ಮೊದಲ ಬಾರಿಗೆ ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ 'ಪಾಪ ಪಾಂಡು 2' ನಟಿ; ಏನಂತಾರೆ ಶ್ರುತಿ ರಮೇಶ್?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಎಡೆಯೂರು ಶ್ರೀಸಿದ್ಧಲಿಂಗೇಶ್ವರ' ವೂ ಒಂದು. ಭಕ್ತಿ ಪ್ರಧಾನವಾಗಿರುವ ಈ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಇದರ ಜೊತೆಗೆ 'ಎಡೆಯೂರು ಶ್ರಿಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಹೊಸ ಪಾತ್ರದ ಆಗಮನವಾಗಿದೆ.

ಹೌದು, ಈ ಧಾರಾವಾಹಿಯಲ್ಲಿ ದುರ್ಮುಖಿ ಎನ್ನುವ ಹೊಸ ಪಾತ್ರದ ಆಗಮನವಾಗಿದೆ. ಅಂದ ಹಾಗೇ ದುರ್ಮುಖಿಯಾಗಿ ಅಭಿನಯಿಸುತ್ತಿರುವ ಈಕೆಯ ಹೆಸರು ಶ್ರುತಿ ರಮೇಶ್‌. ಇದೇ ಮೊದಲ ಬಾರಿಗೆ ಶ್ರುತಿ ರಮೇಶ್ ಅವರು ಪೌರಾಣಿಕ ಧಾರಾವಾಹಿಯೊಂದರಲ್ಲಿ ಬಣ್ಣ ಹಚ್ಚುತ್ತಿದ್ದು ಸಖತ್ ಖುಷಿಯಲ್ಲಿದ್ದಾರೆ.

Shruti Ramesh says she is happy to be acting in mythological serial for the first time

ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ಶ್ರುತಿ ರಮೇಶ್ "ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ನಟಿಸಬೇಕೆಂಬುದು ನನ್ನ ಎಷ್ಟೋ ದಿನದ ಕನಸು. ಅದಕ್ಕಾಗಿ ನಾನು ಸಾಕಷ್ಟು ಆಡಿಶನ್ ಗಳನ್ನು ಕೂಡಾ ನೀಡಿದ್ದೆ. ಇದೀಗ ದುರ್ಮುಖಿ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ‌‌. ನನಗಂತೂ ತುಂಬಾ ಖುಷಿ ಆಗ್ತಿದೆ. ಇದೇ ಮೊದಲ ಬಾರಿಗೆ ನಾನು ಈ ರೀತಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ತಾ ಇದ್ದೇನೆ" ಎಂದು ಸಂತಸ ಹಂಚಿಕೊಂಡಿದ್ದಾರೆ.

"ಅಂದ ಹಾಗೇ ದುರ್ಮುಖಿ ಪಾತ್ರ ತುಂಬಾ ಪವರ್ ಫುಲ್ ಆದ ಪಾತ್ರ. ತನ್ನ ವಂಶಕ್ಕೆ ಒಳ್ಳೆಯದಾಗಬೇಕು ಎಂಬುದು ದುರ್ಮುಖಿ ಬಯಕೆ. ಅದಕ್ಕಾಗಿ ಆಕೆ ಅಪರಾಜಿತಾ ಎನ್ನುವ ಗ್ರಂಥವನ್ನು ಪಡೆಯುವುದಕ್ಕಾಗಿ ಹರಸಾಹಸ ಪಡುತ್ತಿರುತ್ತಾಳೆ. ಒಂದು ರೀತಿಯಲ್ಲಿ ನೆಗೆಟಿವ್ ರೋಲ್‌ನ ತರಹವೇ ಎಂದು ಹೇಳಿದರೆ ತಪ್ಪಾಗಲಾರದು" ಎಂದು ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಶ್ರುತಿ ರಮೇಶ್.

"ಇನ್ನು ದುರ್ಮುಖಿಯ ಪಾತ್ರವೂ ಅಷ್ಟೇ. ಡಿಫರೆಂಟ್ ಆಗಿದೆ. ಇದರ ಜೊತೆಗೆ ಭಾಷೆಯೂ ಅಷ್ಟೇ. ಖುಷಿಯಾಗುತ್ತಿದೆ. ಎಷ್ಟೋ ದಿನಗಳಿಂದ ಕಂಡಿದ್ದ ಕನಸು ಇದೀಗ ನನಸಾಗುತ್ತಿದೆ" ಎಂದು ಖುಷಿ ಖುಷಿಯಿಂದ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಂಡಿರುವ ಶ್ರುತಿ ರಮೇಶ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ.

'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಆಶಿಕಾ ಎನ್ನುವ ನೆಗೆಟಿವ್ ರೋಲ್‌ನಲ್ಲಿ ಅಭಿನಯಿಸುತ್ತಿರುವ ಶ್ರುತಿ ರಮೇಶ್ ಅವರ ಕಿರುತೆರೆ ಪಯಣ ಶುರುವಾಗಿದ್ದು ಪೋಷಕ ಪಾತ್ರಗಳ ಮೂಲಕ. 'ಸತ್ಯಂ ಶಿವಂ ಸುಂದರಂ', 'ಸುಬ್ಬಲಕ್ಷ್ಮೀ ಸಂಸಾರ', 'ಶಾಂತಂ ಪಾಪಂ', 'ಬಿಳಿ ಹೆಂಡ್ತಿ', 'ಮಾನಸ ಸರೋವರ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಈಕೆಗೆ ಹೆಸರು ತಂದುಕೊಟ್ಟಿದ್ದು 'ಪಾಪಾ ಪಾಂಡು 2' ಧಾರಾವಾಹಿ.

'ಪಾಪಾ ಪಾಂಡು 2' ಧಾರಾವಾಹಿಯಲ್ಲಿ ನಿಮ್ಮಿಯಾಗಿ ನಟಿಸಿದ ಈಕೆ ಆ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿದ್ದು ಮಾತ್ರವಲ್ಲ, ಕರ್ನಾಟಕದಾದ್ಯಂತ ಮನೆಮಾತಾದರು. ಮುಂದೆ 'ಲಕ್ಷಣ' ಧಾರಾವಾಹಿಯಲ್ಲಿ ಮಿಲಿ ಪಾತ್ರದಲ್ಲಿ ಕಾಣಿಸಿಕೊಂಡ ಶ್ರುತಿ ರಮೇಶ್ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದರು. ಇದೀಗ 'ಕಾವೇರಿ ಕನ್ನಡ ಮೀಡಿಯಂ'ನಲ್ಲಿಯೂ ನೆಗೆಟಿವ್ ರೋಲ್ ನಲ್ಲಿ ನಟಿಸುತ್ತಿರುವ ಈಕೆ 'ಫ್ಯಾಮಿಲಿ ಪ್ಯಾಕ್' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದರು.

ನಂತರ 'ಶುಗರ್ ಲೆಸ್', 'ಸಿರಿ ಲಂಬೋದರ ವಿವಾಹ', 'ಜೆರ್ಸಿ ನಂ 1' ಹಾಗೂ ಇತ್ತೀಚೆಗಷ್ಟೇ ತೆರೆ ಕಂಡಿದ್ದ 'ಚೆಫ್ ಚಿದಂಬರ' ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ 'ಒರಿಜಿನಲ್ ಚಾಯ್ಸ್' ಹಾಗೂ 'ದೊಂಬರಾಟ' ಎನ್ನುವ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಟಾಕೀಸ್ ಆ್ಯಪ್ ನಲ್ಲಿ ಪ್ರಸಾರವಾಗಿರುವ 'ಮಿಲನ' ಹಾಗೂ 'ಸೀತಾಕಲ್ಯಾಣ' ವೆಬ್ ಸಿರೀಸ್‌ನಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಟನೆಯ ಹೊರತಾಗಿ ಶ್ರುತಿ ರಮೇಶ್ ಅವರು ಮೇಕಪ್ ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿರುವ ಬೆಡಗಿ.

More from Filmibeat

English summary
Shruti Ramesh says she is happy to be acting in mythological serial for the first time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X