Shrirastu Shubhamasthu: ಪತಿಯ ಚೇತರಿಕೆ ಕಂಡು ಶಾಕ್ ಆದ ಶಾರ್ವರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಕೆಫೆಗೆ ಬಂದು ಕೆಲಸವನ್ನು ಪ್ರಾರಂಭಿಸಿದ್ದಾಳೆ. ತುಲಸಿ ಕೆಲಸಕ್ಕೆ ಬಂದ ಮೊದಲ ದಿನವೇ ದೊಡ್ಡ ಚಾಲೆಂಜ್ ಎದುರಿಸಬೇಕಾಗಿದೆ. ಕೆಫೆಯಲ್ಲಿನ ಆಹಾರದ ರುಚಿ ಬಗ್ಗೆ ಲೇಖನ ಬರೆಯಲು ಪತ್ರಕರ್ತ ಬಂದಿದ್ದು, ಕೆಫೆಯಲ್ಲಿನ ಹೊಸ ರುಚಿಯನ್ನು ಟೇಸ್ಟ್ ಮಾಡಲು ಕೇಳಿದ್ದಾರೆ. ಇದೇ ವೇಳೆಯಲ್ಲಿ ಮಾಧವ್ ಇಲ್ಲದಿರುವುದು ಸಮಸ್ಯೆ ಅನ್ನು ತಂದೊಡ್ಡಿದೆ.

ಆದರೆ ತುಳಸಿ ಕೆಫೆ ಬಗ್ಗೆ ಕೆಟ್ಟದಾಗಿ ಬರೆಯಬಾರದು ಎಂಬ ಕಾರಣಕ್ಕೆ ತನಗೆ ತೋಚಿದ ತಿಂಡಿಯನ್ನು ಸಿದ್ಧಪಡಿಸಿ ತಂದಿದ್ದಾಳೆ. ಇದನ್ನು ತಿಂದ ಪತ್ರಕರ್ತ ನನ್ನ ವೆಬ್ ಸೈಟ್‌ನಲ್ಲಿ ನನ್ನ ರಿವ್ಯೂ ನೋಡಿ ಎಂದು ಹೇಳಿ ಹೋಗಿದ್ದಾನೆ. ವೇದಾಂತ್, ಮಾಧವ್‌ಗೆ ತುಳಸಿ ಬಗೆಗಿನ ಸಂಬಂಧದ ಬಗ್ಗೆ ಹೇಳಿದಾಗಿನಿಂದ ಮಾಧವ್ ಕಣ್ಣಿಗೆ ತುಳಸಿ ಇನ್ನಷ್ಟು ವಿಭಿನ್ನವಾಗಿ ಕಾಣಲು ಶುರುವಾಗಿದ್ದಾಳೆ.

Shrirastu Shubhamasthu serial 28th April Episode Written Update

ಮಾಧವ್ ಮನಸ್ಸಿನಲ್ಲಿ ಬೇಡದ ಆಲೋಚನೆಗಳು ಬರುತ್ತಿದ್ದು, ತಪ್ಪು ಎಂದು ತಿಳಿದಿದ್ದರೂ ಅವಾಯ್ಡ್ ಮಾಡಲು ಆಗುತ್ತಿಲ್ಲ. ಇನ್ನು ತುಳಸಿ ಮನೆಗೆ ಹೋಗಲು ತಡವಾಗಿದ್ದು, ಆಟೋ ಸಿಗದೇ ಕಾಯುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಮಾಧವ್, ತುಳಸಿಗೆ ಡ್ರಾಪ್ ಮಾಡುತ್ತಾನೆ. ತುಳಸಿ ಜೊತೆಗೆ ಇದ್ದಷ್ಟು ಸಮಯವೂ ಮಾಧವ್ ಬಹಳ ಖುಷಿಯಾಗಿರುತ್ತಾನೆ.

ಇನ್ನು ಸಂಧ್ಯಾ ಬಳಿ ಇದ್ದ ಹಣವನ್ನು ಅವರ ಮಾವ ಸುಳ್ಳು ಹೇಳಿ ಲಪಟಾಸಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಸಂಧ್ಯಾ ಜಗಳ ಮಾಡಿಕೊಂಡು ತವರು ಮನೆಗೆ ಬಂದಿದ್ದಾಳೆ. ದತ್ತ ತಾತ, ಸಂಧ್ಯಾಳನ್ನು ಮನೆಗೆ ಸೇರಿಸಿಕೊಳ್ಳದಿದ್ದಾಗ ಸಿರಿ ಒತ್ತಾಯ ಮಾಡಿ ಮನೆಯೊಳಗೆ ಬಿಟ್ಟುಕೊಂಡಿದ್ದಾಳೆ. ಅಮ್ಮ ಕೆಲಸಕ್ಕೆ ಹೋಗುತ್ತಿರುವ ವಿಚಾರವನ್ನು ಕೇಳಿದ ಸಂಧ್ಯಾಳಿಗೆ ಶಾಕ್ ಆಗಿದೆ. ಈ ಬಗ್ಗೆ ಸಿರಿ ಬಳಿ ವ್ಯಂಗ್ಯವಾಗಿ ಮಾತನಾಡಿದ್ದಾಳೆ.

ಸಿರಿ ಮಾತನಾಡಿದರೆ ತಪ್ಪಾಗುತ್ತೆ ಎಂಬ ಕಾರಣಕ್ಕೆ ಸುಮ್ಮನಾಗಿದ್ದಾಳೆ. ಸಂಧ್ಯಾ ಊಟ ಮಾಡಿದ ತಟ್ಟೆಯನ್ನೂ ತೊಳೆಯದ ಧಿಮಾಕಿನಿಂದ ಇರುವುದನ್ನು ನೋಡಿದ ದತ್ತ ತಾತ ತರಾಟೆಗೆ ತೆಗೆದುಕೊಂಡಿದ್ದಾರೆ. ಅಡುಗೆ ಮನೆಯನ್ನು ಕ್ಲೀನ್ ಮಾಡಿಸಿದ್ದಾರೆ. ಸಂಧ್ಯಾಳಿಗೆ ಮನೆ ಕ್ಲೀನ್ ಮಾಡುವುದು ಇಷ್ಟವಿಲ್ಲದಿದ್ದರೂ ಬೇರೆ ದಾರಿ ಇಲ್ಲದೇ ಕೆಲಸ ಮಾಡಿದ್ದಾಳೆ. ಇನ್ನು ದತ್ತ ತಾತನನ್ನು ತುಂಬಾ ಬದಲಾಗಿದ್ದೀರಾ. ಅಮ್ಮನನ್ನು ಕೆಲಸಕ್ಕೆ ಕಳಿಸಿದ್ದೀರಾ. ಇದೆಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾಳೆ. ಆದರೆ ದತ್ತ ತಾತ, ಸಂಧ್ಯಾಳ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ.

Shrirastu Shubhamasthu serial 28th April Episode Written Update

ಇತ್ತ ಶಾರ್ವರಿ, ಮಾಧವ್ ಹಾಗೂ ಮಕ್ಕಳನ್ನು ಇನ್ನಷ್ಟು ದೂರ ಮಾಡಿ ಮನೆಯಲ್ಲಿನ ನೆಮ್ಮದಿ ವಾತಾವರಣವನ್ನು ಕೆಡಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ಪ್ಲಾನ್ ಮಾಡುತ್ತಿದ್ದಾಳೆ. ಕೆಲ ದಾಖಲೆಗಳಿಗೆ ಸಹಿ ಹಾಕುವಂತೆ ಅವಿ, ಶಾರ್ವರಿಗೆ ಫೈಲ್ ಒಂದನ್ನು ತಂದುಕೊಟ್ಟಿದ್ದಾಳೆ. ಆದರೆ ಇದಕ್ಕೆ ಶಾರ್ವರಿ ಪತಿ ಸಹಿ ಹಾಕಿದ್ದಾನೆ. ಇದನ್ನು ನೋಡಿದ ಶಾರ್ವರಿ ಶಾಕ್ ಆಗಿದ್ದಾಳೆ.

20 ವರ್ಷದಿಂದ ಸ್ವಾಧೀನವಿಲ್ಲದೇ ಇರುವ ತನ್ನ ಪತಿ ಸಹಿ ಹಾಕಿರುವುದಕ್ಕೆ ಶಾಕ್ ಆಗಿದ್ದಾಳೆ. ಆದಷ್ಟು ತನ್ನ ಗಂಡ ಚೇತರಿಸಿಕೊಳ್ಳಬಾರದು ಎಂದು ಬಯಸಿರುವ ಶಾರ್ವರಿ ಮುಂದೇನು ಮಾಡುತ್ತಾಳೋ ಕಾದು ನೋಡಬೇಕಿದೆ.

ಇದೇ ಸಂರ್ಭದಲ್ಲಿ ಮನೆಗೆ ಇದ್ದಕ್ಕಿದ್ದ ಹಾಗೆಯೇ ದೀಪಿಕಾ ಬಂದಿದ್ದಾಳೆ. ತನ್ನ ತಂದೆ ತಾಯಿ ಇಬ್ಬರೂ ದುಬೈಗೆ ಹೋಗಿದ್ದು, ಮನೆಯಲ್ಲಿ ಒಬ್ಬಳೆ ಇರುವುದಕ್ಕಾಗದೇ ಇಲ್ಲಿ ಇರುವುದಕ್ಕಾಗಿ ಬಂದಿದ್ದಾಳೆ. ದೀಪಿಕಾ ಬಂದಿರುವುದನ್ನು ನೋಡಿ ಪೂರ್ಣಿಮಾ ಮನೆಯಲ್ಲಿ ಶಾಂತಿ ಕೆಡದಿದ್ದರೆ ಸಾಕು ಎಂದು ಆಲೋಚಿಸಿದರೆ, ದೀಪಿಕಾ ಈ ಮನೆಗೆ ಕೇಡು ಮಾಡುವ ಸಲುವಾಗಿ ಬಂದಿರುವುದಾಗಿ ಮನದಲ್ಲಿ ಮಾತನಾಡಿಕೊಳ್ಳುತ್ತಾಳೆ. ದೀಪಿಕಾ ಬೇಕಂತಲೇ ಪೂರ್ಣಿಮಾಳಿಗೆ ನೋವುಂಟು ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Shrirastu Shubhamasthu serial 28th April Episode Written Update. here is details about Sandhya did the work without wanting to clean the house. know more

English summary
Shrirastu Shubhamasthu serial 28th April Episode Written Update. here is details about Sandhya did the work without wanting to clean the house. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X