4ವರ್ಷದ ನಂತರ ಗುಡ್ ನ್ಯೂಸ್ ನೀಡಿದ ಶ್ರೀರಸ್ತು ಶುಭಮಸ್ತು ಪೂರ್ಣಿ;ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಲಾವಣ್ಯ-ಶಶಿ

ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥಾ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ.

ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ ಕೂಡ ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಉದಾಹರಣೆಗೆ ಲಾವಣ್ಯ ಭಾರದ್ವಾಜ್ ಮತ್ತು ಶಶಿ ಹೆಗ್ಡೆ.

Shrirastu Shubhamastu Fame Lavanya and Amruthadhaare s Shashi Announce First Pregnancy

ಹೌದು, ಲಾವಣ್ಯ ಭಾರದ್ವಾಜ್ ಮತ್ತು ಶಶಿ ಹೆಗ್ಡೆ. ಕಿರುತೆರೆಯ ಖ್ಯಾತ ಜೋಡಿ. ಬಾಲ್ಯದಿಂದಲೂ ನೃತ್ಯದ ಮೇಲೆ ಹೆಚ್ಚು ಒಲವು ಹೊಂದಿದ್ದ ಲಾವಣ್ಯ ಆಕಸ್ಮಾತ್ ಆಗಿ ಕಿರುತೆರೆಗೆ ಬಂದರು. ''ರಾಧಾ ರಮಣ'' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ''ಶ್ರೀರಸ್ತು ಶುಭಮಸ್ತು''.. '''ದಾಸ ಪುರಂದರ''.. ''ರಾಜಾ ರಾಣಿ''.. '''ಸಂಘರ್ಷ''.. ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಲಾವಣ್ಯ ಅಭಿನಯಿಸಿದ್ದರೆ, ಶಶಿ ಹೆಗ್ಡೆ ''ರಾಜಾ ರಾಣಿ''.. ''ಅಮೃತಧಾರೆ''... ಸೇರಿದಂತೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಇನ್ನೂ ಇವರ ಸ್ನೇಹಕ್ಕೆ ಅಡಿಪಾಯ ಹಾಕಿದ್ದು ''ರಾಜಾ ರಾಣಿ''. ವಿಶೇಷ ಅಂದರೆ ಈ ಧಾರಾವಾಹಿಯಲ್ಲಿ ಇಬರದ್ದು ಅಣ್ಣ ತಂಗಿ ಪಾತ್ರವಾಗಿತ್ತು. ಇದಷ್ಟೇ ಅಲ್ಲದೇ, ''ಸಹವಾಸ ದೋಷ'' ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. ''ರಾಜಾ-ರಾಣಿ'' ಧಾರಾವಾಹಿಯಲ್ಲಿ ಶಶಿ ಅವರನ್ನು ಲಾವಣ್ಯ ಬ್ರೋ ಎಂದು ಕರೆಯುತ್ತಿದ್ದರಂತೆ.

ಹೀಗೆ ''ರಾಜಾ ರಾಣಿ'' ಮೂಲಕ ಶುರುವಾದ ಸ್ನೇಹ ಕೊರೊನಾ ಕಾಲದಲ್ಲಿ ಪ್ರೀತಿಯ ಸ್ವರೂಪ ಪಡೆಯಿತು. ನಾಲ್ಕು ವರ್ಷ ಪ್ರೀತಿಯ ಅಲೆಯಲ್ಲಿ ತೇಲಿದ ಈ ಜೋಡಿ ಆ ನಂತರ ಮದುವೆಯ ಬಂಧನಕ್ಕೊಳಗಾದರು.

Shrirastu Shubhamastu Fame Lavanya and Amruthadhaare s Shashi Announce First Pregnancy

ಗರ್ಭಿಣಿ ಆಗಲು ಎರಡು ಕಂಡೀಷನ್ ಹಾಕಿದ ನಟಿ

ಅಂದ್ಹಾಗೇ ಲಾವಣ್ಯಾ ಮತ್ತು ನಟ ಶಶಿ ಹೆಗಡೆ ಮದುವೆಯಾಗಿ ಅದಾಗಲೇ 3-4 ವರ್ಷಗಳು ಆಗಿವೆ. ಆದರೂ ಕೂಡ ಇಬ್ಬರೂ ಇನ್ನು ಪೋಷಕರಾಗಿ ಯಾಕೆ ಬಡ್ತಿ ಪಡೆದಿಲ್ಲ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಈ ಪ್ರಶ್ನೆಗೆ ಸ್ಟಾರ್ ಸುವರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದ ಲಾವಣ್ಯ ಭಾರದ್ವಾಜ್, ಶಶಿ ಅವರು ಇನ್ನೂ ಹನಿಮೂನ್ ಗೆ ಕರೆದುಕೊಂಡು ಹೋಗಿಲ್ಲ ಎಂದು ಹೇಳಿದ್ದರು.

ಎರಡು ಬಾರಿ ಹನಿಮೂನ್ ಗೆಂದು ಪ್ಲಾನ್ ಮಾಡಿದಾಗಲೂ ಸಂಬಂಧಿಕರು ತೀರಿಕೊಂಡಿದ್ದರು. ಹಾಗಾಗಿ ಇಬ್ಬರೂ ಹನಿಮೂನ್ ಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಮಗು ಬೇಕೆಂದರೆ ಎರಡು ಟ್ರಿಪ್ ಗೆ ಕರೆದುಕೊಂಡು ಹೋಗಬೇಕು ಎಂದು ಲಾವಣ್ಯ ಕಂಡೀಷನ್ ಹಾಕಿದ್ದರು. ಅದರಂತೆ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಇಬ್ಬರೂ ಮನಾಲಿಗೆ ಹೋಗಿ ಬಂದಿದ್ದರು. ಇನ್ನು ಎರಡನೇಯ ಕಂಡೀಷನ್ ವಿದೇಶಕ್ಕೆ ಹೋಗುವುದು. ಇದು ನೆರವೇರಿದ ಬಳಿಕವಷ್ಟೇ ಮಗು ಮಾಡಿಕೊಳ್ಳೋಣ ಎಂದು ಲಾವಣ್ಯಾ ಹೇಳಿದ್ದರು.

ಇಂಥಾ ಲಾವಣ್ಯ ಭಾರದ್ವಾಜ್ ಮತ್ತು ಶಶಿ ಹೆಗಡೆ ತಮ್ಮ ಮದುವೆಯ ನಾಲ್ಕು ವರ್ಷಗಳ ನಂತರ ಈಗ ಕೊನೆಗೂ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಚೆಂದದ ವಿಡಿಯೋ ಹಂಚಿಕೊಂಡು ನಮ್ಮ ಪ್ರೀತಿಯ ಕಥೆಯಲ್ಲಿ ಒಂದು ಹೊಸ ಅಧ್ಯಾಯ ಶುರುವಾಗುತ್ತಿದೆ ಎಂದು ಹೇಳುವ ಮೂಲಕ ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿರುವ ಸುದ್ದಿಯನ್ನು ಅನೌನ್ಸ್ ಮಾಡಿದ್ದಾರೆ. ಚಂದನಾ ಅನಂತಕೃಷ್ಣ ಸೇರಿ ಕಿರುತೆರೆಯ ಹಲವರು ಲಾವಣ್ಯ ಮತ್ತು ಶಶಿ ಹೆಗ್ಡೆಗೆ ಶುಭಾಶಯ ಕೋರುತ್ತಿದ್ದಾರೆ.

English summary
Big news for Kannada serial fans! The power couple of Lavanya and Shashi is growing by two feet. From on-screen drama to real-life bliss, see how the Shrirastu Shubhamastu star is celebrating her journey to becoming a mother!
Read more about: pregnency pregnent ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X