Shrirastu Shubhamasthu: ಆಸ್ಪತ್ರೆಯಲ್ಲಿ ಉಳಿದ ಮಾಧವ್: ತುಳಸಿ ಬಗ್ಗೆ ತಿಳಿದ ಶಾರ್ವರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ಸೇರಿದ್ದಾಳೆ. ಪ್ರಜ್ಞೆ ಇಲ್ಲದೇ ಐಸಿಯುನಲ್ಲಿದ್ದಾಳೆ. ತುಳಸಿಗೆ ರಕ್ತ ಬೇಕಾಗಿದೆ. ಅವಿಯ ರಕ್ತದ ಗುಂಪು ಹಾಗೂ ತುಳಸಿಯದ್ದು ಒಂದೇ ಆಗಿದ್ದರಿಂದ ಪೂರ್ಣಿ, ಅವಿಯನ್ನು ಒಪ್ಪಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಇದರಿಂದ ಮಾಧವ್‌ಗೆ ಖುಷಿಯಾಗುತ್ತದೆ. ರಕ್ತ ನೀಡಿದ್ದಕ್ಕೆ ಸಂತೋಷ ಕೂಡ ವ್ಯಕ್ತಪಡಿಸಿ, ಅವಿಗೆ ಮಾಧವ್ ಥ್ಯಾಂಕ್ಸ್ ಹೇಳುತ್ತಾನೆ.

ಪೂರ್ಣಿಮಾ- ಮಾಧವ್, ಸಿರಿ ಗೆ ಸಮಾಧಾನ ಮಾಡಿ ಆಸ್ಪತ್ರೆಯಿಂದ ಮನೆಗೆ ಹೊರಡುತ್ತಾರೆ. ಇನ್ನು ವೈದ್ಯರು ರಕ್ತ ಸಿಕ್ಕಿದ್ದು ಒಳ್ಳೆಯದೇ ಆಗಿದೆ. ಬಹಳ ಬ್ಲಡ್ ಲಾಸ್ ಆಗಿದೆ. ಆದರೆ, ಈಗ ತುಳಸಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಇನ್ನು 12 ಗಂಟೆಯೊಳಗೆ ತುಳಸಿ ಅವರಿಗೆ ಪ್ರಜ್ಞೆ ಬಾರದೇ ಹೋದರೆ, ಪರಿಸ್ಥಿತಿ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ.

Shrirastu Shubhamasthu serial 30 May Episode Written Update

ಮಾತು ಮುಂದುವರಿಸಿದ ವೈದ್ಯರು, ಪ್ರಜ್ಞೆ ಬರದೇ ಹೋದರೆ, ಬ್ರೈನ್‌ಗೆ ಬ್ಲಡ್ ಸಪ್ಲೈ ಆಗದೇ ಹಳೆಯದೆಲ್ಲಾ ಮರೆತು ಹೋಗಬಹುದು. ಇಲ್ಲದಿದ್ದರೆ, ಕೋಮಾಗೂ ಹೋಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಗಾಬರಿಯಾಗುವ ಮನೆಯವರು ಮುಂದೆ ಹೇಗೆ ಎಂದು ಯೋಚಿಸುತ್ತಾರೆ. ಇತ್ತ ಸಮರ್ಥ್, ದತ್ತ ತಾತ ಹಾಗೂ ತುಳಸಿ ಆರೋಗ್ಯ ವಿಮೆಯ ಪ್ರೀಮಿಯಂ ಕಟ್ಟಿರುವುದಿಲ್ಲ. ಇದರಿಂದ ಈಗ ಆಸ್ಪತ್ರೆಗೆ ಒಂದೂವರೆ ಲಕ್ಷ ಹಣವನ್ನು ಕಟ್ಟಬೇಕಾಗಿದೆ. ಇದಕ್ಕೂ ಸಿರಿ, ಸಮರ್ಥ್ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ.

ಅವಿ ರಕ್ತ ನೀಡಿದ್ದಕ್ಕೆ ಪೂರ್ಣಿ ಖುಷ್

ಅವಿ ರಕ್ತ ಕೊಟ್ಟಿದ್ದಕ್ಕೆ ಪೂರ್ಣಿಮಾಗೆ ತುಂಬಾನೇ ಖುಷಿಯಾಗಿರುತ್ತದೆ. ಹೀಗಾಗಿ ಪೂರ್ಣಿಮಾ, ಅವಿಯನ್ನು ಪ್ರೀತಿಯಿಂದ ನೋಡುತ್ತಿರುತ್ತಾಳೆ. ಎಳನೀರನ್ನು ಕೊಡಿಸಿ, ಇದು ನನ್ನ ಟ್ರೀಟ್ ಎನ್ನುತ್ತಾಳೆ. ಅವಿಗೆ ಪೂರ್ಣಿಮಾ ಖುಷಿಯಾಗಿರುವುದನ್ನು ನೋಡಿ ಇನ್ನಷ್ಟು ಸಂತಸ ಪಡುತ್ತಾನೆ. ಇತ್ತ ದತ್ತ ತಾತ, ತುಳಸಿ ಬಳಿ ಹೋಗಿ ಕಣ್ಣೀರು ಹಾಕುತ್ತಾರೆ.

Shrirastu Shubhamasthu serial 30 May Episode Written Update

ನೀನಿಲ್ಲದೇ, ಹೋದರೆ, ನಾನು ಅನಾಥನಾಗುತ್ತೇನೆ ಎಂದು ಅಳುತ್ತಿರುತ್ತಾರೆ. ಹಾಗೆ ಹೊರಗೆ ಕುಳಿತು ತುಳಸಿ ಬಗ್ಗೆ ಯೋಚಿಸುತ್ತಿರುತ್ತಾನೆ. ನಾನು ಇರುವಾಗಲೇ ಮಕ್ಕಳು ತುಳಸಿಯನ್ನು ಹೀಗೆ ನೋಡುತ್ತಿದ್ದಾರೆ. ನನಗೇನಾದರೂ ಆದರೆ, ತುಳಸಿಯ ಬದುಕು ಹೇಗೆ ಎಂದು ಆತಂಕಗೊಂಡಿರುತ್ತಾನೆ. ಇದರ ಬಗ್ಗೆಯೇ ದತ್ತ ತಾತ ಯೋಚಿಸುತ್ತಾ ಕುಳಿತಿರುತ್ತಾರೆ. ಆಗ ಅಲ್ಲಿ ಮಾಧವ್ ಬರುತ್ತಾನೆ.

ತುಳಸಿಗಾಗಿ ಒದ್ದಾಡುತ್ತಿರುವ ಮಾಧವ್

ದತ್ತ ತಾತ ತನ್ನ ಆತಂಕವನ್ನು ಮಾಧವ್ ಬಳಿ ಹೇಳಿಕೊಳ್ಳುತ್ತಾನೆ. ಆಗ ಮಾಧವ್ ನೀವು ಹೆದರಬೇಡಿ. ತುಳಸಿ ಅವರಿಗೆ ತಮ್ಮನ್ನು ಮ್ಯಾನೇಜ್ ಮಾಡಿಕೊಳ್ಳುವುದು ಗೊತ್ತಿದೆ. ಹಾಗೊಂದು ವೇಳೆ, ಅವರಿಗೆ ಯಾರದಾದರೂ ಅವಶ್ಯಕತೆ ಇದೆ ಎನಿಸಿದರೆ, ನಾನು ಅವರ ಜೊತೆಗೆ ಇರುತ್ತೇನೆ ಎಂದು ಭರವಸೆ ಕೊಡುತ್ತಾನೆ. ಇದರಿಂದ ದತ್ತ ತಾತನಿಗೆ ಸಮಾಧಾನವಾಗುತ್ತದೆ.

Shrirastu Shubhamasthu serial 30 May Episode Written Update

ಇನ್ನು ಮಾಧವ್‌ಗೆ ತುಳಸಿಯದ್ದೇ ಚಿಂತೆಯಾಗಿರುತ್ತದೆ. ಹಾಗಾಗಿ ಪ್ರತಿ ಕ್ಷಣ ಒದ್ದಾಡುತ್ತಿರುತ್ತಾರೆ. ಆಸ್ಪತ್ರೆಯಲ್ಲಿ ಮಾಧವ್ ಉಳಿದುಕೊಂಡು ಉಳಿದವರನ್ನು ಮನೆಗೆ ಕಳುಹಿಸುತ್ತಾರೆ. ಸಮರ್ಥ್ ಹಾಗೂ ಮಾಧವ್ ಮಾತ್ರ ಆಸ್ಪತ್ರೆಯಲ್ಲಿ ಇರುತ್ತಾರೆ.

ಮಾಧವ್ ಬಗ್ಗೆ ತಿಳಿದುಕೊಂಡ ಶಾರ್ವರಿ

ಇನ್ನು ಶಾರ್ವರಿಗೆ ಮೆಸೇಜ್ ಬರುತ್ತದೆ. ಮಾಧವ್ ಅಕೌಂಟ್ ನಿಂದ ಒಂದೂವರೆ ಲಕ್ಷ ಹಣ ಕಟ್ ಆಗಿರುತ್ತದೆ. ಯಾಕಿರಬಹುದು ಎಂಬ ಆತಂಕ ಕಾಡುತ್ತದೆ. ಪೂರ್ಣಿಮಾ ಬಳಿ ಹೋಗಿ ಶಾರ್ವರಿ, ಮಾಧವ್ ಭಾವ ಎಲ್ಲಿ ಎಂಬುದನ್ನು ವಿಚಾರಿಸುತ್ತಾಳೆ. ಆಗ, ಪೂರ್ಣಿಮಾ ತುಳಸಿ ಅವರಿಗೆ ಆಕ್ಸಿಡೆಂಟ್ ಆಗಿದೆ. ಮಾವ ಅಲ್ಲೇ ಇದ್ದಾರೆ ಎಂದು ಹೇಳುತ್ತಾಳೆ. ಇದನ್ನು ತಿಳಿದ ಶಾರ್ವರಿ ತುಳಸಿ ಕಥೆಯನ್ನು ಮುಗಿಸುವ ಪ್ಲಾನ್ ಮಾಡಬಹುದು.

More from Filmibeat

English summary
Shrirastu Shubhamasthu serial 30 May Episode Written Update. here is details about Doctor warned for tulasi situation. And next problem to family. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X