ಕೋಳಿ ಮೊಟ್ಟೆಯನ್ನು ಸೋಪ್ ಹಾಕಿ ತೊಳೆಯೋದ್ಯಾಕೆ ಶ್ವೇತಾ ಚೆಂಗಪ್ಪ? ಆಕೆಗಿರುವ ಮಾನಸಿಕ ಸಮಸ್ಯೆ ಏನು?

ಜಗತ್ತಿನಲ್ಲಿ 1% ರಿಂದ 2% ಜನ ಭಿನ್ನ ವಿಭಿನ್ನ ಒಸಿಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತದಲ್ಲಿ ಇದು 0.8% ರಷ್ಟಿದೆ. ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ಎನ್ನುವುದು ಮಾನಸಿಕ ಸಮಸ್ಯೆ. ಸಾಕಷ್ಟು ಜನ ಇದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಒಸಿಡಿ ಗಂಭೀರ ಸಮಸ್ಯೆ ಅಲ್ಲದೇ ಇದ್ದರೂ ಕೆಲವೊಮ್ಮೆ ವಿಕೋಪಕ್ಕೆ ಹೋಗಿಬಿಡುತ್ತದೆ. ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಕೂಡ ಒಸಿಡಿ ಸಮಸ್ಯೆ ಎದುರಿಸುತ್ತಿದ್ದಾರೆ.

ತಮಿಳು ನಟಿ ಸ್ನೇಹಾ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಕೆಲ ತಾರೆಯರು ತಮ್ಮ ಒಸಿಡಿ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಶುಚಿತ್ವದ ಬಗ್ಗೆ ಹೆಚ್ಚು ಜನರಿಗೆ ಒಸಿಡಿ ಇರುತ್ತದೆ. ಒಸಿಡಿ ಎನ್ನುವುದು ಪದೇ ಪದೆ, ಅನಗತ್ಯ ಆಲೋಚನೆ, ನಡವಳಿಕೆ ಇರುವ ಮಾನಸಿಕ ಆರೋಗ್ಯ ಸಮಸ್ಯೆ. ಇದು ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ. ಒಡಿಸಿ ಒಂದು ಗೀಳು. ಸೋಂಕಿನ ಬಗ್ಗೆ ವಸ್ತುಗಳನ್ನು ಸರಿಯಾಗಿ ಇಡುವ ಬಗ್ಗೆ ಏನಾದರೂ ಹಾನಿ ಆಗಿಬಿಡುತ್ತಾ ಎಂದು ಪದೇ ಪದೆ ಆಲೋಚನೆ ಮಾಡುವುದು. ಹಾಗಂತ ಒಸಿಡಿಯನ್ನು ಹುಚ್ಚು ಅಥವಾ ರೋಗ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇದು ಮಾನಸಿಕ ಸಮಸ್ಯೆ ಮಾತ್ರ.

Shweta Chengappa Reveals Her OCD Habit I Wash Eggs With Soap Before use Them

ಕೈ ಚೆನ್ನಾಗಿ ತೊಳೆದಿದ್ದೀನಾ? ಇಲ್ವಾ? ಎಂದು ಪದೇ ಪದೆ ಆಲೋಚಿಸುವುದು. ಪದೇ ಪದೆ ಕೈ ತೊಳೆಯುವುದು, ಬೀಗ ಸರಿಯಾಗಿ ಹಾಕಿದ್ದೀನಾ? ಇಲ್ವಾ? ಎಂದು ಪದೇ ಪದೆ ಚೆಕ್ ಮಾಡಿ ನೋಡುವುದು, ಹಣ ಅಥವಾ ಏನಾದರೂ ಲೆಕ್ಕ ಹಾಕಿದ್ರೆ, ಅದು ಸರಿಯಾಗಿ ಇದ್ಯಾ? ಇಲ್ವಾ? ಎಂದು ಪದೇ ಪದೆ ಲೆಕ್ಕ ಹಾಕುವುದು. ಯಾವುದೇ ಸೋಂಕು ಇಲ್ಲದೇ ಮನೆ ಶುಭ್ರವಾಗಿ ಇದ್ಯಾ? ಇಲ್ವಾ? ಎಂದು ಯೋಚಿಸಿ ಪದೇ ಪದೆ ಒರೆಸುವುದು. ನಿರೂಪಕಿ ಶ್ವೇತಾ ಚೆಂಗಪ್ಪ ಕೋಳಿ ಮೊಟ್ಟೆಯನ್ನು ಸೋಪ್ ಹಾಕಿ ತೊಳೆದು ಎತ್ತಿಡುತ್ತಾರಂತೆ. 'ಜೋಡಿ ನಂ.1' ಕಾರ್ಯಕ್ರಮದಲ್ಲಿ ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ.

ವೇದಿಕೆಯಲ್ಲಿ ಒಸಿಡಿ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಶ್ವೇತಾ ಅವಗಿರುವ ಒಸಿಡಿ ಬಗ್ಗೆ ಪ್ರಸ್ತಾಪಸಿ ಕುರಿ ಪ್ರತಾಪ್ ತಮಾಷೆ ಮಾಡಿದ್ದಾರೆ. ಕೋಳಿ ಮೊಟ್ಟೆಯನ್ನು ಶ್ವೇತಾ ಹೆಂಗೆ ತಿಂತಾರೆ ಎಂದು ಕೇಳಿದ್ದಾರೆ. ಆಗ ಆಕೆ ಉತ್ತರಿಸಿ ತಮ್ಮ ಒಸಿಡಿ ಬಗ್ಗೆ ಹೇಳಿದ್ದಾರೆ. "ನನಗೆ ಸ್ವಲ್ಪ ಜಾಸ್ತಿ ಒಸಿಡಿಯಿದೆ. ನಾನು ಕೋಳಿ ಮೊಟ್ಟೆ ಮನೆಗೆ ತಂದ ಮೇಲೆ ಸೋಪ್ ಹಾಕಿ, ಚೆನ್ನಾಗಿ ತೊಳೆದು ಬಳಿಕ ಫ್ರಿಡ್ಜ್‌ನಲ್ಲಿ ಎತ್ತಿಡುತ್ತೀನಿ. ಕಾರಣ ಮೊಟ್ಟೆ ಎಲ್ಲಿಂದ ಬರುತ್ತೆ ಗೊತ್ತಾ? ಎಂದು ಹೇಳಿ ಶ್ವೇತಾ ನಕ್ಕಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಡಾರ್ಕ್ ಥೀಮ್‌ನಲ್ಲೇ ಯಾಕೆ ಸಿನಿಮಾಗಳನ್ನು ಮಾಡ್ತೀರಾ ಎನ್ನುವ ಪ್ರಶ್ನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರಿಸಿದ್ದರು. ನನಗೆ ಒಸಿಡಿ ಇದೆ. ಬೇರೆ ಬಣ್ಣಗಳನ್ನು ಹೆಚ್ಚು ಇಷ್ಟಪಡಲ್ಲ. ಹೆಚ್ಚು ಬಣ್ಣದ ಬಟ್ಟೆಗಳನ್ನು ಧರಿಸಲ್ಲ. ನನ್ನ ವೈಯಕ್ತಿಕ ವಿಚಾರಗಳೇ ಸಿನಿಮಾಗಳಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ್ದರು.

ತಮಿಳು ನಟಿ ಸ್ನೇಹಾ ತಮಗೆ ಶುಚಿತ್ವದ ಬಗ್ಗೆ ಒಸಿಡಿ ಇದೆ ಎಂದು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. "ಮನೆಯನ್ನು ಪದೇ ಪದೆ ಕ್ಲೀನ್ ಮಾಡುತ್ತಲೇ ಇರುತ್ತೇನೆ. ನನ್ನ ಸುತ್ತಾಮುತ್ತಾ ಎಲ್ಲವೂ ಸ್ವಚ್ಛವಾಗಿರಬೇಕು. ನನಗೆ ಅದೊಂದು ಒಸಿಡಿ. ಇದೇ ಕಾರಣಕ್ಕೆ ಮೂರು ಬಾರಿ ಮನೆ ಬದಲಿಸುವಂತಾಯಿತು" ಎಂದು ಆಕೆ ಹೇಳಿದ್ದರು. ಕನ್ನಡದ 'ರವಿಶಾಸ್ತ್ರಿ' ಹಾಗೂ 'ಕುರುಕ್ಷೇತ್ರ' ಸಿನಿಮಾಗಳಲ್ಲಿ ಸ್ನೇಹಾ ನಟಿಸಿದ್ದರು.

Read more about: actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X