ಶ್ವೇತಾ ಪಂಡಿತ್, ವಿಜಯ್ ಸಂಬಂಧ ಕೆಣಕಿದ ಚಂದ್ರಿಕಾ
ಇಷ್ಟು ದಿನ ಬೂದಿಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ನಡುವಿನ ಜಗಳ ಛೀ ಎಂಬ ಪದ ಮೂಲಕ ಧಗ್ಗನೆ ಹೊತ್ತಿಕೊಂಡಿತು. ಎಲ್ಲಿಂದಲೋ ಬಂದವಳ ಕೈಯಲ್ಲಿ ನಾನು ಛೀ ಅನ್ನಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನಾನು ಕ್ರೂರಿ ರಿಂಗ್ ಮಾಸ್ಟರ್. ನಾನು ನಡೆದುಕೊಳ್ಳುವುದೇ ಹೀಗೆ ಎಂದು ನಿಕಿತಾ ಬಳಿ ವಾದಿಸಿದರು.
ಇವರಿಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ವಿಜಯ್ ರಾಘವೇಂದ್ರ ಮೊದಲು ಸಮಾಧಾನಪಡಿಸಲು ನೋಡಿದ. ಕಡೆಗೆ ಈ ಜಗಳ ಚಂದ್ರಿಕಾ ಕಡೆಯಿಂದ ವಿಜಯ್ ಕಡೆಗೆ ತಿರುಗಿತು.

ನಿಕಿತಾ ಕೂದಲನ್ನು ಎಳೆದದ್ದು ತಪ್ಪು ಎಂದು ಚಂದ್ರಿಕಾಗೆ ಬುದ್ಧಿ ಹೇಳಲು ಹೋಗಿ ಕಡೆಗೆ ದೊಡ್ಡ ರಾದ್ಧಾಂತಕ್ಕೆ ಬಿಗ್ ಬಾಸ್ ಮನೆ ಕಾರಣವಾಯಿತು. ಶ್ವೇತಾ ಪಂಡಿತ್ ಅವರನ್ನು ನೀವು ಮುಟ್ಟಿರಲಿಲ್ಲವೇ. ಅವಳ ಜೊತೆ ನೀವು ಮಿಸ್ ಬಿಹೇವ್ ಮಾಡಿರಲಿಲ್ಲವೇ ಎಂದು ಚಂದ್ರಿಕಾ ಅಂದದ್ದಕ್ಕೆ ವಿಜಯ್ ಪಿತ್ತ ಒಮ್ಮೆಲೆ ನೆತ್ತಿಗೇರಿಬಿಟ್ಟಿತು.
ಅದು ಹಳೆಯ ಕಥೆ. ಈಗ ಬೇಡ. ನಮ್ಮ ಜೊತೆಗೆ ಶ್ವೇತಾ ಪಂಡಿತ್ ಇಲ್ಲ. ಶ್ವೇತಾಗೆ ನಾನು ಎಲ್ಲಿ ಮುಟ್ಟಿದೆ, ಯಾವಾಗ ಮುಟ್ಟಿದೆ, ಎಷ್ಟು ಮುಟ್ಟಿದೆ ಎಂದು ನನಗೆ ಗೊತ್ತು. ಆದರೆ ನಿನ್ನ ತರಹ ಫಿಜಿಕಲ್ ಅಬ್ಯೂಸ್ ಮಾಡಿಲ್ಲ ಎಂದರು ವಿಜಯ್.
ಚಂದ್ರಿಕಾ ಜೊತೆಗಿನ ಅವರ ವಾದ ಬಿರುಸಾಗಿತ್ತು. ಇದಕ್ಕಿದ್ದಂತೆ ಟ್ರಿಗರ್ ಆದ ಅವರು ಚಂದ್ರಿಕಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅವರಿಬ್ಬರ ನಡುವಿನ ವಾದ ವಿವಾದ ವಿಕೋಪಕ್ಕೆ ಹೋಗಿ ಮನೆಯಲ್ಲಿ ಇನ್ನೇನಾಗುತ್ತದೋ ಎಂದು ವೀಕ್ಷಕರು ಕಂಗಾಲಾಗಿ ನೋಡುವಂತಾಯಿತು.


Click it and Unblock the Notifications











