For Quick Alerts
  ALLOW NOTIFICATIONS  
  For Daily Alerts

  'ತಕಧಿಮಿತ' ಶೋದಿಂದ ಶ್ರುತಿ ಪ್ರಕಾಶ್ ನಿರ್ಗಮನ, ಕವಿತಾ ಗೌಡ ಆಗಮನ.!

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಿಂದ ಆದಮ್ ಪಾಶಾ ಈಗಾಗಲೇ ಹೊರ ನಡೆದಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಇದೇ ರಿಯಾಲಿಟಿ ಶೋನಿಂದ ನಟಿ ಹಾಗೂ ಗಾಯಕಿ ಶ್ರುತಿ ಪ್ರಕಾಶ್ ಹೊರ ಬಂದಿದ್ದಾರೆ.

  ವಿವಾದದಿಂದಾಗಿ ಆದಮ್ ಪಾಶಾ ಹೊರಬಂದಿದ್ದರೆ, ಅನಾರೋಗ್ಯದ ಕಾರಣ ನಟಿ ಶ್ರುತಿ ಪ್ರಕಾಶ್ ವಾಕ್ ಔಟ್ ಮಾಡಿದ್ದಾರೆ.

  ಆಶ್ಚರ್ಯ ಅಂದ್ರೆ, ನಟಿ ಶ್ರುತಿ ಪ್ರಕಾಶ್ ಜಾಗಕ್ಕೆ ಕಿರುತೆರೆ ನಟಿ, ಬಿಗ್ ಬಾಸ್ ಕನ್ನಡ-6 ಸ್ಪರ್ಧಿ ಚಿನ್ನು ಖ್ಯಾತಿಯ ಕವಿತಾ ಗೌಡ ಕಾಲಿಟ್ಟಿದ್ದಾರೆ. ಹೇಳಿ ಕೇಳಿ ಕವಿತಾ ಗೌಡ ಡ್ಯಾನ್ಸರ್. ಹೀಗಾಗಿ 'ತಕಧಿಮಿತ' ವೇದಿಕೆ ಆಕೆಗೆ ಹೇಳಿ ಮಾಡಿಸಿದ್ದು. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ....

  ಶ್ರುತಿ ಪ್ರಕಾಶ್ ಕ್ವಿಟ್ ಮಾಡಿದ್ಯಾಕೆ.?

  ಶ್ರುತಿ ಪ್ರಕಾಶ್ ಕ್ವಿಟ್ ಮಾಡಿದ್ಯಾಕೆ.?

  'ತಕಧಿಮಿತ' ಕಾರ್ಯಕ್ರಮದ ಮೊದಲ ಸಂಚಿಕೆ ಮುಗಿದಾಗಲೇ ನಟಿ ಶ್ರುತಿ ಪ್ರಕಾಶ್ ರವರ ಕಾಲಿಗೆ ಪೆಟ್ಟಾಗಿತ್ತು. ಲಿಗಮೆಂಟ್ ಟೇರ್ ಆದ ಕಾರಣ ಡ್ಯಾನ್ಸ್ ಮಾಡದಂತೆ ಆಕೆಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಈ ಡ್ಯಾನ್ಸ್ ರಿಯಾಲಿಟಿ ಶೋದಿಂದ ಶ್ರುತಿ ಪ್ರಕಾಶ್ ಹೊರ ಬಂದಿದ್ದಾರೆ.

  ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!ಕವಿತಾ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದ ಅಕ್ಷತಾ.!

  ಶ್ರುತಿ ಜಾಗಕ್ಕೆ ಬಂದ ಕವಿತಾ ಗೌಡ

  ಶ್ರುತಿ ಜಾಗಕ್ಕೆ ಬಂದ ಕವಿತಾ ಗೌಡ

  ನಟಿ ಶ್ರುತಿ ಪ್ರಕಾಶ್ ಬಿಟ್ಟು ಹೋದ ಜಾಗಕ್ಕೆ ಇದೀಗ ನಟಿ ಕವಿತಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಚಿನ್ನು ಅಂತಲೇ ಖ್ಯಾತಿ ಪಡೆದಿರುವ ಕವಿತಾ ಗೌಡ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

  ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!ದೂರು ಕೊಟ್ಟ ಕವಿತಾ ವಿರುದ್ಧ ಹೊಸ ಬಾಂಬ್ ಸಿಡಿಸಿದ ಆಂಡ್ರ್ಯೂ.!

  ಗೊಂಬೆ-ಚಿನ್ನು ನಡುವೆ ಟಕ್ಕರ್

  ಗೊಂಬೆ-ಚಿನ್ನು ನಡುವೆ ಟಕ್ಕರ್

  ಈ ಹಿಂದೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಖ್ಯಾತಿಯ ನೇಹಾ ಗೌಡ ಮತ್ತು ಚಿನ್ನು ಖ್ಯಾತಿಯ ಕವಿತಾ ಗೌಡ ತೆರೆ ಹಂಚಿಕೊಂಡಿದ್ದರು. ಇದೀಗ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಇಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

  ಕ್ಷಮೆ ಕೇಳಿದ ಆಂಡ್ರ್ಯೂ: ಕವಿತಾ ಜೊತೆಗಿನ ಜಟಾಪಟಿ ಸುಖಾಂತ್ಯ.!ಕ್ಷಮೆ ಕೇಳಿದ ಆಂಡ್ರ್ಯೂ: ಕವಿತಾ ಜೊತೆಗಿನ ಜಟಾಪಟಿ ಸುಖಾಂತ್ಯ.!

  ಮೊದಲ ಪರ್ಫಾರ್ಮೆನ್ಸ್ ನಲ್ಲೇ ತೀರ್ಪುಗಾರರ ಮನಗೆದ್ದ ಕವಿತಾ

  ಮೊದಲ ಪರ್ಫಾರ್ಮೆನ್ಸ್ ನಲ್ಲೇ ತೀರ್ಪುಗಾರರ ಮನಗೆದ್ದ ಕವಿತಾ

  ಮೊದಲ ಪರ್ಫಾರ್ಮೆನ್ಸ್ ನಲ್ಲೇ ಕವಿತಾ ಮತ್ತು ದೀಕ್ಷಿತ್ ಜೋಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಸಂಚಿಕೆ ಮುಗಿಯುವ ಹೊತ್ತಿಗೆ ಕವಿತಾ ಮತ್ತು ದೀಕ್ಷಿತ್ ಜೋಡಿ ಮೂರನೇ ಸ್ಥಾನ ಪಡೆದುಕೊಂಡು ಸೇಫ್ ಝೋನ್ ಸೇರಿದರು.

  English summary
  Shruthi Prakash walks out and Kavitha Gowda enters as contestant in 'Thakadhimitha' Dance reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X