Shrirastu Shubhamasthu: ಶಾರ್ವರಿಗೆ ಗೊಂದಲವೇಕೆ..? ಸಿರಿಗೆ ಸಮರ್ಥ್ ಹೇಳಿದ್ದೇನು..?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ದತ್ತ ತಾತ, ಸೀದಾ ಮಾಧವ್ ಬಳಿ ಬಂದು ತುಳಸಿ ಬಗ್ಗೆ ಆತನ ಭಾವನೆ ಎಂತಹದ್ದು ಎಂದು ಕೇಳಿ ತಿಳಿದುಕೊಂಡಿದ್ದಾನೆ. ಆದರೆ, ಮಾಧವ್ ಮನೆಯಲ್ಲಿ ಮಕ್ಕಳ ಕಳ್ಳಿಯನ್ನು ನೋಡಿದ ದತ್ತ ತಾತನಿಗೆ ಶಾಕ್ ಆಗಿದೆ. ಹಾಗಿದ್ದರೂ ಏನೂ ಮಾತನಾಡದೇ, ಅಲ್ಲಿಂದ ದತ್ತ ತಾತ ಹೊರಟು ಬಂದಿದ್ದಾರೆ.

ದತ್ತ ತಾತ ಮೊದಲು ಮನೆಗೆ ಬಂದಾಗ ಮುಖ ತೋರಿಸದೇ ಬಚ್ಚಿಟ್ಟುಕೊಂಡ ಶಾರ್ವರಿ ಧೈರ್ಯವಾಗಿ ಅವರ ಮುಂದೆ ಬಂದು ನಿಂತಿದ್ದರ ಹಿಂದಿನ ಸತ್ಯ ಏನು ಎಂಬುದು ಶಾರ್ವರಿಗೆ ಗೊತ್ತು. ಇತ್ತ ತುಳಸಿ ಮತ್ತು ಸಿರಿ ಇಬ್ಬರೂ ಮಾಧವ್ ಕೆಫೆಗೆ ಒಂದು ದಿನ ಭಾರದೇ ಇದ್ದದ್ದಕ್ಕೆ ಬಹಳ ಮಿಸ್ ಮಾಡಿಕೊಂಡಿರುವ ವಿಚಾರವನ್ನು ಮಾತನಾಡುತ್ತಾರೆ. ಇಡೀ ದಿನ ಒಂದು ರೀತಿ ಬೇಸರ, ಕಳವಳ ಇತ್ತು ಎಂದು ತುಳಸಿ ಹೇಳುತ್ತಾಳೆ. ಸಿರಿ ಇಬ್ಬರ ಸ್ನೇಹದ ಬಗ್ಗೆ ಮಾತನಾಡುತ್ತಾ, ಒಂದು ವೇಳೆ ನಿಮ್ಮಬ್ಬರಲ್ಲಿ ಯಾರಾದರೂ ಒಬ್ಬರಿಗೆ ಮುಂದೊಂದು ದಿನ ಪ್ರೀತಿ ಆದರೆ ಏನ್ ಮಾಡುತ್ತೀರಾ ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿದ ಕೂಡಲೇ ತುಳಸಿ ದಿಗ್ಭ್ರಾಂತಳಾಗುತ್ತಾಳೆ.

Shrirastu Shubhamasthu serial 24th July Episode Written Update

ತುಳಸಿ, ನಾನು ಸ್ನೇಹಿತರ ಜೊತೆಗೆ ಮಾತನಾಡುವಾಗ ಕೇಳಿದಂತೆ ಕೇಳಿಬಿಟ್ಟೆ ಕ್ಷಮಿಸಿ. ನನ್ನ ಉದ್ದೇಶ ನಿಮ್ಮನ್ನು ನೋಯಿಸುವುದು ಅಲ್ಲ ಎಂದು ಸಿರಿ ಹೇಳುತ್ತಾಳೆ. ಆಗ ತುಳಸಿ ಅಳುತ್ತಾ, ಪ್ಲೀಸ್ ಪುಟ್ಟ ಇನ್ಯಾವತ್ತೂ ಈ ಥರ ಯೋಚಿಸಬೇಡ. ನಮ್ಮಿಬ್ಬರ ನಡುವೆ ಕೇವಲ ಸ್ನೇಹ ಅಷ್ಟೇ ಇರೋದು ಎಂದು ಹೇಳುತ್ತಾಳೆ.

ತುಳಸಿ ಭವಿಷ್ಯದ ಬಗ್ಗೆ ತಾತನ ಆಲೋಚನೆ

ಇನ್ನು ದತ್ತ ತಾತ ತುಳಸಿಯ ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಿದ್ದಾನೆ. ಮಾಧವ್ ಈಗಾಗಲೇ ತನ್ನ ಮನಸ್ಸಿನಲ್ಲಿ ತುಳಸಿ ಮೇಲೆ ಪ್ರೀತಿ ಇದೆ ,ಎಂದು ಸತ್ಯವನ್ನು ಹೇಳಿದ್ದಾನೆ. ಆದರೆ, ಈಗ ದತ್ತ ತಾತ ಮುಂದೇನು ಮಾಡುವುದು, ತುಳಸಿಯನ್ನು ಅವರ ಮಕ್ಕಳು ಮುಂದೆ ನೋಡಿ ಕೊಳ್ಳುತ್ತಾರಾ ಇಲ್ಲವೇ, ತಾನೇ ತನ್ನ ಸೊಸೆಗೆ ಒಂದು ದಾರಿಯನ್ನು ಮಾಡಬೇಕೇ ಎಂದು ಯೋಚಿಸುತ್ತಿರುತ್ತಾನೆ. ಈ ವಿಚಾರವನ್ನು ಶೇಷು ಬಳಿ ಕೂಡ ಹೇಳಿಕೊಳ್ಳುತ್ತಾನೆ.

ಗೊಂದಲದಲ್ಲಿ ಶಾರ್ವರಿ

ಶಾರ್ವರಿ ಈಗ ತಾನು ಏನೆಲ್ಲಾ ಆಗಬೇಕು ಎಂದು ಪ್ಲ್ಯಾನ್ ಮಾಡಿದ್ದೆನೋ ಅದೇ ನಡೆಯುತ್ತಿದೆ ಎಂದು ಭಾವಿಸಿದ್ದಾಳೆ. ತುಳಸಿ ಹಾಗೂ ಮಾಧವ್ ನಡುವೆ ಮುನಿಸು ಶುರುವಾಗಿರಬೇಕು ಎಂದುಕೊಂಡಿದ್ದಾಳೆ. ಈ ಬಗ್ಗೆ ತನ್ನ ಪತಿ ಮಹೇಶ್ ಬಳಿ ಮಾತನಾಡುತ್ತಿರುತ್ತಾಳೆ. ಆಗ ಅಕಸ್ಮಾತ್ ನಾನು ಯೋಚಿಸುತ್ತಿರುವ ರೀತಿ ನಡೆಯುತ್ತಿಲ್ಲವಾ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ಗೊಂದಲಕ್ಕೊಳಗಾಗುತ್ತಾಳೆ.

Shrirastu Shubhamasthu serial 24th July Episode Written Update

ಸಮರ್ಥ್‌ಗೆ ಯಾಕಷ್ಟು ಕೋಪ?

ದತ್ತ ತಾತ, ಮಾಧವ್ ಜೊತೆಗೆ ಮಾತನಾಡುವಾಗ ಸಮರ್ಥ್ ಕಾಲ್ ಮಾಡಿರುತ್ತಾನೆ. ಕಟ್ ಮಾಡುವ ಬದಲು ದತ್ತ ತಾತ ರಿಸೀವ್ ಮಾಡಿರುತ್ತಾರೆ. ಇದರಿಂದಾಗಿ ಸಮರ್ಥ್ ಕೂಡ ಮಾಧವ್ ತುಳಸಿ ಮೇಲೆ ತನಗೆ ಪ್ರೀತಿ ಇದೆ ಎಂದು ಹೇಳುವುದನ್ನು ಕೇಳಿಸಿಕೊಂಡಿರುತ್ತಾನೆ. ಇದೇ ಕೋಪದಲ್ಲಿರುವ ಸಮರ್ಥ್ ಅಮ್ಮ ಇನ್ನು ಮುಂದೆ ಕೆಫೆಗೆ ಹೋಗುವುದು ಬೇಡ ಎಂದು ಸಿರಿ ಬಳಿ ಹೇಳುತ್ತಾನೆ.

ಸಮರ್ಥ್‌ ಮಾತಿಗೆ ಸಿರಿ ಶಾಕ್

ಸಿರಿ, ಸಮರ್ಥ್‌ನನ್ನು ಬೈಯುತ್ತಾಳೆ. ಯಾಕೆ ಹೀಗೆಲ್ಲಾ ಮಾಡುತ್ತಿದ್ದೀಯಾ ಏನ್ ಆಯ್ತು ಹೇಳು ಎಂದು ಕೇಳಿದಾಗ ಮಾಧವ್‌ಗೆ ಅಮ್ಮನ ಮೇಲೆ ಪ್ರೀತಿ ಇದೆ ಅಂತೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಿರಿಗೆ ಶಾಕ್ ಆಗುತ್ತದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial today episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X