Shrirastu Shubhamasthu: ತುಳಸಿಗೆ ಮನೆಯಲ್ಲಿ ಯಜಮಾನಿ ಸ್ಥಾನ? ಶಾರ್ವರಿ ಹೊಟ್ಟೆ ಉರಿಸುತ್ತಿರುವ ಮಹೇಶ!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಟ್ಯಾಕ್ಸಿ ಡ್ರೈವರ್ ಕೆಲಸ ಮಾಡುತ್ತಿದ್ದು, ದಿನಕ್ಕೆ ಒಂದು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ.

ಈಗ ಸಿಗುತ್ತಿರುವ ಸಂಬಳಕ್ಕಿಂತ ಹೆಚ್ಚಿನ ಸಂಬಳವನ್ನು ನಾನು ಕೊಡುತ್ತೇನೆ. ನನ್ನನ್ನು ಮನೆಯಿಂದ ಕೆಫೆಗೆ, ಕೆಫೆಯಿಂದ ಮನೆಗೆ ಪಿಕಪ್ ಮತ್ತು ಡ್ರಾಪ್ ಮಾಡಿದರೆ ಸಾಕು ಎಂದು ಮಾಧವ್ ಆಫರ್ ಕೊಡುತ್ತಾನೆ.

Shrirastu Shubhamasthu serial 24th January episode written update

ಮಾಧವ್ ಮಾತು ಸಮರ್ಥ್‌ಗೆ ಕೊಂಚವೂ ಇಷ್ಟವಾಗುವುದಿಲ್ಲ. ಹಾಗಾಗಿ ಸಮರ್ಥ್ ನಿಮ್ಮ ಮಗ ತಟ್ಟೆ ತೊಳೆಸಿದ್ದಾಯ್ತು ಈಗ ನೀವು ಇನ್ನೇನು ಮಾಡಿಸಬೇಕು ಎಂದಿದ್ದೀರಾ? ಅದೆಲ್ಲವೂ ನನಗೆ ಬೇಕಿಲ್ಲ ಎಂದು ಬೈಯುತ್ತಾನೆ.

ಎಡವಟ್ಟು ಮಾಡಿಕೊಂಡ ಸಂಧ್ಯಾ

ಅಭಿ ಮದುವೆಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ನನಗೆ ರಜೆ ಸಿಗುವುದಿಲ್ಲ ಎಂದು ಸಮರ್ಥ್‌ ಕೂಗಾಡಿ ಹೋಗುತ್ತಾನೆ. ಈ ಬಗ್ಗೆ ಎಲ್ಲರಿಗೂ ಬೇಸರವಾಗುತ್ತದೆ. ಸಿರಿ, ಮನೆಗೆ ಬಂದ ಮೇಲೆ ಸಮರ್ಥ್‌ಗೆ ಬುದ್ಧಿ ಹೇಳುತ್ತಾಳೆ. ಹಾಗೆಲ್ಲಾ ಮಾಡಬೇಡ ಎಂದು ಮಾಧವ್ ಮನೆಯ ಪರಿಸ್ಥಿತಿ ಬಗ್ಗೆ ವಿವರಿಸುತ್ತಾಳೆ. ಇನ್ನು ಸಂಧ್ಯಾ ರೂಮಿನಲ್ಲಿ ಹೊಟ್ಟೆಗೆ ಕಟ್ಟಿಕೊಂಡ ದಿಂಬನ್ನು ಬಿಚ್ಚಿಟ್ಟಿರುತ್ತಾಳೆ. ಇದೇ ಸಮಯಕ್ಕೆ ಸಿರಿ ಜ್ಯೂಸ್ ತೆಗೆದುಕೊಂಡು ಬರುತ್ತಾಳೆ.

ದಿಂಬು ತಗೊಂಡು ಹೋದ ಸಿರಿ

ಸಂಧ್ಯಾ ಬೆಡ್ ಶೀಟ್ ಅನ್ನು ಹೊದ್ದುಕೊಂಡು ತನಗೆ ಚಳಿಯಾಗುತ್ತಿದೆ ಎಂಬಂತೆ ನಟಿಸುತ್ತಾಳೆ. ಸಿರಿಗೆ ಅನುಮಾನ ಬಂದರೂ ಏನೂ ಹೇಳಲಾಗದೇ ಸುಮ್ಮನಿರುತ್ತಾಳೆ. ಇನ್ನು ಚಿಕ್ಕ ದಿಂಬನ್ನು ನೋಡಿ ಅಯ್ಯೋ ಇದನ್ನು ಹುಡುಕಿ ಹುಡುಕಿ ಸಾಕಾಯ್ತು ಎಂದು ತೆಗೆದುಕೊಂಡು ಹೋಗುತ್ತಾಳೆ. ಈಗ ಸಂಧ್ಯಾ ಮಾಡಿಕೊಂಡಿರುವ ಎಡವಟ್ಟನ್ನು ಹೇಗೆ ಸರಿ ಮಾಡಿಕೊಳ್ಳುತ್ತಾಳೋ ಗೊತ್ತಿಲ್ಲ.

Shrirastu Shubhamasthu serial 24th January episode written update

ಶಾರ್ವರಿ ಹೊಟ್ಟೆ ಉರಿಸುತ್ತಿರುವ ಮಹೇಶ

ಮಹೇಶನಿಗೆ ಹಳೆಯದೆಲ್ಲಾ ನೆನಪಾಗಿದ್ದು, ಕೆಲವೊಂದು ವಿಚಾರಗಳು ಮಾತ್ರವೇ ಗೊತ್ತಿಲ್ಲ. ಜೊತೆಗೆ ಕಳೆದ 25 ವರ್ಷಗಳ ಕಾಲ ನಡೆದ ಯಾವ ಘಟನೆಯೂ ಮಹೇಶನಿಗೆ ಗೊತ್ತಿಲ್ಲ. ಈಗೀಗ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಇನ್ನು ತುಳಸಿಯನ್ನು ಒಪ್ಪಿಕೊಂಡಿರುವ ಮಹೇಶ ಅತ್ತಿಗೆಗೆ ಎಲ್ಲಾ ಸ್ಥಾನಮಾನ ಸಿಗಲು ಸಹಕರಿಸುತ್ತಿದ್ದಾನೆ. ಮಹೇಶ ಮಾತು ಮಾತಿಗೂ ತುಳಸಿ ಅತ್ತಿಗೆಯೇ ಮಾಡಲಿ ಎನ್ನುತ್ತಿದ್ದು, ಇದು ಶಾರ್ವರಿಗೆ ಹಿಂಸೆಯಾಗುತ್ತಿದೆ. ತನಗಿಂತಲೂ ಅತ್ತಿಗೆಯೇ ಹೆಚ್ಚು ಎಂದು ಹೇಳುತ್ತಿರುವ ಮಹೇಶ, ಶಾರ್ವರಿಯ ಹೊಟ್ಟೆ ಉರಿಸುತ್ತಿದ್ದಾನೆ.

ವ್ಯರ್ಥವಾಗುತ್ತಿದೆ ಶಾರ್ವರಿ ಪ್ರಯತ್ನಗಳು

ಇಷ್ಟು ವರ್ಷಗಳಿಂದ ಶಾರ್ವರಿ ತಾನು ಇಡೀ ಮನೆಯ ಜವಾಬ್ದಾರಿ ನಿಭಾಯಿಸಿದ್ದಳು. ಅಲ್ಲದೇ, ಎಲ್ಲರೂ ತನ್ನ ಮಾತನ್ನು ಕೇಳುತ್ತಿದ್ದರು. ಆದರೆ, ಈಗ ಈ ಜಾಗವನ್ನು ತುಳಸಿ ಕಸಿದುಕೊಳ್ಳುತ್ತಿದ್ದಾಳೆ ಎಂಬ ಭಾವನೆ ಶಾರ್ವರಿಗಿದೆ. ಹಾಗಾಗಿ ಶಾರ್ವರಿ, ತುಳಸಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಲೇ ಇದ್ದಾಳೆ. ಆದರೂ ಮಹೇಶ ಅದಕ್ಕೆ ಅವಕಾಶವನ್ನು ಮಾಡಿಕೊಡುತ್ತಿಲ್ಲ. ಈಗ ತುಳಸಿಯನ್ನು ಬಿಟ್ಟು ಶಾಪಿಂಗ್‌ಗೆ ಹೋಗಬೇಕು ಎಂದು ಎಲ್ಲರನ್ನೂ ಹೊರಡಿಸಿದ್ದಾಳೆ. ಆದರೆ, ಅಷ್ಟರಲ್ಲಿ ತುಳಸಿ ಬಂದು ಬಟ್ಟೆ ಅಂಗಡಿಯವರನ್ನೇ ಮನೆಗೆ ಕರೆಸಿರುವುದು ಮತ್ತೆ ಶಾರ್ವರಿಗೆ ಬೇಸರ ತಂದಿದೆ.

ತುಳಸಿಗೆ ಯಜಮಾನಿ ಸ್ಥಾನ

ಮಹೇಶ, ತುಳಸಿ ಏನು ಹೇಳಿದರೂ ಸರಿ ಎನ್ನುತ್ತಿದ್ದಾನೆ. ಇನ್ನು ತುಳಸಿ, ಮಹೇಶನಿಗೆ ಕರ್ಜೂರದ ಬಗ್ಗೆ ಮಾತನಾಡಿದ್ದು, ಮಾಧವ್ ಹಾಗೂ ಅವರ ಮಕ್ಕಳ ನಡುವೆ ಇರುವ ಸಂಬಂಧ ಅದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾಳೆ. ಅಷ್ಟರಲ್ಲಿ ನಡುವೆ ಬಂದ ಶಾರ್ವರಿ ವಿಚಾರವನ್ನು ಮರೆ ಮಾಚುತ್ತಾಳೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿರುವ ಮಹೇಶ ಈಗ ಎಲ್ಲರ ಮುಂದೆ ಹೊಸ ವಿಚಾರವನ್ನು ಇಟ್ಟಿದ್ದಾನೆ. ಈ ಮನೆಯಲ್ಲಿ ತುಳಸಿ ಅತ್ತಿಗೆಗೆ ಯಜಮಾನಿ ಸ್ಥಾನವನ್ನು ಕೊಡಬೇಕು ಎಂದಿದ್ದಾನೆ. ಇದು ಶಾರ್ವರಿಗೆ ಕೋಪ ತರಿಸಿದೆ.

More from Filmibeat

English summary
Shrirastu Shubhamasthu serial today episode; Mahesh tries to give big position for tulasi in house;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X