Lavanya: ನಟಿ ಲಾವಣ್ಯಗೆ ಬ್ರೋ ಆಗಿದ್ದವರು ಬಾಳ ಸಂಗಾತಿಯಾಗಿದ್ದು ಹೇಗೆ..?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಾಲ್ಕು ತಿಂಗಳ ಹಿಂದಷ್ಟೇ ಪ್ರಾರಂಭವಾದ ಧಾರಾವಾಹಿ. ಈ ಧಾರಾವಾಹಿಯ ಕತೆ ವಿಭಿನ್ನವಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ.

ಸದಾ ನಿಸ್ವಾರ್ಥದಿಂದ ಯೋಚಿಸುವ ಅತ್ತೆಯನ್ನು ಸೊಸೆ ಬದಲಾಯಿಸುವುದೇ ಧಾರಾವಾಹಿ ಕಥೆಯ ಎಳೆ ಆಗಿದೆ. ಈ ಧಾರಾವಾಹಿಯಲ್ಲಿನ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿದೆ.

ದತ್ತ ತಾತ, ತುಳಸಿ, ಮಾಧವ್ ಸೇರಿದಂತೆ ಎಲ್ಲಾ ಪಾತ್ರಗಳು ಅದ್ಭುತವಾಗಿ ನಟಿಸಿವೆ. ಮಾಧವ್ ಪಾತ್ರದ ಸೊಸೆಯಾಗಿ ಕಾಣಿಸಿಕೊಂಡಿರುವ ನಟಿಯೇ ಲಾವಣ್ಯ. ಈಗ ನಾವು ಇವರ ಮದುವೆಯ ಕಥೆಯನ್ನು ತಿಳಿಯೋಣ ಬನ್ನಿ.

ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ

ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ

ನಟಿ ಲಾವಣ್ಯಗೆ ಬಾಲ್ಯದಿಂದಲೂ ನೃತ್ಯದ ಮೇಲೆ ಹೆಚ್ಚು ಒಲವು. ಆಕಸ್ಮಿಕವಾಗಿ ಕಿರುತೆರೆಗೆ ಬಂದರು. ಇಲ್ಲೇ ಬದುಕನ್ನು ಕಂಡುಕೊಂಡ ಲಾವಣ್ಯ ಜೀವನ ಸಂಗಾತಿಯನ್ನೂ ಇಲ್ಲೇ ಹುಡುಕಿಕೊಂಡಿದ್ದಾರೆ. 'ರಾಧಾರಮಣ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾವಣ್ಯ ಅವರು ಬಣ್ಣ ಹಚ್ಚಿದರು. ಬಳಿಕ 'ರಾಜಾ ರಾಣಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಸಂಘರ್ಷ' ಎಂಬ ಧಾರಾವಾಹಿಯಲ್ಲಿ ನಟಿಸಿದರು. ಹೀಗೆ ನಟನೆಯನ್ನು ಮುಂದುವರಿಸಿ, 'ದಾಸ ಪುರಂದರ' ಎಂಬ ಧಾರಾವಾಹಿಯಲ್ಲೂ ನಟಿಸಿದರು. ಸದ್ಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ.

ಬ್ರೋ ಎಂದು ಶುರುವಾದ ಪರಿಚಯ

ಬ್ರೋ ಎಂದು ಶುರುವಾದ ಪರಿಚಯ

ಕಳೆದ ವರ್ಷ ಲಾವಣ್ಯ ಅವರು ಶಶಿಧರ್ ಹೆಗ್ಡೆ ಅವರೊಂದಿಗೆ ಸಪ್ತಪದಿಯನ್ನು ತುಳಿದಿದರು. ಶಶಿಧರ್ ಹೆಗ್ಡೆ ಮತ್ತು ಲಾವಣ್ಯ ಇಬ್ಬರೂ 'ರಾಜಾ-ರಾಣಿ' ಧಾರಾವಾಹಿಯಲ್ಲಿ ಪರಿಚಯವಾಗಿ ನಂತರ ಪ್ರೀತಿಸಲು ಶುರು ಮಾಡಿದರು. 'ರಾಜ-ರಾಣಿ' ಧಾರಾವಾಹಿಯಲ್ಲಿ ಪ್ರಮುಖ ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, 'ಸಹವಾಸ ದೋಷ' ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. 'ರಾಜಾ-ರಾಣಿ' ಧಾರಾವಾಹಿಯಲ್ಲಿ ಶಶಿ ಅವರನ್ನು ಲಾವಣ್ಯ ಅವರು ಬ್ರೋ ಎಂದು ಕರೆಯುತ್ತಿದ್ದರಂತೆ. ಬ್ರೋ ಈಗ ಹಬ್ಬಿ ಆಗಿದ್ದಾರೆ.

ಮದುವೆಗೆ ಅಡ್ಡಿಯಾದ ಕೊರೊನಾ

ಮದುವೆಗೆ ಅಡ್ಡಿಯಾದ ಕೊರೊನಾ

ಲಾವಣ್ಯ ಹಾಗೂ ಶಶಿಧರ್ ಇಬ್ಬರು 'ರಾಜಾ-ರಾಣಿ' ಧಾರಾವಾಹಿ ಮೂಲಕ ಒಳ್ಳೆಯ ಸ್ನೇಹಿತರಾಗಿದ್ದರಂತೆ. ಇಬ್ಬರು ಒಟ್ಟಿಗೆ ಪ್ರವಾಸ ಕೂಡ ಕೈಗೊಳ್ಳುತ್ತಿದ್ದರಂತೆ. ಶಶಿ ಅವರು ಲಾವಣ್ಯ ಅವರನ್ನು ಪ್ರೀತಿಸುತ್ತಿದ್ದರೂ ಈ ವಿಚಾರವನ್ನು ಹೇಳೇ ಇರಲಿಲ್ಲ. ಪ್ರಪೋಸ್ ಮಾಡಿದಾಗ ಲಾವಣ್ಯ ಸಮಯ ತೆಗೆದುಕೊಂಡರಂತೆ. ಆದರೆ, ಶಶಿ ಅವರು ನೇರವಾಗಿ ಲಾವಣ್ಯ ಪೋಷಕರ ಜೊತೆಗೆ ಮಾತನಾಡಿದರಂತೆ. ಎರಡೂ ಕುಟುಂಬಗಳು ಒಪ್ಪಿದ ಮೇಲೆ ಮದುವೆಯಾಗಲು ಅಡ್ಡಿಯಾಗಿದ್ದೇ ಕೊರೊನಾ.

ಖುಷಿಯಾಗಿರುವ ಪತಿ-ಪತ್ನಿ

ಖುಷಿಯಾಗಿರುವ ಪತಿ-ಪತ್ನಿ

ಆ ಎರಡು ವರ್ಷದಲ್ಲಿ ಲಾವಣ್ಯ ಹಾಗೂ ಶಶಿಧರ್ ಹೆಗ್ಡೆ ಇಬ್ಬರು ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಂಡು ಕಳೆದ ವರ್ಷ ಮೇ ತಿಂಗಳಲ್ಲಿ ಸಪ್ತಪದಿ ತುಳಿದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಮನೆಯವರನ್ನು ಒಪ್ಪಿಸಿ ಮೂಲಕ ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಮದುವೆಯ ಫೋಟೋಗಳನ್ನು ಲಾವಣ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಇವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಈಗ ಇಬ್ಬರೂ ಸುಖ ಜೀವನ ನಡೆಸುತ್ತಿದ್ದಾರೆ. ಒಟ್ನಲ್ಲಿ ಬ್ರೋ ಆಗಿ ಪರಿಚಯವಾದ ವ್ಯಕ್ತಿಯೇ ಲಾವಣ್ಯ ಅವರ ಬದುಕಿನಲ್ಲಿ ಬಾಳ ಸಂಗಾತಿಯಾಗಿರುವುದಕ್ಕೆ ಖುಷಿಯಾಗಿದ್ದಾರೆ.

More from Filmibeat

English summary
Shrirastu Shubhamasthu serial Fame actress lavanya love story.Here is more details of her serial journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X