Shrirastu Shubhamasthu: ಜನಾರ್ಧನ್ ಮಾತಿಗೆ ಮನೆ ಬಿಟ್ಟು ಹೋದ ತುಳಸಿ, ಕಂಗಾಲಾದ ಮಾಧವ

ಮಾಧವನ ಮನೆಯಲ್ಲಿ ಖುಷಿ ಮನೆ ಮಾಡಿದೆ. ಒಂದು ಕಡೆ ಅಭಿ ಮದುವೆ. ಇನ್ನೊಂದು ಕಡೆ ಶಾರ್ವರಿಯನ್ನು ಯಜಮಾನಿ ಪಟ್ಟದಿಂದ ಆಕೆಯ ಗಂಡ ಇಳಿಸಿದ ಕ್ಷಣ. ಶಾರ್ವರಿ ಗಂಡ ಮಹೇಶನಿಗೆ ಅತ್ತಿಗೆ ಅಂದರೆ ಬಹಳ ಪ್ರೀತಿ. ಆದರೆ ಶಾರ್ವರಿ ನಿಜ ರೂಪ ತಿಳಿದ ಬಳಿಕವೂ ಆಕೆಯ ಬಳಿ ಏನು ಗೊತ್ತಿಲ್ಲದ ಹಾಗೆ ಮಹೇಶ ನಡೆದುಕೊಳ್ಳುತ್ತಿದ್ದಾನೆ.

ಶಾರ್ವರಿ ಮನೆ ಮಂದಿಗೆ ಎಷ್ಟೋ ಕಾಟ ಕೊಟ್ಟಿದ್ದಾಳೆ. ಆದರೆ ಅದೆಲ್ಲವನ್ನೂ ಶಾರ್ವರಿ ಮಾಡಿಸಿದ್ದು ಎಂದು ಅವರಿಗೆಲ್ಲಾ ತಿಳಿದಿಲ್ಲ. ಆದರೆ ಇದೀಗ ಮಹೇಶನಿಗೆ ಸತ್ಯ ಗೊತ್ತಾಗಿದೆ. ಮಹೇಶನ ಮುಂದೆ ಏನು ಮಾತನಾಡದೇ ಶಾರ್ವರಿ ಮುದುರಿಕೊಂಡು ಇರುತ್ತಾಳೆ.

Shrirastu Shubhamasthu serial 26th January episode written update

ಇನ್ನು ಅಭಿ ಮದುವೆ ಚಪ್ಪರ ಮುಹೂರ್ತ ನಡೆಯಿತು. ಮದುವೆ ನಿರ್ವಿಘ್ನವಾಗಿ ನಡೆಯಲಿ ಎನ್ನುವುದು ಎಲ್ಲರ ಆಸೆ ಕೂಡ ಅದನ್ನೇ ದೇವರ ಬಳಿ ಕೇಳಿಕೊಂಡರು. ಮದುವೆಗೆ ಧಾರೆ ಎರೆಯುವ ಪುಣ್ಯದ ಕೆಲಸ ಮಾಧವ ಹಾಗೂ ತುಳಸಿಗೆ ಸಿಕ್ಕರೂ ಅಭಿಗೆ ಮಾತ್ರ ಇದು ಚೂರು ಇಷ್ಟ ಇರಲಿಲ್ಲ. ಅದರಲ್ಲಿ ಬೇರೆ ಅಭಿ ಬಳಿ ಶಾರ್ವರಿ ಕಿವಿ ಊದಿದ್ದಾಳೆ.

ಅಭಿ ಮಾತಿನಿಂದ ಮಾಧವ್‌ಗೆ ಬೇಸರ

ಅಭಿ ಎಲ್ಲರ ಮುಂದೆ ನನ್ನ ಮದುವೆ ಕಾರ್ಯಗಳನ್ನು ಚಿಕ್ಕಮ್ಮ ಎದುರು ನಿಂತು ಮಾಡಲಿ ಎಂದು ಹೇಳುತ್ತಾನೆ. ತಂದೆ ಬದುಕಿದ್ದರು ಈ ಮಾತು ಅಭಿ ಹೇಳುವಾಗ ಮಾಧವ್‌ಗೆ ಕೊಂಚ ನೋವು ಆದರೂ ಅದೆಲ್ಲವನ್ನೂ ಸಹಿಸಿಕೊಳ್ಳುತ್ತಾನೆ. ಇತ್ತ ಮಾಧವ ಮದುವೆ ಕಾರ್ಯಗಳಲ್ಲಿ ಬ್ಯುಸಿ ಇದ್ದರೆ ತುಳಸಿ ಮಾತ್ರ ದೂರದಿಂದ ನಿಂತು ಅಭಿ ಮದುವೆಯನ್ನು ಕಣ್ಣು ತುಂಬಿಸಿಕೊಂಡು ಇರುತ್ತಾಳೆ.

ಮಾಧವನ ಮನೆಯಲ್ಲಿ ನಡೆಯುತ್ತಿದೆ ಅಭಿ ಮದುವೆ

ತುಳಸಿ ಬಳಿಗೆ ಬಂದ ಜನಾರ್ಧನ ಹೇಳುತ್ತಾರೆ. ತುಳಸಿ ಅವರೇ ಈ ಮದುವೆ ನಿರ್ವಿಘ್ನವಾಗಿ ನಡೆಯಬೇಕು ಎಂದಾದರೆ ನೀವು ಮನೆ ಬಿಟ್ಟು ಹೋಗಬೇಕು. ನೀವು ಮನೆ ಬಿಟ್ಟು ಹೋದರೆ ಮಾತ್ರ ಅಭಿ ಮತ್ತು ನನ್ನ ಮಗಳು ಚೆನ್ನಾಗಿ ಇರಲು ಸಾಧ್ಯ ಎಂದಾಗ ತುಳಸಿ ಆಯಿತು ಎಂದು ಒಪ್ಪಿಗೆ ಸೂಚಿಸುತ್ತಾಳೆ. ಅಭಿ ಆಕೆ ಮೆಚ್ಚಿದ ಹುಡುಗಿಯನ್ನು ಮದುವೆ ಆಗುತ್ತಿರುವ ಸಂದರ್ಭ ತುಳಸಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗುತ್ತಾಳೆ. ತುಳಸಿಗೆ ಮನೆಯವರ ಖುಷಿ ಮುಂದೆ ಆಕೆಗೆ ಮನೆ ಬಿಟ್ಟು ಹೋಗುವುದು ದೊಡ್ಡ ವಿಚಾರ ಎನಿಸಲಿಲ್ಲ.

Shrirastu Shubhamasthu serial 26th January episode written update

ಜನಾರ್ಧನ್ ಮಾತಿನಂತೆ ನಡೆದುಕೊಂಡ ತುಳಸಿ

ಜನಾರ್ಧನ್ ಮಾತಿಗೆ ಮರು ಮಾತನಾಡದೇ ಮದುವೆ ಮನೆಯಿಂದ ಹೊರ ನಡೆಯುತ್ತಾಳೆ. ಮದುವೆ ಎಲ್ಲಾ ನಡೆದ ಬಳಿಕ ಎಲ್ಲರೂ ಮನೆಗೆ ಬರುತ್ತಾರೆ. ಆ ವೇಳೆ ಮದುಮಗಳ ಕಣ್ಣಿಗೆ ತುಳಸಿ ಎಲ್ಲೂ ಕಾಣಿಸುವುದು ಇಲ್ಲ. ತುಳಸಿ ಅತ್ತೆ ಎಲ್ಲಿ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ಆಗಲೇ ಎಲ್ಲರೂ ತುಳಸಿಯನ್ನು ಹುಡುಕಲು ಶುರು ಮಾಡುತ್ತಾರೆ. ತುಳಸಿ ಮಾತ್ರ ಎಲ್ಲೂ ಕೂಡ ಕಾಣಸಿಗುವುದು ಇಲ್ಲ.

ತುಳಸಿಯನ್ನು ಹುಡುಕುತ್ತಿರುವ ಮಾಧವ

ತುಳಸಿ ಅಮ್ಮ ಇದ್ದರೆ ಮಾತ್ರ ನಾನು ಹೊಸಿಲು ದಾಟಿ ಮನೆ ಒಳಗೆ ಬರುತ್ತೇನೆ ಇಲ್ಲವಾದರೆ ನಾನು ಖಂಡಿತ ಮನೆ ಒಳಗೆ ಬರುವುದು ಇಲ್ಲ ಎಂದು ಅಭಿ ಮಡದಿ ಹೇಳುತ್ತಾಳೆ. ಇದನ್ನು ಕೇಳಿ ಮನೆ ಮಂದಿ ತುಳಸಿಯನ್ನು ಹುಡುಕುತ್ತಾರೆ. ಆದರೆ ತುಳಸಿ ಎಲ್ಲೂ ಕಾಣಿಸದೆ ಇರುವುದನ್ನು ಕಂಡು ಕಂಗಲಾಗುತ್ತಾರೆ . ತುಳಸಿ ಹಾಗೂ ಜನಾರ್ಧನ್ ನಡುವೆ ನಡೆದಿರುವ ವಿಚಾರ ಯಾರಿಗೂ ತಿಳಿದಿರುವುದಿಲ್ಲ . ಅದನ್ನು ಯಾರ ಬಳಿಯೂ ಕೂಡ ತುಳಸಿ ಹೇಳಿಕೊಂಡು ಇರುವುದು ಇಲ್ಲ.

ಶಾರ್ವರಿಗೆ ಖುಷಿ

ಮಕ್ಕಳಿಬ್ಬರೂ ಮದುವೆ ನಿರ್ವಿಘ್ನವಾಗಿ ಆಗಲಿ ಎಂಬುವುದು ಆಕೆಯ ಆಸೆ . ಅವರ ಆಸೆಯ ಪ್ರಕಾರವಾಗಿ ತ್ಯಾಗಕ್ಕೆ ಮುಂದಾಗುತ್ತಾಳೆ. ಪ್ರೀತಿ ಮಾಡಿರುವ ಜೋಡಿ ಸದಾ ಕಾಲ ಒಂದಾಗಿ ಇರಬೇಕು ಎಂಬ ಆಸೆಗೆ ತುಳಸಿ ಮಾತ್ರ ಅಡ್ಡಿ ಆಗುವುದು ಇಲ್ಲ. ತುಳಸಿ ಮನೆ ಬಿಟ್ಟು ಹೋಗಿರುವುದು ಶಾರ್ವರಿಗೆ ಬಹಳ ಖುಷಿ ನೀಡುತ್ತದೆ.

More from Filmibeat

English summary
Shrirastu Shubhamasthu serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X