ಪ್ರೈವೇಟ್ ಪಾರ್ಟ್ ಗೆ ಪೆಟ್ಟಾಗಿದ್ದ ಬಗ್ಗೆ ಶ್ವೇತಾ ಪ್ರಸ್ತಾಪ
ಮನೆಯ ಸದಸ್ಯರೇ ಒಬ್ಬರ ಮೇಲೆ ಒಬ್ಬರು ಕೊಟ್ಟುಕೊಂಡಂತಹ ಆರೋಪಗಳನ್ನು ಅಕುಲ್ ಒಂದೊಂದಾಗಿ ಓದಿದರು. ಮೊದಲ ಆರೋಪಿಯಾಗಿ ಶ್ವೇತಾ ಚೆಂಗಪ್ಪ ಬಂದರು. ಅವರ ಮೇಲಿನ ಆರೋಪ ನಿಜಕ್ಕೂ ತಮಾಷೆಯಾಗಿತ್ತು, ಆದರೆ ಅವರ ಉತ್ತರ ಮಾತ್ರ ಗಂಭೀರವಾಗಿತ್ತು.
ಎಲ್ಲರ ಗಮನ ಸೆಳೆಯುವ ಸಲುವಾಗಿ ನೀವು ನಾಟಕ ಮಾಡ್ತೀರಾ, ಅತ್ತು ಕರೆದು ಮಾಡ್ತೀರಾ ಎಂಬ ಆರೋಪ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ಉದ್ದೇಶ ತಮಗಿಲ್ಲ. ಒಂದು ಹುಡುಗಿಗೆ ಪ್ರೈವೇಟ್ ಪಾರ್ಟ್ ಗೆ ಪೆಟ್ಟು ಬಿದ್ದು ಮುಟ್ಟಕ್ಕೆ ಆಗದೆ ಇರುವಂತಹ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದಾಗ ಅದನ್ನು ಹುಡುಗರಿಗೆ ಕರೆದು ತೋರಿಸಲು ಸಾಧ್ಯವಿಲ್ಲ. ಆಗ ನನ್ನ ಭಾವನೆಯಗಳ್ನು ಹೇಗೆ ವ್ಯಕ್ತಪಡಿಸುವುದು. ಅದನ್ನು ಡ್ರಾಮಾ ಎನ್ನುವುದು ಸರಿಯಲ್ಲ ಎಂದರು.

ಎರಡನೇ ಆರೋಪಿ ಅನುಪಮಾ ಅವರನ್ನು ಕಟಕಟೆಗೆ ಕರೆಯಲಾಯಿತು. ನಿಮ್ಮ ಎಲ್ಲಾ ನಡವಳಿಕೆ ನಟನೆಯಂತೆ ಕಾಣುತ್ತದೆ ಎಂಬ ಆರೋಪ. ಈ ಮೂರು ವಾರಗಳಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಎಲ್ಲರೂ ನಟನೆ ಎಂದು ಭಾವಿಸಿರುವ ಸಾಧ್ಯತೆ ಇರುತ್ತದೆ. ಸಮಯ ಕಳೆದಂತೆ ಇದು ಮುಖವಾಡವೋ, ಅಲ್ಲವೋ ಎಂಬುದು ಅವರಿಗೇ ಗೊತ್ತಾಗುತ್ತದೆ ಎಂದರು ಅನುಪಮಾ.
ಏನೇ ಮಾತನಾಡಿದರೂ ಅದನ್ನು ಅಳೆದು ತೂಗಿ ಮಾತನಾಡುತ್ತಾರೆ ಎಂಬ ಇನ್ನೊಂದು ಆರೋಪವನ್ನೂ ಅನುಪಮಾ ನಿರಾಕರಿಸಿದರು. ಸಮಯವೇ ಎಲ್ಲವನ್ನೂ ನಿಭಾಯಿಸುತ್ತದೆ, ಮುಖವಾಡ ಹಾಕಿಕೊಂಡು ಎಷ್ಟು ದಿನವೂ ಇರಲಿಕ್ಕೆ ಆಗಲ್ಲ. ಸಮಯ ಬಂದಾಗ ಎಲ್ಲವೂ ನಿಮಗೇ ಗೊತ್ತಾಗುತ್ತದೆ ಎಂದರು ಅನುಪಮಾ.
ನೀತೂ ಅವರನ್ನು ಕಟಕಟಗೆ ಕರೆದು, ನಿಮ್ಮ ಬಗ್ಗೆಯೇ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತೀರಾ, ಬೇರೆಯವರ ಬಗ್ಗೆ ನಿಮಗೆ ಏನೇನೂ ಕಾಳಜಿಯಿಲ್ಲ ಎಂಬ ಆರೋಪ ಮಾಡಲಾಗಿದೆ ಎಂದರು. ಇದಕ್ಕೆ ಅವರು ನಗುತ್ತಲೇ ಉತ್ತರಿಸುತ್ತಾ, ಎಲ್ಲರೂ ನನ್ನನ್ನು ನೀನು ಬೇರೆಯವರೆ ಬಗ್ಗೆಯೇ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತೀರಾ ಎನ್ನುತ್ತಾರೆ. ಇದಕ್ಕೆ ತದ್ವಿರುದ್ಧವಾದ ಆರೋಪ ಬಂದಿರುವ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು.


Click it and Unblock the Notifications











