ನನ್ನ ಗಂಡ ಕುಡುಕ ಅನ್ನೋದು ಗೊತ್ತಾಗಿದ್ದೇ ಮದುವೆಯಾದ್ಮೇಲೆ ; ಡಿವೋರ್ಸ್‌ ಆದ ವರ್ಷವೇ ತೀರ್ಕೊಂಡ್ರು - ಕಣ್ಣೀರಾದ ನಟಿ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇನ್ನು, ಚಿತ್ರರಂಗದಲ್ಲಿ ಕೂಡ ಅನೇಕರು ದೇಹದ ದಣಿವು ನೀಗಿಸಲು ಎಣ್ಣೆ ಹೊಡೆಯುತ್ತಾರೆ. ಕೆಲವರು ಒಂದೆರಡು ಪೆಗ್ ಹೊಡೆದರೆ, ಇನ್ನೂ ಕೆಲವರು ಕಂಠಪೂರ್ತಿ ಕುಡಿದು ತೂರಾಡುತ್ತಾರೆ.

ಇನ್ನು ಮದ್ಯಪಾನಕ್ಕೂ ಕೌಟುಂಬಿಕ ಹಿಂಸೆಗೂ ನಿಕಟವಾದ ಸಂಬಂಧವಿದೆ. ಅಧ್ಯಯನದ ವರದಿಗಳ ಪ್ರಕಾರ ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ಮದ್ಯವ್ಯಸನಿಗಳದ್ದೇ ಸಿಂಹಪಾಲು ಹಿಂಸೆಯೆಂದರೆ ಅದು ಬೈಗುಳ ಆಗಿರಬಹುದು, ದೈಹಿಕ, ಮಾನಸಿಕ ಅಥವಾ ಲೈಂ*ಗಿಕ ಹಿಂಸೆಯಾಗಿರಬಹುದು. ಕೆಲವು ವೇಳೆ ಮದ್ಯವ್ಯಸನಿಗಳು ಇತರರ ಮುಂದೆ ದೂಷಣೆ ಮಾಡುವುದು ಸಹ ಸಾಮಾಜಿಕ ಹಿಂಸೆ ಆಗಿರುತ್ತದೆ.

Shubhangi Atre Surviving An Alcohol-Fueled Marriage and Hardships Of Single Motherhood

ಹೀಗೆ ಸಹಿಸಲಾಗದ ಹಿಂಸೆಯಿಂದ ಕೇವಲ ಸಾಮಾನ್ಯ ಮಹಿಳೆಯರು ಮಾತ್ರ ನೊಂದು, ಬೆಂದು, ಕಣ್ಣೀರು ಹಾಕುವುದಿಲ್ಲ. ಬದಲಿಗೆ ಚಿತ್ರರಂಗದ ಚೆಲುವೆಯರು ಕೂಡ ಕಣ್ಣೀರಿನಲ್ಲಿ ಕೈ ತೊಳೆದಿದ್ದಾರೆ. ಉದಾಹರಣೆಗೆ ಶುಭಾಂಗಿ ಅತ್ರೆ.

ಹೌದು, ಶುಭಾಂಗಿ ಅತ್ರೆ.. ''ಕಸೌಟಿ ಜಿಂದಗಿ ಕೇ'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಚೆಲುವೆ. ''ಭಾಬಿಜೀ ಘರ್ ಪರ್ ಹೈ'' ಧಾರಾವಾಹಿಯ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಶುಭಾಂಗಿ ಅವರನ್ನು ಹಲವರು ಈಗಲೂ ಕೂಡ ಅಂಗೂರಿ ಭಾಬಿ ಎಂದೆ ಕರೆಯುತ್ತಾರೆ.

''ಕಸ್ತೂರಿ''.. ''ದೋ ಹನ್ಸೋ ಕಾ ಜೋಡಾ''.. ''ಚಿಡಿಯಾ ಘರ್''.. ಇವರ ಕೆಲ ಪ್ರಮುಖ ಮತ್ತು ಪ್ರಖ್ಯಾತ ಧಾರಾವಾಹಿಗಳು. ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪಿಯೂಷ್ ಪೂರೆ ಅವರಿಗೆ ಮನ ಸೋತ ಶುಭಾಂಗಿ 2003ರಲ್ಲಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾದರು. ಇವರಿಗೆ ಒಬ್ಬಳು ಮಗಳಿದ್ದಾಳೆ. ಆಕೆಯ ಹೆಸರು ಆಶಿ.

ಆದರೆ, ಎಲ್ಲರಂತೆ ಇವರಿಗೆ ಸಂಸಾರ ಸುಖ ಸಿಗಲಿಲ್ಲ. ಇದಕ್ಕೆ ಆಗಲೇ ಹೇಳಿದಂತೆ ಮದ್ಯಪಾನವೇ ಪ್ರಮುಖ ಕಾರಣ. ಖುದ್ದು ಈ ವಿಚಾರವನ್ನು ಶುಭಾಂಗಿ ಹೇಳಿದ್ದಾರೆ. ತಮ್ಮ ಮದುವೆ ಮುರಿದು ಬೀಳಲು ಮದ್ಯಪಾನವೇ ಪ್ರಮುಖ ಕಾರಣ ಎಂದಿದ್ದಾರೆ.

Shubhangi Atre Surviving An Alcohol-Fueled Marriage and Hardships Of Single Motherhood

ಈ ಕುರಿತು ಸಿದ್ದಾರ್ಥ್ ಕಣ್ಣನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶುಭಾಂಗಿ ಮದುವೆ ಮುನ್ನ ಪಿಯೂಷ್‌ಗೆ ಎಣ್ಣೆ ಹೊಡೆಯುವ ಅಭ್ಯಾಸ ಇದೆ ಎನ್ನುವ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಆತನ ಮದ್ಯಪಾನದ ಚಟದ ವಿಷಯ ನನಗೆ ಮದುವೆಯ ನಂತರವಷ್ಟೇ ಗೊತ್ತಾಯ್ತು ಎಂದು ಹೇಳಿರುವ ಶುಭಾಂಗಿ ನಮ್ಮ ಸಂಸಾರ ಉಳಿಸಿಕೊಳ್ಳುವ ಸಾಕಷ್ಟು ಪ್ರಯತ್ನವನ್ನು ನಾನು ಮಾಡಿದ್ದೆ ಎಂದು ಹೇಳಿದ್ದಾರೆ.

17 ವರ್ಷ ನಾವು ಜೊತೆಯಲ್ಲಿಯೇ ಇದ್ವಿ, ಆದರೆ.. ಕೆಲಸದ ಒತ್ತಡದಲ್ಲಿ ವೈಯಕ್ತಿಕ ಬದುಕು ಯಾವಾಗ ಹಳ್ಳ ಹಿಡಿದು ಹೋಯ್ತು ಎನ್ನುವುದೇ ಗೊತ್ತಾಗಲಿಲ್ಲ ಎಂದು ಹೇಳಿರುವ ಶುಭಾಂಗಿ, ಅವರ ಎಣ್ಣೆಯ ಚಟದಿಂದ ನನ್ನ ಮಗಳಿಗೆ ತುಂಬಾ ತೊಂದರೆಯಾಗುತ್ತಿತ್ತು ಎಂದು ಹೇಳಿದ್ದಾರೆ.

ಕೊರೊನಾ ಸಮಯದಲ್ಲಿ ನಾನು ಕೂಡ ಮನೆಯಲ್ಲಿದ್ದೆ, ಆಗ ಎಲ್ಲವನ್ನೂ ಕಣ್ಣಾರೆ ಕಂಡ, ಅನುಭವಿಸಿದೆ ಎಂದು ಹೇಳಿರುವ ಶುಭಾಂಗಿ 2018ರಿಂದ ಪಿಯೂಷ್ ಸ್ಟೀರಾಯ್ಡ್ ಬೇರೆ ಉಪಯೋಗ ಮಾಡಲು ಶುರು ಮಾಡಿದ್ದರು ಎಂದು ಹೇಳಿದ್ದಾರೆ. ಸ್ಟೀರಾಯ್ಡ್ ಜೊತೆ ಮದ್ಯಪಾನವೂ ಇತ್ತು ಎಂದಿದ್ದಾರೆ.

ಪಿಯೂಷ್ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಲೇ ಇತ್ತು, ವೈದ್ಯರು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದರು ಎಂದು ಹೇಳಿರುವ ಶುಭಾಂಗಿ ಈ ಎಚ್ಚರಿಕೆಯನ್ನು ಕೂಡ ಪಿಯೂಷ್ ಕಡೆಗಣಿಸಿದರು, ಕೊನೆಯವರೆಗೂ ಬದಲಾಗಲೇ ಇಲ್ಲ ಎಂದು ಭಾವುಕರಾಗಿದ್ದಾರೆ.

ನಾನು ಎಷ್ಟೇ ಪ್ರಯತ್ನ ಮಾಡಿದರೂ, ಬೇಡಿಕೊಂಡರು, ಮದ್ಯಪಾನವನ್ನು ಅವರು ಬಿಡಲಿಲ್ಲ ಹೀಗಾಗಿ ಕೊನೆಗೆ 2020ರಲ್ಲಿ ನಾನೇ ಅವನನ್ನು ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೆ, ಆದರೆ ಈ ಎಲ್ಲಾ ಸಂಗತಿಗಳು ನನ್ನ ಮತ್ತು ನನ್ನ ಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಶುರುವಾದವು ಎಂದು ಹೇಳಿದ್ದಾರೆ. ಆ ನಂತರ ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದು ದೂರ ಆದೆ ಎಂದು ಹೇಳಿದ್ದಾರೆ.

ಎರಡು ವರ್ಷ ನಾವು ದೂರ ಇದ್ದೇವು, ಆ ಸಮಯದಲ್ಲಿ ಅವರ ಆರ್ಥಿಕ ಅಗತ್ಯತೆಗಳನ್ನು ಕೂಡ ನಾನೇ ನೋಡಿಕೊಳ್ಳುತ್ತಿದ್ದೆ ಎಂದು ಹೇಳಿರುವ ಶುಭಾಂಗಿ 2025ರಲ್ಲಿ ನಾವು ಅಧಿಕೃತವಾಗಿ ವಿಚ್ಚೇದನ ಪಡೆದೆವು ಎಂದು ಹೇಳಿದ್ದಾರೆ. ದುಃಖದ ಸಂಗತಿ ಅಂದರೆ ಫೆಬ್ರವರಿ 2025 ರಲ್ಲಿ ಇವರ ವಿಚ್ಚೇದನ ಆಯ್ತು. ವಿಚ್ಚೇದನ ಆದ ಕೇವಲ ಒಂದೂವರೆ ತಿಂಗಳಿನಲ್ಲಿಯೇ ಏಪ್ರಿಲ್ 19, 2025 ರಂದು ಪಿಯೂಷ್ ಪೂರೆ ಲಿವರ್ ಸಿರೋಸಿಸ್‌ನಿಂದ ನಿಧನರಾದರು.

English summary
Bhabhiji Ghar Par Hain star Shubhangi Atre reveals the raw truth behind her divorce, her ex-husband's secret addiction, and her inspiring journey as a single mother. Read her untold story here.`
Read more about: drinks life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X