Shrirastu Shubhamasthu: ಪೇಪರ್ ನೋಡಿ ಮೌನವಾದ ದತ್ತ ತಾತ: ನಂದಿನಿಗೆ ಬೈದ ಸಿರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಗೋದಾವರಿ ಹಾಗೂ ಶೇಷು ತಮ್ಮ ಸಹೋದರನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ. ಕಳಿಸಲು ಇಷ್ಟವಿಲ್ಲದಿದ್ದರೂ ದತ್ತ ತಾತನಿಗೆ ಬೇರೆ ದಾರಿ ಇಲ್ಲ. ಇಬ್ಬರಿಗೂ ಸಮಾಧಾನ ಹೇಳಿ, ಕಣ್ಣೀರು ಹಾಕುತ್ತಲೇ ದತ್ತ ತಾತ ಬೀಳ್ಕೊಡುಗೆ ಕೊಟ್ಟಿದ್ದಾರೆ. ಶೇಷು ಕೈಗೆ ಹಣವಿಟ್ಟು, ಏನೇ ಇದ್ದರೂ ಫೋನ್ ಮಾಡು ಎಂದು ತಾತ ಹೇಳಿದ್ದಾರೆ.

ಅಲ್ಲಿಂದ ಹೊರಟ ಶೇಷು ಈಗ ಎಲ್ಲಿಗೆ ಹೋಗುವುದು ಎಂಬುದು ತಿಳಿಯದೇ ಅಳುತ್ತಿರುತ್ತಾನೆ. ಗೋದಾವರಿ ಬಳಿ ತನ್ನ ಸಹೋದರ ಮನೆಗೆ ಬರಬೇಡ ಎಂದ ಸತ್ಯವನ್ನು ಹೇಳುತ್ತಾನೆ. ಈಗ ಇಬ್ಬರೂ ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಇತ್ತ ಶಾರ್ವರಿ, ಮಾಧವ್ ಬಗ್ಗೆ ಪೇಪರ್‌ನಲ್ಲಿ ಬಂದಿರುವ ಸುದ್ದಿಯನ್ನು ಮನೆಯವರಿಗೆಲ್ಲಾ ತಿಳಿಯುವಂತೆ ಮಾಡಿದ್ದಾಳೆ.

Shrirastu Shubhamasthu serial 28th June Episode Written Update

ತಂದೆ ಮೇಲೆ ಅವಿಗೆ ಕೋಪ

ಪೇಪರ್ ನೋಡಿದ ಅವಿ, ದಿ ಫೇಮಸ್ ಶೆಫ್ ಮಾಧವ್ ಬಾಳಲ್ಲಿ ಸಂಗಾತಿಯ ಆಗಮನ ಎಂಬ ಹೆಡ್ಡಿಂಗ್ ನೋಡಿ ಬೇಸರ ಮಾಡಿಕೊಂಡಿದ್ದಾನೆ. ತನ್ನ ತಂದೆ ಈ ಮಟ್ಟಕ್ಕೆ ಇಳಿದಿದ್ದಾರಲ್ಲ ಎಂದು ನೊಂದು ಕೊಳ್ಳುತ್ತಾನೆ. ಅಸಹ್ಯವಾಗುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಬೈಯುತ್ತಾನೆ. ನಿಧಿ ಕೂಡ ದೊಡ್ಡಪ್ಪನ ಬಗ್ಗೆ ಹೀಯಾಳಿಸಿ ಮಾತನಾಡುತ್ತಾನೆ. ಅಭಿ ಬೇಸರ ಮಾಡಿಕೊಂಡು ಹೊರಟು ಬಿಡುತ್ತಾನೆ. ಪೂರ್ಣಿಮಾಳಿಗೆ ಮಾವ ಯಾವ ತಪ್ಪನ್ನೂ ಮಾಡಲಿಲ್ಲವಾದರೂ ಬೇರೆಯವರ ಕಣ್ಣಿಗೆ ಕೆಟ್ಟವರಾದರಲ್ಲ ಎಂಬ ದುಃಖ ತಡೆಯಲು ಆಗುತ್ತಿಲ್ಲ.

ನಂದಿನಿ ಬಾಯಿಗೆ ಬೀಗ ಹಾಕೋರಿಲ್ಲ

ಪೇಪರ್ ನೋಡಿದ ಕೂಡಲೇ ನಂದಿನಿ ಬಹಳ ಖುಷಿಯಿಂದ ಹಿಗ್ಗಿದ್ದಾಳೆ. ದತ್ತ ತಾತನ ಮನೆಗೆ ಪೇಪರ್ ತಂದು ನಾನು ಅಷ್ಟು ಹೇಳಿದರೂ ಕೇಳಲಿಲ್ಲ ನೀವೆಲ್ಲಾ. ಈಗ ಈ ಪೇಪರ್ ಮೂಲಕ ಇಡೀ ಊರಿಗೆ ಸುದ್ದಿ ಹರಡಿದೆ ನೀವೇ ನೋಡಿ ಎಂದು ಕೊಡುತ್ತಾಳೆ. ಪೇಪರ್ ನೋಡಿದ ಮೇಲೆ ಸಿರಿ, ಸಮರ್ಥ್ ಹಾಗೂ ದತ್ತ ತಾತ ಶಾಕ್ ಆಗುತ್ತಾರೆ.

ನಂದಿನಿಗೆ ಬೈದ ಸಿರಿ

ನಂದಿನಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಸಿರಿ, ನಂದಿನಿಗೆ ಬೈಯುತ್ತಾಳೆ. ನನ್ನ ಅಮ್ಮನ ಬಗ್ಗೆ ನೀನು ಮಾತನಾಡಬೇಡ. ಅವರೇನು ಅಂತ ನಮಗೆ ಗೊತ್ತಿದೆ ಎಂದು ಬೈಯುತ್ತಾಳೆ. ಸಮರ್ಥ್ ಕೂಡ ನಂದಿನಿಗೆ ಬೈದಾಗ ಅವಳು ಹೊರಟು ಹೋಗುತ್ತಾಳೆ.

Shrirastu Shubhamasthu serial 28th June Episode Written Update

ಅವಿಗೆ ಸಮಾಧಾನ ಹೇಳಿದ ತುಳಸಿ

ತುಳಸಿ ಬಸ್ ಸ್ಟಾಪ್‌ನಲ್ಲಿ ಬಸ್‌ಗಾಗಿ ಕಾಯುತ್ತಾ ಕುಳಿತಿರುತ್ತಾಳೆ. ಮಾಧವ್ ತುಳಸಿಗೆ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಬರುವಂತೆ ಮೆಸೇಜ್ ಕಳಿಸಿರುತ್ತಾನೆ. ತುಳಸಿಯನ್ನು ನೋಡಿದ ಅವಿ ಡಬ್ಬಿ ತೆಗೆದುಕೊಂಡು ಬಂದು ಮಾತನಾಡಿಸುತ್ತಾನೆ. ಅವಿ ಬೇಸರದಲ್ಲಿರುವುದನ್ನು ನೋಡಿ ಏನಾಯ್ತು ಎಂದು ಕೇಳುತ್ತಾಳೆ.

ಕಾಳಜಿಯೇ ಬೇಸರಕ್ಕೆ ಕಾರಣ

ನಮ್ಮ ಮನೆಯವರೇ ನಮಗೆ ಯಾಕೆ ಬೇಸರ ಮಾಡುತ್ತಾರೆ ಎಂದು ಅವಿ ಕೇಳುತ್ತಾನೆ. ಅದಕ್ಕೆ ತುಳಸಿ, ನಮ್ಮ ಮನೆಯವರ ಮೇಲಿನ ಕಾಳಜಿ ಬೇಸರವನ್ನು ತರುತ್ತದೆ ಎಂದು ಹೇಳುತ್ತಾಳೆ. ಅವಿಗೆ ತುಳಸಿ ಮಾತು ಕೇಳುತ್ತಾ ಅವರ ತಾಯಿಯ ನೆನಪಾಗುತ್ತದೆ. ಮತ್ತೆ ಡ್ರಾಪ್ ಮಾಡುತ್ತೇನೆ ಎಂದು ಕೇಳುತ್ತಾನೆ. ಆದರೆ, ತುಳಸಿ ಬೇಡ ಎನ್ನುತ್ತಾಳೆ. ನಾಳೆ ಇದೇ ಸಮಯಕ್ಕೆ ಇದೇ ಜಾಗಕ್ಕೆ ಬಾ, ಊಟ ತಂದುಕೊಡುತ್ತೇನೆ ಎಂದು ಹೇಳಿ ಹೊರಡುತ್ತಾಳೆ.

ಮೌನವಾಗಿ ಉಳಿದ ದತ್ತ ತಾತ

ಇನ್ನು ಪೇಪರ್‌ನಲ್ಲಿ ಬಂದ ಸುದ್ದಿ ವಿಚಾರ ತುಳಸಿ ಹಾಗೂ ಮಾಧವ್ ಇಬ್ಬರಿಗೂ ಗೊತ್ತಿರುವುದಿಲ್ಲ. ಗೊತ್ತಾದರೆ, ಏನಾಗುತ್ತದೋ ಗೊತ್ತಿಲ್ಲ. ಆದರೆ, ದತ್ತ ತಾತ ಮಾತ್ರ ಯಾವುದೇ ಕಾರಣಕ್ಕೂ ಈ ವಿಚಾರ ತುಳಸಿಗೆ ತಿಳಿಯದಂತೆ ನೋಡಿಕೊಳ್ಳಿ ಎಂದು ಸಿರಿ ಮತ್ತು ಸಮರ್ಥ್ಗೆ ಹೇಳುತ್ತಾನೆ. ಮೂರು ದಿನದಿಂದ ಆಗುತ್ತಿರುವ ಘಟನೆಗಳು ತಾತನನ್ನು ಮೌನಕ್ಕೆ ಜಾರುವಂತೆ ಮಾಡಿದೆ. ಸಮರ್ಥ್‌ಗೆ ಅಮ್ಮನ ಮೇಲೆ ಕೋಪವಿದ್ದರೂ ತೋರಿಸಿಕೊಳ್ಳದ ಪರಿಸ್ಥಿತಿಯಲ್ಲಿದ್ದಾನೆ.

More from Filmibeat

English summary
Shrirastu Shubhamasthu serial 28th June Episode Written Update. here is details aboutAfter seeing Madhav and Tulasi news in paper Datha thatha gets shocked. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X