Shrirastu Shubhamasthu: ತುಳಸಿ ಮಾಡಿದ ತಿಂಡಿ ಬಿಸಾಡಿದ ಅವಿನಾಶ್
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿಯ ಮದುವೆಯನ್ನು ಮಾಧವ್ ಜೊತೆಗೆ ಮಾಡಿಸಿದ್ದಕ್ಕೆ ಹಾಗೂ ಈ ಮದುವೆಗೆ ಸಿರಿ ಸಪೋರ್ಟ್ ಮಾಡಿದ್ದಕ್ಕಾಗಿ ಸಮರ್ಥ್‌ಗೆ ಕೋಪವಿದೆ. ಅಮ್ಮನ ಬಗ್ಗೆ ಅರ್ಥ ಮಾಡಿಕೊಳ್ಳದೇ, ಬೇಡದ ವಿಚಾರಕ್ಕೆ ತಲೆ ಕೆಡಿಸಿಕೊಂಡು ತನ್ನಿಂದ ದೂರಾಗುತ್ತಿದ್ದಾನೆ ಎಂದು ಸಿರಿ, ಸಮರ್ಥ್ ಮೇಲೆ ಕೋಪ ಮಾಡಿಕೊಂಡಿದ್ದಾಳೆ.
ಮೊಮ್ಮಗ ಹಾಗೂ ಸೋಗಲಾಡಿ ಅನ್ನು ಹೇಗಾದರೂ ಮಾಡಿ ಒಂದು ಮಾಡಬೇಕು ಎಂದು ದತ್ತ ತಾತ ಪ್ಲಾನ್ ಮೇಲೆ ಪ್ಲಾನ್ ಮಾಡುತ್ತಿದ್ದಾರೆ. ಒಂದು ಮದುವೆಯಿಂದ ಮೂರು ಸಂಸಾರಕ್ಕೆ ತೊಂದರೆ ಯಾಗಿದೆ. ಶಾರ್ವರಿ ಬಾಳಲ್ಲಿ ಬೀರುಗಾಳಿ ಬೀಸಿದ್ದರೆ, ಮಾಧವ್ ಕುಟುಂಬದಲ್ಲಿ ಸಮಸ್ಯೆ ದೊಡ್ಡದಾಗಿದೆ. ಇನ್ನು ಸಿರಿ-ಸಮರ್ಥ್ ಬದುಕು ನಾನೊಂದು ತೀರ ನೀನೊಂದು ತೀರಾ ಎನ್ನುತ್ತಿದೆ.

ದತ್ತ ತಾತನಿಗೆ ಈಗ ಸಿರಿ ಹಾಗೂ ಸಮರ್ಥ್ ಅನ್ನು ಒಂದು ಮಾಡಬೇಕಿದೆ. ಹಾಗಾಗಿ ದತ್ತ ತಾತ ಸಿನಿಮಾಗೆ ಹೋಗುವ ನಾಟಕವನ್ನು ಆಡಿದ್ದಾರೆ. ಆದರೆ, ಸಿರಿ ಮತ್ತು ಸಮರ್ಥ್ ಅನ್ನು ಸಿನಿಮಾಗೆ ಕಳಿಸಲು ಪ್ಲಾನ್ ಮಾಡಿದ್ದಾರೆ. ಈಗ ಇಬ್ಬರೂ ರೆಡಿಯಾಗಿದ್ದು, ಒಬ್ಬರಿಗೊಬ್ಬರು ಎದುರಾಗಿದ್ದಾರೆ. ಆದರೆ, ಸಮರ್ಥ್ ಮತ್ತು ಸಿರಿ, ದತ್ತ ತಾತನ ಮಾತು ಕೇಳಿ ಸಿನಿಮಾಗೆ ಹೋಗುತ್ತಾರಾ? ಎಂದು ಕಾದು ನೋಡಬೇಕಿದೆ.
ದೇವರ ಮನೆಗೆ ಬರಬೇಡ ಎಂದ ಶಾರ್ವರಿ
ತುಳಸಿ ಮಂಗಳಾರತಿ ನೀಡಿದ್ದಕ್ಕೆ ಕೋಪ ಮಾಡಿಕೊಂಡ ಶಾರ್ವರಿ ಬೈದಿದ್ದಾಳೆ. ನಿನ್ನ ಸ್ಥಾನ ಏನು ಅಂತ ನಾನು ಮುಂಚೆಯೇ ಹೇಳಿದ್ದರೂ ಈ ಮನೆಗೆ ಬಂದು ಸೇರಿಕೊಂಡಿದ್ದೀಯಾ. ನಿನಗ್ಯಾರು ನಮ್ಮ ಮನೆ ದೇವರಿಗೆ ಪೂಜೆ ಮಾಡಲು ಹೇಳಿದ್ದು. ಈ ಮನೆಯನ್ನು ಇಷ್ಟು ವರ್ಷದಿಂದ ಕಾಪಾಡಿಕೊಂಡು ಬಂದ ನನ್ನ ಮಾತು ನಡೆಯುತ್ತಾ ಇಲ್ಲ ನಿನ್ನ ಮಾತನ್ನು ಈ ಮನೆಯವರು ಕೇಳುತ್ತಾರಾ ಎಂದು ನೋಡೇ ಬಿಡೋಣ ಎಂದು ಹೇಳಿ ಹೋಗುತ್ತಾಳೆ. ದೇವಸ್ಥಾನಕ್ಕೆ ಹೋಗಿ, ಅಲ್ಲಿ ದೇವರ ಬಳಿ ನನಗೆ ಮೋಸ ಮಾಡಿದೆ. ಭಾವ ಪ್ರತಿ ದಿನ ಕೊರಗಬೇಕು ಎಂದು ನಾನು ಇಷ್ಟು ವರ್ಷ ಮನೆಯನ್ನು ನನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದೆ. ಆದರೆ ಈಗ ಅವರಿಗೆ ಎಂದು ತುಳಸಿ ಬಂದಿದ್ದಾಳೆ. ನಾನು ಅವಳನ್ನು ಈ ಮನೆ ಹಿರಿ ಸೊಸೆ ಎಂದು ಹೇಗೆ ಒಪ್ಪಿಕೊಳ್ಳಲಿ ಅಂತ ಕಿರುಚಾಡುತ್ತಾಳೆ.

ಸಿಹಿ ತಿನಿಸು ಮಾಡಿದ ತುಳಸಿ
ಶಾರ್ವರಿ ತುಳಸಿಗೆ ಬೈದಿದ್ದು ಬೇಸರವನ್ನು ತರುತ್ತದೆ. ಹೀಗಾಗಿ ತುಳಸಿ ಸೈಲೆಂಟ್ ಆಗಿ ರೂಮಿಗೆ ಹೋಗುತ್ತಾಳೆ. ಪಾಪಮ್ಮ ನೀರು ತಂದು ತುಳಸಿಗೆ ನೀಡಿ ಸಮಾಧಾನ ಮಾಡುತ್ತಾಳೆ. ಅವರು ಹಾಗೆಲ್ಲಾ ಬೈದಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ. ಬಳಿಕ ತುಳಸಿ ಬೇಸರವಾಗುತ್ತಿದೆ ಎಂದು ಅಡುಗೆ ಮನೆಗೆ ಹೋಗೊ ಸಿಹಿ ತಿಂಡಿಯನ್ನು ಮಾಡಲು ಮುಂದಾಗುತ್ತಾಳೆ. ತುಳಸಿ ಅಡುಗೆ ಮನೆ ಕೆಲಸದವರೆಲ್ಲಾ ಸಹಾಯ ಮಾಡುತ್ತಾರೆ.
ತಿಂಡಿಯನ್ನು ದೂಡಿದ ಅವಿನಾಶ್
ತಿಂಡಿಗೆ ತುಳಸಿ ದೂದ್ ಪೇಡ ಮಾಡಿರುತ್ತಾಳೆ. ಎಲ್ಲರೂ ತಿಂಡಿ ತಿನ್ನಲು ಬರುತ್ತಾರೆ. ಆಗ ಎಲ್ಲರ ತಟ್ಟೆಗೂ ಪಾಪಮ್ಮ ದೂದ್ ಪೇಡವನ್ನು ಬಡಿಸುತ್ತಾರೆ. ಆದರೆ, ಅವಿ ತನಗೆ ಬೇಡ ಎನ್ನುತ್ತಾನೆ. ಪೂರ್ಣಿ ಸ್ವೀಟ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾಳೆ. ಆಗ ಅವಿ ತನಗೂ ಬಡಿಸಲು ಹೇಳುತ್ತಾನೆ. ದೂದ್ ಪೇಡ ತಿಂದು ಕೋವಾದಲ್ಲಿ ಮಾಡಿದ್ದು. ಸೂಪರ್ ಆಗಿದೆ ಎಂದು ಹೇಳುತ್ತಾನೆ. ಆ ಪಾಪಮ್ಮ ದೊಡ್ಡಮ್ಮೋರು ಮಾಡಿದ್ದು ಎಂದು ಹೇಳಿದ ಕೂಡಲೇ ಅವಿಗೆ ಕೋಪ ಬಂದು ತಿಂಡಿಯನ್ನು ದೂಡುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ತಿಳಿಯಬೇಕಿದೆ.


Click it and Unblock the Notifications











