೆದುಕೊಂಡಿದ್ದು ಈಗ ಸುಸ್ತಾಗುತ್ತಿದೆ. ನೀನು ಮತ್ತೆ ದತ್ತ ತಾತ ಹೋಗಿ ಬನ್ನಿ ಎಂದು ಹೇಳುತ್ತಾನೆ. ಇದಕ್ಕೆ ಸಮರ್ಥ್ ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳುತ್ತಾನೆ.

ಸಿನಿಮಾಗೆ ಹೋಗಲು ಒಪ್ಪಿದ ಸಿರಿ

ದತ್ತ ತಾತ, ಸಿರಿಗೆ ನಿಮ್ಮ ತಂದೆಯ ಜೊತೆಗೆ ಸಿನಿಮಾಗೆ ಹೋಗಿ ಬಾ. ಅವರು ಆಸೆ ಪಡುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಸಿರಿ ಒಪ್ಪುವುದಿಲ್ಲ. ಮನೆಯಲ್ಲಿ ಕೆಲಸವಿದೆ ಎಂದು ಹೇಳುತ್ತಾಳೆ. ದತ್ತ ತಾತ ಒಪ್ಪಿಸುವಂತೆ ಏನೇನೋ ಮಾತನಾಡುತ್ತಾರೆ. ಬಲವಂತ ಮಾಡಿ ಸಿರಿಯನ್ನು ಕೊನೆಗೂ ತಾತ ಒಪ್ಪಿಸುತ್ತಾರೆ. ಆದರೆ, ಸಿರಿ ಮತ್ತು ಸಮರ್ಥ್ ಇಬ್ಬರೂ ಸಿನಿಮಾಗೆ ಹೋಗುವಂತೆ ಹಿರಿಯರು ಪ್ಲಾನ್ ಮಾಡಿದ್ದಾರೆ. ಈ ಸತ್ಯ ಗೊತ್ತಾದರೆ ಏನು ಮಾಡುತ್ತಾರೋ ಗೊತ್ತಿಲ್ಲ.

ತುಳಸಿ ಮೇಲೆ ಕೂಗಾಡಿದ ಶಾರ್ವರಿ

ದೇವರ ಮನೆಯಲ್ಲಿ ಪೂಜೆ ಮಾಡುವಾಗ ಪಾಪಮ್ಮ ನೋಡಿ ಖುಷಿ ಪಡುತ್ತಾಳೆ. ಮಂಗಳಾರತಿಯನ್ನು ಶಾರ್ವರಿಗೆ ತುಳಸಿ ಕೊಡಲು ಮುಂದಾಗುತ್ತಾಳೆ. ಆಗ ಶಾರ್ವರಿಗೆ ಕೋಪ ಬರುತ್ತದೆ. ದೂರ ನಿಂತುಕೋ ನೀನ್ಯಾರು ಪೂಜೆ ಮಾಡಲು. ನಿನಗ್ಯಾರು ಹೇಳಿದ್ದು. ಯಾವ ಹಕ್ಕಿದೆ ಎಂದು ದೇವರ ಮನೆಗೆ ಬಂದೆ ಎಂದು ಪ್ರಶ್ನೆ ಮಾಡುತ್ತಾಳೆ. ಇದರಿಂದ ತುಳಸಿಗೆ ಗಾಬರಿಯಾಗುತ್ತದೆ. ಶಾರ್ವರಿ ಕೂಗಾಟ ಮಾಧವ್‌ಗೆ ಕೇಳಿಸಿದರೆ, ಏನಾಗುತ್ತದೆ ಎಂಬುದು ಗೊತ್ತಿಲ್ಲ.

More from Filmibeat

English summary
Shrirastu Shubhamasthu serial 24th August episode Written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X