Shrirastu Shubhamasthu: ಎಲ್ಲರಿಗೂ ಅಡ್ಡ ಹೆಸರು ಇಡುವ ದತ್ತ ತಾತನಿಗೆ ಅಡ್ಡ ಹೆಸರು ಕೇಳಿದ ಜೀ
ಶ್ರೀರಸ್ತು ಶುಭಮಸ್ತು ಧಾರಾವಾಹಿ ಎಲ್ಲಾ ಧಾರಾವಾಹಿಗಳಿಗಿಂತಲೂ ಡಿಫರೆಂಟ್ ಆಗಿದೆ. ತುಳಸಿ ಹಾಗೂ ಮಾಧವ್ ಜೀವನದ ಜೊತೆಗೆ ಇಲ್ಲಿ ಹೈಲೈಟ್ ಆಗಿರುವುದು ದತ್ತ ತಾತ. ಹಾಗಾದರೆ ದತ್ತ ತಾತನ ಬಗ್ಗೆ ತಿಳಿಯುವ ಕುತೂಹಲ ಹಲವರಿಗೆ ಇದ್ದೇ ಇರುತ್ತದೆ. ದತ್ತ ತಾತ ಸ್ಟ್ರಿಕ್ಟ್ ಆಗಿ ಕಂಡರೂ ತುಂಬಾ ತಮಾಷೆ ಹಾಗೂ ಮೃದು ಮನಸಿನವರು.
ದತ್ತ ತಾತನ ಒಂದೊಂದು ಡೈಲಾಗ್ ಕೇಳಲು ಚೆನ್ನಾಗಿರುತ್ತದೆ. ಪ್ರೇಕ್ಷಕರಂತೂ ದತ್ತ ತಾತ ಇರುವ ಸೀನ್‌ಗಳನ್ನು ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಧಾರಾವಾಹಿ ನೋಡದವರು ಕೂಡ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು ನೋಡುತ್ತಿದ್ದಾರೆ. ಇದಕ್ಕೆ ಕಾರಣವೇ ದತ್ತ ತಾತನ ಅಭಿನಯ. ತಾತನ ನಡವಳಿಕೆ ನಿಜ ಜೀವನದಲ್ಲಿ ಇರಿಟೇಟ್ ಆದರೂ, ರೀಲ್ ಧಾರಾವಾಹಿಯಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದೆ.

ಎಲ್ಲರಿಗೂ ಅಡ್ಡ ಹೆಸರು ಇಡುವ ತಾತ
ಮೊಮ್ಮಗನನ್ನು ದಂಡಪಿಂಡ ಎಂದು ಕರೆಯುವ ತಾತ, ಸೊಸೆಗೆ ಸೋಗಲಾಡಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಮೊಮ್ಮಗಳು ಓಡಿ ಹೋಗಿ ಮದುವೆಯಾದಳು ಎಂದು ಅವಳನ್ನು ಓಡಿ ಹೋದವಳು ಎಂದೇ ಮಾತನಾಡಿಸುತ್ತಾರೆ. ಮಾಧವ್‌ಗೆ ಚಪ್ಪಲಿ ಕಳ್ಳ, ಪೂರ್ಣಿಮಾಗೆ ಗಿರಿಗಿಟ್ಲೆ, ನಂದಿನಿಗೆ ಶೂರ್ಪನಕಿ, ಶೇಷುಗೆ ಘಟೋದ್ಘಜ, ಶಾರ್ವರಿಗೆ ಮಕ್ಕಳ ಕಳ್ಳಿ ಎಂದೆಲ್ಲಾ ಹೆಸರಿಟ್ಟಿದ್ದಾರೆ. ಹಾಗಾಗಿ ಈಗ ಜೀ ಕನ್ನಡ ವಾಹಿನಿ ದತ್ತ ತಾತನಿಗೂ ಹೆಸರಿಡಲು ಮುಂದಾಗಿದೆ. ಹಾಗಾಗಿ ಅಭಿಮಾನಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ.
ತಾತನಿಗೆ ಕೊಡಿ ಅಡ್ಡ ಹೆಸರು
ಎಲ್ಲರಿಗೂ ಅಡ್ಡ ಹೆಸರು ಇಡುವ ದತ್ತನಿಗೆ ನೀವೇನು ಅಡ್ಡ ಹೆಸರು ಕೊಡ್ತೀರಾ..? ಎಂದು ಜೀ ಕನ್ನಡದವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಾಲು ಸಾಲು ಹೆಸರುಗಳನ್ನು ಕೊಟ್ಟಿದ್ದಾರೆ. ಸ್ವೀಟ್ ಹಿಟ್ಲರ್, ಕಿಲಾಡಿ ಕಿಂಗ್, ರೆಬೆಲ್ ತಾತ, ಮಾಡ್ರನ್ ದತ್ತು, ಮುದ್ದಿನ ಅಜ್ಜ, ತಿಂಡಿ ಪೋತ ಅಜ್ಜ, ಮಾತಿನ ಮಲ್ಲ, ಬಂಗಾರದ ಮನುಷ್ಯ, ಚಾಣಕ್ಯ, ತರ್ಲೆ ತಾತ, ಆಟಂ ಬಾಂಬ್, ನೆಗೆದ್ಬಿತ್ತು ತಾತ, ಜಗತ್ ಕಿಲಾಡಿ, ಮುಂಗೋಪಿ, ಬಾಯಿ ಬಡ್ಕ, ಪರ್ಫೆಕ್ಟ್, ಕ್ವಾಟ್ಲೆ ತಾತ, ಜೆಂಟಲ್ ಮ್ಯಾನ್, ನರಪೇತ್ಲ ನಾರಾಯಣ ಹೀಗೆ ನೂರೆಂಟು ಹೆಸರುಗಳನ್ನು ಇಟ್ಟಿದ್ದಾರೆ. ಆದರೆ, ವಾಹಿನಿ ಯಾವ ಹೆಸರನ್ನು ಫೈನಲ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಅತ್ತೆ ತುಳಸಿಗೆ ಎಲ್ಲರೂ ಸಪೋರ್ಟ್
2022ರ ಅಕ್ಟೋಬರ್ 31 ರಿಂದ ಈ ಧಾರಾವಾಹಿ ಶುರುವಾಗಿದ್ದು, ಜನರು ಧಾರಾವಾಹಿಯ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅತ್ತೆ ಎಲ್ಲರಿಗೂ ತಲೆ ಬಾಗಿ ತಾನೊಬ್ಬಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ. ಆದರೆ ಮನೆಗೆ ಬರುವ ಸೊಸೆ ಅತ್ತೆಯನ್ನು ಬದಲಾಯಿಸಲು ಮುಂದಾಗುತ್ತಾಳೆ. ಸಣ್ಣ ಪುಟ್ಟ ವಿಚಾರಗಳಲ್ಲಿ ಅತ್ತೆಗೆ ಬುದ್ಧಿ ಹೇಳಿ, ಅವರವರ ಕೆಲಸವನ್ನು ಅವರೇ ಮಾಡಿಕೊಳ್ಳಲಿ ಎಂಬುದನ್ನು ಜಾಣ್ಮೆಯಿಂದ ಹೇಳಿಕೊಟ್ಟಿದ್ದಾಳೆ. ಅತ್ತೆಗೂ ಸೊಸೆ ಎಂದರೆ ಮುದ್ದು ಜಾಸ್ತಿ. ಮನೆಯಲ್ಲಿ ಮಾವ ಹಾಗೂ ಮಗನ ಮಾತನ್ನೇ ಕೇಳುತ್ತಿದ್ದ ತುಳಸಿ, ಈಗ ನಿಧಾನವಾಗಿ ತಾನೂ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ.
ತಾತನ ಮಾತೇ ಮೇಲುಗೈ
ಆದರೆ ಇದರಲ್ಲಿ ದತ್ತ ತಾತನ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ದತ್ತ ತಾತ ಎಷ್ಟು ಕೋಪ ಮಾಡಿಕೊಳ್ಳುತ್ತಾರೋ ಅಷ್ಟೇ ಸಾಫ್ಟ್ ಮನುಷ್ಯ. ಸದಾ ಎಲ್ಲರ ಬಳಿ ಜಂಭದಿಂದಲೇ ಮಾತನಾಡುವ ತಾತ, ಮನೆಯರ ಒಳಿತಿಗಾಗಿಯೇ ಶ್ರಮಿಸುತ್ತಿರುತ್ತಾರೆ. ಮನೆಗೆ ಯಾರೇ ಬಂದರೂ ಜೋರಾಗಿ ಮಾತನಾಡುವ ತಾತನಿಗೆ ತನ್ನದೇ ಮುಂದಾಳತ್ವವಿರಬೇಕು. ಯಾರ ಮಾತನ್ನೂ ಒಪ್ಪುವುದಿಲ್ಲ.


Click it and Unblock the Notifications











