For Quick Alerts
  ALLOW NOTIFICATIONS  
  For Daily Alerts

  ಅಸಭ್ಯವಾಗಿ ಮಾತನಾಡಿದ ವ್ಯಕ್ತಿಗೆ ಬುದ್ಧಿ ಹೇಳಿದ ಶುಭಾ ಪೂಂಜಾ!

  |

  ನಟಿ ಶುಭಾ ಪೂಂಜಾ ಬಗ್ಗೆ ಅಸಭ್ಯ ಕಮೆಂಟ್‌ಗಳು, ಕೆಟ್ಟ ರೀತಿಯ ಕಮೆಂಟ್‌ಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಲೇ ಇರುತ್ತಾರೆ ಕೆಲವು ಕಿಡಿಗೇಡಿಗಳು.

  ಇದೀಗ ನಟಿ ಶುಭಾ ಪೂಂಜಾ ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ. ತಮ್ಮ ಪ್ರೀತಿ ತುಂಬಿದ ಮನಸ್ಸಿನಿಂದ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ. ಆದರೆ ಶುಭಾ ರ ದೇಹದ ಬಗ್ಗೆ ಅಸಭ್ಯವಾಗಿ ಮಾತನಾಡುವವರು ತಮ್ಮ ಅಸಭ್ಯತೆ ಮೆರೆಯುತ್ತಲೇ ಇದ್ದಾರೆ.

  ಶುಭಾ ಪೂಂಜಾ ಅವರ ಚಿತ್ರಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿದ ವ್ಯಕ್ತಿಗೆ ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ ಶುಭಾ ಪೂಂಜಾ!


  ಅರೆ, ಶುಭಾ ಪೂಂಜಾ ಬಿಗ್‌ಬಾಸ್ ಮನೆಯಲ್ಲಿದ್ದಾರಲ್ಲ ಸಾಮಾಜಿಕ ಜಾಲತಾಣ ಹೇಗೆ ಬಳಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಶುಭಾ ಪೂಂಜಾ ಪರವಾಗಿ ಅವರ ತಂಡ ಶುಭಾ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ವಹಿಸುತ್ತಿದೆ.

  ಶುಭಾ ಬಗ್ಗೆ ಕಟ್ಟದಾಗಿ ಕಮೆಂಟ್ ಮಾಡಿದ ವ್ಯಕ್ತಿಗೆ, 'ನಿನ್ನ ಅಕ್ಕ-ತಂಗಿಗೆ ಇದೇ ರೀತಿ ಕಮೆಂಟ್ ಮಾಡಬಲ್ಲೆಯಾ' ಎಂದು ಶುಭಾ ಪೂಂಜಾ ತಂಡದವರು ರಿಪ್ಲೈ ಮಾಡಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡಿದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ತನ್ನ ಅಸಭ್ಯ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದಾರೆ.

  ಶುಭಾ ಪೂಂಜಾ ಅವರು ಬಿಗ್‌ಬಾಸ್ ಮನೆಯಲ್ಲಿ ಬಹಳ ಚೆನ್ನಾಗಿ ಆಟವಾಡುತ್ತಿದ್ದಾರೆ. ತಮ್ಮ ಮಾನವೀಯ ಹೃದಯದಿಂದ, ನೇರವಾದ ಮಾತುಗಳಿಂದ ಗಮನ ಸೆಳೆಯುತ್ತಿದೆ.

  English summary
  Shubha Poonja hit back at a troll on social media. Actually Shubha Poonja's team handling her social media accounts.
  Tuesday, March 2, 2021, 22:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X