For Quick Alerts
  ALLOW NOTIFICATIONS  
  For Daily Alerts

  ಸಾಧಕರ ಸೀಟ್ ಮೇಲೆ ಕೂತ ನಟಿ ಶ್ರುತಿ: ಮತ್ತೆ ಭುಗಿಲೆದ್ದ ವೀಕ್ಷಕರ ಆಕ್ರೋಶ.!

  By Harshitha
  |

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂತಾಗ ವೀಕ್ಷಕರು ಫುಲ್ ಖುಷಿಯಾಗಿದ್ದರು. ಎಚ್.ಡಿ.ಡಿ ರವರ ಸಂಚಿಕೆ ನೋಡಿದ ಬಳಿಕ ಕಾರ್ಯಕ್ರಮದ ಬಗ್ಗೆ ವೀಕ್ಷಕರು ಒಳ್ಳೆಯ ಮಾತುಗಳನ್ನು ಹೇಳಿ... ಹೊಗಳಿ ಅಟ್ಟಕ್ಕೆ ಏರಿಸಿದ್ದರು. ಇನ್ನೂ ಎಚ್.ಡಿ.ದೇವೇಗೌಡ ರವರನ್ನ ಕರೆದು ತಂದ ಜೀ ವಾಹಿನಿಗೆ ವೀಕ್ಷಕರು ಕೃತಜ್ಞತೆ ಕೂಡ ಸಲ್ಲಿಸಿದ್ದರು. ಈಗ ಅದೇ ವೀಕ್ಷಕರು ಜೀ ಕನ್ನಡ ವಾಹಿನಿಗೆ ಛೀಮಾರಿ ಹಾಕುತ್ತಿದ್ದಾರೆ. ಕಾರಣ ಒನ್ಸ್ ಅಗೇನ್ 'ವೀಕೆಂಡ್ ವಿತ್ ರಮೇಶ್' ಮತ್ತು ನಟಿ ಶ್ರುತಿ.!

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರದ ಸಾಧಕಿ ನಟಿ ಶ್ರುತಿ. ಸಾಧಕರ ಸೀಟ್ ಮೇಲೆ ನಟಿ ಶ್ರುತಿ ರವರನ್ನು ಕೂರಿಸಿರುವ ಕಾರಣ ಕೆಲ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  'ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.

  ಜೀ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿಯೇ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಭಾಗವಹಿಸಿರುವ ಸಂಚಿಕೆ ಬಗ್ಗೆ ಅಸಮಾಧಾನಗೊಂಡು ಕೆಲ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ....

  'ಬಿಗ್ ಬಾಸ್'ನಲ್ಲಿ ನೋಡಿ ಸಾಕಾಗಿತ್ತು.!

  'ಬಿಗ್ ಬಾಸ್'ನಲ್ಲಿ ನೋಡಿ ಸಾಕಾಗಿತ್ತು.!

  ''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೋಡಿ ಸಾಕಾಗಿತ್ತು. ಮತ್ತೆ ಏನೂ ಇಲ್ಲ ಅವರ ಬಗ್ಗೆ ತಿಳಿದುಕೊಳ್ಳಲು'' ಎಂದು ವೀಕ್ಷಕರೊಬ್ಬರು 'ಜೀ ಕನ್ನಡ' ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಅಕೌಂಟ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

  'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ 'ಅಳುಮುಂಜಿ' ಶ್ರುತಿ

  ಕಾರ್ಯಕ್ರಮವನ್ನ ಕ್ಲೋಸ್ ಮಾಡಿ.!

  ಕಾರ್ಯಕ್ರಮವನ್ನ ಕ್ಲೋಸ್ ಮಾಡಿ.!

  ''ಸಾಧಕರ ಸೀಟ್ ಮೇಲೆ ಕೂರಲು ಅರ್ಹ ವ್ಯಕ್ತಿ ಸಿಗಲಿಲ್ಲ ಅಂದ್ರೆ ಕಾರ್ಯಕ್ರಮವನ್ನು ಕ್ಲೋಸ್ ಮಾಡಿ'' ಎಂದು ವೀಕ್ಷಕರೊಬ್ಬರು ಪುಕ್ಕಟೆ ಸಲಹೆ ನೀಡಿದ್ದಾರೆ.

  ಬೇರೆ ಯಾರೂ ಸಿಗಲಿಲ್ವಾ.?

  ಬೇರೆ ಯಾರೂ ಸಿಗಲಿಲ್ವಾ.?

  ''ಬೇರೆ ಯಾರೂ ಸಿಗಲಿಲ್ಲಾ.? ಶೇಮ್ ಆನ್ ಯುವರ್ ಶೋ'' ಎಂದು ಕೆಲ ವೀಕ್ಷಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

  'ಬಿಗ್ ಬಾಸ್'ನಲ್ಲಿಯೇ ಸಹಿಸಲು ಆಗಲಿಲ್ಲ.!

  'ಬಿಗ್ ಬಾಸ್'ನಲ್ಲಿಯೇ ಸಹಿಸಲು ಆಗಲಿಲ್ಲ.!

  ''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಟಿ ಶ್ರುತಿ ರವರನ್ನ ಸಹಿಸೋಕೆ ಆಗಲಿಲ್ಲ. ಇನ್ನೂ ಇದು ಬೇರೆನಾ.?'' ಎಂದು ಗೊಣಗುತ್ತಾ ವೀಕ್ಷಕರೊಬ್ಬರು ಮಾಡಿರುವ ಕಾಮೆಂಟ್ ಇದು.

  'ಬಿಗ್ ಬಾಸ್' ಮನೆಗೆ ಹೋಗಿ ಬಂದವರೆಲ್ಲ ಸಾಧಕರಾ.?

  'ಬಿಗ್ ಬಾಸ್' ಮನೆಗೆ ಹೋಗಿ ಬಂದವರೆಲ್ಲ ಸಾಧಕರಾ.?

  ''ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದವರೆಲ್ಲ ಸಾಧಕರಂತೆ ಕಾಣುತ್ತಿರಬಹುದು. ಅಕುಲ್ ಬಾಲಾಜಿ, ಪ್ರಥಮ್ ಕೂಡ ಬಂದರೂ ಬರಬಹುದು'' ಎಂದು ವೀಕ್ಷಕರೊಬ್ಬರು ಲೇವಡಿ ಮಾಡಿದ್ದಾರೆ.

  ಸಾಧಕರನ್ನ ಕರೆಯಿಸಿ..

  ಸಾಧಕರನ್ನ ಕರೆಯಿಸಿ..

  ಕೆ.ಶಿವರಾಮ್, ನಿರ್ದೇಶಕ ಭಗವಾನ್, ಸಿದ್ಧಗಂಗಾ ಶ್ರೀ, ಹಂಸಲೇಖ ರವರನ್ನ ಕಾರ್ಯಕ್ರಮಕ್ಕೆ ಕರೆಯಿಸಿ ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.

  'ವೀಕೆಂಡ್ ವಿತ್ ರಮೇಶ್' ನೋಡಲ್ಲ.!

  'ವೀಕೆಂಡ್ ವಿತ್ ರಮೇಶ್' ನೋಡಲ್ಲ.!

  ''ಇನ್ನೆಂದೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನೋಡಲ್ಲ'' ಎಂದು ಆಸಕ್ತಿ ಕಳೆದುಕೊಂಡ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

  ವೀಕ್ಷಕರ ಬೇಡಿಕೆ

  ವೀಕ್ಷಕರ ಬೇಡಿಕೆ

  ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಸುಹಾಸಿನಿ, ಥ್ರಿಲ್ಲರ್ ಮಂಜು, ಸುಧಾ ನಾರಾಯಣಮೂರ್ತಿ, ಜಾವಗಲ್ ಶ್ರೀನಾಥ್, ರಾಹುಲ್ ಡ್ರಾವಿಡ್ ರಂತಹ ಸಾಧಕರನ್ನು ಕರೆಯಿಸಿ ಎಂಬುದು ವೀಕ್ಷಕರ ಬೇಡಿಕೆ.

  ಸಾಲು ಸಾಲು ಕಾಮೆಂಟ್ಸ್

  ಸಾಲು ಸಾಲು ಕಾಮೆಂಟ್ಸ್

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ನಟಿ ಶ್ರುತಿ ಭಾಗವಹಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿ ವೀಕ್ಷಕರು ಸಾಲು ಸಾಲು ಕಾಮೆಂಟ್ ಮಾಡಿದ್ದಾರೆ.

  ಶ್ರುತಿ ಪರ ಬ್ಯಾಟ್ ಮಾಡುವವರು ಇದ್ದಾರೆ

  ಶ್ರುತಿ ಪರ ಬ್ಯಾಟ್ ಮಾಡುವವರು ಇದ್ದಾರೆ

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಭಾಗವಹಿಸಿರುವ ಕುರಿತು ಕೆಲವರು ಸಂತಸಗೊಂಡಿದ್ದಾರೆ. ನಟಿ ಶ್ರುತಿ ಪರ ಬ್ಯಾಟಿಂಗ್ ಮಾಡಲು ಆರಂಭಿಸಿದ್ದಾರೆ.

  English summary
  Viewers are not happy with Zee Kannada Channel and Weekend with Ramesh-3 for inviting Kannada Actress Shruthi leaving behind many other Achievers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X