ಅಪ್ಪ ಹೇಳಿದ ಮೇಲೆ ಪ್ರಪೋಸ್ ಮಾಡಿ ಮದುವೆಯಾದ ನಟಿ ಇವರೇ ನೋಡಿ..
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಯಾವಾಗಲೂ ಹಣದ ಮೇಲಿನ ಆಸೆಗೆ, ಸಂಬಂಧಗಳನ್ನು ಬಿಟ್ಟುಕೊಡುವ ಸದಾ ಸುಳ್ಳು ಹೇಳುವ ಸಂಧ್ಯಾ ಕಂಡರೆ ವೀಕ್ಷರಿಗೆ ಬೇಸರವಾಗುತ್ತದೆ.
ದುಡ್ಡಿಗೋಸ್ಕರ ಹೀಗೂ ಮಾಡುತ್ತಾರಾ? ನಾಚಿಕೆ ಮಾನ ಮರಿಯಾದೆ ಬಿಟ್ಟು ಬದುಕುವ ಜನರು ಇದ್ದಾರಾ? ಎಂದು ಆಶ್ಚರ್ಯ ಪಡುವಂತೆ ನಟಿ ದೀಪಾ ಕಟ್ಟೆ ನಟಿಸಿ ತೋರಿಸಿದ್ದಾರೆ.

ಸಂಧ್ಯಾ ಪಾತ್ರ ಮಾಡುತ್ತಿರುವ ನಟಿ ದೀಪಾ ಕಟ್ಟೆ ಅವರು ರಿಯಲ್ ಲೈಫ್ ಎಷ್ಟು ಸುಂದರವಾಗಿದೆ ಗೊತ್ತಾ..? ಡೆಡಿಕೇಟೆಡ್ ಆಗಿ ಕೆಲಸ ಮಾಡುವ ನಟಿ ಬಗ್ಗೆ ಈ ಮಾಹಿತಿಗಳನ್ನು ನೀವು ತಿಳಿದುಕೊಳ್ಳಿ.
ದೀಪಾ ಕಟ್ಟೆ ಧಾರಾವಾಹಿಗಳು
ನಟಿ ದೀಪಾ ಕಟ್ಟೆ ಅವರು ಸಾಕಷ್ಟು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. 'ಮಿಥುನ ರಾಶಿ', 'ಹಿಟ್ಲರ್ ಕಲ್ಯಾಣ', 'ಧ್ರುವ ನಕ್ಷತ್ರ', 'ಜೀವ ಹೂವಾಗಿದೆ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಿಥುನ ರಾಶಿ' ಧಾರಾವಾಹಿಯಲ್ಲಿ ಮಿಥುನ್ ಚಿಕ್ಕಪ್ಪನ ಮಗಳು ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಶ್ವೇತಾ ಪಾತ್ರಕ್ಕೆ ಬಣ್ಣ ಹಚ್ಚಿದರು. 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಶಿಲ್ಪಾ ರವಿ ಬದಲು ನಾಯಕಿ ಮಧುಮಿತ ಪಾತ್ರಕ್ಕೆ ಜೀವ ತುಂಬಿದರು. ಇನ್ನು ಧ್ರುವ ನಕ್ಷತ್ರ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಇನ್ನು 'ದಿಯಾ' ಚಿತ್ರದಲ್ಲಿ ನಾಯಕಿ ದಿಯಾ ಸ್ವರೂಪ್ ಚಿಕ್ಕಪ್ಪನ ಮಗಳು ಪಾತ್ರದಲ್ಲೂ ದೀಪಾ ಕಟ್ಟೆ ಮಿಂಚಿದ್ದಾರೆ.
ಓಡಿ ಹೋದವಳು!
ಇದೀಗ ದೀಪಾ ಕಟ್ಟೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಧ್ಯಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಇದರಲ್ಲಿ ದೀಪಾ ಕಟ್ಟೆ ಅವರದ್ದು ನೆಗೆಟಿವ್ ರೋಲ್ ಆಗಿದೆ. ಧಾರಾವಾಹಿಯಲ್ಲಿ ತಾತ ಇವಳನ್ನು ಓಡಿ ಹೋದವಳು ಎಂದು ಕರೆಯುತ್ತಿದ್ದು, ಇದೇ ಹೆಸರಿನಲ್ಲಿ ಫೇಮಸ್ ಆಗಿದ್ದಾರೆ.
ಎಂಎನ್‌ಸಿಯಲ್ಲಿದ್ದುಕೊಂಡೇ ನಟನೆ
ಇನ್ನು ನಟಿ ದೀಪಾ ಉಜಿರೆಯಲ್ಲಿ ಓದಿ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನ ಎಂಎನ್‌ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕೆಗೆ ನಟನೆ ಮೇಲಿನ ವ್ಯಾಮೋಹ, ಕೆಲಸದಲ್ಲಿನ ಆಸಕ್ತಿಯನ್ನು ಕ್ಷಣ ಕ್ಷಣಕ್ಕೂ ಕುಗ್ಗಿಸುತ್ತಾ ಬಂದಿತ್ತು. ಇನ್ನು ಕಂಪ್ಯೂಟರ್ ಮುಂದೆ ಕುಳಿತರೆ ಆಗದು ಎಂದು ಸ್ಟೇಜ್ ಹತ್ತಲೇಬೇಕು ಎಂದು ತೀರ್ಮಾನಿಸಿ ಎರಡು ದೋಣಿಯ ಮೇಲೆ ಕಾಲಿಟ್ಟರು. ಅಭಿನಯ ತರಂಗದಲ್ಲಿ ಒಂದು ವರ್ಷಗಳ ಕಾಲ ಡಿಪ್ಲೊಮಾ ಕೋರ್ಸ್ ಮಾಡಿದರು. ರಂಗಭೂಮಿಯಲ್ಲಿ ಇದ್ದುಕೊಂಡು, ಕಂಪನಿಯಲ್ಲೂ ಕೆಲಸ ಮಾಡುತ್ತಿದ್ದರು.
ಅಪ್ಪನೇ ಪ್ರಪೋಸ್ ಮಾಡಲು ಹೇಳಿದ್ದು
ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟು, ಬಳಿ 'ಶಾಂತಂ ಪಾಪಂ'ನಲ್ಲಿ ನಟಿಸಿದರು. ಬಳಿಕ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ಮುಂದಾದರು. ಧಾರಾವಾಹಿಯಲ್ಲಿ ನಟಿಸುವಾಗಲೂ, ಶೂಟಿಂಗ್ ಮುಗಿಸಿ ದೀಪಾ ಸೀದಾ ಕಂಪನಿಗೆ ಹೋಗಿ ಅಲ್ಲೂ ಕೆಲಸ ಮಾಡುತ್ತಿದ್ದರು. ಬಹಳ ಡೆಡಿಕೇಟೆಡ್ ಆಗಿ ಆಸೆಯನ್ನು ಪೂರೈಸಿಕೊಳ್ಳುವುದರ ಜೊತೆಗೆ ವೃತ್ತಿಯನ್ನು ಬಿಡಲಿಲ್ಲ. ಕಳೆದ 5-6 ತಿಂಗಳ ಹಿಂದೆ ಮದುವೆಯಾದ ನಟಿ ದೀಪಾ ಕಟ್ಟೆ , ಹಲವು ವರ್ಷಗಳ ಗೆಳೆಯ ರಕ್ಷಿತ್ ಜೊತೆ ವಿವಾಹವಾಗಿದ್ದಾರೆ. ಮದುವೆಗೆ ಮೊದಲ ಹೆಜ್ಜೆ ಇಟ್ಟಿದ್ದೆ ದೀಪಾಳ ತಂದೆ. ರಕ್ಷಿತ್ ಪರಿಚಯವಿದ್ದ ದೀಪಾ ತಂದೆ ಒಂದು ದಿನ ಇದ್ದಕ್ಕಿದ್ದ ಹಾಗೆ ಮಗಳಿಗೆ ಫೋನ್ ಮಾಡಿದ್ದಾರೆ. ಮಗಳಿಗೆ ರಕ್ಷಿತ್‌ಗೆ ನೀನು ಪ್ರಪೋಸ್ ಮಾಡಬಹುದು. ನಮ್ಮ ಮನೆಗೆ ಒಳ್ಳೆಯ ಸಂಬಂಧ ಎಂದಿದ್ದಾರೆ. ಅಪ್ಪ ಹೇಳಿದಂತೆ ಕೇಳಿದ ದೀಪಾ ಗೆಳೆಯನ ಜೊತೆಗೆ ಸಪ್ತಪದಿ ತುಳಿದು ದಾಂಪತ್ಯ ಬದುಕಿನಲ್ಲಿ ಸುಖವಾಗಿದ್ದಾರೆ.

ವಿಧಿಯಾಟದಿಂದ ಒಂದಾದ ಜೋಡಿ
ರಕ್ಷಿತ್ ಮತ್ತು ದೀಪಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು, ಒಂದೇ ಗುಂಪಿನಲ್ಲಿದ್ದವರು. ಅಚನಾಕ್ ಆಗಿ ಇಬ್ಬರೂ ಕೂಡ ಒಂದೇ ಕಂಪನಿಗೆ ಆಯ್ಕೆಯಾದರೂ, ಒಂದೇ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡಿದ್ದರು. ವಿಧಿಯೇ ನಮ್ಮಿಬ್ಬರನ್ನು ಪದೇ ಪದೇ ಒಟ್ಟಿಗೆ ಸೇರಿಸಿತ್ತು. ಕೊನೆಗೆ ನಾವು ಮದುವೆಯಾಗಿದ್ದೇವೆ ಎಂದು ದೀಪಾ ಹೇಳಿಕೊಂಡಿದ್ದಾರೆ.


Click it and Unblock the Notifications











