Shrirastu Shubhamasthu: ಆಸ್ಪತ್ರೆಯಲ್ಲಿರುವ ತುಳಸಿ: ರಕ್ತ ಕೊಡಲು ಒಪ್ಪುತ್ತಾನಾ ಅವಿನಾಶ್?

By ಪ್ರಿಯಾ ದೊರೆ

Article desc: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ನಡೆಯನ್ನು ಹೆಜ್ಜೆ ಹೆಜ್ಜೆಗೂ ಸಂಧ್ಯಾ ಪ್ರಶ್ನಿಸುತ್ತಿರುತ್ತಾಳೆ. ಬಹಳ ದಿನಗಳ ಬಳಿಕ ಮನೆಗೆ ಬಂದ ಸಮರ್ಥ್‌ಗೂ ಸಂಧ್ಯಾ ಈ ವಿಚಾರವಾಗಿಯೇ ಚಾಡಿ ಹೇಳುತ್ತಾಳೆ. ಮೊದಲೇ ಸಮರ್ಥ್‌ಗೆ ತುಳಸಿ ಕೆಫೆ ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಈಗ ಸಂಧ್ಯಾ, ಮಾಧವ್ ಹಾಗೂ ತುಳಸಿ ಬಗ್ಗೆ ಚಾಡಿ ಹೇಳಿದ್ದಕ್ಕೆ ಇನ್ನಷ್ಟು ಗರಂ ಆಗಿದ್ದಾನೆ.

ತಾಯಿ ಬಳಿ ಹೋಗಿ ಮಾಧವ್ ಜೊತೆಗೆ ಈ ವಯಸ್ಸಲ್ಲಿ ಮಾರ್ಕೆಟ್, ಪಿಕ್ ನಿಕ್ ಎಂದು ಸುತ್ತುವ ಅಗತ್ಯವಿಲ್ಲ ಎಂದು ಹೇಳುತ್ತಾನೆ. ಈ ಮಾತಿನಿಂದ ತುಳಸಿಗೆ ಬಹಳ ಬೇಸರವಾಗುತ್ತದೆ. ಇದೇ ಚಿಂತೆಯಲ್ಲಿ ಮನೆಯಿಂದ ಹೊರಗೆ ಹೊರಟ ತುಳಸಿಗೆ ಅಪಘಾತವಾಗುತ್ತದೆ. ಮಾಧವ್, ತುಳಸಿಯನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ತನಗೆ ಬಹಳ ಬೇಕಾದವರು. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಉಳಿಸಿ ಕೊಡಿ ಎಂದು ಮಾಧವ್ ವೈದ್ಯರ ಬಳಿ ಕೇಳಿಕೊಳ್ಳುತ್ತಾಳೆ.

Shrirastu Shubhamasthu serial 26th May Episode Written Update

ತುಳಸಿಗೆ ಅಪಘಾತವಾಗಿದ್ದು, ಮಾಧವ್ ಕೈನಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ವರ್ಷಗಳ ಬಳಿಕ ತನಗೊಬ್ಬರು ಒಳ್ಳೆಯ ಸ್ನೇಹಿತೆ ಸಿಕ್ಕಿದ್ದು, ಈಗ ಅವರಿಗೆ ಸಮಸ್ಯೆ ಆಗಿರುವುದು ಆತಂಕವನ್ನು ತಂದಿದೆ. ಇತ್ತ ಸಿರಿ, ಸಮರ್ಥ್ ಮೇಲೆ ಗರಂ ಆಗಿದ್ದಾಳೆ. ನೀನು ಅಮ್ಮನಿಗೆ ನೋವು ಮಾಡಿದ್ದಕ್ಕೆ, ಅಮ್ಮನಿಗೆ ಈ ಪರಿಸ್ಥಿತಿ ಬಂದಿದೆ. ಅಮ್ಮನಿಗೆ ಏನಾದರೂ ಆದರೆ, ನಾನಂತೂ ನಿನ್ನನ್ನು ಕ್ಷಮಿಸುವುದಿಲ್ಲ ಎಂದು ವಾರ್ನಿಂಗ್ ಕೊಡುತ್ತಾಳೆ.

ರಕ್ತಕ್ಕಾಗಿ ಹುಡುಕಾಟ

ವೈದ್ಯರು ಪೇಶಂಟ್‌ಗೆ ರಕ್ತ ಬೇಕಿದೆ. ಅದೂ ಕೂಡ ಎಬಿ ನೆಗೆಟಿವ್. ಇಲ್ಲವಾದರೆ, ತುಳಸಿ ಅವರ ಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಇದರಿಂದ ಮನೆಯವರೆಲ್ಲರಿಗೂ ಶಾಕ್ ಆಗುತ್ತದೆ. ಎಲ್ಲರೂ ರಕ್ತದ ಹುಡುಕಾಟದಲ್ಲಿ ಬಿಸಿ ಆಗಿ ಬಿಡುತ್ತಾರೆ. ಮಾಧವ್, ಪೂರ್ಣಿಗೆ ಫೋನ್ ಮಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾನೆ. ಬಳಿಕ ಅವಿಯದ್ದು ಅದೇ ಬ್ಲಡ್ ಗ್ರೂಪ್ ಸಹಾಯ ಮಾಡು ಎಂದು ಕೇಳಿಕೊಳ್ಳುತ್ತಾನೆ. ಪೂರ್ಣಿ, ಅವಿಯನ್ನು ಕೇಳುತ್ತಾಳೆ. ಇತ್ತ ಮಾಧವ್ ದೇವರ ಮುಂದೆ ನಿಂತು ತುಳಸಿಯನ್ನು ಉಳಿಸಿಕೊಡು. ಹೇಗಾದರೂ ಮಾಡಿ ನನ್ನ ಮಗ ಅವಿ ಬಂದು ರಕ್ತವನ್ನು ಕೊಡುವಂತೆ ಮಾಡು ಎಂದು ಕೇಳುತ್ತಾನೆ.

Shrirastu Shubhamasthu serial 26th May Episode Written Update


ಅಭಿ ಬಿಸಿನೆಸ್ ಹಿಂದೆ ಬಿದ್ದ ಅವಿ

ಇನ್ನು ಅಭಿ ಬಿಸಿನೆಸ್ ಐಡಿಯಾ ಕೇಳಿದ ಕಂಪನಿಯ ಬಗ್ಗೆ ಬ್ಯಾಗ್ರೌಂಡ್ ವೆರಿಫಿಕೇಷನ್ ಮಾಡಲು ಅವಿ ಮುಂದಾಗಿರುತ್ತಾನೆ. ಆಗ ಅವಿಗೆ ಆ ಕಂಪನಿ ಕೇವಲ ಐಡಿಯಾಗಳನ್ನು ಕೊಡುತ್ತದೆ ಅಷ್ಟೇ. ಹಣ ಹೂಡುವುದಿಲ್ಲ. ಯಾರೋ ಆ ಕಂಪನಿಯ ಹಿಂದೆ ನಿಂತು ಹಣ ಹೂಡುವುದಾಗಿ ಹೇಳಿಸಿರಬಹುದು ಎಂಬ ಮಾಹಿತಿ ಸಿಗುತ್ತದೆ. ಇದು ಅವಿಯ ಮನಸ್ಸನ್ನು ಕೊರೆಯುತ್ತಿರುತ್ತದೆ.

ಅಭಿ ಬಿಸಿನೆಸ್‌ಗೆ ಇನ್ವೆಸ್ಟ್ ಮಾಡಲು ಮುಂದಾಗುತ್ತಿರುವವರು ಯಾರು. ಯಾಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅವಿ ಯೋಚಿಸುತ್ತಿದ್ದಾನೆ. ಆದರೆ, ಇದರ ಹಿಂದೆ ಇರುವುದು ಶಾರ್ವರಿ ಎಂಬುದು ಗೊತ್ತಾಗುತ್ತಿಲ್ಲ.


ಅಭಿ ಹಾಗೂ ದೀಪಿಕಾ ನಡುವೆ ವೈಮನಸ್ಸು

ಇತ್ತ ಅಭಿ ಹಾಗೂ ದೀಪಿಕಾ ಮನದಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆಗಳು ಆಗುತ್ತಿವೆ. ಅಭಿಗೆ ಬಿಸಿನೆಸ್ ಮಾಡುವ ಬ್ಯುಸಿಯಲ್ಲಿದ್ದಾನೆ. ಆದರೆ, ದೀಪಿಕಾಳಿಗೆ ತನ್ನ ದೈನಂದಿನ ಯೋಚನೆಗಳ ಬಗ್ಗೆ ಅಭಿ ಬಳಿ ಹೇಳಿಕೊಳ್ಳುವ ತವಕ. ಈಗಾಗಲೇ ಒಂದು ಬಾರಿ ಅಭಿ ಬಳಿ ಬೈಯಿಸಿಕೊಂಡಿದ್ದಾಳೆ. ಈಗ ಪುನಃ ಅಭಿ ತನ್ನ ಬಗ್ಗೆ ಗಮನಿಸುತ್ತಿಲ್ಲ ಎಂದು ಕೋಪ ಮಾಡಿಕೊಂಡು ಜಗಳ ಮಾಡುತ್ತಾಳೆ.

ಅಭಿ ಕೂಡ ನೀನು ಯಾವುದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂಬ ಬಗ್ಗೆ ತಿಳಿದುಕೊ. ಇಲ್ಲದಿದ್ದರೆ, ಮುಂದೆಯೂ ಕಷ್ಟವಾಗುತ್ತದೆ ಎಂದು ಬೈಯುತ್ತಾನೆ. ಇದರಿಂದ ಇಬ್ಬರ ನಡುವೆಯೂ ಮತ್ತೆ ವೈಮನಸ್ಸು ಮೂಡುತ್ತಿದೆ.

More from Filmibeat

English summary
Shrirastu Shubhamasthu serial 26th May Episode Written Update. here is detials about Avi thinks of Abhi's business. And he tries to get information about company background. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X