Shrirastu Shubhamasthu:ಅಮ್ಮ ಮಗನನ್ನು ಒಂದು ಮಾಡಲು ಪೂರ್ಣಿಮಾ ಪ್ಲ್ಯಾನ್; ಅವಿ ಬೆರಗಾಗಿದ್ದೇಕೆ?

By ಪೂರ್ವ

ತುಳಸಿ ಹಾಗೂ ಸಮರ್ಥ್‌ನನ್ನು ಹೇಗಾದರೂ ಮಾಡಿ ಒಂದು ಮಾಡಬೇಕು ಎಂದು ಪೂರ್ಣಿಮಾ ಹಾಗೂ ಅವಿ ಅಂದುಕೊಂಡಿರುತ್ತಾರೆ. ಆದರೆ, ಅದಕ್ಕಾಗಿ ಒಂದು ಪ್ಲ್ಯಾನ್ ಕೂಡ ಮಾಡುತ್ತಾರೆ. ಅಭಿ ಹಾಗೂ ಅವಿ ತಿಂಡಿ ತಿನ್ನುತ್ತಿರುವ ವೇಳೆ ತುಳಸಿ ತರಕಾರಿಯನ್ನು ಕಟ್ ಮಾಡುತ್ತಿರುತ್ತಾರೆ. ಆಗ ಪೂರ್ಣಿಮಾ "ಅಮ್ಮ ಸಮರ್ಥ್ ಕೂಡ ತಿಂಡಿಗೆ ಬಂದಿದ್ದರೆ ಒಳ್ಳೆಯದಿತ್ತು. ಆತನನ್ನು ಕೂಡ ನಾನು ತಿಂಡಿಗೆ ಕರೆಯಬೇಕಾ ಅಮ್ಮ? ಎಂದು ಕೇಳುತ್ತಾಳೆ.

ಈ ಮಾತನ್ನು ಕೇಳಿ ತುಳಸಿಗೆ ಬಹಳ ಖುಷಿ ಆಗುತ್ತೆ. "ಎಲ್ಲರೂ ಒಟ್ಟಾಗಿ ತಿಂಡಿ ತಿಂದರೆ ಅಮ್ಮನಿಗೆ ಬಹಳ ಖುಷಿ ಆಗುತ್ತದೆ" ಎಂದು ಹೇಳುತ್ತಾರೆ. ಆಗ ಪೂರ್ಣಿಮಾ ಸಮರ್ಥ್‌ನನ್ನು ತಿಂಡಿಗೆ ಕರೆಯುತ್ತಾಳೆ. ಸಮರ್ಥ್ ಅನ್ನು ತಿಂಡಿಗೆ ಕರೆದಾಗ, ನನಗೆ ಹಸಿವು ಇಲ್ಲ. ಮನೆಯಲ್ಲಿ ತಿಂಡಿ ತಿಂದು ಬಂದಿದ್ದೇನೆ ಎಂದು ಹೇಳುತ್ತಾನೆ.

Shrirastu Shubhamasthu serial July 23th episode update

"ತೊಂದರೆ ಇಲ್ಲ ಇಲ್ಲಿ ಕೂಡ ಎಲ್ಲರ ಜೊತೆ ತಿಂಡಿ ತಿನ್ನು" ಎಂದು ತುಳಸಿ ಹೇಳಿದಾಗ, ಸಮರ್ಥ್ ತನ್ನ ಮೊಂಡು ಹಠ ಬಿಡುವುದು ಇಲ್ಲ. ಆತನಿಗೆ ಅಮ್ಮನ ಖುಷಿ ಮುಂದೆ ಆತನ ಹಠವೇ ಬಹಳ ದೊಡ್ಡದಾಗಿರುತ್ತದೆ. ಇನ್ನೂ ತುಳಸಿ ಮಾತನಾಡುತ್ತಾ ಆಕೆಯ ಕೈ ಕುಯ್ದುಕೊಂಡು ಬಿಡುತ್ತಾರೆ. ಅದನ್ನು ನೋಡಿ ಸಮರ್ಥ್ ನೊಂದು ಕೊಂಡು, "ಅಮ್ಮ ನೀನು ಏನು ಮಾಡಿಕೊಂಡೆ?" ಎಂದು ಬಹಳ ಆತಂಕದಲ್ಲಿ ಕೂಗಾಡುತ್ತಿರುತ್ತಾನೆ. ಇದನ್ನು ನೋಡಿದ ಅವಿಗೆ ಮೊದಲು ಕೊಂಚ ಆತಂಕ ಆದರೂ ಆ ಬಳಿಕ ಮೌನಿ ಆಗುತ್ತಾನೆ.

ಅಮ್ಮನ ಕೈಗಾದ ಗಾಯಕ್ಕೆ ಶಾಕ್

ಸಮರ್ಥ್ ಅಮ್ಮನ ಕೈಗೆ ಬ್ಯಾಂಡೇಜ್ ಹಾಕಿ ಅಲ್ಲಿಂದ ಹೋಗುತ್ತಾನೆ. ಅವಿ ಇದೆಲ್ಲವನ್ನೂ ನೋಡಿ ಹೇಳುತ್ತಾನೆ. "ಪ್ರೀತಿ ಇಲ್ಲದೆ ಇದ್ದರೆ ಇಷ್ಟೆಲ್ಲ ಮಾಡಲು ಖಂಡಿತವಾಗಿ ಸಾಧ್ಯವಿಲ್ಲ" ಎಂದು ಹೇಳುತ್ತಾನೆ. ಇನ್ನೂ ಜುಗ್ಗ ಮಹಡಿ ಮೇಲಿರುವ ಟ್ಯಾಂಕ್ ಕ್ಲೀನ್ ಮಾಡಲು ಹೋಗಿ ಎಣಿಯಿಂದ ಕೆಳಗೆ ಬಿದ್ದಿರುತ್ತಾನೆ. ಇನ್ನೂ ಇದನ್ನೇ ಅಡ್ವಾಂಟೇಜ್ ಮಾಡಿಕೊಂಡಿದ್ದ ಜುಗ್ಗ, ಬೆಡ್ ರೆಸ್ಟ್ ಮಾಡುವ ನೆಪದಲ್ಲಿ ಮನೆಯ ಕೋಣೆಯಲ್ಲಿ ಮಲಗುತ್ತಾನೆ.

ಜುಗ್ಗನ ಸೋಮಾರಿತನಕ್ಕೆ ತಕ್ಕ ಪಾಠ

ಇತ್ತ ಸರಿಯಾಗಿದ್ದರೆ ದತ್ತ ಬಹಳಷ್ಟು ಕೆಲಸ ಕೊಡುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ಜುಗ್ಗ ಹರಸಾಹಸ ಪಡುತ್ತಿರುತ್ತಾನೆ. ಆದರೆ, ಇದೀಗ ಬಿದ್ದಿರುವುದನ್ನು ಅಡ್ವಾಂಟೇಜ್ ಮಾಡಿಕೊಂಡಿರುವ ಜುಗ್ಗ ಹಾಸಿಗೆಯ ಮೇಲೆ ಮಲಗಿಕೊಂಡು ನನಗೆ ಅದು ಬೇಕು ಇದು ಬೇಕು ಎಂದು ಆರ್ಡರ್ ಮಾಡುತ್ತಿರುತ್ತಾನೆ. ಆದರೆ, ಜುಗ್ಗ ಮಾಡುತ್ತಿರುವ ಮಸಲತ್ತು ದತ್ತಗೆ ಗೊತ್ತಾಗುತ್ತದೆ. ದತ್ತ ಅದಕ್ಕೆ ಜಗ್ಗನ ಬಳಿ ಬಂದು ಆತನ ಆರೋಗ್ಯ ವಿಚಾರಣೆ ಮಾಡುತ್ತಾರೆ.

Shrirastu Shubhamasthu serial July 23th episode update

ವರ್ಕ್ ಆಯಿತು ದತ್ತನ ಪ್ಲಾನ್

"ಈಗ ನೋವು ಹೇಗಿದೆ ಪರ್ವಾಗಿಲ್ಲ ಅಲ್ವಾ?" ಜುಗ್ಗನಿಗೆ ದತ್ತ ಕೇಳಿದಾಗ, "ನನಗೆ ಬಹಳಷ್ಟು ನೋವಾಗುತ್ತಿದೆ. ಎದ್ದೇಳಲೂ ಕೂಡ ಸಾಧ್ಯವಾಗುತ್ತಿಲ್ಲ" ಎಂದು ಹೇಳುತ್ತಾನೆ. ಜಗ್ಗ ಹೇಳುತ್ತಿರುವುದು ಸುಳ್ಳು ಎನ್ನುವುದು ದತ್ತನಿಗೆ ಚೆನ್ನಾಗಿ ತಿಳಿದಿದೆ. ಆದಕಾರಣ ದತ್ತ ನಿಮಗೆ ಏನೋ ಒಂದು ತಂದಿದ್ದೇನೆ ಎಂದು ಒಳಗಡೆ ಅದನ್ನ ತೆಗೆದುಕೊಂಡು ಬರಲು ಹೋಗುತ್ತಾರೆ. ಮನೆಯ ಒಳಗಿನಿಂದ ದತ್ತ ಬಂದು ಜಗ್ಗನ ಬಳಿ ಒಂದು ಪ್ಲಾಸ್ಟಿಕ್ ಹಲ್ಲಿಯನ್ನು ತೋರಿಸುತ್ತಾನೆ. ಆಗ ಜುಗ್ಗ "ಏನೇ ತೋರಿಸಿದರೂ ಕೂಡ ನನಗೆ ಭಯವಾಗುವುದಿಲ್ಲ. ಆದರೆ, ಈ ಹಲ್ಲಿಯನ್ನು ಮಾತ್ರ ನನಗೆ ತೋರಿಸಬೇಡಿ" ಎಂದು ಹೇಳುತ್ತಾನೆ. ಆ ಕೂಡಲೇ ದತ್ತ ಹಲ್ಲಿಯನ್ನು ಜುಗ್ಗನ ಮೈ ಮೇಲೆ ಬಿಸಾಡುತ್ತಾನೆ. ಆ ಕೂಡಲೇ ಜುಗ್ಗ ಭಯ ಬಿದ್ದು ಬೆಡ್‌ದ ಎದ್ದು ಓಡಿ ಹೋಗುತ್ತಾನೆ.

More from Filmibeat

English summary
Shrirastu Shubhamasthu serial July 23th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X