ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಶ್ರುತಿ ನಾಯ್ಡು

'ಪ್ರೀತಿ ಇಲ್ಲದ ಮೇಲೆ' ಸೀರಿಯಲ್ ನಲ್ಲಿ ಅಭಿನಯಿಸಿ, 'ಬ್ರಹ್ಮಗಂಟು', 'ಶ್ರೀರಸ್ತು ಶುಭಮಸ್ತು', 'ಪುನರ್ ವಿವಾಹ', 'ಮಹಾದೇವಿ' ಅಂತಹ ಜನಪ್ರಿಯ ಧಾರಾವಾಹಿಗಳನ್ನು ಕಿರುತೆರೆ ಲೋಕಕ್ಕೆ ನೀಡಿದವರು ಶ್ರುತಿ ನಾಯ್ಡು.

ಕಿರುತೆರೆ ಲೋಕದಲ್ಲಿ ನಿರ್ಮಾಪಕಿ ಆಗಿ, ನಿರ್ದೇಶಕಿ ಆಗಿ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಶ್ರುತಿ ನಾಯ್ಡು ಆಚರಿಸಿಕೊಂಡಿದ್ದಾರೆ.

ತಮ್ಮ ಬರ್ತಡೇ ಪ್ರಯುಕ್ತ 'ವನ್ಯಜೀವಿ ಸಂರಕ್ಷಣಾ ಅಭಿಯಾನ'ದ ಮೂಲಕ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದು ಮತ್ತು ಅಲ್ಲಿನ ವಾಚರ್ಸ್ ಮತ್ತು ಗಾರ್ಡ್ಸ್ ಗೆ ಮೆಡಿಕಲ್ ಕಿಟ್ ಗಳನ್ನು ನೀಡಿದ್ದಾರೆ ಶ್ರುತಿ ನಾಯ್ಡು.

Shruthi Naidu celebrates her birthday in a meaningful manner

''ಫಾರೆಸ್ಟ್ ವಾಚರ್ಸ್, ಗಾರ್ಡ್ಸ್ ಮೇಲೆ ವನ್ಯಜೀವಿಗಳು ಅಥವಾ ವಿಷ ಜಂತುಗಳು ದಾಳಿ ಮಾಡಿದರೆ, ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವುದು ಕಷ್ಟ. ಹೀಗಾಗಿ, ತಕ್ಷಣ ಅನುಕೂಲ ಆಗುವ ಹಾಗೆ ವಾಚರ್ಸ್ ಮತ್ತು ಗಾರ್ಡ್ಸ್ ಗೆ ಮೆಡಿಕಲ್ ಕಿಟ್ ವಿತರಿಸಿದ್ದೇನೆ. ಸುಮಾರು 60 ವಾಚರ್ಸ್ ಮತ್ತು ಗಾರ್ಡ್ಸ್ ಗೆ ನಮ್ಮ ಸಂಸ್ಥೆಯಿಂಧ ಮೆಡಿಕಲ್ ಕಿಟ್ ಕೊಟ್ಟಿದ್ದೇನೆ'' ಎನ್ನುತ್ತಾರೆ ಶ್ರುತಿ ನಾಯ್ಡು.

ಅಂದ್ಹಾಗೆ, ಕಿರುತೆರೆಯಲ್ಲಿ ಯಶಸ್ಸು ಕಂಡಿರುವ ಶ್ರುತಿ ನಾಯ್ಡು 'ಪ್ರೀಮಿಯರ್ ಪದ್ಮಿನಿ' ಚಿತ್ರಕ್ಕೂ ಬಂಡವಾಳ ಹಾಕಿದ್ದರು. ವಿಮರ್ಶಕರಿಂದ 'ಪ್ರೀಮಿಯರ್ ಪದ್ಮಿನಿ' ಮೆಚ್ಚುಗೆ ಗಳಿಸಿತ್ತು.

ಯಶಸ್ವಿ ನಿರ್ಮಾಪಕಿ ಆಗಿರುವ ಶ್ರುತಿ ನಾಯ್ಡುಗೆ ಒಳ್ಳೆಯ ಕಥೆ ಸಿಕ್ಕರೆ ಆಕ್ಷನ್ ಕಟ್ ನೂ ಹೇಳ್ತಾರಂತೆ. ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಶ್ರುತಿ ನಾಯ್ಡುಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

More from Filmibeat

English summary
Shruthi Naidu celebrates her birthday in a meaningful manner by distributing medical kits to Bandipur forest guards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X