Shwetha Changappa: ಲಂಗ ದಾವಣಿಯಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ.. "ದೇವಲೋಕದ ಅಪ್ಸರೆ" ಎಂದ ನೆಟ್ಟಿಗರು

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ 'ಜೋಡಿ ನಂ 1' ಸೀಸನ್ 2 ಶುರುವಾಗಿದ್ದು ಶ್ವೇತಾ ಚೆಂಗಪ್ಪ ಹಾಗೂ ಕುರಿ ಪ್ರತಾಪ್ ಅವರು ನಿರೂಪಕರಾಗಿ ಮೋಡಿ ಮಾಡುತ್ತಿದ್ದಾರೆ. ಸಿನಿಮಾ ನಟಿ ಮಾಳವಿಕಾ ಅವಿನಾಶ್ ಹಾಗೂ ನೆನಪಿರಲಿ ಪ್ರೇಮ್ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ 'ಜೋಡಿ ನಂ 1' ಸೀಸನ್ ವೇದಿಕೆಗೆ ಈ ವಾರ ಶ್ವೇತಾ ಚೆಂಗಪ್ಪ ಅವರು ಲಂಗ ದಾವಣಿ ಧರಿಸಿಕೊಂಡು ಬರಲಿದ್ದಾರೆ.

ಲಂಗ ದಾವಣಿ ಧರಿಸಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶ್ವೇತಾ ಚೆಂಗಪ್ಪ "ದಕ್ಷಿಣ ಭಾರತದ ಉಡುಗೆ ನನ್ನ ಆಲ್ ಟೈಮ್ ಫೇವರಿಟ್. ನಾವು ಹುಡುಗಿಯರು ಯಾವಾಗಲೂ ದಕ್ಷಿಣ ಭಾರತದ ಉಡುಗೆಯಲ್ಲಿ ಅತ್ಯುತ್ತಮ ಆಗಿ ಕಾಣುತ್ತೇವೆ.. ಅಲ್ಲವೇ" ಎಂದು ಬರೆದುಕೊಂಡಿದ್ದಾರೆ.

Shwetha Changappa shined in Langa Davani Netizens say she is beautiful

ಶ್ವೇತಾ ಅವರ ಈ ಪೋಸ್ಟ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಹೌದು, ಕಡು ನೀಲಿ ಬಣ್ಣದ ಉದ್ದ ಲಂಗವನ್ನು ಧರಿಸಿರುವ ಶ್ವೇತಾ ಪರ್ಪಲ್ ಬಣ್ಣದ ದಾವಣಿಯನ್ನು ಧರಿಸಿ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ.

ಯಾವ ಹೀರೋಯಿನ್‌ಗೂ ನೀವು ಕಡಿಮೆಯಿಲ್ಲ, ದೇವತೆ ತರಹ ಇದ್ದೀರಾ, ರಿಯಲ್ ಬ್ಯೂಟಿ, ಸುಂದರ ನಿರೂಪಕಿ, ಕರ್ನಾಟಕ ಕಂಡ ದೇವಲೋಕದ ಅಪ್ಸರೆ, ಬೇಬಿ ಡಾಲ್, ಸ್ಮೈಲಿಂಗ್ ಕ್ವೀನ್ ಎಂಬ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ.

Shwetha Changappa shined in Langa Davani Netizens say she is beautiful

ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ, ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶ್ವೇತಾ ಚೆಂಗಪ್ಪ ತದ ನಂತರ ನಿರೂಪಕಿಯಾಗಿಯೂ ಮೋಡಿ ಮಾಡಿದ್ದರು. ಮುಂದೆ ಕಿರಣ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಶ್ವೇತಾ ಚೆಂಗಪ್ಪ ಗರ್ಭಿಣಿಯಾಗಿದ್ದ ಕಾರಣ ನಿರೂಪಣೆಯಿಂದ ದೂರವಿದ್ದರು. ಮಗ ಜಿಯಾನ್ ಅಯ್ಯಪ್ಪಗೆ ಸಮಯ ನೀಡಲು ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಸದ್ಯ ಶ್ವೇತಾ ಚೆಂಗಪ್ಪ ಈಗ 'ಜೋಡಿ ನಂ 1' ಸೀಸನ್ 1 ನಿರೂಪಕಿಯಾಗಿ ಕಿರುತೆರೆಗೆ ಮರಳಿದರು.

ತದ ನಂತರ 'ಸೂಪರ್ ಕ್ವೀನ್', 'ಚೋಟಾ ಚಾಂಪಿಯನ್' ರಿಯಾಲಿಟಿ ಶೋಗಳ ಸಾರಥ್ಯವನ್ನು ವಹಿಸಿಕೊಂಡಿರುವ ಶ್ವೇತಾ ಚೆಂಗಪ್ಪ 'ಜೋಡಿ ನಂ 1' ಸೀಸನ್ 2 ನಿರೂಪಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇದರ ಜೊತೆಗೆ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 125 ನೇ ಸಿನಿಮಾ 'ವೇದ'ದಲ್ಲಿ ಪಾರಿ ಎಂಬ ಪಾತ್ರಕ್ಕೆ ಜೀವ ತುಂಬಿರುವ ಇವರು ಬೋಲ್ಡ್ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು.

2006 ರಲ್ಲಿ 'ತಂಗಿಗಾಗಿ' ಸಿನಿಮಾದಲ್ಲಿ ನಟಿಸಿ ಸಿನಿ ಪ್ರಿಯರನ್ನು ರಂಜಿಸಿದ್ದ ಶ್ವೇತಾ ಚೆಂಗಪ್ಪ ಬರೋಬ್ಬರಿ 16 ವರ್ಷಗಳ ಕಾಲ ಹಿರಿತೆರೆಯಿಂದ ದೂರವಿದ್ದರು. 'ವೇದ' ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಶ್ವೇತಾ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನಿರೂಪಕಿಯಾಗಿ ಮೋಡಿ ಮಾಡುತ್ತಿರುಗ ಈಕೆ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

More from Filmibeat

English summary
Shwetha Changappa shined in Langa Davani Netizens say she is beautiful.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X