Shrirastu Shubhamasthu: ಮನೆಗೆ ಬಂದಾತ ತುಳಸಿ ಬಳಿ ಯಾಕೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾನೆ..?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿಗೆ ತಿಳಿಯದಂತೆ ಅವಳ ಹಿಂದೆ ಬಹಳ ಲೆಕ್ಕಾಚಾರಗಳು ನಡೆಯುತ್ತಿವೆ. ಆದರೆ, ಇದ್ಯಾವುದೂ ತುಳಸಿಗೆ ಅರ್ಥವಾಗುತ್ತಿಲ್ಲ. ದತ್ತ ತಾತನಿಗೆ ತನ್ನ ನಂತರ ತುಳಸಿಯ ಬದುಕು ಹೇಗೆ ನಡೆಯುತ್ತದೆ. ಅವಳ ಬದುಕಿಗೆ ಆಧಾರವೇನು ಎಂಬ ಆಲೋಚನೆಯಾಗಿದೆ. ತುಳಸಿಗೆ ಯಾವುದಾದರೂ ದಾರಿ ಮಾಡಬೇಕು ಎಂದು ಯೋಚಿಸುತ್ತಿದ್ದಾರೆ.

ಇತ್ತ ಸಮರ್ಥ್‌ಗೆ ಈ ವಯಸ್ಸಿನಲ್ಲಿ ಅಮ್ಮ ಹಾಗೂ ಮಾಧವ್‌ನಿಂದ ಏನೆಲ್ಲಾ ನಡೆಯುತ್ತಿದೆ. ಇದೆಲ್ಲಾ ಎಷ್ಟು ಸರಿ ಎಂಬ ಚಿಂತೆ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಹೊಸ ಪಾತ್ರ ಎಂಟ್ರಿ ಕೊಟ್ಟಿದೆ. ಸಮರ್ಥ್‌ನನ್ನು ಅಭಿ ಬೇಕಂತಲೇ ತುಳಸಿ ವಿಚಾರವನ್ನು ಮುಂದಿಟ್ಟುಕೊಂಡು ಕೆಲಸದಿಂದ ತೆಗೆದಿರುತ್ತಾನೆ. ಇದರಿಂದ ಸಿಟ್ಟಿನಲ್ಲಿದ್ದ ಸಮರ್ಥ್‌ಗೆ ಈಗ ಮಾಧವ್ ತುಳಸಿಯನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿದೆ.

Shrirastu -Shubhamasthu-serial

ಸಮರ್ಥ್ ಅಮ್ಮನನ್ನು ಇವತ್ತು ಕೆಫೆಗೆ ಹೋಗಬೇಡ ಎಂದು ಜೋರು ಮಾಡುತ್ತಾನೆ. ಆಗ ದತ್ತ ತಾತ ಮಧ್ಯೆ ಬಂದು ಅವಳು ನನ್ನ ಸೊಸೆ. ಅವಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧಾರ ಮಾಡುವವನು ನಾನು. ನಿನಗೆ ಯಾವ ಹಕ್ಕು ಇಲ್ಲ ಎಂದು ತುಳಸಿ ಪರ ನಿಲ್ಲುತ್ತಾನೆ. ಸಮರ್ಥ್‌ನನ್ನು ಸಮಾಧಾನ ಮಾಡಲು ಸಿರಿ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುತ್ತಾಳೆ. ದತ್ತ ತಾತ, ತುಳಸಿ ವಿಚಾರದಲ್ಲಿ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದು ದೇವಸ್ಥಾನಕ್ಕೆ ತೆರಳುತ್ತಾರೆ.

ಸಮರ್ಥ್‌ಗೆ ಬುದ್ಧಿ ಹೇಳಿದ ಸಿರಿ

ಸಿರಿ ಇತ್ತ ಸಮರ್ಥ್‌ಗೆ ಸಮಾಧಾನ ಹೇಳುತ್ತಾಳೆ. ನೀನು ಮಾಡುತ್ತಿರುವುದು ತಪ್ಪು. ಅಕಸ್ಮಾತ್ ಮುಂದೊಂದು ದಿನ ಅಮ್ಮ ಹಾಗೂ ಮಾಧವ್ ಅವರು ಮದುವೆ ಆದರೂ ತಪ್ಪಿಲ್ಲ. ಅವರ ವಯಸ್ಸಿಗೆ ತಮಗೂ ಒಬ್ಬರು ಸಂಗಾತಿ ಬೇಕು ಎಂದು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಸುಮ್ಮನೆ ನೀನು ಹೀಗೆಲ್ಲಾ ಯೋಚಿಸಬೇಡ. ಸಮಾಜ ಹೇಗಿದ್ದರೂ ಮಾತನಾಡುತ್ತೆ. ಅವರ ಬದುಕು ಅವರಿಗೆ. ನೀನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀಯಾ ಎಂದೆಲ್ಲಾ ಬುದ್ಧಿವಾದ ಹೇಳುತ್ತಾಳೆ. ಆದರೆ ಸಮರ್ಥ್ ಮಾತ್ರ ಸಿರಿ ಮಾತನ್ನು ಕೇಳಲು ಸುತಾರಾಂ ಸಿದ್ಧವಿರುವುದಿಲ್ಲ.

Shrirastu -Shubhamasthu-serial

ಮನೆಗೆ ಬಂದಾತ ಯಾರು..?

ಸಮರ್ಥ್ ಮ್ಯಾಟ್ರಿಮೊನಿಯಲ್ಲಿ ತಮ್ಮ ತಾಯಿಯ ಪ್ರೊಫೈಲ್ ಅನ್ನು ಅಪ್ ಲೋಡ್ ಮಾಡಿರುತ್ತಾನೆ. ಎರಡನೇ ಮದುವೆ ಮಾಡಿಸಲು ಹುಡುಗನನ್ನು ಹುಡುಕುತ್ತಿರುತ್ತಾನೆ. ಯಾರೂ ಮನೆಯಲ್ಲಿ ಇಲ್ಲದಾಗ ತುಳಸಿ ಮಗನ ಬಗ್ಗೆ ಯೋಚಿಸುತ್ತಾ ಕುಳಿತಿರುತ್ತಾಳೆ. ಆಗ ಮನೆಗೆ ವ್ಯಕ್ತಿಯೊಬ್ಬ ಬರುತ್ತಾನೆ. ಆತ ವಯಸ್ಸಿನಲ್ಲಿ ದೊಡ್ಡವನಾದರೂ, ಸಮರ್ಥ್ ಸ್ನೇಹಿತ. ಅವರ ಜೊತೆಗೆ ಮಾತನಾಡಬೇಕಿತ್ತು ಎಂದು ಹೇಳಿ ಸೀದಾ ಮನೆಯೊಳಗೆ ಬಂದು ಕುಳಿತುಕೊಳ್ಳುತ್ತಾನೆ. ನೀರು ತರಿಸಿಕೊಂಡು ಕುಡಿಯುವ ಆತ, ಕಾಫಿ ಕೂಡ ಕೇಳುತ್ತಾನೆ.

ತುಳಸಿಗೆ ಮುಜುಗರ ಉಂಟು ಮಾಡಿದ ವ್ಯಕ್ತಿ

ತುಳಸಿ ಕಾಫಿ ಮಾಡಲು ಅಡುಗೆ ಮನೆಗೆ ಹೋಗುತ್ತಾಳೆ. ಈತ ಕೂಡ ಒಪ್ಪಿಗೆ ಇಲ್ಲದೆ ತುಳಸಿ ಕೈಯನ್ನು ಮುಟ್ಟುತ್ತಾನೆ ಇದು ತುಳಸಿಗೆ ಬಹಳ ಮುಜುಗರವನ್ನುಂಟು ಮಾಡಿದೆ. ತುಳಸಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಯಾರೀತ ಯಾಕೀಗೆ ಮಾಡುತ್ತಿದ್ದಾನೆ ಎಂದು ಮನದಲ್ಲೇ ಆತಂಕ ಪಡುತ್ತಾಳೆ. ಆತ ಬಲವಂತವಾಗಿ ತುಳಸಿ ಕೈ ಹಿಡಿದುಕೊಂಡಾಗ ತುಳಸಿ ಕೈ ಬಿಡಿಸಿಕೊಳ್ಳಲು ಪ್ರಯತ್ನ ಪಡುತ್ತಾಳೆ. ಈ ಘಟನೆ ತುಳಸಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ. ಮನೆಯಲ್ಲಿ ಏನೆಲ್ಲಾ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu kananda serial Today Episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X