Shrirastu Shubhamasthu: ನ್ಯೂಸ್ ಪೇಪರ್‌ನಲ್ಲಿ ಮಾಧವ್-ತುಳಸಿ ಫೋಟೋ: ಶಾರ್ವರಿಗೆ ಖುಷಿಯೋ ಖುಷಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಆಫೀಸಿನಿಂದ ಬಂದ ಕೂಡಲೇ ಸಂಧ್ಯಾ ವಿರುದ್ಧ ದೂರು ನೀಡಬೇಕು ಎಂದು ಹೇಳುತ್ತಾನೆ. ಆದರೆ, ದತ್ತ ತಾತ ಬೇಡ ಎನ್ನುತ್ತಾರೆ. ಇದರಿಂದ ಕೋಪ ಮಾಡಿಕೊಳ್ಳುವ ಸಮರ್ಥ್, ನಿಮ್ಮ ಕಾಲವೇನೋ ಮುಗಿಯುತ್ತಿದೆ. ಈಗ ನಾವು ತಾನೇ ಬದುಕಬೇಕಿರುವುದು. ಈ ಸಂದರ್ಭದಲ್ಲೇ ಎಲ್ಲರನ್ನೂ ಮನೆಗೆ ಕರೆದುಕೊಂಡು ಬಂದು ಛತ್ರ ಮಾಡಿದ್ದೀರಾ ಎನ್ನುತ್ತಾನೆ.
ಸಮರ್ಥ್ ಮಾತುಗಳನ್ನು ಶೇಷು ಮತ್ತು ಗೋದಾವರಿ ಕೇಳಿಸಿಕೊಳ್ಳುತ್ತಾರೆ. ಇದರಿಂದ ಅವರಿಗೆ ಬೇಸರವಾದರೂ ತೋರಿಸಿಕೊಳ್ಳುವುದಿಲ್ಲ. ಆದರೆ, ದತ್ತ ತಾತನಿಗೆ ಮುಜುಗರವಾಗುತ್ತದೆ. ಶೇಷು ಮತ್ತು ಗೋದಾವರಿಯನ್ನು ಸಮರ್ಥ್ ನೋಡುತ್ತಿದ್ದಂತೆ ಮೇಲೆ ಹೊರಟು ಬಿಡುತ್ತಾನೆ. ಗೋದಾವರಿ ಮತ್ತು ಸಿರಿ ಅಡುಗೆ ಮನೆಗೆ ಹೋಗುತ್ತಾರೆ. ದತ್ತ ತಾತ, ಶೇಷು ಜೊತೆಗೆ ರೂಮಿಗೆ ಹೋಗುತ್ತಾರೆ. ದತ್ತ ತಾತನ ಮೌನ ನೋಡಿ ಶೇಷು ವಿಚಾರಿಸುತ್ತಾರೆ.

ದತ್ತ ತಾತ ತನ್ನ ಕೈಯಲ್ಲಿ ಒಂದು ರೂಪಾಯಿಯೂ ಇಲ್ಲ. ಎಲ್ಲ ಹಣ ಖಾಲಿಯಾಗಿದೆ. ಮನೆಯಲ್ಲಿ ಮತ್ತೇನಾದರೂ ಸಮಸ್ಯೆ ಬಂದರೆ ಏನು ಮಾಡುವುದೋ ಗೊತ್ತಿಲ್ಲ. ತುಂಬಾ ಚಿಂತೆಯಾಗಿದೆ ಶೇಷು ಎಂದು ದತ್ತ ತಾತ ಹೇಳುತ್ತಾರೆ. ಆಗ ಶೇಷು, ಸಂಧ್ಯಾ ಬಗ್ಗೆ ಯೋಚಿಸುತ್ತೀದ್ದೀರಾ ಎಂದು ಕೇಳಿದ್ದಕ್ಕೆ ಹೌದು, ಅಷ್ಟೊಂದು ಹಣ ಎತ್ತುಕೊಂಡು ಹೋಗಿದ್ದಾಳೆ ಎಂದು ಹೇಳುತ್ತಾರೆ. ಇನ್ನು ಶೇಷು ತಾನು ತನ್ನ ತಮ್ಮನ ಮನೆಗೆ ಹೋಗುವುದಾಗಿ ಹೇಳುತ್ತಾನೆ. ಈ ಮಾತು ಕೇಳಿ ದತ್ತ ತಾತನಿಗೆ ಶಾಕ್ ಆಗುತ್ತದೆ.
ಮಾಧವ್‌ನನ್ನು ನೋಡಿದ ಪತ್ರಕರ್ತ
ಇತ್ತ ಮಾಧವ್ ಮತ್ತು ತುಳಸಿ ಇಬ್ಬರೂ ಕೂಡ ಕ್ಯಾಬ್‌ನಲ್ಲಿ ಹೋಗುತ್ತಿರುತ್ತಾರೆ. ತುಳಸಿ ನಿದ್ದೆ ಹತ್ತಿ ಮಾಧವ್ ಹೆಗಲ ಮೇಲೆ ಮಲಗಿರುತ್ತಾಳೆ. ಮಾಧವ್ ತನ್ನ ಮನದ ಮಾತುಗಳನ್ನು ಹೇಳಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ. ಆದರೆ, ತುಳಸಿ ಮಲಗಿದ್ದರಿಂದ ಸುಮ್ಮನಾಗುತ್ತಾರೆ. ಸಿಗ್ನಲ್‌ನಲ್ಲಿ ಗಾಡಿ ನಿಂತಿರುವಾಗ ಪಕ್ಕದಲ್ಲಿ ಬೈಕ್‌ನಲ್ಲಿದ್ದಾತ ಮಾಧವ್ ಅವರನ್ನು ನೋಡಿ ಫೋಟೋ ತೆಗೆದುಕೊಳ್ಳುತ್ತಾನೆ. ಆತ ಪತ್ರಕರ್ತನಾಗಿರುತ್ತಾನೆ. ಈ ಸುದ್ದಿಯನ್ನು ಪೇಪರ್‌ನಲ್ಲಿ ಹಾಕಬೇಕು ಎಂದುಕೊಳ್ಳುತ್ತಾನೆ.
ಶಾರ್ವರಿ ಹೊಸ ಪ್ಲ್ಯಾನ್
ಇನ್ನು ಈ ಕಡೆ ಶಾರ್ವರಿ ಮತ್ತೆ ಅವಿ ಹಾಗೂ ಅಭಿಯನ್ನು ದೂರ ಮಾಡಿದ ಖುಷಿಯಲ್ಲಿರುತ್ತಾಳೆ. ಇದೇ ಸಂದರ್ಭದಲ್ಲಿ ಫೋನ್ ಮಾಡುವ ಪತ್ರಕರ್ತ ಬ್ಲ್ಯಾಕ್ ಮೇಲೆ ಮಾಡುತ್ತಾನೆ. ಕಾಂಟ್ರವರ್ಸಿ ಫೋಟೋ ಪಬ್ಲಿಷ್ ಮಾಡಲೇ. ಇಲ್ಲ ಹಣ ಕೊಡುತ್ತೀರಾ ಎಂದು ಕೇಳುತ್ತಾನೆ. ಫೋಟೋ ನೋಡಿದ ಶಾರ್ವರಿಗೆ ರೋಗಿ ಬಯಸಿದ್ದು, ವೈದ್ಯ ನೀಡಿದ್ದು ಹಾಲು ಅನ್ನ ಎಂಬಂತೆ ಆಗುತ್ತದೆ. ಶಾರ್ವರಿ ಇದನ್ನು ತಾನು ಹೇಳಿದಂತೆ ಪಬ್ಲಿಷ್ ಮಾಡಿದರೆ, ತಮ್ಮ ಇಡೀ ಆಫೀಸಿಗೇ ಹಣ ನೀಡುವುದಾಗಿ ಹೇಳುತ್ತಾಳೆ.

ಪೇಪರ್‌ನಲ್ಲಿ ಮಾಧವ್-ತುಳಸಿ ಫೋಟೊ
ಮನೆಗೆ ಬರುವ ಮಾಧವ್ ಬಹಳ ಖುಷಿಯಲ್ಲಿರುತ್ತಾನೆ. ತುಳಸಿ ತನ್ನ ಹೆಗಲ ಮೇಲೆ ಮಲಗಿದ್ದಳು ಎಂಬ ಖುಷಿ ಹೆಚ್ಚಾಗಿರುತ್ತದೆ. ಈ ಬಗ್ಗೆ ಮಹೇಶ್ ಬಳಿ ಹೇಳಿಕೊಂಡು ಸಂತಸದಿಂದ ಇರುತ್ತಾನೆ. ಇದೇ ವೇಳೆಗೆ ಬರುವ ಪೂರ್ಣಿಮಾ ಕೂಡ ಮಾವನ ಮುಖದಲ್ಲಿನ ಖುಷಿಯನ್ನು ನೋಡಿ ಪ್ರಶ್ನಿಸುತ್ತಾಳೆ. ತಮಾಷೆಯಾಗಿ ಇಬ್ಬರೂ ಮಾತನಾಡುತ್ತಾರೆ.
ಪೇಪರ್ ನೋಡಿದ ಪೂರ್ಣಿಮಾ
ಬೆಳಗ್ಗೆ ಎದ್ದ ಕೂಡಲೇ ಪೇಪರ್ ನೋಡುವ ಶಾರ್ವರಿ ಬೆವರುತ್ತಾಳೆ. ಪೂರ್ಣಿಮಾ ಕೈಗೆ ಪೇಪರ್ ಅನ್ನು ಕೊಡುತ್ತಾಳೆ. ಪೂರ್ಣಿಮಾ ಪೇಪರ್‌ನಲ್ಲಿ ಮಾಧವ್ ಹಾಗೂ ತುಳಸಿ ಬಗ್ಗೆ ಫೊಟೋ ಹಾಕಿ ಬರೆದ ಆರ್ಟಿಕಲ್ ನೋಡುತ್ತಾಳೆ. ಈಗ ಈ ಸುದ್ದಿ ಮಾಧವ್ ಹಾಗೂ ತುಳಸಿ ಮನೆಯಲ್ಲಿ ಕೋಲಾಹಲವನ್ನೇ ಎಬ್ಬಿಸುತ್ತದೆ ಏನೋ ಕಾದು ನೋಡಬೇಕಿದೆ.


Click it and Unblock the Notifications











