Shrirastu Shubhamasthu: ಮಾಧವ್ ಮನೆಗೆ ಬಂದ ಜನಾರ್ಧನ್: ಮದುವೆ ಮಾತುಕತೆ ಆರಂಭ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿ ಮತ್ತು ದೀಪಿಕಾ ಪ್ರೀತಿ ಮಾಡುತ್ತಿದ್ದಾರೆ. ಆದರೆ, ದೀಪಿಕಾ ತಂದೆ ಜನಾರ್ಧನ್, ಅವಿ ಅವರ ಬಿಸಿನೆಸ್ ಎದುರಾಳಿ. ಹೀಗಾಗಿ ಅವಿ ಈ ಸಂಬಂಧ ಬೇಡ ಎಂದು ಹೇಳಿರುತ್ತಾನೆ.

ಇದೇ ಸಂದರ್ಭವನ್ನೇ ಬಳಸಿಕೊಂಡ ಶಾರ್ವರಿ, ಅಣ್ಣ ತಮ್ಮನನ್ನು ಬೇರೆ ಮಾಡಲು ಮುಂದಾಗಿದ್ದಾಳೆ. ಅವಿ ಬಳಿ ಅಭಿಯನ್ನು ಬೈಯುತ್ತಾ, ಅಭಿ ಬಳಿ ಹೋಗಿ ಆತನ ಪ್ರೀತಿಯನ್ನು ಸಪೋರ್ಟ್ ಮಾಡುತ್ತಿದ್ದಾಳೆ.

ಇದರಿಂದ ಇಬ್ಬರ ನಡುವೆಯೂ ದೊಡ್ಡ ಗ್ಯಾಪ್ ಶುರುವಾಗಿದೆ. ಅಭಿ ಹಾಗೂ ಅವಿ ಅಪಾರ್ಥ ಮಾಡಿಕೊಂಡು ಇಬ್ಬರೂ ಮಾತನಾಡುತ್ತಿಲ್ಲ. ಶಾರ್ವರಿ ಇಬ್ಬರ ಮಧ್ಯೆ ದೊಡ್ಡ ಗೋಡೆಯಾಗಿದ್ದಾಳೆ.

ಅವಿ ನಿರ್ಧಾರದಿಂದ ಕಂಗೆಟ್ಟ ಅಭಿ

ಅವಿ ನಿರ್ಧಾರದಿಂದ ಕಂಗೆಟ್ಟ ಅಭಿ

ಅಭಿಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಆಸೆ. ಹಾಗಾಗಿ ಅಭಿ, ದೀಪಿಕಾ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಪೂರ್ಣಿಮಾ ಫೋನ್ ಮಾಡಿ ಕರೆದರೂ ಬರುವುದಿಲ್ಲ. ಅವಿ ತನ್ನ ಜೊತೆಗೆ ಮಾತನಾಡಲಿ ಎಂದು ಬಯಸುತ್ತಿದ್ದಾನೆ. ಆದರೆ, ಅವಿ ಅನ್ನು ಶಾರ್ವರಿ ಕಂಟ್ರೋಲ್ ಮಾಡುತ್ತಿದ್ದಾಳೆ. ಇದು ಯಾರಿಗೂ ಅರ್ಥವಾಗುತ್ತಿಲ್ಲ. ಇನ್ನು ಮನೆಯಲ್ಲಿ ನಡೆಯುತ್ತಿರುವ ಯಾವ ಘಟನೆಯ ಬಗ್ಗೆಯೂ ಮಾಧವ್‌ಗೆ ಗೊತ್ತಿಲ್ಲ. ಪೂರ್ಣಿಮಾ ಹೇಳಲು ಬಯಸಿದರೂ ಶಾರ್ವರಿ ಅವಕಾಶ ಮಾಡಿಕೊಡುತ್ತಿಲ್ಲ.

ದೀಪಿಕಾ ಮನೆಗೆ ಹೋದ ಪೂರ್ಣಿಮಾ

ದೀಪಿಕಾ ಮನೆಗೆ ಹೋದ ಪೂರ್ಣಿಮಾ

ಪೂರ್ಣಿಮಾ ಇದು ಹೀಗೆ ಬಿಟ್ಟರೆ ದೊಡ್ಡದಾಗುತ್ತದೆ. ಆದಷ್ಟು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಪೂರ್ಣಿಮಾ, ಅಭಿ ಇರುವ ಕಡೆಗೆ ಹೋಗುತ್ತಾಳೆ. ದೀಪಿಕಾ ಮನೆಗೆ ಹೋಗುವಾಗ ಪಾಪಮ್ಮ, ಅಲ್ಲೇನಾದರೂ ಬೇಸರವಾದರೆ, ನೊಂದುಕೊಳ್ಳಬೇಡ ಎಂದು ಎಚ್ಚರಿಸಿ ಕಳಿಸುತ್ತಾಳೆ. ಪೂರ್ಣಿಮಾ, ಜನಾರ್ಧನ್ ಮನೆಗೆ ಹೋದಾಗ ಎಲ್ಲರೂ ಅಲ್ಲೇ ಇರುತ್ತಾರೆ. ಎಲ್ಲರ ಎದುರಿಗೆ ಪೂರ್ಣಿಮಾ, ಅಭಿ ಅನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ. ಮನೆಗೆ ಬಾ ಎಂದು ಕರೆಯುತ್ತಾಳೆ. ಆದರೆ, ಅಭಿ ಮನೆಗೆ ಬರಲು ನಿರಾಕರಿಸುತ್ತಾನೆ.

ಕಂಡೀಷನ್ ಹಾಕಿದ ಜನಾರ್ಧನ್

ಕಂಡೀಷನ್ ಹಾಕಿದ ಜನಾರ್ಧನ್

ಅಭಿ ಬರುವುದಿಲ್ಲ ಎಂದು ಹೇಳಿದರೂ ಜನಾರ್ಧನ್ ಕಂಡೀಷನ್ ಹಾಕುತ್ತಾನೆ. ಅಭಿ ಮನೆಗೆ ಬರುತ್ತಾನೆ. ನಾವೇ ಅವನನ್ನು ಕರೆದುಕೊಂಡು ಬರುತ್ತೇವೆ. ಆದರೆ, ನಾವು ಬಂದಾಗ ಅವಿ ಹಾಗೂ ಮಾಧವ್ ನಮಗೆ ಗೌರವ ಕೊಡಬೇಕು ಎಂದು ಹೇಳುತ್ತಾನೆ. ಈ ಕಂಡೀಷನ್‌ಗೆ ಪೂರ್ಣಿಮಾ ಒಪ್ಪುತ್ತಾಳೆ. ಇನ್ನು ಜನಾರ್ಧನ್ ಮನೆಗೆ ಬರುವ ಹೊತ್ತಿಗೆ ಮಾಧವ್ ಕೆಲಸವಿದೆ ಎಂದು ಹೊರಟು ಬಿಡುತ್ತಾನೆ. ಪೂರ್ಣಿಮಾ ಅವಿಗೆ ಇರುವ ವಿಚಾರವನ್ನು ಹೇಳುತ್ತಾಳೆ. ಜನಾರ್ಧನ್ ಮನೆಗೆ ಬರುತ್ತಾನೆ. ಬಂದವನೇ ಮದುವೆ ಮಾತುಕತೆಯನ್ನು ಶುರು ಮಾಡುತ್ತಾನೆ. ಇದರಿಂದ ಪೂರ್ಣಿಮಾ ಕನ್ಫ್ಯೂಸ್ ಆಗುತ್ತಾಳೆ.

ಮಾಧವ್ ಮನೆ ರಣರಂಗವಾಗುತ್ತಾ..?

ಮಾಧವ್ ಮನೆ ರಣರಂಗವಾಗುತ್ತಾ..?

ಇತ್ತ ನಂದಿನಿ, ತುಳಸಿ ಜೊತೆಗೆ ಜಗಳವಾಡಿದ್ದರೂ ಸಮರ್ಥ್ ಜೊತೆಗೆ ಹತ್ತಿರವಾಗುತ್ತಿದ್ದಾಳೆ. ಈ ಮೂಲಕ ಸಿರಿ ಮತ್ತು ಸಮರ್ಥ್ ಅನ್ನು ಬೇರೆ ಮಾಡುವುದೇ ನಂದಿನಿ ಉದ್ದೇಶ. ತುಳಸಿ ಸಂಸಾರದಲ್ಲಿ ಹುಳಿ ಹಿಂಡಲು ನಂದಿನಿ ಮುಂದಾಗಿದ್ದಾಳೆ. ಇಂದು ಸಮರ್ಥ್ ಜೊತೆಗೆ ಬೈಕ್‌ನಲ್ಲಿ ಡ್ರಾಪ್ ತೆಗೆದುಕೊಳ್ಳುತ್ತಾಳೆ. ಆದರೆ, ಸಿರಿ ಇದನ್ನು ಹೇಗೆ ತೆಗೆದುಕೊಳ್ಳುತ್ತಾಳೋ ಗೊತ್ತಿಲ್ಲ. ಇನ್ನು ಮಾಧವ್‌ಗೆ ತನ್ನ ಮನೆಯಲ್ಲಿ ನಡೆಯುತ್ತಿರುವ ಯಾವ ವಿಚಾರವೂ ಗೊತ್ತಿಲ್ಲ. ಗೊತ್ತಾದರೆ, ಮಾಧವ್ ಕೂಡ ಹೇಗೆ ರಿಯಾಕ್ಟ್ ಮಾಡುತ್ತಾನೋ ಎಂದ ಕಾದು ನೋಡಬೇಕಿದೆ.

More from Filmibeat

English summary
Shrirastu Shubhamasthu serial 7th March Episode Written Update. Janardhan comes to madhav house to speak about abhi and deepika marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X