Shrirastu Shubhamasthu: ಕೆಲಸಕ್ಕೆ ಹೋಗಲು ಸಜ್ಜಾದ ತುಳಸಿ: ಮಾಧವ್ ಎಲ್ಲಿಲ್ಲದ ಖುಷಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಂದಿನಿ ಮನೆಗೆ ಬಂದು ಸಮರ್ಥ್‌ಗೆ ಡಬ್ಬಿ ಕೊಟ್ಟಿದ್ದಕ್ಕೆ ಸಿರಿ ಕೋಪ ಮಾಡಿಕೊಂಡಿದ್ದಾಳೆ. ಎಲ್ಲರ ಎದುರಿಗೂ ನಂದಿನಿ ಜೊತೆ ಸಲಿಗೆ ಒಳ್ಳೆಯದಲ್ಲ ಎಂದು ಹೇಳಿದ್ದಾಳೆ. ಇದರಿಂದ ಸಮರ್ಥ್ ಕೋಪ ಮಾಡಿಕೊಂಡು ಆಫಿಸಿಗೆ ಹೋಗಿದ್ದಾನೆ. ಸಿರಿ ತಾನೇ ಸೋತು ಫೋನ್ ಮಾಡುತ್ತಾಳೆ. ಆದರೆ, ಸಮರ್ಥ್ ಮಾತ್ರ ಕೋಪದಲ್ಲೇ ಮಾತನಾಡುತ್ತಾನೆ.
ಸಿರಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಮರ್ಥ್ ಫೋನ್ ಕಾಲ್ ಅನ್ನು ಕಟ್ ಮಾಡುತ್ತಾನೆ. ಮನೆಗೆ ಬಂದ ಮೇಲೆ ದತ್ತ ತಾತ ಇಬ್ಬರನ್ನು ಒಂದು ಮಾಡಲು ಪಂಚಾಯ್ತಿ ಮಾಡುತ್ತಾನೆ. ಇಬ್ಬರಿಗೂ ಒಬ್ಬರಿಗೊಬ್ಬರು ಕ್ಷಮೆ ಕೇಳುವಂತೆ ಹೇಳುತ್ತಾನೆ. ಸಮರ್ಥ್‌ಗೆ ನಂದಿನಿ ಜೊತೆಗೆ ಹೆಚ್ಚಿಗೆ ಮಾತು ಬೇಡ ಎಂದು ಹೇಳುತ್ತಾನೆ. ಹಾಗೆಯೇ ಸಿರಿಗೆ ಎಲ್ಲರ ಮುಂದು ಸಮರ್ಥ್‌ಗೆ ಏನೂ ಹೇಳಬೇಡ ಎಂದು ಕೂಡ ಹೇಳುತ್ತಾನೆ. ಇದಕ್ಕೆ ಇಬ್ಬರೂ ಒಪ್ಪುತ್ತಾರೆ.

ಇನ್ನು ತುಳಸಿ ಕೆಫೆಗೆ ಹೋಗಿ ಮಾಧವ್ ಬಳಿ ಇತರರಂತೆ ಸಂದರ್ಶನವನ್ನು ಮಾಡಿ ಎಂದು ಹೇಳುತ್ತಾಳೆ. ಮಾಧವ್ ಕೂಡ ಇದಕ್ಕೆ ಒಪ್ಪಿ ಸಂದರ್ಶನವನ್ನು ಮಾಡುತ್ತಾನೆ. ಇನ್ನು ತುಳಸಿ ಇದ್ದಾಗ ಮಾಧವ್ ತುಂಬಾ ಖುಷಿಯಾಗಿರುತ್ತಾನೆ. ವೇದಾಂತ್ ಕೂಡ ಕೆಫೆಗೆ ಬಂದು ಧ್ರುವನ ಮದುವೆಗೆ ಕೇಟ್ರಿನ್‌ಗೆ ಆರ್ಡರ್ ಕೊಡುತ್ತಾನೆ. ಆಗ ಮಾಧವ್‌ನಲ್ಲಿನ ಬದಲಾವಣೆಯನ್ನು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಮಾಧವ್ ಕೂಡ ತುಳಸಿಯ ಸ್ನೇಹದ ಬಗ್ಗೆ ಹೆಚ್ಚಾಗಿ ಹೇಳುತ್ತಾನೆ.
ತುಳಸಿ ಬಳಿ ಪುಳಿಯೋಗರೆ ಮಾಡಿಸಿ ವೇದಾಂತ್‌ಗೆ ತಿನ್ನಲು ಕೂಡ ಕೊಡುತ್ತಾನೆ. ಇದರಿಂದ ವೇದಾಂತ್ ತುಳಸಿ ನಿಮಗೆ ಶಕ್ತಿ ಇದ್ದಂತೆ ಎಂದು ಹೇಳುತ್ತಾನೆ. ತುಳಸಿ ಹೋದ ಮೇಲೆ ಈ ಬಗ್ಗೆ ಮಾಧವ್ ತನ್ನಲ್ಲಿನ ಬದಲಾವಣೆಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾನೆ. ಮನೆಗೆ ಬಂದ ತುಳಸಿ ದತ್ತ ತಾತನ ಬಳಿ ಕೆಫೆಗೆ ಲೀಡ್ ಶೆಫ್ ಆಗಿ ಕೆಲಸಕ್ಕೆ ಹೋಗುವ ಬಗ್ಗೆ ಕೇಳುತ್ತಾಳೆ. ಇದಕ್ಕೆ ದತ್ತ ತಾತ ಒಪ್ಪಿಗೆಯನ್ನು ಕೊಡುತ್ತಾನೆ.
ಸಮರ್ಥ್ ಇದಕ್ಕೆ ಬೇಡ ಎನ್ನುತ್ತಾನೆ. ಬೇರೆಯವರು ತಪ್ಪಾಗಿ ತಿಳಿದುಕೊಳ್ಳುತ್ತಾರೆ ಎಂದು ಅಪೋಸ್ ಮಾಡುತ್ತಾನೆ. ದತ್ತ ತಾತ ಯೋಚಿಸಬೇಡ ನೀನು ಕೆಲಸಕ್ಕೆ ಹೋಗು ಎಂದು ಹೇಳುತ್ತಾರೆ. ಈ ವಿಚಾರವನ್ನು ತುಳಸಿ, ಮಾಧವ್ ಜೊತೆ ಫೋನ್‌ನಲ್ಲಿ ಹೇಳುತ್ತಾಳೆ. ಮಾಧವ್‌ಗೆ ತುಂಬಾ ಖುಷಿಯಾಗುತ್ತದೆ.

ಇತ್ತ ಸಂಧ್ಯನ ಪತಿ ಯಾವುದೋ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾನೆ. ಪೊಲೀಸ್ ಸ್ಟೇಷನ್‌ನಲ್ಲಿ ಇರುತ್ತಾನೆ. ಬಿಡಿಸಿಕೊಂಡು ಬರಬೇಕು ಎಂದರೆ ಎರಡೂವರೆ ಲಕ್ಷ ರೂಪಾಯಿ ಬೇಕು ಎಂದು ಜುಗ್ಗ ಮಾವ ಸಂಧ್ಯ ಬಳಿ ಬಂದು ಕೇಳುತ್ತಾನೆ. ಸಂಧ್ಯ ತನ್ನ ತಾಯಿಯಿಂದ ಕೇಳಿ ತಂದಿದ್ದ ಹಣವನ್ನು ಕೊಡುತ್ತಾಳೆ. ಬಳಿಕ ಅಮ್ಮನ ಬಳಿ ನನ್ನ ಗಂಡ ಜೈಲಿಗೆ ಹೋಗುತ್ತಾರೆ ಅಂತ ಸುಳ್ಳು ಹೇಳಿ ಹಣ ತಂದೆ. ಈಗ ನಿಜವಾಗಿಯೂ ಅವರು ಜೈಲಿಗೆ ಹೋಗುವಂತಾಯ್ತು ಎಂದು ಬೇಸರ ಮಾಡಿಕೊಳ್ಳುತ್ತಾಳೆ.
ಇನ್ನು ಅವಿ ತನ್ನ ತಂದೆ ನಿಧಿಗೆ ಕೋಚಿಂಗ್ ಸೆಂಟರ್‌ನಲ್ಲಿ ಸೀಟ್ ಕೊಡಿಸಲು ಸಹಕರಿಸಲಿಲ್ಲ ಎಂದು ಕೋಪ ಮಾಡಿಕೊಂಡಿರುತ್ತಾನೆ. ಅದಕ್ಕಾಗಿ ಅವಿ ಕೋಚಿಂಗ್ ಸೆಂಟರ್‌ನ ಶೇರ್ ಖರೀದಿಸಿ ನಿಧಿಗೆ ಸೀಟ್ ಅನ್ನು ಕೊಡಿಸಿರುತ್ತಾನೆ. ಮಾಧವ್ ಮೇಲೆ ಕೋಪ ಮಾಡಿಕೊಂಡಿದ್ದಕ್ಕೆ ಪೂರ್ಣಿ ಬೇಸರ ಮಾಡಿಕೊಳ್ಳುತ್ತಾಳೆ. ಆದರೆ, ಮಾಧವ್ ಅವಿ ನಡೆದುಕೊಂಡಿದ್ದರಲ್ಲಿ ತಪ್ಪೇನು ಇಲ್ಲ ಎಂದು ಪೂರ್ಣಿಗೆ ಸಮಾಧಾನ ಮಾಡುತ್ತಾನೆ.


Click it and Unblock the Notifications











