»   » 'ಮಜಾ ಟಾಕೀಸ್'ನಲ್ಲಿ ಓವರ್ ಆಕ್ಟಿಂಗ್ ಬಗ್ಗೆ ಕೇಳ್ದಾಗ, ಶ್ವೇತ ಚಂಗಪ್ಪ ಹೀಗ್ಹೇಳಿದ್ರು.!

'ಮಜಾ ಟಾಕೀಸ್'ನಲ್ಲಿ ಓವರ್ ಆಕ್ಟಿಂಗ್ ಬಗ್ಗೆ ಕೇಳ್ದಾಗ, ಶ್ವೇತ ಚಂಗಪ್ಪ ಹೀಗ್ಹೇಳಿದ್ರು.!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಅಗುತ್ತಿರುವ ಜನಪ್ರಿಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಕೋಬ್ರಾ' ಸೃಜನ್ ಪತ್ನಿ 'ರಾಣಿ' ಪಾತ್ರಧಾರಿ ಶ್ವೇತ ಚಂಗಪ್ಪ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.?

ಹಿಂದೆಲ್ಲ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶ್ವೇತ ಚಂಗಪ್ಪ, 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ 'ಮಜಾ ಟಾಕೀಸ್' ಸೇರಿದರು. 'ಮಜಾ ಟಾಕೀಸ್'ನಲ್ಲಿ ಶ್ವೇತ ಚಂಗಪ್ಪ ಸ್ವಲ್ಪ ಓವರ್ ಆಗಿ ಆಕ್ಟ್ ಮಾಡುತ್ತಾರೆ ಅಂತ ನಿಮಗೆ ಅನಿಸಲ್ವಾ.?

ಶ್ವೇತ ರವರದ್ದು ಓವರ್ ಅಕ್ಟಿಂಗ್ ಎಂದು ನಿಮಗೆ ಅನಿಸುತ್ತೋ, ಇಲ್ವೋ..? ಆದ್ರೆ, ಕೆಲವರಿಗೆ ಹಾಗೆ ಅನಿಸಿದೆ. ಅನಿಸಿದ್ದನ್ನ, ವೀಕ್ಷಕರೊಬ್ಬರು ನೇರವಾಗಿ ಶ್ವೇತ ಚಂಗಪ್ಪ ರವರಿಗೆ ಹೇಳಿದ್ದಾರೆ. ಅದಕ್ಕೆ ಶ್ವೇತ ಚಂಗಪ್ಪ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.? ಮುಂದೆ ಓದಿರಿ...

ಫೇಸ್ ಬುಕ್ ಲೈವ್ ನಲ್ಲಿ ವೀಕ್ಷಕರ ಪ್ರಶ್ನೆ

ಇತ್ತೀಚೆಗಷ್ಟೇ ತಮ್ಮ ಅಫೀಶಿಯಲ್ ಫೇಸ್ ಬುಕ್ ಅಕೌಂಟ್ ಮೂಲಕ ನಟಿ ಶ್ವೇತ ಚಂಗಪ್ಪ 'ಲೈವ್'ಗೆ ಬಂದಿದ್ದರು. ಆಗ ವೀಕ್ಷಕರೊಬ್ಬರು 'ಮಜಾ ಟಾಕೀಸ್'ನಲ್ಲಿನ ಓವರ್ ಆಕ್ಟಿಂಗ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!

ಓವರ್ ಅಕ್ಟಿಂಗ್ ಇಷ್ಟ ಅಂತೆ.!

''ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ನೀವು ಓವರ್ ಆಕ್ಟಿಂಗ್ ಮಾಡುವುದು ಇಷ್ಟ ಆಗುತ್ತದೆ'' ಎಂದು ವೀಕ್ಷಕರೊಬ್ಬರು ಶ್ವೇತ ಚಂಗಪ್ಪ ರವರಿಗೆ ಹೇಳಿದರು. 'ಓವರ್ ಆಕ್ಟಿಂಗ್' ಎಂದು ಕೇಳುತ್ತಿದ್ದಂತೆಯೇ, ನಟಿ ಶ್ವೇತ ಚಂಗಪ್ಪ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು...

ಓವರ್ ಆಕ್ಟಿಂಗ್ ಕ್ಯಾರೆಕ್ಟರ್

''ಹೌದು, ಅಲ್ಲಿ ನನ್ನದು ಓವರ್ ಆಕ್ಟಿಂಗ್ ಕ್ಯಾರೆಕ್ಟರ್. ಮಿಡಲ್ ಕ್ಲಾಸ್ ಹೌಸ್ ವೈಫ್ ಆಗಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಓವರ್ ಆಕ್ಟಿಂಗ್ ಮಾಡಿ ಎಲ್ಲರಿಗೂ ಟಾರ್ಚರ್ ಕೊಡುವಂಥ ಪಾತ್ರ ನನ್ನದು. ಹಾಗಾಗಿ ಓವರ್ ಆಕ್ಟಿಂಗ್ ಅನಿಸುತ್ತೆ'' ಎಂದು ಶ್ವೇತ ಚಂಗಪ್ಪ ಹೇಳಿದರು.

ಧಾರಾವಾಹಿಯಲ್ಲೂ ಹಾಗೇ ಅನಿಸುತ್ತಾ.?

''ಧಾರಾವಾಹಿಗಳಲ್ಲಿ ನಾನು ಓವರ್ ಆಕ್ಟಿಂಗ್ ಮಾಡುವುದನ್ನು ನೋಡಿದ್ದೀರಾ.? ನಾನು ಓವರ್ ಆಕ್ಟಿಂಗ್ ಮಾಡುವುದಿಲ್ಲ. 'ಮಜಾ ಟಾಕೀಸ್'ನಲ್ಲಿ ನನ್ನ ಪಾತ್ರ ಇರುವುದು ಹಾಗೆ'' ಎಂದರು ಶ್ವೇತ ಚಂಗಪ್ಪ

ಕೊನೆಗೆ ಥ್ಯಾಂಕ್ಸ್

''ನನ್ನ ಓವರ್ ಆಕ್ಟಿಂಗ್ ಇಷ್ಟ ಎಂದು ಹೇಳಿದ್ದೀರಾ. ಥ್ಯಾಂಕ್ಸ್'' ಎಂದು ಕೊನೆಗೆ ನಕ್ಕುಬಿಟ್ಟರು ಶ್ವೇತ ಚಂಗಪ್ಪ.

English summary
Read the article to know Shwetha Changappa's reaction to her fan who asked about her over acting in 'Majaa Talkies'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada