Shrirastu Shubhamasthu: ಮಾಧವ್‌ನ ಸಂಗಾತಿಯಾಗಿ ಒಪ್ಪಿಕೊಳ್ಳುತ್ತಾಳಾ ತುಳಸಿ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್, ತುಳಸಿಗೆ ಮದುವೆ ಮಾಡಲು ಗಂಡು ಹುಡುಕಿದ್ದಾನೆ. ಆದರೆ, ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳಿಲ್ಲ. ತುಳಸಿ ಮನೆಯಲ್ಲಿ ಒಬ್ಬಳೇ ಇರುವಾಗ ಆತ ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದರಿಂದ ತುಳಸಿಗೆ ಮುಜುಗರ, ಆತಂಕದ ಜೊತೆಗೆ ಕೋಪವೂ ಬಂದಿದೆ.
ಸಮರ್ಥ್ ಹಾಗೂ ಸಿರಿ ಮನೆಗೆ ಬಂದ ಕೂಡಲೇ, ತುಳಸಿ ಆತಂಕದಿಂದ ಮಾತನಾಡುತ್ತಾಳೆ. ಆದರೆ ಸಮರ್ಥ್, ಇಲ್ಲ ನಾನೇ ನಿಮಗೆ ಮದುವೆ ಮಾಡಲು ಹುಡುಗನನ್ನು ಹುಡುಕಿರುವುದು ಎಂದು ಹೇಳುತ್ತಾನೆ. ಸ್ವಂತ ಮಗನೇ ತನ್ನನ್ನು ಅರ್ಥ ಮಾಡಿಕೊಳ್ಳದೇ, ಹೀಗೆ ಮಾಡಿದನ್ನಲ್ಲ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಸಮರ್ಥ್ ಕೆನ್ನೆಗೆ ಬಾರಿಸುವ ತುಳಸಿ, ನನ್ನ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿನಗೆ ಯಾರು ಹಕ್ಕು ಕೊಟ್ಟಿದ್ದು ಎಂದು ಪ್ರಶ್ನೆ ಮಾಡುತ್ತಾಳೆ.

ತನ್ನ ಹಾಗೂ ಮಾಧವ್ ನಡುವೆ ಇರುವುದು ಶುದ್ಧವಾದ ಸ್ನೇಹ ಎಂದು ಸಮರ್ಥ್‌ಗೆ ತುಳಸಿ ಸ್ಪಷ್ಟಪಡಿಸುತ್ತಾಳೆ. ತನ್ನನ್ನು ನೋಡಲು ಬಂದಾತನಿಗೂ ಮನೆಯಿಂದ ಹೋಗುವಂತೆ ತಾಕೀತು ಮಾಡುತ್ತಾಳೆ. ಇದೆಲ್ಲವನ್ನೂ ನೋಡಿದ ಸಿರಿ ಮತ್ತು ದತ್ತ ತಾತ ಕೂಡ ತುಳಸಿಯ ಪರ ನಿಲ್ಲುತ್ತಾರೆ. ಸಮರ್ಥ್ ಬೇಸರದಿಂದ ಅಲ್ಲಿಂದ ಹೊರಡುತ್ತಾನೆ.

ಬೇಕಂತಲೇ ಕೆಫೆಗೆ ಬಂದ ಶಾರ್ವರಿ
ಇತ್ತ ಮಾಧವ್, ತುಳಸಿಯ ಬಗ್ಗೆ ಮಾತನಾಡುತ್ತಾ ಕೆಫೆಯಲ್ಲಿರುತ್ತಾನೆ. ಯಾವುದೋ ಮುಖ್ಯವಾದ ಕೆಲಸವಿರಬೇಕು ಅದಕ್ಕೆ ತುಳಸಿ ಬಂದಿಲ್ಲ ಎಂದು ಹೇಳುತ್ತಿರುತ್ತಾನೆ. ಇದೇ ಸಮಯಕ್ಕೆ ಶಾರ್ವರಿ ಕೆಫೆಗೆ ಬರುತ್ತಾಳೆ. ಶಾರ್ವರಿ ಬಂದದ್ದು, ಮಾಧವ್‌ಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಶಾರ್ವರಿಗೆ ತುಳಸಿ ಕೆಫೆಯಲ್ಲಿ ಇಲ್ಲದಿರುವುದು ಬೇಸರ ತರುತ್ತದೆ.
ಶಾರ್ವರಿಯನ್ನು ಹೊಗಳಿದ ಮಾಧವ್
ಶಾರ್ವರಿ ಕೆಫೆಗೆ ಬಂದಿದ್ದೇ ತುಳಸಿಯ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು. ಬಂದ ದಾರಿಗೆ ಸುಂಕವಿಲ್ಲದಿದ್ದರೂ ಮಾಧವ್ ಬಳಿ ಅಭಿ ಹಾಗೂ ದೀಪಿಕಾ ಮದುವೆಯ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಿ, ಮ್ಯಾನೇಜ್ ಮಾಡುತ್ತಾಳೆ. ಮಾಧವ್‌ಗೆ ಶಾರ್ವರಿ ಮೇಲೆ ಅಪಾರವಾದ ನಂಬಿಕೆ ಇರುವುದರಿಂದ ಆಕೆ ಹೇಳುವುದನ್ನೆಲ್ಲಾ ನಂಬುತ್ತಾನೆ. ನಿನ್ನಿಂದ ಮನೆಯ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ ಎಂದು ಶಾರ್ವರಿಯನ್ನು ಹೊಗಳುತ್ತಾನೆ.
ಅಮ್ಮನಿಗೆ ಸಮಾಧಾನ ಹೇಳಿದ ಸಿರಿ
ಇನ್ನು ಸಿರಿ, ತುಳಸಿಗೆ ಊಟ ಮಾಡಿಸುತ್ತಾಳೆ. ಅವಳಿಗೆ ಸಮರ್ಥ್ ಹಾಗೆಲ್ಲಾ ನಡೆದುಕೊಂಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡುತ್ತಾಳೆ. ತುಳಸಿಯೂ ತನ್ನ ಮನಸ್ಸು ತಿಳಿ ಆದ ಮೇಲೆ ಮೊದಲ ಬಾರಿಗೆ ಸಮರ್ಥ್ ಗೆ ಬೈದಿದ್ದು, ಅವನಿಗೆ ಹೊಡೆದು ಬಿಟ್ಟೆ, ನನ್ನನ್ನು ಕ್ಷಮಿಸುಬಿಡು ಸಿರಿ ಎನ್ನುತ್ತಾಳೆ. ಸಿರಿ, ಅದೆಲ್ಲಾ ಬಿಡಿ ನೀವು ಆರಾಮಾಗಿರಿ ಎಂದು ಹೇಳುವ ಸಿರಿ, ಹಾಗೊಂದು ವೇಳೆ, ಮುಂದೊಂದು ದಿನ ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರಿಗೆ ಪ್ರೀತಿ ಹುಟ್ಟಿದರೆ, ಹೇಗೆ ಎಂದು ಕೇಳುತ್ತಾಳೆ. ಜೊತೆಗೆ ನಿಮ್ಮ ಮನಸ್ಸು ಹೇಗೆ ಹೇಳುತ್ತೋ ಹಾಗೆ ಮಾಡಿ, ಈ ಸಮಾಜಕ್ಕೆ ಕಿವಿ ಕೊಡಬೇಡಿ ಎಂದು ಹೇಳುತ್ತಾಳೆ.
ತುಳಸಿಯನ್ನು ಪ್ರಶ್ನಿಸಿದ ದತ್ತ ತಾತ
ಸಿರಿಯ ಮಾತನ್ನು ಕೇಳಿ ತುಳಸಿ ಏನೂ ಹೇಳದೇ ಸುಮ್ಮನಿರುತ್ತಾಳೆ. ಮಾವನನ್ನು ಊಟಕ್ಕೆ ಕರೆಯಲು ಹೋಗುತ್ತಾಳೆ. ಆಗ ದತ್ತ ತಾತ ನಿನ್ನ ಜೊತೆಗೆ ನಾನು ಮಾತನಾಡಬೇಕು ಎಂದು ಕರೆದು ಕೂರಿಸಿಕೊಳ್ಳುತ್ತಾನೆ. ಮಾಧವ್ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳುತ್ತಾರೆ. ಆಗ ತುಳಸಿ ಸಹಜವಾಗಿಯೇ ಮಾಧವ್ ಗುಣಗಳನ್ನು ಹೊಗಳಿ ಮಾತನಾಡುತ್ತಾಳೆ. ಆದರೆ, ದತ್ತ ತಾತ ನಿನ್ನ ಸಂಗಾತಿಯಾಗಿ ಮಾಧವ್ ಬಗ್ಗೆ ನಿನ್ನ ಅಭಿಪ್ರಾಯ ಏನು ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿ ತುಳಸಿಗೆ ಶಾಕ್ ಆಗುತ್ತಾಳೆ.


Click it and Unblock the Notifications











