Shrirastu Shubhamasthu: ತುಳಸಿಗೆ ಸಪೋರ್ಟಿವ್ ಆಗಿ ಇರುವ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಮತ್ತು ಸಿರಿ, ತುಳಸಿ ಹಾಗೂ ಮಾಧವ್ ಮದುವೆ ವಿಚಾರಕ್ಕೆ ಮುನಿಸಿಕೊಂಡಿದ್ದಾರೆ. ಆದರೆ, ಇಬ್ಬರ ಮುನಿಸು ಹೆಚ್ಚು ದಿನಗಳ ಕಾಲ ಇರುವಂತೆ ಕಾಣುತ್ತಿಲ್ಲ.
ದತ್ತ ತಾತ ಹಾಗೂ ರವಿ ಇಬ್ಬರೂ ಮನೆಯಲ್ಲಿ ಇಲ್ಲದಾಗ ಇವರಿಬ್ಬರೇ ಇರುವುದರಿಂದ ಕೆಲವೊಮ್ಮೆ ಒಬ್ಬರ ಮೇಲೆ ಒಬ್ಬರು ಡಿಪೆಂಡ್ ಆಗಿರುತ್ತಾರೆ.

ಇಬ್ಬರೂ ರೂಮಿನಲ್ಲಿ ಮಲಗುವಾಗಲೂ ಕೊಂಚ ಮುನಿಸು ತೋರುತ್ತಾ, ಮತ್ತೆ ಇಬ್ಬರೂ ಒಂದಾಗಲು ಮುಂದಾಗಿದ್ದಾರೆ. ಇವರಿಬ್ಬರ ಮುನಿಸು ಇನ್ನು ಹೆಚ್ಚು ಕಾಲ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿದೆ.
ತನ್ನ ಸ್ನೇಹದ ಬಗ್ಗೆ ಮಾತನಾಡಿದ ತುಳಸಿ
ತುಳಸಿ ಮದುವೆಯಾದ ಮೇಲೆ ಮೊದಲ ಬಾರಿಗೆ ಮುಕ್ತವಾಗಿ ಮಾಧವ್ ಬಳಿ ಮಾತನಾಡುತ್ತಾಳೆ. ಅಭಿ ಆತ್ಮಹತ್ಯೆಗೆ ಪ್ರಯತ್ನಿಸಿದ ಕಾರಣ ಸ್ನೇಹಿತೆಯಾಗಿ ಮಾಧವ್‌ಗೆ ಸಮಾಧಾನ ಮಾಡಿರುತ್ತಾಳೆ. ಇನ್ನು ಮಾಧವ್ ಹಾಗೂ ತುಳಸಿ ಇಬ್ಬರೇ ರೂಮಿನಲ್ಲಿದ್ದಾಗ ತುಳಸಿ ತನ್ನ ಭಾವನೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಹೇಳುತ್ತಾಳೆ. ಇದರ ಜೊತೆಗೆ ತನ್ನ ಮಾವನಿಗೆ ಹುಷಾರಿಲ್ಲ ಎಂಬ ವಿಚಾರ ಕೇಳಿದ್ದರಿಂದ ಬೇರೆ ದಾರಿ ಇಲ್ಲದೇ ಈ ಮದುವೆ ಆಗಬೇಕಾಯ್ತು. ನನಗೆ ಇದೆಲ್ಲಾ ಬೇಕಿರಲಿಲ್ಲ. ಈಗಲೂ ಹಾಗೂ ಇನ್ನು ಮುಂದೆಯೂ ಕೂಡ ತನ್ನ ಮನದಲ್ಲಿ ಮಾಧವ್ ಬಗ್ಗೆ ಸ್ನೇಹ ಬಿಟ್ಟು ಬೇರೆ ಯಾವ ಭಾವನೆಗಳು ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ.

ಮಾಧವ್ ಬಳಿ ಕ್ಷಮೆ ಕೇಳಿದ ತುಳಸಿ
ನಿಮಗೆ ನನ್ನ ಮೇಲೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂಬುದನ್ನು ನೀವೇ ಹೇಳಿದ್ದೀರಾ. ಅದಕ್ಕೆ ನನ್ನಿಂದ ನಿರಾಸೆ ಆಗಿದ್ದರೆ ಕ್ಷಮಿಸಿ ಎಂದು ಹೇಳುತ್ತಾಳೆ. ಮಾಧವ್ ಕೂಡ ತುಳಸಿ ಮನಸ್ಥಿತಿ ಅರ್ಥ ಮಾಡಿಕೊಳ್ಳುತ್ತಾನೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ
ಇನ್ನು ದತ್ತ ತಾತನ ಮನೆಯಲ್ಲಿ ದತ್ತ ತಾತನಿಗೆ ತುಳಸಿಯದ್ದೇ ಚಿಂತೆಯಾಗಿರುತ್ತದೆ. ಶಾರ್ವರಿ ಮಾತನಾಡಿದ ಮಾತುಗಳು ದತ್ತ ತಾತನನ್ನು ಕಾಡುತ್ತಿರುತ್ತದೆ. ರವಿ ದತ್ತ ತಾತನಿಗೆ ಸಮಾಧಾನ ಮಾಡುತ್ತಾರೆ. ಬಳಿಕ ದತ್ತ ತಾತನ ಮನೆಯಲ್ಲಿ ವರಮಹಾಲಕ್ಷೀ ಹಬ್ಬಕ್ಕೆ ಜೋರಾಗಿಯೇ ತಯಾರಿ ನಡೆಯುತ್ತಿರುತ್ತದೆ. ಎಲ್ಲರೂ ಖುಷಿಯಾಗಿರುತ್ತಾರೆ. ಆದರೆ ಈ ವಿಚಾರಗಳನ್ನು ನೋಡಿ ಸಮರ್ಥ್‌ಗೆ ಕೋಪ ಬರುತ್ತದೆ. ಇದೆಲ್ಲಾ ಸರಿ ಇಲ್ಲ ಎಂದು ಬೈಯುತ್ತಾನೆ. ದತ್ತ ತಾತ ಖಡಾಖಂಡಿತವಾಗಿ ಇಷ್ಟವಿಲ್ಲದವರು ಇರೋದು ಬೇಡ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಮರ್ಥ್‌ಗೆ ಬೇಸರವಾಗುತ್ತದೆ. ಹಾಗಾಗಿ ಸರಿ ಇರುವುದು ಬೇಡ ಎಂದು ಹೊರಡುತ್ತಾನೆ. ಅಷ್ಟರಲ್ಲಿ ಸಿರಿ ಬರುತ್ತಾಳೆ.
ತುಳಸಿ ಖುಷಿಗಾಗಿ ಮಿಡಿದ ಮಾಧವ್
ಇನ್ನು ತುಳಸಿಗೆ ಗೊಂದಲ ಆಗಬಾರದು ಎಂದು ಮಾಧವ್ ಬಚ್ಚಲು ಮನೆಯಲ್ಲಿ ತಣ್ಣೀರು, ಬಿಸಿ ನೀರು ಎಂದು ಬೋರ್ಡ್ ಬರೆದಿರುತ್ತಾನೆ. ದೇವರ ಮನೆಯಲ್ಲಿ ತುಳಸಿಗೆ ಕಿರಿಕಿರಿ ಆಗಬಾರದು ಎಂದು ಗಣೇಶನ ವಿಗ್ರಹವನ್ನು ಇಟ್ಟು ದೇವರ ಪೂಜೆಗೆ ರೂಮ್‌ನಲ್ಲೇ ಸಿದ್ಧ ಮಾಡಿರುತ್ತಾನೆ. ಇದನ್ನೆಲ್ಲಾ ನೋಡಿ ತುಳಸಿಗೆ ಖುಷಿಯಾಗುತ್ತದೆ. ಮನಸಾರೆ ನೆಮ್ಮದಿಯಾಗಿ ತುಳಸಿ ಪೂಜೆ ಮಾಡುತ್ತಾಳೆ.
ಅಡುಗೆ ಮನೆಯಲ್ಲಿ ತುಳಸಿ
ತುಳಸಿ ಪೂಜೆ ಮಾಡಿ ಅಡುಗೆ ಮನೆಗೆ ಹೋಗುತ್ತಾಳೆ. ಹಬ್ಬಕ್ಕೆಂದು ತಿಂಡಿಗೆ ತಯಾರಿ ಮಾಡುತ್ತಿರುತ್ತಾಳೆ. ತುಳಸಿ ಕೆಲಸ ಮಾಡುವುದನ್ನು ನೋಡಿದ ಪಾಪಮ್ಮ ಎಷ್ಟು ಒಳ್ಳೆಯವರು ಎಂದು ಮನದಲ್ಲೇ ಮಾತನಾಡಿಕೊಳ್ಳುತ್ತಿರುತ್ತಾಳೆ. ಇದೇ ವೇಳೆಗೆ ಶಾರ್ವರಿ ಕೂಡ ಅಡುಗೆ ಮನೆಗೆ ಬರುತ್ತಾಳೆ. ಇನ್ನು ತುಳಸಿಗೆ ಶಾರ್ವರಿ ಏನು ಹೇಳುತ್ತಾಳೋ ಗೊತ್ತಿಲ್ಲ.


Click it and Unblock the Notifications











