ಕೊಡವ ಶೈಲಿಯಲ್ಲಿ ಶ್ವೇತ ಚೆಂಗಪ್ಪ ಪುತ್ರನ ನಾಮಕರಣ: ಹೆಸರೇನು ಬಲ್ಲಿರಾ.?
ಕಿರುತೆರೆಯಲ್ಲಿ ಪ್ರಖ್ಯಾತಿ ಹೊಂದಿರುವ ನಟಿ ಶ್ವೇತ ಚೆಂಗಪ್ಪ ಇತ್ತೀಚೆಗೆಷ್ಟೇ ತಮ್ಮ ಪುತ್ರನನ್ನ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ಪರಿಚಯಿಸಿದ್ದರು. ಮುದ್ದು ಕಂದನಿಗೆ ಕೊಡವ ಶೈಲಿಯ ಉಡುಗೆ ತೊಡಿಸಿ, ಕ್ಲಿಕ್ಕಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ವೇತ ಚೆಂಗಪ್ಪ ಶೇರ್ ಮಾಡಿಕೊಂಡಿದ್ದರು.
ಇದೀಗ ಪ್ರೀತಿಯ ಪುತ್ರನ ನಾಮಕರಣ ಸಮಾರಂಭದ ಫೋಟೋ ಮತ್ತು ವಿಡಿಯೋಗಳನ್ನು ಶ್ವೇತ ಚೆಂಗಪ್ಪ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.
ಹಾಗಾದ್ರೆ, ತಮ್ಮ ಮಗನಿಗೆ ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ಇಟ್ಟಿರುವ ಹೆಸರೇನು ಗೊತ್ತಾ.?

ಶ್ವೇತ ಚೆಂಗಪ್ಪ ಪುತ್ರನ ಹೆಸರೇನು.?
ಕಿರಣ್ ಅಪ್ಪಚ್ಚು ಮತ್ತು ಕಿರುತೆರೆ ನಟಿ ಶ್ವೇತ ಚೆಂಗಪ್ಪ ದಂಪತಿಯ ಪುತ್ರನಿಗೆ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಲಾಗಿದೆ. ಜಿಯಾನ್ ಎಂದರೆ ಸದಾ ಕಾಲ ಖುಷಿ ಆಗಿರುವ ಮತ್ತು ಸಂತಸವನ್ನು ಎಲ್ಲರಿಗೂ ಹಂಚುವವ ಎಂದರ್ಥ. ಅಯ್ಯಪ್ಪ ಎಂಬುದು ಕೊಡವ ಸರ್ ನೇಮ್ (ಉಪನಾಮ) ಆಗಿದ್ದು, ಅದನ್ನ ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ಮಗನಿಗಾಗಿ ಆಯ್ಕೆ ಮಾಡಿದ್ದಾರೆ.

ನಾಮಕರಣ ನಡೆದಿದ್ದು ಎಲ್ಲಿ.?
ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ಪುತ್ರನ ನಾಮಕರಣ ಸಮಾರಂಭ ಇತ್ತೀಚೆಗೆಷ್ಟೇ ಕೊಡಗಿನ ಪ್ರಸಿದ್ಧ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದಿದೆ. ಕೊಡವ ಶೈಲಿಯಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಕುಟುಂಬಸ್ಥರು ಭಾಗವಹಿಸಿದ್ದರು.

ಐದು ತಿಂಗಳ ಮಗು
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಮಗುವಿಗೆ ಇದೀಗ ಐದು ತಿಂಗಳಾಗಿದ್ದು, ಹೆಸರು ಕರೆಯುವ ಶಾಸ್ತ್ರ ನೆರವೇರಿಸಲಾಗಿದೆ.

ನಟನೆಯಿಂದ ಬ್ರೇಕ್
ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಶ್ವೇತ ಚೆಂಗಪ್ಪ ಕಿರುತೆರೆ ಅಂಗಳದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದರು. ಇದೀಗ ತಾಯಿ ಆದ್ಮೇಲೆ, ನಟನೆಯಿಂದ ಕೊಂಚ ಬ್ರೇಕ್ ಪಡೆದುಕೊಂಡು, ಮಗುವಿನ ಲಾಲನೆ ಪಾಲನೆಯಲ್ಲಿ ಶ್ವೇತ ಚೆಂಗಪ್ಪ ತೊಡಗಿದ್ದಾರೆ.


Click it and Unblock the Notifications